Home
ಸುದ್ದಿಜಾಲ

Lenovo: ಲೆನೊವೊ ಟ್ಯಾಬ್‌ K11 ಟ್ಯಾಬ್ಲೆಟ್‌ ಲಾಂಚ್‌! 7040mAh ಬ್ಯಾಟರಿ.. ಬೆಲೆ ಎಷ್ಟು?

ಸ್ಮಾರ್ಟ್‌ಗ್ಯಾಜೆಟ್‌ಗಳ ವಿಭಾಗದಲ್ಲಿ ಟ್ಯಾಬ್ಲೆಟ್‌ಗಳಿಗೆ (tablets)ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಭಾರತದಲ್ಲಿ ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಲೆನೊವೊ ಟ್ಯಾಬ್‌ K11 ಟ್ಯಾಬ್ಲೆಟ್‌ (Lenovo Tab K11 Tablet) ಅನ್ನು ಲಾಂಚ್‌ ಮಾಡಲಾಗಿದೆ. ಇದು 7040mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ಹೌದು, ಲೆನೊವೊ ಇದೀಗ ಮತ್ತೊಂದು ಆಂಡ್ರಾಯ್ಡ್‌ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಏಕೈಕ ಬಣ್ಣದ ಆಯ್ಕೆಯಲ್ಲಿ ಲಾಂಚ್‌ ಮಾಡಲಾಗಿದ್ದು, ಒಂದು-ವರ್ಷದ ಆಕ್ಸಿಡೆಂಟಲ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲ್ಯಾನ್‌ ಅನ್ನು ಪಡೆದುಕೊಂಡಿದೆ. ಹಾಗಿದ್ರೆ, ಈ ಟ್ಯಾಬ್ಲೆಟ್‌ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಲೆನೊವೊ ಟ್ಯಾಬ್‌ K11 ಟ್ಯಾಬ್ಲೆಟ್‌ ಲಾಂಚ್‌! 7040mAh ಬ್ಯಾಟರಿ.. ಬೆಲೆ ಎಷ್ಟು?

ಲೆನೊವೊ ಟ್ಯಾಬ್‌ K11 ಡಿಸ್‌ಪ್ಲೇ ಮಾಹಿತಿ : ಈ ಟ್ಯಾಬ್ 11 ಇಂಚಿನ WUXGA ಡಿಸ್‌ಪ್ಲೇಯನ್ನು ಹೊಂದಿದ್ದು, 1920x1200 ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರ ಜೊತೆಗೆ 1080p ಸ್ಟ್ರೀಮಿಂಗ್ ಅನ್ನು ಬೆಂಬಲಿಸಲಿದ್ದು, ವಿಡಿಯೋ ವೀಕ್ಷಣೆ ಮಾಡುವಾಗ ಹಾಗೂ ವಿಡಿಯೋ ಕಾಲ್‌ನಲ್ಲಿ ತೊಡಗಿರುವಾಗ ಅತ್ಯುತ್ತಮವಾದ ಅನುಭವ ಪಡೆಯಬಹುದಾಗಿದೆ.

ಲೆನೊವೊ ಟ್ಯಾಬ್‌ K11 ಪ್ರೊಸೆಸರ್ ವಿವರ: ಇನ್ನು ಈ ಟ್ಯಾಬ್‌ ಆಂಡ್ರಾಯ್ಡ್‌ 13 ನೊಂದಿಗೆ ಪೂರ್ವ ಲೋಡ್ ಆಗಿದ್ದು, ಆಂಡ್ರಾಯ್ಡ್‌ 15 ವರೆಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಇದರ ಜೊತೆಗೆ ಜನವರಿ 2028 ರವರೆಗೆ ಭದ್ರತಾ ಪ್ಯಾಚ್‌ಗಳ ಭರವಸೆ ನೀಡಿದೆ. ಇದರ ಜೊತೆಗೆ ಮೀಡಿಯಾಟೆಕ್‌ ಹಿಲಿಯೋ G88 ಅಕ್ಟಾ ಕೋರ್‌ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.

