Home
ಸುದ್ದಿಜಾಲ

Lenovo: ಭಾರತದಲ್ಲಿ ಲೆನೊವೊ ಟ್ಯಾಬ್‌ M11 ಲಾಂಚ್‌! 8GB RAM ... ಬೆಲೆ ಎಷ್ಟು?

ಲೆನೊವೊ (Lenovo) ತನ್ನದೇ ಆದ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳ ಮೂಲಕ ಚಿರಪರಿಚಿತ. ಈ ನಡುವೆ ಭಾರತದಲ್ಲಿ ಬಹುನಿರೀಕ್ಷಿತ ಭಾರತದಲ್ಲಿ ಲೆನೊವೊ ಟ್ಯಾಬ್‌ M11 (Lenovo Tab M11) ಅನ್ನು ಅನಾವರಣ ಮಾಡಿದೆ. ಈ ಟ್ಯಾಬ್ಲೆಟ್‌ ಡಾಲ್ಬಿ ಅಟ್ಮಾಸ್ ಸೌಲಭ್ಯ ಪಡೆದಿದೆ.

ಹೌದು, ಹೆಚ್ಚುತ್ತಿರುವ ಸ್ಪರ್ಧೆ ಹಿನ್ನೆಲೆ ಯಾವುದೇ ಹೊಸ ಡಿವೈಸ್‌ಗಳು ಅನಾವರಣ ಆದರೂ ಸಹ ಭಿನ್ನವಾಗಿ ಕಾಣಿಸಿಕೊಳ್ಳಲಿವೆ. ಅದರಂತೆ ಈಗ ಲೆನೊವೊ ಭಾರತದಲ್ಲಿ ಲೆನೊವೊ ಟ್ಯಾಬ್‌ M11 ಅನ್ನು ಲಾಂಚ್‌ ಮಾಡಿದ್ದು, ಇದು 90Hz ರಿಫ್ರೆಶ್‌ ರೇಟ್‌ ಇರುವ ಡಿಸ್‌ಪ್ಲೇ, ಮೀಡಿಯಾಟೆಕ್‌ ಹಿಲಿಯೋ G88 ಪ್ರೊಸೆಸರ್‌ ಬಲದೊಂದಿಗೆ ಉತ್ತಮವಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಲೆನೊವೊ ಟ್ಯಾಬ್‌ M11 ಲಾಂಚ್‌! 8GB RAM ... ಬೆಲೆ ಎಷ್ಟು?

ಲೆನೊವೊ ಟ್ಯಾಬ್‌ M11 ಡಿಸ್‌ಪ್ಲೇ: ಲೆನೊವೊ ತನ್ನ ಟ್ಯಾಬ್ಲೆಟ್ ಶ್ರೇಣಿಯನ್ನು ಭಾರತದಲ್ಲಿ ಲೆನೊವೊ ಟ್ಯಾಬ್‌ M11 ಲಾಂಚ್‌ನೊಂದಿಗೆ ವಿಸ್ತರಣೆ ಮಾಡಿಕೊಂಡಿದೆ. ಈ ಡಿವೈಸ್‌ ಅನ್ನು ಈ ಮೊದಲು CES 2024 ರಲ್ಲಿ ಘೋಷಣೆ ಮಾಡಲಾಗಿತ್ತು. ಇನ್ನು ಈ ಡಿವೈಸ್‌ 1920 x 1200 (WUXGA) ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಇರುವ 11 ಇಂಚಿನ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 90Hz ರಿಫ್ರೆಶ್‌ ರೆಟ್‌, 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ 72% NTSC ಕಲರ್ ಗ್ಯಾಮಟ್ ಅನ್ನು ಹೊಂದಿದ್ದು TÜV ರೈನ್‌ಲ್ಯಾಂಡ್ ಮತ್ತು ನೆಟ್‌ಫ್ಲಿಕ್ಸ್ ಹೆಚ್‌ಡಿ ಪ್ರಮಾಣೀಕೃತವಾಗಿದೆ.

ಲೆನೊವೊ ಟ್ಯಾಬ್‌ M11 ಫೀಚರ್ಸ್‌: ಇನ್ನು ಈ ಟ್ಯಾಬ್ಲೆಟ್ ಮಾಲಿ G52 ಜಿಪಿಯು ಬಲದೊಂದಿಗೆ ಮೀಡಿಯಾಟೆಕ್‌ ಹಿಲಿಯೋ G88 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್‌ನಲ್ಲಿ ಈ ಟ್ಯಾಬ್‌ ಕಾಣಿಸಿಕೊಂಡಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಭಾರತದಲ್ಲಿ ಲೆನೊವೊ ಟ್ಯಾಬ್‌ M11 ಲಾಂಚ್‌! 8GB RAM ... ಬೆಲೆ ಎಷ್ಟು?

