Lenovo: ಲೆನೊವೊದಿಂದ ಹೊಸ ಲ್ಯಾಪ್‌ಟಾಪ್ ಲಾಂಚ್! ವಿಶೇಷತೆ ಕೇಳಿದ್ರೆ ಅಚ್ಚರಿ ಎನಿಸುತ್ತೆ!
ಲೆನೊವೊ ಕಂಪೆನಿ CES 2024 (ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2024)ನಲ್ಲಿ ಹೊಸ ಲ್ಯಾಪ್‌ಟಾಪ್ ಥಿಂಕ್‌ಬುಕ್ ಪ್ಲಸ್ ಜನ್ 5 ಹೈಬ್ರಿಡ್ ಅನ್ನು ಅನಾವರಣ ಮಾಡಿದೆ. ಈ ಮೂಲಕ ತನ್ನ ಥಿಂಕ್‌ಬುಕ್ ಪ್ಲಸ್ ಸರಣಿಯ ಲ್ಯಾಪ್‌ಟಾಪ್‌ಗಳಿಗೆ ಹೊಸ ಸೇರ್ಪಡೆ ಮಾಡಿದೆ. ಇದು ಇಂಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, Lenovo ThinkBook Plus Gen 5 ಹೈಬ್ರಿಡ್ ಲ್ಯಾಪ್‌ಟಾಪ್ ಅನಾವರಣಗೊಂಡಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಡಿಸ್‌ಪ್ಲೇಯನ್ನು ಕೆಳಗಿನ ಅರ್ಧದಿಂದ ಬೇರ್ಪಡಿಸಬಹುದು. ಜೊತೆಗೆ ವಿಸ್ತೃತ ಬ್ಯಾಟರಿ ಬಾಳಿಕೆಗಾಗಿ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಟ್ಯಾಬ್ಲೆಟ್‌ನಂತೆ ಕೂಡ ಬಳಸಬಹುದಾಗಿದೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Lenovo ThinkBook Plus Gen 5 ಹೈಬ್ರಿಡ್ ವಿಶೇಷತೆ ಏನು?
ಲೆನೊವೊ ಥಿಂಕ್‌ಬುಕ್ ಪ್ಲಸ್ ಜನ್ 5 ಹೈಬ್ರಿಡ್ ಲ್ಯಾಪ್‌ಟಾಪ್ ಪಿಸಿ ಆಗಿಯೂ ಟ್ಯಾಬ್ಲೆಟ್ ಆಗಿಯೂ ಕೂಡ ಕಾರ್ಯನಿರ್ವಹಿಸಲಿದೆ. ಇದರ ಹೈಬ್ರಿಡ್ ಮಾದರಿಯು 14 ಇಂಚಿನ 2.8K OLED ಟಚ್‌ಸ್ಕ್ರೀನ್ ಡಿಸ್‌ಪ್ಲೆಯನ್ನು ಹೊಂದಿದೆ. ಈ ಡಿಸ್‌ಪ್ಲೆ 100% DCI:P3 ಕಲರ್ ಗ್ಯಾಮಟ್ ಮತ್ತು ಐಚ್ಛಿಕ ಲೆನೊವೊ ಟ್ಯಾಬ್ ಪೆನ್ ಪ್ಲಸ್‌ಗೆ ಬೆಂಬಲವನ್ನು ನೀಡಲಿದೆ.
