ಅಗ್ಗದ ಬೆಲೆಯಲ್ಲಿ 'ಲೆನೊವೊ ಕಾರ್ಡಿಯೊ 2' ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!

|

ಫಿಟ್ನೆಸ್‌ ಸ್ಮಾರ್ಟ್‌ಬ್ಯಾಂಡ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದು, ವಾಚ್‌ಗಳ ಸ್ಥಾನವನ್ನು ಈ ಡಿವೈಸ್‌ಗಳು ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಕಂಪನಿಗಳು ನೂತನ ಫಿಟ್ನೆಸ್‌ ಮಾನಿಟರ್‌ ಫೀಚರ್ಸ್‌ಗಳ ಸ್ಮಾರ್ಟ್‌ಬ್ಯಾಂಡ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದ್ದು, ಈ ಲಿಸ್ಟಿನಲ್ಲಿಗ ಇದೀಗ ಲೆನೊವೊ ಕಂಪನಿಯು ಹೊಚ್ಚ ಹೊಸ ಹಾರ್ಟ್‌ಬೀಟ್‌ ಮಾನಿಟರ್‌ ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ ಲಾಂಚ್‌ ಮಾಡಿದೆ.

ಅಗ್ಗದ ಬೆಲೆಯಲ್ಲಿ 'ಲೆನೊವೊ ಕಾರ್ಡಿಯೊ 2' ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!

ಹೌದು, ಲೆನೊವೊ ಕಂಪನಿಯು ಈಗಾಗಲೇ ಸ್ಮಾರ್ಟ್‌ಬ್ಯಾಂಡ್‌ಗಳನ್ನು ಪರಿಚಯಿಸಿದ್ದು, ಆದ್ರೆ ಈಗ ಬಜೆಟ್‌ ಬೆಲೆಯಲ್ಲಿ ಹೆಚ್ಚಿನ ಫಿಟ್ನೆಸ್‌ ಟ್ರಾಕಿಂಗ್ ಫೀಚರ್ಸ್‌ಗಳನ್ನು ಹೊಂದಿರುವ ಕಾರ್ಡಿಯೊ 2 (Cardio 2) ಹೆಸರಿನ ಸ್ಮಾರ್ಟ್‌ಬ್ಯಾಂಡ್‌ವೊಂದನ್ನು ರಿಲೀಸ್‌ ಮಾಡಿದೆ. 1,499ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿರುವ ಈ ಡಿವೈಸ್‌ OLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ನಿರಂತರ ಹೃದಯ ಬಡಿತದ ಟ್ರಾಕಿಂಗ್‌ ಮಾಡುವ ಫೀಚರ್‌ ಅನ್ನು ಹೊಂದಿದೆ.

ಅಗ್ಗದ ಬೆಲೆಯಲ್ಲಿ 'ಲೆನೊವೊ ಕಾರ್ಡಿಯೊ 2' ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!

ಹಾಗೆಯೇ ಕಾರ್ಡಿಯೊ 2 ಸ್ಮಾರ್ಟ್‌ಬ್ಯಾಂಡ್‌ 100mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಯುಎಸ್‌ಬಿ ಪೋರ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ. ವಾಟರ್‌ ಪ್ರೂಫ್‌ ಸೌಲಭ್ಯವನ್ನು ಪಡೆದುಕೊಂಡಿದ್ದು, ಈ ಡಿವೈಸ್‌ ಧರಿಸಿ ಸ್ವಿಮ್ಮಿಂಗ್ ಸಹ ಮಾಡಬಹುದಾಗಿದೆ. ಹಾಗಾದರೇ ಲೆನೊವೊ ಸ್ಮಾರ್ಟ್‌ಬ್ಯಾಂಡ್‌ ಕಾರ್ಡಿಯೊ 2 ಡಿವೈಸ್‌ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!ಓದಿರಿ : ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!

ಡಿಸೈನ್‌ ಮತ್ತು ಡಿಸ್‌ಪ್ಲೇ

ಡಿಸೈನ್‌ ಮತ್ತು ಡಿಸ್‌ಪ್ಲೇ

ಆಕರ್ಷಕ ನೋಟದಲ್ಲಿ ಕಂಗೊಳಿಸುವ ಈ ಡಿವೈಸ್‌ ತೆರೆಯಬಹುದಾಗ ಮೃದುವಾದ ಬ್ಯಾಂಡ್‌ ಪಟ್ಟಿಯನ್ನು ಹೊಂದಿದ್ದು, ಧರಿಸಲು ಕಂಫರ್ಟ್‌ ಎನಿಸುವ ರಚನೆಯಲ್ಲಿದೆ. ಹಗುರವಾದ ತೂಕವನ್ನು ಹೊಂದಿದ್ದು, ಕೇವಲ ಬ್ಲ್ಯಾಕ್ ಬಣ್ಣದಲ್ಲಿ ಮಾತ್ರ ಲಭ್ಯವಾಗಲಿದೆ. ಹಾಗೆಯೇ 0.87 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.