ಹಾಗೆಯೇ ಈ ಲೆನೊವೊ ಟ್ಯಾಬ್ M11 13 ಮೆಗಾಪಿಕ್ಸೆಲ್‌ ರಿಯರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಉಳಿದಂತೆ ಕ್ವಾಡ್ ಸ್ಪೀಕರ್‌ಗಳು ಆಡಿಯೊಗಾಗಿ ಡಾಲ್ಬಿ ಅಟ್ಮಾಸ್ ಸೌಲಭ್ಯ ಪಡೆದಿದೆ. ಗಮನಿಸಬೇಕಾದ ವಿಷಯ ಏನೆಂದರೆ ಆಂಡ್ರಾಯ್ಡ್‌ 15 ವರೆಗೆ ಎರಡು ವರ್ಷಗಳ ಓಎಸ್‌ ಅಪ್‌ಗ್ರೇಡ್‌ಗಳ ಭರವಸೆಯೊಂದಿಗೆ ಈ ಡಿವೈಸ್‌ ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಜನವರಿ 2028 ರವರೆಗೆ ಭದ್ರತಾ ಪ್ಯಾಚ್ ನವೀಕರಣ ಸಹ ಲಭ್ಯ.

ಇನ್ನು ಈ ಟ್ಯಾಬ್ಲೆಟ್‌ 7040mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದ, ಟೈಪ್-ಸಿ 15W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಈ ಮೂಲಕ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬಳಕೆದಾರರಿಗೆ ಸರಿಸುಮಾರು 10 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಉಳಿದಂತೆ ಈ ಟ್ಯಾಬ್‌ ನೆಬೊ, WPS ಆಫೀಸ್ ಮತ್ತು ಗೂಗಲ್‌ ಕಿಡ್ಸ್ ಸ್ಪೇಸ್‌ನಂತಹ ಆಪ್‌ಗಳನ್ನು ಕಲಿಯಲು ಟ್ಯಾಬ್ಲೆಟ್ ಸ್ಪ್ಲಿಟ್-ಸ್ಕ್ರೀನ್ ಕಾರ್ಯನಿರ್ವಹಣೆಯೊಂದಿಗೆ ಬಹುಕಾರ್ಯಕವನ್ನು ಬೆಂಬಲಿಸುತ್ತದೆ.

ಭಾರತದಲ್ಲಿ ಲೆನೊವೊ ಟ್ಯಾಬ್‌ M11 ಲಾಂಚ್‌! 8GB RAM ... ಬೆಲೆ ಎಷ್ಟು?

ಇದರ ಜೊತೆಗೆ ಮೈಕ್ರೊಫೋನ್ ಸೂಚಕಗಳಿಗಾಗಿ ಡ್ಯಾಶ್‌ಬೋರ್ಡ್‌ನಂತಹ ಗೌಪ್ಯತೆಯ ಫೀಚರ್ಸ್‌ ಅನ್ನೂ ಸಹ ಪಡೆದಿದ್ದು, ಲೆನೊವೊ ಟ್ಯಾಬ್ ಪೆನ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಹೆಚ್ಚುವರಿಯಾಗಿ, ಈ ಟ್ಯಾಬ್ಲೆಟ್‌ IP52 ರೇಟಿಂಗ್‌ ಹೊಂದಿದ್ದು, ಬಳಕೆದಾರರು ಧೂಳು ಮತ್ತು ನೀರಿನಿಂದ ಈ ಡಿವೈಸ್‌ ಹಾಳಾಗುತ್ತದೆ ಅನ್ನೋ ಆತಂಕವಿಲ್ಲದೆ ಇದನ್ನು ಮನಬಂದಂತೆ ಬಳಕೆ ಮಾಡಬಹುದು.

ಲೆನೊವೊ ಟ್ಯಾಬ್‌ M11 ಬೆಲೆ ಹಾಗೂ ಲಭ್ಯತೆ: ಈ ಡಿವೈಸ್‌ ಭಾರತದಲ್ಲಿ 17,999 ರೂ.ಗಳ ಬೆಲೆ ಹೊಂದಿದೆ. ಹಾಗೆಯೇ ಇದು ಸೀಫಾರ್ಮ್ ಗ್ರೀನ್ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಆಕರ್ಷಕವಾಗಿದೆ. ಉಳಿದಂತೆ ಈ ಡಿವೈಸ್‌ ಅನ್ನು ನೀವು ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Lenovo Tab M11 has been launched in India. This tab has 90Hz refresh rate, 400 nits maximum brightness option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+