ಶೀಘ್ರದಲ್ಲೇ ಎಂಟ್ರಿ ಕೊಡಲಿದೆ ಲೆನೊವೊ ಟ್ಯಾಬ್ M11 ಡಿವೈಸ್!..ವಾವ್ ಎನಿಸುವ ಫೀಚರ್ಸ್!
ಲೆನೊವೊ (Lenovo) ಟೆಕ್ ಸಂಸ್ಥೆಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಲೆನೊವೊ ಟ್ಯಾಬ್ M11 (Lenovo Tab M11) ಟ್ಯಾಬ್ಲೆಟ್ ಡಿವೈಸ್ ಅನ್ನು ಬಿಡುಗಡೆ ಮಾಡಲಿದೆ. ಅಂದಹಾಗೆ ಈ ಟ್ಯಾಬ್ಲೆಟ್ ಇತ್ತೀಚಿನ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2024 (CES 2024) ಕಾರ್ಯಕ್ರಮದಲ್ಲಿ ಅನಾವರಣ ಆಗಿದೆ.
ಹೌದು, ಲೆನೊವೊ ಸಂಸ್ಥೆಯು ಲೆನೊವೊ ಟ್ಯಾಬ್ M11 (Lenovo Tab M11) ಟ್ಯಾಬ್ಲೆಟ್ ಅನ್ನು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಲಾಂಚ್ ಮಾಡಲು ಸಜ್ಜಾಗಿದೆ. ಇನ್ನು ಅಮೆಜಾನ್ ಈ ಟ್ಯಾಬ್ಲೆಟ್ ಲಾಂಚ್‌ಗಾಗಿ ಮೈಕ್ರೋ ಸೈಟ್ ಕೂಡಾ ತೆರೆದಿದೆ. ಈ ಟ್ಯಾಬ್ ಮೀಡಿಯಾ ಟೆಕ್ ಹೆಲಿಯೊ G88 SoC ಪ್ರೊಸೆಸರ್ ಪವರ್ ಪಡೆದಿರುವುದು ಪ್ರಮುಖ ಹೈಲೈಟ್ ಎನಿಸಿಕೊಂಡಿದೆ.

ಅಲ್ಲದೇ ಈ ನೂತನ ಟ್ಯಾಬ್ 8GB RAM + 128 GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಒಳಗೊಂಡಿದ್ದು, ಹಾಗೆಯೇ ಇದು 7,040 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ಲೆನೊವೊ ಟ್ಯಾಬ್ M11 ಡಿವೈಸ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಲೆನೊವೊ ಟ್ಯಾಬ್ M11 ಡಿವೈಸ್ ಫೀಚರ್ಸ್
ಲೆನೊವೊ ಟ್ಯಾಬ್ M11 ಡಿವೈಸ್ 11 ಇಂಚಿನ IPS LCD ಡಿಸ್‌ಪ್ಲೇ ಸೌಲಭ್ಯ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಈ ಡಿಸ್‌ಪ್ಲೇ 1920 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಟ್ಯಾಬ್ ಈ ಡಿಸ್‌ಪ್ಲೇ 90 Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದು 400 nits ಬ್ರೈಟ್ನೆಸ್ ಸೌಲಭ್ಯ ಪಡೆದಿದ್ದು, 72% NTSC ಮತ್ತು ನೆಟ್‌ಫ್ಲಿಕ್ಸ್ HD ಸರ್ಟಿಫಿಕೇಶನ್ ಪಡೆದಿದೆ.
ಲೆನೊವೊ ಸಂಸ್ಥೆಯು ನೂತನ ಟ್ಯಾಬ್ M11 ಟ್ಯಾಬ್ ಡಿವೈಸ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಸಪೋರ್ಟ್ ಜೊತೆಗೆ ರನ್ ಆಗಲಿದೆ. ಹಾಗೆಯೇ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಇದರೊಂದಿಗೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ.
ಲೆನೊವೊ ಕಂಪನಿಯ ಟ್ಯಾಬ್ M11 ಡಿವೈಸ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಈ ಟ್ಯಾಬ್‌ನ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯವನ್ನು ಪಡೆದುಕೊಂಡಿದ್ದು, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಇದು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ಹಾಗೆಯೇ ಲೆನೊವೊ ಟ್ಯಾಬ್ M11 ಟ್ಯಾಬ್ಲೆಟ್ ಡಿವೈಸ್ 7,040 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಪಡೆದಿದ್ದು, ಇದಕ್ಕೆ ಅನುಗುಣವಾಗಿ 15 W ಚಾರ್ಜಿಂಗ್ ಸೌಲಭ್ಯ ಒದಗಿಸಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯ ಗಳಲ್ಲಿ ವೈ ಫೈ 802.11 ac, ಬ್ಲೂಟೂತ್ 5.1 ಮತ್ತು USB C ಪೋರ್ಟ್ ನಂತಹ ಆಯ್ಕೆಗಳು ಇವೆ. ಹಾಗೆಯೇ ಈ ಡಾಲ್ಬಿ ಅಟ್ಮೋಸ್ ಸಪೋರ್ಟ್ ಜೊತೆಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು 3.5 mm ಆಡಿಯೋ ಜ್ಯಾಕ್‌ನಂತಹ ಇತರ ಫೀಚರ್ಸ್‌ಗಳ ಆಯ್ಕೆ ಕಾಣಬಹುದಾಗಿದೆ.


Click it and Unblock the Notifications








