ದೇಶಿಯ ಮಾರುಕಟ್ಟೆಯಲ್ಲಿ ಲೆನೊವಾ ಟ್ಯಾಬ್ P11 ಪ್ಲಸ್‌ ಲಾಂಚ್‌!..ಬೆಲೆ ಎಷ್ಟು?

|

ಜನಪ್ರಿಯ ಟೆಕ್ ಸಂಸ್ಥೆಗಳಲ್ಲಿ ಒಂದಾದ ಲೆನೊವೊ ನೂತನವಾಗಿ ಲೆನೊವಾ ಟ್ಯಾಬ್ P11 ಪ್ಲಸ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಲೆನೊವೊ ಟ್ಯಾಬ್ P11 ಸರಣಿಯ ಅಡಿಯಲ್ಲಿ ಇದು ಕಂಪನಿಯ ಮೂರನೇ ಟ್ಯಾಬ್ಲೆಟ್ ಆಗಿದೆ. ಜೂನ್ 2021 ರಲ್ಲಿ ಲೆನೊವೊ ಸಂಸ್ಥೆಯು ಲೆನೊವೊ ಟ್ಯಾಬ್‌ P11 ಪ್ರೊ ಅನ್ನು ಘೋಷಿಸಿತ್ತು. ಹಾಗೆಯೇ ಲೆನೊವೊ ಟ್ಯಾಬ್‌ P11 ಅನ್ನು ಫೆಬ್ರವರಿ 2021 ರಲ್ಲಿ ಬಿಡುಗಡೆ ಮಾಡಲಾಗಿದೆ.

ಕಾಣಸಿಕೊಂಡಿರುವ

ಹೌದು, ಲೆನೊವೊ ಇದೀಗ ಭಾರತದಲ್ಲಿ ನೂತನವಾಗಿ ಲೆನೊವೊ ಟ್ಯಾಬ್‌ P11 ಪ್ಲಸ್‌ (Lenovo Tab P11 Plus) ಡಿವೈಸ್‌ ಅನ್ನು ಪರಿಚಯಿಸಿದೆ. ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಸಿಕೊಂಡಿರುವ ಈ ಸಾಧನವು ಶಿಯೋಮಿ ಸಂಸ್ಥೆಯ ಪ್ಯಾಡ್‌ 5 ಹಾಗೂ ಆಪಲ್‌ ಐಪೋಡ್‌ 9 ನೇ ಜನ್ ಡಿವೈಸ್‌ಗೆ ಪೈಫೋಟಿ ನೀಡಲಿದೆ. ಇನ್ನು ಈ ಡಿವೈಸ್‌ ದೈತ್ಯ ಇ ಕಾಮರ್ಸ್‌ ತಾಣ ಅಮೆಜಾನ್‌ ನಲ್ಲಿ ಖರೀದಿಗೆ ಲಭ್ಯ ಇದೆ.

ಬೆಳಕಿನ

ಲೆನೊವೊ ಟ್ಯಾಬ್ P11 ಪ್ಲಸ್‌ ಡಿವೈಸ್ 11 ಇಂಚಿನ 2K IPS LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಜೊತೆಗೆ 70% NTSC ಕವರೇಜ್ ಪಡೆದಿದೆ. ಹಾಗೆಯೇ ಇದು 16.7 ಮಿಲಿಯನ್ ಕಲರ್ ಡೆಪ್ತ್, 400 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಹೊಂದಿದ್ದು, ಹಾನಿಕಾರಕ ನೀಲಿ ಬೆಳಕಿನ ವಿರುದ್ಧ ರಕ್ಷಣೆಗಾಗಿ TUV ಪ್ರಮಾಣೀಕೃತ ಸ್ಕ್ರೀನ್‌ ಅನ್ನು ಹೊಂದಿದೆ. ಇದರೊಂದಿಗೆ ಈ ಸಾಧನವು ಮೀಡಿಯಾಟೆಕ್‌ ಹಿಲಿಯೋ G90T SoC (MediaTek Helio G90T SoC) ನಿಂದ ಚಾಲಿತವಾಗಿದೆ.

256GB

ಹಾಗೆಯೇ ಈ ಸಾಧನವು 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಸ್ಟೋರೇಜ್ ಅನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಹಾಗೆಯೇ ಲೆನೊವೊ ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್‌ಗೆ ಬೆಂಬಲದೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್‌ನೊಂದಿಗೆ ಬರುತ್ತದೆ. ಇದು ಡ್ಯುಯಲ್ ಮೈಕ್ ಅರೇ ಮತ್ತು ಸ್ಮಾರ್ಟ್ ವಾಯ್ಸ್ DSP ಅನ್ನು ಸಹ ಹೊಂದಿದೆ. ಲೆನೊವೊ ಟ್ಯಾಬ್ ಫೇಸ್ ಅನ್‌ಲಾಕ್‌ಗೆ ಬೆಂಬಲದೊಂದಿಗೆ ಬರುತ್ತದೆ ಆದರೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಕಳೆದುಕೊಳ್ಳುತ್ತದೆ.

ಪಿಕ್ಸಲ್‌

ಪ್ರೊಸೆಸರ್‌ಗೆ ಪೂರಕವಾಗಿ ಟ್ಯಾಬ್ P11 ಪ್ಲಸ್ ಸಾಧನವು ಆಂಡ್ರಾಯ್ಡ್‌ 11 OS ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಳಕೆದಾರರಿಗೆ ಇದು ಸ್ವಲ್ಪ ನಿರಾಶಾದಾಯಕ ಎನಿಸಬಹುದು. ಇನ್ನು ಈ ಸಾಧನವು ಡ್ಯುಯಲ್-ಟೋನ್ ಮೆಟಲ್ ರಚನೆಯನ್ನು ಪಡೆದಿದೆ. ಸಿಂಗಲ್‌ ಕ್ಯಾಮೆರಾ ರಚನೆ ಇದ್ದು, 13 ಮೆಗಾ ಪಿಕ್ಸಲ್‌ ಹಿಂಬದಿಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆಲ್ಫಿ ಸ್ನ್ಯಾಪರ್ ಇದೆ. ಹಾಗೆಯೇ ಈ ಡಿವೈಸ್‌ 490 ಗ್ರಾಂ ತೂಕ ಪಡೆದಿದೆ.