ಇದಲ್ಲದೆ ಈ ಹೈಬ್ರಿಡ್ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಇದರ ಟ್ಯಾಬ್ಲೆಟ್ Qualcomm Snapdragon 8+ Gen 1 ಪ್ರೊಸೆಸರ್‌ನಲ್ಲಿ ರನ್ ಆಗಲಿದೆ. ಹಾಗೆಯೇ ಹೈಬ್ರಿಡ್ ಲ್ಯಾಪ್‌ಟಾಪ್ 32GB RAM ಮತ್ತು 1TB SSD ಸ್ಟೋರೆಜ್ ಸಾಮರ್ಥ್ಯದಲ್ಲಿದೆ. ಆದರೆ ಟ್ಯಾಬ್ಲೆಟ್ 32GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇನ್ನು ಲೆನೊವೊ ಥಿಂಕ್‌ಬುಕ್ ಪ್ಲಸ್ ಜನ್ 5 ಹೈಬ್ರಿಡ್ ಲ್ಯಾಪ್‌ಟಾಪ್ ಎರಡು 2W ಹರ್ಮನ್ ಕಾರ್ಡನ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಆದರೆ ಟ್ಯಾಬ್ಲೆಟ್ ನಾಲ್ಕು 1W ಸೂಪರ್-ಲೀನಿಯರ್ ಸ್ಪೀಕರ್‌ಗಳನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಳಿಗಾಗಿ 1080p IR ಕ್ಯಾಮೆರಾವನ್ನು ಹೊಂದಿದೆ. ಟ್ಯಾಬ್ಲೆಟ್‌ನ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ.
ಹೈಬ್ರಿಡ್ ಡಿವೈಸ್ ಕನೆಕ್ಟಿವಿಟಿ ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ 6E, ಬ್ಲೂಟೂತ್ 5.2, ಎರಡು ಥಂಡರ್‌ಬೋಲ್ಟ್ 4 ಪೋರ್ಟ್‌ಗಳು ಮತ್ತು ಬೇಸ್‌ನಲ್ಲಿ 3.5 ಎಂಎಂ ಆಡಿಯೊ ಜ್ಯಾಕ್ ಒಳಗೊಂಡಿದೆ. ಆದರೆ ಟ್ಯಾಬ್ಲೆಟ್ ಮಾದರಿಯು Wi-Fi 6E ಮತ್ತು ಬ್ಲೂಟೂತ್ 5.3 ಗೆ ಬೆಂಬಲದೊಂದಿಗೆ USB ಟೈಪ್-C ಪೋರ್ಟ್ ಅನ್ನು ಪಡೆದುಕೊಂಡಿದೆ. ಸೆಕ್ಯುರಿಟಿ ಆಯ್ಕೆಗಳಲ್ಲಿ ಲ್ಯಾಪ್‌ಟಾಪ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು IR ಕ್ಯಾಮರಾ ಮೂಲಕ ಫೆಸ್ ಡಿಟೆಕ್ಷನ್ ಅನ್ನು ನೀಡಲಾಗಿದೆ.
ಇನ್ನು ಲೆನೊವೊ ಥಿಂಕ್‌ಬುಕ್ ಪ್ಲಸ್ ಜನ್ 5 ಹೈಬ್ರಿಡ್ ಪ್ರತ್ಯೇಕ ಬ್ಯಾಟರಿಗಳಿಂದ ಚಾಲಿತವಾಗಿದೆ. ಆದರೆ ಇವುಗಳು ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಹೈಬ್ರಿಡ್ ಮಾದರಿಯು 75WHrಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W ಅಡಾಪ್ಟರ್‌ನೊಂದಿಗೆ ಬರಲಿದೆ. ಆದರೆ ಟ್ಯಾಬ್ಲೆಟ್ 38WHr ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಲೆನೊವೊ ಥಿಂಕ್‌ಬುಕ್ ಪ್ಲಸ್ Gen 5 ಹೈಬ್ರಿಡ್ ಬೆಲೆ ಮತ್ತು ಲಭ್ಯತೆ
Lenovo ThinkBook Plus Gen 5 ಹೈಬ್ರಿಡ್ ಬೆಲೆಯು $1,999 (ಸುಮಾರು 1.66 ಲಕ್ಷರೂ) ರಿಂದ ಪ್ರಾರಂಭವಾಗುತ್ತದೆ. ಈ ಲ್ಯಾಪ್‌ಟಾಪ್ US ನಲ್ಲಿ 2024ರ 4ನೇ ತ್ರೈಮಾಸಿಕದಲ್ಲಿ ಲಭ್ಯವಾಗುವ ನಿರೀಕ್ಷೆ ಇಡಲಾಗಿದೆ. ಇದಲ್ಲದೆ ಮುಂಬರುವ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