ಫಿಟ್ನೆಸ್‌ ಫೀಚರ್ಸ್‌ಗಳೇನು

ಫಿಟ್ನೆಸ್‌ ಫೀಚರ್ಸ್‌ಗಳೇನು

ಈ ಡಿವೈಸ್‌ ರನ್ನಿಂಗ್, ವಾಕಿಂಗ್, ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್ ಸೇರಿದಂತೆ ದೈಹಿಕ ಆಕ್ಟಿವಿಟಿಗಳ ಟ್ರಾಕಿಂಗ್ ಮಾಹಿತಿಯನ್ನು ಕಲೆಹಾಕುವ ಸೌಲಭ್ಯವನ್ನು ಹೊಂದಿದೆ. ಹಾಗೆಯೇ ಮುಖ್ಯವಾಗಿ ನಿರಂತರ ಹೃದಯದ ಬಡಿತವನ್ನು ರೇಟಿಂಗ್‌ ಅನ್ನು ಮಾನಿಟರ್‌ ಮಾಡುವ ಫೀಚರ್‌ ಒಳಗೊಂಡಿದ್ದು, ಕಂಪ್ಲೀಟ್‌ ಫಿಟ್ನೆಸ್‌ ಟ್ರಾಕರ್‌ ಡಿವೈಸ್‌ನ ಎನಿಸಿಕೊಂಡಿದೆ.

ಓದಿರಿ : ಭಾರತದಲ್ಲಿ 'ಪಬ್‌ಜಿ ಲೈಟ್'‌ ಲಾಂಚ್‌!..ಪ್ರಿ-ಡೌನ್‌ಲೋಡ್‌ಗೆ ಲಭ್ಯ!ಓದಿರಿ : ಭಾರತದಲ್ಲಿ 'ಪಬ್‌ಜಿ ಲೈಟ್'‌ ಲಾಂಚ್‌!..ಪ್ರಿ-ಡೌನ್‌ಲೋಡ್‌ಗೆ ಲಭ್ಯ!

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಈ ಡಿವೈಸ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದಾಗಿದ್ದು, ಕರೆ, ನೋಟಿಫಿಕೇಶನ್‌, ಮೆಸೆಜ್‌ ಮಾಹಿತಿಯನ್ನು ನೀಡುತ್ತದೆ. Sedentary ರೀಮೈಂಡರ್‌ ಮೋಡ್‌ ಆಯ್ಕೆ ಇದ್ದು, ಕೆಲಸಗಳಿಗೆ ಟೈಮ್‌ ಸೆಟ್ಟಿಂಗ್ ಮಾಡಿಕೊಳ್ಳಬಹುದಾಗಿದ್ದು, ಅದು ಜ್ಙಾಪಿಸುತ್ತದೆ. ಮತ್ತೆ ಎಚ್ಚರಗೊಳಿಸಿ ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುತ್ತದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ಲೆನೊವೊ ಕಾರ್ಡಿಯೊ 2 ಸ್ಮಾರ್ಟ್‌ಬ್ಯಾಂಡ್‌ 100mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, ಇನ್‌ಬಿಲ್ಟ್‌ ಯುಎಸ್‌ಬಿ ಚಾರ್ಜರ್‌ ಪೋರ್ಟ್‌ ಆಯ್ಕೆಯನ್ನು ಸಹ ಒಳಗೊಂಡಿದೆ. ಒಮ್ಮೆ ಚಾರ್ಜ್‌ ಮಾಡಿದರೇ 20 ದಿನ ಬಾಳಿಕೆ ಬರುವ ಸಾಮರ್ಥ್ಯ ಇದ್ದು, ಐಫೋನ್‌ iOS 8.0 ಮತ್ತು ಆಂಡ್ರಾಯ್ಡ್‌ 5.0 ಓಎಸ್‌ ಮೇಲ್ಪಟ್ಟ ಆಂಡ್ರಾಯ್ಡ್‌ ಡಿವೈಸ್‌ಗಳೊಂದಿಗೆ ಅತ್ಯುತ್ತಮ ಬೆಂಬಲ ನೀಡಲಿದೆ.

ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಕಾರ್ಡಿಯೊ 2 ಸ್ಮಾರ್ಟ್‌ಬ್ಯಾಂಡ್‌ ಸ್ಪರ್ಧಾತ್ಮಕ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿದ್ದು, ಈ ಡಿವೈಸ್‌ ಬೆಲೆಯು 1,499ರೂ.ಗಳು ಆಗಿದೆ. ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಖರೀದಿಸಬಹುದಾಗಿದೆ. ಅಮೆಜಾನ್ ಪೇ ಯುಪಿಐ ಮೂಲಕ ಪೇಮೆಂಟ್‌ ಮಾಡಿದರೇ 50ರೂ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ.

ಓದಿರಿ : ಹೊಸ ಆವಿಷ್ಕಾರಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತದ ಯುವಕರು!ಓದಿರಿ : ಹೊಸ ಆವಿಷ್ಕಾರಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತದ ಯುವಕರು!

Best Mobiles in India

English summary
Lenovo has launched a new Smart Band Cardio 2 fitness tracker in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X