ಮಾಡಲಾಗಿದೆ

ಲೆನೊವೊ ಟ್ಯಾಬ್ P11 ಪ್ಲಸ್‌ ಡಿವೈಸ್ 7,700 mAh ಬ್ಯಾಟರಿಯಿಂದ ಶಕ್ತಿಯನ್ನು ಒಳಗೊಂಡಿದೆ. ಇದು ಒಂದೇ ಚಾರ್ಜ್‌ನಲ್ಲಿ 15 ಗಂಟೆಗಳವರೆಗೆ ಇರುತ್ತದೆ ಎಂದು ರೇಟ್ ಮಾಡಲಾಗಿದೆ. ಇದು 20W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಇದು ಭಾರತದಲ್ಲಿ ಬಿಡುಗಡೆಯಾದ ಏಕೈಕ ರೂಪಾಂತರವಾಗಿದೆ ಮತ್ತು Wi-Fi ಮತ್ತು LTE ಗೆ ಬೆಂಬಲದೊಂದಿಗೆ ಬರುತ್ತದೆ. ಇನ್ನು ಭಾರತದಲ್ಲಿ ಲೆನೊವೊ ಟ್ಯಾಬ್ P11 ಪ್ಲಸ್‌ ಸಾಧನವು ಬೆಲೆ 25,999 ರೂ. ಬೆಲೆಯನ್ನು ಹೊಂದಿದೆ. ಹಾಗೂ ಪ್ರಸ್ತುತ, ಈ ಟ್ಯಾಬ್ಲೆಟ್ ಅಮೆಜಾನ್ ನಲ್ಲಿ ಖರೀದಿಗೆ ಲಭ್ಯವಿದೆ. ಇದು ಏಕೈಕ ಸ್ಲೇಟ್ ಗ್ರೇ ಬಣ್ಣದ ಆಯ್ಕೆಯಲ್ಲಿ ಬರುತ್ತದೆ.

ಲೆನೊವೊ ಟ್ಯಾಬ್‌ P12 ಪ್ರೊ ಫೀಚರ್ಸ್‌

ಲೆನೊವೊ ಟ್ಯಾಬ್‌ P12 ಪ್ರೊ ಫೀಚರ್ಸ್‌

ಇತ್ತೀಚಿಗೆ ಲೆನೊವೊ ಸಂಸ್ಥೆಯು ಲೆನೊವೊ ಟ್ಯಾಬ್‌ P12 ಪ್ರೊ ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಲೆನೊವೊ ಟ್ಯಾಬ್‌ P12 ಪ್ರೊ 12.6 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 2,560x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು 5.63mm ಥಿಕ್‌ನೆಸ್‌ ಅನ್ನು ಹೊಂದಿದ್ದು, ಮೆಟ್‌ ಬಾಡಿಯನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇಯಲ್ಲಿ ಎಲ್ಲಾ ಕಡೆ ಸ್ಲಿಮ್ ಬೆಜೆಲ್‌ಗಳನ್ನು ನೀಡಲಾಗಿದೆ.

ಸಾಮರ್ಥ್ಯವನ್ನು

ಲೆನೊವೊ ಟ್ಯಾಬ್‌ P12 ಪ್ರೊ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ ಹೊಂದಿದೆ. ಇದು 8 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಹಾಗೆಯೇ ಈ ಟ್ಯಾಬ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ವೈಡ್‌ ಕ್ಯಾಮೆರಾ ಮತ್ತು ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಲೆನೊವೊ ಟ್ಯಾಬ್‌ P12 ಪ್ರೊ 10,200 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಟ್ಯಾಬ್‌ ಕಂಪ್ಲೀಟ್‌ ಚಾರ್ಜ್ ಮಾಡುವುದಕ್ಕೆ ಸರಿಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 15 ಗಂಟೆಗಳ ಆನ್‌ಲೈನ್ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಈ ಹೊಸ ಟ್ಯಾಬ್ಲೆಟ್‌ ಎರಡು ಮೈಕ್ರೊಫೋನ್‌ಗಳು ಮತ್ತು ಜೆಬಿಎಲ್‌ ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಆಡಿಯೊ ಬೆಂಬಲಿಸಲಿದೆ.

ಅಮೆಜಾನ್

ಲೆನೊವೊ ಟ್ಯಾಬ್‌ P12 ಪ್ರೊ ಭಾರತದಲ್ಲಿ 69,999ರೂ.ಗಳ ಬೆಲೆಯಿಂದ ಪ್ರಾರಂಭವಾಗಲಿದೆ. ಲೆನೊವೊ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಲೆನೊವೊ ಇಂಡಿಯಾ ವೆಬ್‌ಸೈಟ್ ಮತ್ತು ಸ್ಟೋರ್ ಮತ್ತು ಅಮೆಜಾನ್ ಮೂಲಕ ರಿಟೇಲ್‌ ಸೇಲ್‌ ಮಾಡುತ್ತದೆ ಎನ್ನಲಾಗಿದೆ.

Best Mobiles in India

English summary
Lenovo Tab P11 Plus with Quad-Speaker Setup Launched in India: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X