Just In
- 4 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 7 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
5180mAh ಬ್ಯಾಟರಿ ಶಕ್ತಿಯ 'ಲೆನೊವೊ ಟ್ಯಾಬ್ ವಿ7' ಬಿಡುಗಡೆ!
ಲೆನೊವೊ ಕಂಪನಿಯು ಈಗಾಗಲೇ ಹಲವು ವಿವಿಧ ಶ್ರೇಣಿಯ ಗ್ಯಾಜೆಟ್ ಉತ್ಪನ್ನಗಳನ್ನು ಟೆಕ್ ಮಾರುಕಟ್ಟೆಗೆ ಪರಿಚಯಿಸಿ ಗುರುತಿಸಿಕೊಂಡಿದ್ದು, ಕಂಪನಿಯ 'ಟ್ಯಾಬ್' ಡಿವೈಸ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿದ್ದವು. ಈ ನಿಟ್ಟಿನಲ್ಲಿ ಕಂಪನಿಯು ಮತ್ತೆ ಪವರ್‌ಫುಲ್ ಬ್ಯಾಟರಿ ಶಕ್ತಿಯ ಹೊಸ ಟ್ಯಾಬ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ.

ಹೌದು, ಲೆನೊವೊ ಕಂಪನಿಯು ಹೊಸದಾಗಿ 'ಲೆನೊವೊ ಟ್ಯಾಬ್ ವಿ7' ಹೆಸರಿನ ಡಿವೈಸ್ ಅನ್ನು ಲಾಂಚ್ ಮಾಡಿದೆ. ಫ್ಯಾಬ್ಲೆಟ್ ಮಾದರಿಯಲ್ಲಿರುವ ಈ ಡಿವೈಸ್ ಟ್ಯಾಬ್ ಕಂ ಸ್ಮಾರ್ಟ್‌ಫೋನ್ ಆಗಿ ಬಳಸಬಹುದಾಗಿದೆ. ಎರಡು ಸ್ಟೋರೇಜ್ ವೇರಿಯಂಟ್ ಮಾದರಿಗಳ ಆಯ್ಕೆಯನ್ನು ಹೊಂದಿರುವ ಈ ಡಿವೈಸ್ 5180mAh ಸಾಮರ್ಥ್ಯ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರುವುದು ಪ್ರಮುಖ ಹೈಲೈಟ್ ಆಗಿದೆ.

ಈ ಡಿವೈಸ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆನ್ಸಾರ್‌ಗಳಿದ್ದು, ಮೇನ್ ಕ್ಯಾಮೆರಾ 13ಎಂಪಿ ಸಾಮರ್ಥ್ಯದಲ್ಲಿದೆ. ಜೊತೆಗೆ 3GB ಮತ್ತು 4GB RAM ಆಯ್ಕೆಗಳಿದ್ದು, ಅವು ಕ್ರಮವಾಗಿ 32GB ಮತ್ತು 64GB ಸ್ಟೋರೇಜ್ ಆಯ್ಕೆಗಳನ್ನು ಪಡೆದಿವೆ. ಹಾಗಾದರೇ ಲೆನೊವೊ ಬಿಡುಗಡೆ ಮಾಡಿರುವ 'ಲೆನೊವೊ ಟ್ಯಾಬ್ ವಿ7' ಡಿವೈಸ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ
ಲೆನೊವೊ ಟ್ಯಾಬ್ ವಿ7 ಟ್ಯಾಬ್ ಡಿವೈಸ್ ತೆಳುವಾದ ರಚನೆಯನ್ನು ಪಡೆದಿದ್ದು, 1080×21606 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 9 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 18:9ರಷ್ಟಾಗಿದ್ದು, ಹಾಗೆಯೇ ಡಿಸ್‌ಪ್ಲೇಯ ಬ್ರೈಟ್ನೆಸ್ ಪ್ರಮಾಣವು 350 nits ಆಗಿದೆ. ಶೇ.81% ರಷ್ಟು ಸ್ಥಳವನ್ನು ಡಿಸ್‌ಪ್ಲೇ ಆವರಿಸಿಕೊಂಡಿದ್ದು, ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ.

ಪ್ರೊಸೆಸರ್ ಸಾಮರ್ಥ್ಯ
ಸ್ನ್ಯಾಪ್‌ಡ್ರಾಗನ್ 450 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಆಂಡ್ರಾಯ್ಡ್ 9.0 ಪೈ ಓಎಸ್ ಬೆಂಬಲವು ಇದೆ. ಹಾಗೆಯೇ 3GB ಮತ್ತು 4GB RAM ಸಾಮರ್ಥ್ಯದ ಆಯ್ಕೆಗಳಿದ್ದು, ಅವು ಕ್ರಮವಾಗಿ 32GB ಮತ್ತು 64GB ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಪಡೆದಿವೆ. ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್ ಮೂಲಕ 128GB ವಿಸ್ತರಿಸಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ
ಈ ಡಿವೈಸ್‌ನಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಅವುಗಳಲ್ಲಿ ಡಿವೈಸ್ ಹಿಂಬದಿಯಲ್ಲಿನ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನೊಂದಿಗೆ ಆಟೋಫೋಕಸ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಮುಂಬದಿಯ ಸೆಲ್ಫಿ ಕ್ಯಾಮೆರಾವು 5ಎಂಪಿ ಫಿಕ್ಸಡ್ ಪೋಕಸ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಹೆಚ್‌ಆರ್‌ಡಿ ಮೋಡ್, ಪನೋರಮಾ, ನೈಟ್‌ಶಾಟ್ ಮೋಡ್ ಆಯ್ಕೆಗಳನ್ನು ಸಹ ಹೊಂದಿವೆ.

ಬ್ಯಾಟರಿ
ಲೆನೊವೊ ಟ್ಯಾಬ್ ವಿ7 ಟ್ಯಾಬ್ ಡಿವೈಸ್ 5180mAh ಬಲವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 30ಗಂಟೆಗಳ ನಿರಂತರ ಟಾಕ್‌ಟೈಮ್ ಸಾಮರ್ಥ್ಯವಿದ್ದು, ಹಾಗೆಯೇ ನಿರಂತರ 10ಗಂಟೆ ವಿಡಿಯೊ ಪ್ಲೇಬ್ಯಾಕ್ ಮತ್ತು ಇಂಟರ್ನೆಟ್ ಬ್ರೌಸಿಂಗ್ ಮಾಡುವ ಪವರ್ ಒದಗಿಸಲಿದೆ. ಜೊತೆಗೆ ಯುಎಸ್‌ಬಿ ಟೈಪ್ ಸಿ ಫೋರ್ಟ್ ಆಯ್ಕೆ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಲೆನೊವೊ ಟ್ಯಾಬ್ ವಿ7 ಟ್ಯಾಬ್ ಡಿವೈಸ್ ಸ್ಲೆಟ್ ಕೇವಲ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, 3GB RAM ಬೆಲೆಯು 12,990ರೂ.ಗಳು ಆಗಿದೆ. ಮತ್ತು 4GB RAM ವೇರಿಯಂಟ್ ಬೆಲೆಯು 14,990ರೂ.ಗಳು ಆಗಿದೆ. ಇದೇ ಅಗಷ್ಟ್ 1 ದಿಂದ ಫ್ಲಿಪ್‌ಕಾರ್ಟ್, ಅಮೆಜಾನ್ ಇ ಕಾಮರ್ಸ್ ತಾಣಗಳು ಸೇರಿದಂತೆ ಕ್ರೋಮಾ ಮತ್ತು ರಿಲಾಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470