Just In
- 2 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 4 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 5 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲೆನೊವೊದಿಂದ ಹೊಸ ಹೈ ಎಂಡ್ ಲ್ಯಾಪ್‌ಟಾಪ್‌ಗಳು ಲಾಂಚ್!..ಬೆಲೆ?
ಪ್ರಮುಖ ಲ್ಯಾಪ್‌ಟಾಪ್‌ಗಳಲ್ಲಿ ಕಂಪನಿಗಳಲ್ಲಿ ಒಂದಾದ ಲೆನೊವೊ ಈಗಾಗಲೇ ಹಲವು ಶ್ರೇಣಿಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದ್ದು, ಆದ್ರೆ ಹೊಸತನದ ಫೀಚರ್ಸ್ ಪರಿಚಯಿಸುವುದನ್ನು ಮತ್ತೆ ಮುಂದುವರೆಸಿದೆ. ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ 'ಯೋಗಾ' ಸರಣಿಯ ಲ್ಯಾಪ್‌ಟಾಪ್ ಮತ್ತು ಹೈ ಎಂಡ್ ಫೀಚರ್ಸ್‌ವುಳ್ಳ ಡೆಸ್ಕಟಾಪ್, ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆದಿದೆ.

ಹೌದು, ಲೆನೊವೊ ಕಂಪನಿಯು ದೇಶಿಯ ಮಾರುಕಟ್ಟೆಗೆ ಸರಣಿ ಉತ್ಪನ್ನಗಳನ್ನು ಲಾಂಚ್ ಮಾಡಿದ್ದು, ಏಕಕಾಲಕ್ಕೆ 'ಯೋಗಾ' ಸರಣಿಯಲ್ಲಿ 'ಯೋಗಾ S940' ಪ್ರೀಮಿಯಮ್ ಲ್ಯಾಪ್‌ಟಾಪ್, 'ಯೋಗಾ A940' ಡೆಸ್ಕ್‌ಟಾಪ್, ಹಾಗೂ ಲೆನೊವಾ 'ಐಡಿಯಾ ಪ್ಯಾಡ್ S540', 'ಐಡಿಯಾ ಪ್ಯಾಡ್ S340' ಮತ್ತು 'ಐಡಿಯಾ ಪ್ಯಾಡ್ S145' ಹೆಸರಿನ ಅತ್ಯುತ್ತಮ ಫೀಚರ್‌ಗಳ ಲ್ಯಾಪ್‌ಟಾಪ್ ಮಾದರಿಗಳನ್ನು ಪರಿಚಯಿಸಿದೆ.

ಈ ಡಿವೈಸ್ ಹೈ ಪ್ರೈಸ್‌ಟ್ಯಾಗ್‌ನ ದರವನ್ನು ಹೊಂದಿದ್ದು, ಆದ್ರೆ 8 ನೇ ತಲೆಮಾರಿನ ಇಂಟೆಲ್ i7 ಕೋರ್ ಪ್ರೊಸೆಸರ್ ಹೈ ಎಂಡ್ RAM, ಗ್ರಾಫಿಕ್ಸ್, ಸ್ಟೋರೇಜ್ ಸಾಮರ್ಥ್ಯ, ಸೇರಿದಂತೆ ಪ್ರೊಫೇಶನಲ್ ಮಾದರಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೇ ಲೆನೊವೊ ಬಿಡುಗಡೆ ಮಾಡಿರುವ ಸರಣಿ 'ಯೋಗಾ S940' ಹಾಗೂ ಐಡಿಯಾ ಪ್ಯಾಡ್ ಲ್ಯಾಪ್‌ಟಾಪ್‌ಗಳು ಮತ್ತು ಯೋಗಾ A940 ಡೆಸ್ಕ್‌ಟಾಪ್ ಹೊಂದಿರುವ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಲೆನೊವೊ ಯೋಗಾ A940
ಲೆನೊವಾ ಯೋಗಾ A940 ಇದೊಂದು ಡೆಸ್ಕ್‌ಟಾಪ್ ಮಾದರಿಯಾಗಿದ್ದು, ಕ್ರಿಯೆಟಿವ್ ಪ್ರೊಫೇಶನಲಿಸ್ಟ್‌ಗಳಿಗೆ ಅನುಕೂಲವಾಗುವ ಸಂಪೂರ್ಣ ಉನ್ನತ ಫೀಚರ್ಸ್‌ಗಳನ್ನು ತುಂಬಿಕೊಂಡಿದೆ. 27 ಇಂಚಿನ QHD ಡಿಸ್‌ಪ್ಲೇ ಹೊಂದಿದ್ದು, 8 ನೇ ತಲೆಮಾರಿನ ಇಂಟೆಲ್ i7 ಕೋರ್ ಪ್ರೊಸೆಸರ್, 16GB RAM ಹಾಗೂ 512GB SSD ಸ್ಟೋರೇಜ್ ಜೊತೆಗೆ 2TB HDD ಆಯ್ಕೆ ಇದೆ. ಇದರೊಂದಿಗೆ AMD RX560 ಗ್ರಾಫಿಕ್ಸ್ ಕಾರ್ಡ್ ಸೌಲಭ್ಯವನ್ನು ಪಡೆದಿದೆ. ಬೆಲೆ 1,69,990ರೂ.ಗಳು ಆಗಿದೆ.

