Lenovo: ಲೆನೊವೊ ಯೋಗ ಸ್ಲಿಮ್ 7i ಲಾಂಚ್! ಎಐ ಚಾಲಿತ ಫೀಚರ್ಸ್ ಆಯ್ಕೆ, ಬೆಲೆ ಎಷ್ಟು?
ಲ್ಯಾಪ್‌ಟಾಪ್‌ಗಳ (laptops) ವಿಚಾರಕ್ಕೆ ಬಂದರೆ ಲೆನೊವೊ (Lenovo) ಭರ್ಜರಿ ಫೀಚರ್ಸ್ ಆಯ್ಕೆಯ ಹಾಗೂ ಇತರೆ ಕಂಪೆನಿಗಳ ಲ್ಯಾಪ್‌ಟಾಪ್ ಬೆಲೆಗೆ ಹೋಲಿಕೆ ಮಾಡಿದ್ರೆ ಕಡಿಮೆ ಬೆಲೆಗೆ ಸಾಕಷ್ಟು ಲ್ಯಾಪ್‌ಟಾಪ್‌ಗಳನ್ನು ಈಗಾಗಲೇ ಲಾಂಚ್ ಮಾಡಿದೆ. ಈ ನಡುವೆ ಭಾರತದಲ್ಲಿ ಎಐ ಫೀಚರ್ಸ್ ಆಧಾರಿತ ಹೊಸ ಲ್ಯಾಪ್‌ಟಾಪ್ ಅನ್ನು ಅನಾವರಣ ಮಾಡಿದೆ.
ಹೌದು, ಲೆನೊವೊ ಇಂದು ಲೆನೊವೊ ಯೋಗ ಸ್ಲಿಮ್ 7i (Lenovo Yoga Slim 7i) ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಹೊಸ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಲಿದ್ದು, 14 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆಯುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಲೆನೊವೊ ಯೋಗ ಸ್ಲಿಮ್ 7i ಲ್ಯಾಪ್‌ಟಾಪ್ ಡಿಸ್‌ಪ್ಲೇ ಮಾಹಿತಿ: ಈ ಲ್ಯಾಪ್‌ಟಾಪ್ 14 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, 1920 x 1200 ಪಿಕ್ಸೆಲ್ ಸ್ಕ್ರೀನ್ WUXGA ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 400 ನಿಟ್ಸ್ ಗರಿಷ್ಟ ಬ್ರೈಟ್‌ನೆಸ್ ಆಯ್ಕೆ ಹಾಗೂ 100 % ಡಿಸಿಐ-P3, 60Hz ರಿಫ್ರೆಶ್ ರೇಟ್, ಮತ್ತು ಡಾಲ್ಬಿ ವಿಷನ್ ತಂತ್ರಜ್ಞಾನ ಪಡೆದಿದೆ.
ಹಾಗೆಯೇ ಡಿಸ್‌ಪ್ಲೇ ಹೆಚ್‌ಆರ್‌ಡಿ ಟ್ರೂ ಬ್ಲ್ಯಾಕ್ 500, ಐಸೇಫ್ ಪ್ರಮಾಣೀಕರಣ, ಮತ್ತು TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣ ಪಡೆದುಕೊಂಡಿದೆ. ಈ ಮೂಲಕ ನಿರಂತರವಾಗಿ ನೀವು ಈ ಲ್ಯಾಪ್‌ಟಾಪ್ ಬಳಕೆ ಮಾಡಿದ್ರೂ ಯಾವುದೇ ಕಣ್ಣಿನ ಸಮಸ್ಯೆಗಳು ಎದುರಾಗುವುದಿಲ್ಲ.
ಲೆನೊವೊ ಯೋಗ ಸ್ಲಿಮ್ 7i ಲ್ಯಾಪ್‌ಟಾಪ್ ಫೀಚರ್ಸ್: ಪ್ರೊಸೆಸರ್ ವಿಚಾರಕ್ಕೆ ಬಂದರೆ ಈ ಲ್ಯಾಪ್‌ಟಾಪ್ ಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 32GB ಯ LPDDR5x ಗ್ರಾಫಿಕ್ಸ್ ಮತ್ತು 1TB SSD M.2 PCle ಸ್ಟೋರೇಜ್ ನೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಮೈಕ್ರೋಸಾಫ್ಟ್‌ನ ವಿಂಡೋಸ್ 11 ಪ್ಲಾಟ್‌ಫಾರ್ಮ್ ಅನ್ನು ರನ್ ಮಾಡಲಿದೆ.

