ಭಾರತದಲ್ಲಿ ಲೆನೊವೊ ಯೋಗಾ ಸ್ಲಿಮ್ 7i ಲ್ಯಾಪ್‌ಟಾಪ್‌ ಲಾಂಚ್!

|

ಪ್ರತಿಷ್ಠಿತ ಲ್ಯಾಪ್‌ಟಾಪ್‌ ಸಂಸ್ಥೆಗಳಲ್ಲೊಂದಾದ ಲೆನೊವೊ ಹಲವು ಭಿನ್ನ ಶ್ರೇಣಿಗಳಲ್ಲಿ ಲ್ಯಾಪ್‌ಟಾಪ್‌ ಸರಣಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಸ್ಲಿಮ್ ಮಾದರಿಯ ಲ್ಯಾಪ್‌ಟಾಪ್‌ ಸರಣಿ ಹೆಚ್ಚು ಗಮನ ಸೆಳೆದಿದೆ. ಅದರ ಮುಂದುವರಿದ ಭಾಗವಾಗಿ ಲೆನೊವೊ ಕಂಪನಿಯು ಇದೀಗ ಲೆನೊವೊ ಯೋಗಾ ಸ್ಲಿಮ್ 7i ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ 10ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಹೊಂದಿದೆ.

ಲೆನೊವೊ

ಹೌದು, ಲೆನೊವೊ ಸಂಸ್ಥೆಯು ಹೊಸದಾಗಿ ಯೋಗಾ ಸ್ಲಿಮ್ 7i ಲ್ಯಾಪ್‌ಟಾಪ್‌ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಲ್ಯಾಪ್‌ಟಾಪ್‌ 180 ಡಿಗ್ರಿಗಳನ್ನು ತೆರೆಯುವ ಡಿಸ್‌ಪ್ಲೇಯನ್ನು ರಚನೆಯನ್ನು ಪಡೆದಿದೆ. ಹಾಗೆಯೇ ಸ್ಲಿಮ್ ಮತ್ತು ಲೈಟ್ ವಿನ್ಯಾಸವನ್ನು ಹೊಂದಿದೆ. Q-ಕಂಟ್ರೋಲ್ ಇಂಟೆಲಿಜೆಂಟ್ ಕೂಲಿಂಗ್ ಫೀಚರ್‌ ಅನ್ನು ಪಡೆದಿದೆ. ಜೊತೆಗೆ AI ತಂತ್ರಜ್ಞಾನ ಸೆನ್ಸಾರ್ ಪಡೆದಿದೆ.

ಸ್ಲಿಮ್

ಹೊಸ ಲೆನೊವೊ ಯೋಗ ಸ್ಲಿಮ್ 7i ಪೂರ್ಣ-ಹೆಚ್‌ಡಿ ಐಪಿಎಸ್ ಡಿಸ್ಪ್ಲೇಯನ್ನು ಹೊಂದಿದ್ದು, 1,920x1,080 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಡಿಸ್‌ಪ್ಲೇಯು 90 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿದೆ ಮತ್ತು ಪರದೆಯು 180 ಡಿಗ್ರಿಗಳನ್ನು ತೆರೆಯಬಹುದು. ಇನ್ನು ಈ ಲ್ಯಾಪ್‌ಟಾಪ್‌ ಇನ್‌ಬಿಲ್ಟ್‌ ವಿಂಡೋಸ್ 10 ಕಾರ್ಯವೈಖರಿಯನ್ನು ಒಳಗೊಂಡಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ 10nm ಆರ್ಕಿಟೆಕ್ಚರ್ ಆಧರಿಸಿ 10 ನೇ ತಲೆಮಾರಿನ ಇಂಟೆಲ್ ಐಸ್-ಲೇಕ್ ಕೋರ್ ಐ 7 ಸಿಪಿಯು ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ 2GB VRAM ಜೊತೆಗೆ Nvidia GeForce MX350 GDDR5 5 ಗ್ರಾಫಿಕ್ಸ್ ಕಾರ್ಡ್ ಹೊಂದಿದೆ. 3,200MHz ವೇಗದಲ್ಲಿ 16GB LPDDR4X RAM ಅನ್ನು ಪಡೆಯಬಹುದು. ಸ್ಟೋರೇಜ್‌ಗಾಗಿ, ಲೆನೊವೊ ಯೋಗ ಸ್ಲಿಮ್ 7i ಅನ್ನು 512GB ಎಸ್‌ಎಸ್‌ಡಿ ಹೊಂದಿರಬಹುದು. ಇದರೊಂದಿಗೆ ಡಾಲ್ಬಿ ವಿಷನ್ ಬೆಂಬಲವನ್ನು ಸಹ ಹೊಂದಿದೆ.

ಡಾಲ್ಬಿ ಅಟ್ಮೋಸ್

ಈ ಡಿವೈಸ್‌ ಬಿಲ್ಟ್‌ಇನ್ 4.0W ಡಾಲ್ಬಿ ಅಟ್ಮೋಸ್ ಸ್ಪೀಕರ್ ಸಿಸ್ಟಮ್ ನಿರ್ವಹಿಸುತ್ತದೆ. ಹಾಗೆಯೇ ಕನೆಕ್ಟಿವಿಟಿಗಾಗಿ 2X2 AX Wi-Fi 6 ಮತ್ತು Thunderbolt 3 ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 60Wh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ರಾಪಿಡ್ ಚಾರ್ಜ್ ಪ್ರೊ ತಂತ್ರಜ್ಞಾನದೊಂದಿಗೆ ಬರುತ್ತದೆ. ಲೆನೊವೊ ಯೋಗ ಸ್ಲಿಮ್ 7i 320.6x208x14.9 ಮಿಮೀ ಅಳತೆ ಮತ್ತು 1.36 ಕೆಜಿ ತೂಕ ಹೊಂದಿದೆ.

ಫ್ಲಿಪ್‌ಕಾರ್ಟ್

ಲೆನೊವೊ ಯೋಗ ಸ್ಲಿಮ್ 7i ರೂ. ಭಾರತದಲ್ಲಿ 79,990 ಮತ್ತು ಸ್ಲೇಟ್ ಗ್ರೇ ಕಲರ್ ಆಯ್ಕೆಯಲ್ಲಿ ಬರುತ್ತದೆ. ಇದು ಆಗಸ್ಟ್ 20 ರಿಂದ ಆನ್‌ಲೈನ್‌ನಲ್ಲಿ ಮಾರಾಟವಾಗಲಿದೆ ಮತ್ತು ಲೆನೊವೊ.ಕಾಮ್ ಮತ್ತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಖರೀದಿಗೆ ಲಭ್ಯವಿರುತ್ತದೆ. ಇನ್ನು ಆಫ್‌ಲೈನ್ ಸ್ಟೋರ್‌ಗಳಲ್ಲಿ ಆಗಸ್ಟ್ 14 ರ ಶುಕ್ರವಾರದಿಂದ ಲೆನೊವೊ ಯೋಗ ಸ್ಲಿಮ್ 7i ಮಾರಾಟವನ್ನು ಪ್ರಾರಂಭಿಸುತ್ತವೆ.

Best Mobiles in India

English summary
The Lenovo Yoga Slim 7i comes with pre-installed Windows 10.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X