ಉಳಿದಂತೆ ಈ ಟ್ಯಾಬ್‌ ಲೆನೊವೊ ಟ್ಯಾಬ್‌ ಪೆನ್‌ ಪ್ಲಸ್‌ ಅನ್ನು ಬೆಂಬಲಿಸಲಿದ್ದು, ಕೈಬರಹವನ್ನು ಪಠ್ಯಕ್ಕೆ ಪರಿವರ್ತಿಸಲು ನೆಬೊ, ಸಮೀಕರಣಗಳನ್ನು ಪರಿಹರಿಸಲು ಮೈಸ್ಕ್ರಿಪ್ಟ್ ಕ್ಯಾಲ್ಕುಲೇಟರ್ ಮತ್ತು ಟಿಪ್ಪಣಿ ಮತ್ತು ದಾಖಲೆಗಳನ್ನು ತಯಾರಿಸಲು WPS ನಂತಹ ಪೂರ್ವ-ಸ್ಥಾಪಿತ ಸಾಫ್ಟ್‌ವೇರ್‌ ಅನ್ನು ಇದರಲ್ಲಿ ಕಾಣಬಹುದಾಗಿದೆ. ಹಾಗೆಯೇ ಇದು ಇತರ ಲೆನೊವೊ ಪಿಸಿಗಳು ಅಥವಾ ಲ್ಯಾಪ್‌ಟಾಪ್‌ಗಳೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ ಫ್ರೀಸ್ಟೈಲ್ ಅನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ಇದು ಆಂಡ್ರಾಯ್ಡ್ ಝೀರೋ-ಟಚ್ ದಾಖಲಾತಿ, ವಾಣಿಜ್ಯ ಗ್ರಾಹಕೀಕರಣ ವ್ಯವಸ್ಥೆ (CCS), ಮತ್ತು ವಾಣಿಜ್ಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್ (CSDK) ಅನ್ನು ಇದು ಬೆಂಬಲಿಸುತ್ತದೆ.

ಲೆನೊವೊ ಟ್ಯಾಬ್‌ K11 ಟ್ಯಾಬ್ಲೆಟ್‌ ಲಾಂಚ್‌! 7040mAh ಬ್ಯಾಟರಿ.. ಬೆಲೆ ಎಷ್ಟು?

ಇದರ ಜೊತೆಗೆ 7040mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 10 ಗಂಟೆಗಳವರೆಗೆ ತಡೆರಹಿತ ವಿಡಿಯೋ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಈ ಟ್ಯಾಬ್‌ ಹಗುರವಾಗಿದ್ದು, ಪ್ರಯಾಣ-ಸ್ನೇಹಿ ಶೈಲಿ ಪಡೆದಿದೆ. ಅಂದರೆ 7.15 ಮಿಮೀ ತೆಳ್ಳಗಿದ್ದು, ಕೇವಲ 465 ಗ್ರಾಂ ತೈಕ ಹೊಂದಿದೆ. ಇದರಿಂದಾಗಿ ನೀವು ಇದನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಇದರ ಜೊತೆಗೆ ಈ ಟ್ಯಾಬ್‌ IP52 ನೀರು ಮತ್ತು ಧೂಳಿನ ಪ್ರತಿರೋಧ ಬೆಂಬಲ ಪಡೆದಿದೆ.

ಗಮನಿಸಬೇಕಾದ ವಿಷಯ ಏನೆಂದರೆ ಆಪಲ್‌ ಲೆಟ್ ಲೂಸ್ ಈವೆಂಟ್‌ ಇಂದು ನಡೆಯಲಿದ್ದು ವಿವಿಧ ಟ್ಯಾಬ್‌ಗಳು ಈ ವೇಳೆ ಲಾಂಚ್‌ ಆಗಲಿವೆ. ಇದರ ಬೆನ್ನಲ್ಲೇ ಲೆನೊವೊ ಈ ತನ್ನ ಟ್ಯಾಬ್‌ ಅನ್ನು ಲಾಂಚ್‌ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಅಲ್ಲದೆ ಈ ಆಪಲ್‌ ಈವೆಂಟ್‌ನಲ್ಲಿ, ಆಪಲ್ ಹೊಸ OLED ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಪ್ರೊ ಮಾದರಿಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಲೆನೊವೊ ಟ್ಯಾಬ್ K11 ಬೆಲೆ ಹಾಗೂ ಲಭ್ಯತೆ: ಇನ್ನು ಈ ವಿಶೇಷ ಟ್ಯಾಬ್‌ಗೆ ಭಾರತದಲ್ಲಿ 17,990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು ಲೂನಾ ಗ್ರೇ ಎಂಬ ಒಂದೇ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ನೀವು ಇದನ್ನು ಲೆನೊವೊದ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ಇತರೆ ಸ್ಟೋರ್‌ಗಳಲ್ಲೂ ಇದು ಲಭ್ಯವಾಗಲಿದೆ ಎನ್ನಲಾಗಿದೆ

Best Mobiles in India

English summary
Lenovo Tab K11 Tablet has been launched in India. It gets a 7040 mAh battery option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+