ಯೋಗಾ S940 ಲ್ಯಾಪ್‌ಟಾಪ್
ಯೋಗಾ S940 ಲ್ಯಾಪ್‌ಟಾಪ್ Contour Glass ಮತ್ತು ರೌಂಡ್ ಬೆಜಲ್ ಜೊತೆಗೆ ಸ್ಲಿಮ್ ಡಿಸೈನ್ ರಚನೆಯಲ್ಲಿದೆ. ಡಿಸ್‌ಪ್ಲೇಯು 4K HDR ಗುಣಮಟ್ಟದಲ್ಲಿದ್ದು, 500 nits ಬ್ರೈಟ್ನಸ್ ಸಾಮರ್ಥ್ಯ ಪಡೆದಿದೆ. 8ನೇ ತಲೆಮಾರಿನ ಇಂಟೆಲ್ i7 ಕೋರ್ ಪ್ರೊಸೆಸರ್, ವಿಂಡೊಸ್ 10 ಓಎಸ್ ನೊಂದಿಗೆ 16GB LPDDR3 ಮೆಮೊರಿ ಮತ್ತು 1TB ವರೆಗೂ PCIe SSD ಬೆಲೆಯು 1,39,990ರೂ. ಆಗಿದೆ.

ಲೆನೊವೊ ಐಡಿಯಾಪ್ಯಾಡ್ S540
ಐಡಿಯಾಪ್ಯಾಡ್ S540 ಲ್ಯಾಪ್‌ಟಾಪ್ 15 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ 300nits ಬ್ರೈಟ್ನೆಸ್ ಸಾಮರ್ಥ್ಯವನ್ನು ಹೊಂದಿದೆ. 8ನೇ ತಲೆಮಾರಿನ ಇಂಟೆಲ್ i7 ಕೋರ್ ಪ್ರೊಸೆಸರ್, ಜೊತೆಗೆ Nvidia GTX1650 ಗ್ರಾಫಿಕ್ಸ್ ಕಾರ್ಡ್ ನೀಡಲಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 16GB RAM ಸಾಮರ್ಥ್ಯದೊಂದಿಗೆ 512GB SSD ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಬೆಲೆಯು 64,990ರೂ.ಗಳು ಆಗಿದೆ.

ಲೆನೊವೊ ಐಡಿಯಾಪ್ಯಾಡ್ S340
14 ಇಂಚಿನ ಮತ್ತು 15.6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿರುವ 'ಐಡಿಯಾಪ್ಯಾಡ್ S340' ಲ್ಯಾಪ್‌ಟಾಪ್, 8ನೇ ತಲೆಮಾರಿನ ಇಂಟೆಲ್ i7 ಕೋರ್ ಪ್ರೊಸೆಸರ್, 16GB RAM ಮತ್ತು 2TB ಹೈಬ್ರಿಡ್ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಗ್ರಾಫಿಕ್ಸ್ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ. ಈ ಲ್ಯಾಪ್‌ಟಾಪ್ ಆರಂಭಿಕ ಬೆಲೆಯು 36,990ರೂ.ಗಳು ಆಗಿದೆ.

ಲೆನೊವೊ ಐಡಿಯಾಪ್ಯಾಡ್ S145
14 ಇಂಚಿನ ಮತ್ತು 15.6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿರುವ 'ಐಡಿಯಾಪ್ಯಾಡ್ S340' ಲ್ಯಾಪ್‌ಟಾಪ್, 8ನೇ ತಲೆಮಾರಿನ ಇಂಟೆಲ್ i7 ಕೋರ್ ಪ್ರೊಸೆಸರ್, 12GB RAM ಮತ್ತು 1TB ವರೆಗೆ HDD ಇದರೊಂದಿಗೆ 256GB SSD ಹೈಬ್ರಿಡ್ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದೆ. Nvidia MX110 GPU ಗ್ರಾಫಿಕ್ಸ್ ಕಾರ್ಡ್ ಆಯ್ಕೆ ನೀಡಲಾಗಿದೆ. ಈ ಲ್ಯಾಪ್‌ಟಾಪ್ ಆರಂಭಿಕ ಬೆಲೆಯು 23,990ರೂ.ಗಳು ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470