ಇದರೊಂದಿಗೆ ಈ ಯೋಗ ಸ್ಲಿಮ್ 7i ಫುಲ್ ಹೆಚ್‌ಡಿ ಕ್ಯಾಮೆರಾವನ್ನು ಹೊಂದಿದ್ದು, 1080p ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಜೊತೆಗೆ ಟೈಮ್-ಆಫ್-ಫ್ಲೈಟ್ ಸೆನ್ಸಾರ್ ಮತ್ತು ಇ-ಶಟರ್ ಅನ್ನು ಇದು ಹೊಂದಿದೆ. ಹಾಗೆಯೇ ಇದರ ಆಡಿಯೋ ವಿಚಾರಕ್ಕೆ ಬಂದರೆ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಅಟ್ಮಾಸ್ ಮತ್ತು ಆಂಪ್ಲಿಫೈಯರ್ ಬೆಂಬಲದೊಂದಿಗೆ ನಾಲ್ಕು 2W ಸ್ಪೀಕರ್ ಆಯ್ಕೆ ಪಡೆದಿದೆ.
ಇದಷ್ಟೇ ಅಲ್ಲದೆ ಈ ಲ್ಯಾಪ್‌ಟಾಪ್ ನಿಖರವಾದ ಟಚ್‌ಪ್ಯಾಡ್ ಬೆಂಬಲದೊಂದಿಗೆ ಬಟನ್‌ಲೆಸ್ ಗ್ಲಾಸ್ ಮೇಲ್ಮೈ ಮಲ್ಟಿ-ಟಚ್ ಟಚ್‌ಪ್ಯಾಡ್‌ನ ಪೂರ್ಣ ಗಾತ್ರದ ಕೀಬೋರ್ಡ್ ಅನ್ನು ಹೊಂದಿದೆ. ಜೊತೆಗೆ ಆನೋಡೈಸ್ಡ್ ಅಲ್ಯೂಮಿನಿಯಂ ಕೇಸಿಂಗ್‌ನಲ್ಲಿ ಇದು ಕಾಣಿಸಿಕೊಂಡಿದ್ದು, ಅಲ್ಯೂಮಿನಿಯಂ ಮತ್ತು ಲೂನಾ ಗ್ರೇ ಬಣ್ಣದ ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯ ಇದೆ.
ಲೆನೊವೊ ಯೋಗ ಸ್ಲಿಮ್ 7i ಲ್ಯಾಪ್‌ಟಾಪ್ ಬೆಲೆ ಹಾಗೂ ಲಭ್ಯತೆ: ಈ ಲೆನೊವೊ ಯೋಗ ಸ್ಲಿಮ್ 7i ಲ್ಯಾಪ್‌ಟಾಪ್ ಭಾರತದಲ್ಲಿ 1,04,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯ ಇರಲಿದೆ. ಇದನ್ನು ನೀವು ಲೆನೊವೊ ಆನ್‌ಲೈನ್ ಹಾಗೂ ಆಫ್‌ಲೈನ್ ಸ್ಟೋರ್ ಜೊತೆಗೆ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಇತರ ಆಫ್‌ಲೈನ್ ರಿಟೇಲರ್ ಸ್ಟೋರ್‌ಗಳ ಮೂಲಕ ಕೊಂಡುಕೊಳ್ಳಬಹುದಾಗಿದೆ.

ಇನ್ನು ಆಸಕ್ತ ಖರೀದಿದಾರರು ಲೆನೊವೊ ಅಧಿಕೃತ ವೆಬ್‌ಸೈಟ್‌ನಿಂದ ಆರ್ಡರ್ ಮಾಡಿದ ನಾಲ್ಕು ಗಂಟೆಗಳ ಒಳಗೆ ಡಿವೈಸ್ ಅನ್ನು ಪಡೆಯಬಹುದು ಎಂದು ಲೆನೊವೊ ತಿಳಿಸಿದೆ. ಇದಲ್ಲದೆ, ಖರೀದಿದಾರರು ಮಾಸಿಕವಾಗಿ ಲೆನೊವೊ ಯೋಗ ಸ್ಲಿಮ್ 7i ಅನ್ನು ಯಾವುದೇ ವೆಚ್ಚವಿಲ್ಲದ ಇಎಮ್‌ಐ 5,999 ರೂ.ಗಳನ್ನು ಪಾವತಿ ಮಾಡುವ ಮೂಲಕವೂ ಖರೀದಿ ಮಾಡಲು ಅನುವು ಮಾಡಿಕೊಟ್ಟಿದೆ. ಇದರೊಂದಿಗೆ ಖರೀದಿದಾರರು ಹೆಚ್‌ಡಿಎಫ್‌ಸಿ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿ ಮಾಡಿದ್ರೆ 10,000 ರೂ.ವರೆಗಿನ ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ.


Click it and Unblock the Notifications








