Home
ಸುದ್ದಿಜಾಲ

ಇದು ಅಂತಿಂಥಾ ಪೆನ್‌ಡ್ರೈವ್‌ ಅಲ್ಲವೇ ಅಲ್ಲ!..ಇದರ ಉಪಯೋಗ ತಿಳಿದ್ರೆ ನೀವು ಶಾಕ್‌!

ಪ್ರಮುಖ ಫ್ಲ್ಯಾಷ್ ಮೆಮೊರಿ ಉತ್ಪನ್ನಗಳ ಬ್ರ್ಯಾಂಡ್ ಆಗಿರುವ 'ಲೆಕ್ಸಾರ್' (Lexar) ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಪೆನ್ ಡ್ರೈವ್ ಅನ್ನು ಘೋಷಿಸಿದೆ. ಸಂಸ್ಥೆಯು ಬಿಡುಗಡೆ ಮಾಡಿರುವ ಈ ನೂತನ ಪೆನ್‌ಡ್ರೈವ್‌ ಸಾಮಾನ್ಯ ಪೆನ್‌ಡ್ರೈವ್‌ಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಸೆಕ್ಯುರಿಟಿ ಸೌಲಭ್ಯ ಪಡೆದಿದೆ.

ಹೌದು, ಲೆಕ್ಸಾರ್ ಸಂಸ್ಥೆಯು ಜಂಪ್‌ಡ್ರೈವ್‌ F35 (JumpDrive F35) ಹೆಸರಿನ ಹೊಸ ಪೆನ್‌ಡೈವ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಘೋಷಿಸಿದೆ. ಇದು ಯುಎಸ್‌ಬಿ 3.0 ಡ್ರೈವ್ ಆಗಿದ್ದು, 300MB/s ನ ಸಿಕ್ವೆನ್ಶಲ್ ರೀಡ್‌ ಸ್ಪೀಡ್‌ ಅನ್ನು ಹೊಂದಿದೆ. ಅಂದಹಾಗೆ ಈ ಪೆನ್‌ಡ್ರೈವ್‌ನ ಪ್ರಮುಖ ಹೈಲೈಟ್‌ ಎಂದರೆ ಈ ಡಿವೈಸ್‌ ಹೆಚ್ಚುವರಿ ಭದ್ರತೆಗಾಗಿ ಅಂತರ್ನಿರ್ಮಿತ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ ಪಡೆದಿದೆ.

ಇದು ಅಂತಿಂಥಾ ಪೆನ್‌ಡ್ರೈವ್‌ ಅಲ್ಲವೇ ಅಲ್ಲ!..ಇದರ ಉಪಯೋಗ ತಿಳಿದ್ರೆ ನೀವು ಶಾಕ್‌!

ಲೆಕ್ಸಾರ್ ಜಂಪ್‌ಡ್ರೈವ್‌ F35 (JumpDrive F35) ಡ್ರೈವ್‌ನಲ್ಲಿ ಸ್ಟೋರ್‌ ಮಾಡಲಾಗುವ ವೈಯಕ್ತಿಕ ಮತ್ತು ವೃತ್ತಿಪರ ಡೇಟಾವನ್ನು ಸುರಕ್ಷಿತವಾಗಿರಿಸಲು 256 AES ಎನ್‌ಕ್ರಿಪ್ಶನ್ ಮಾನದಂಡವನ್ನು ಅವಲಂಬಿಸಲಾಗಿದೆ. ಹಾಗೆಯೇ, ಈ ಪೆನ್‌ಡ್ರೈವ್ 10 ಫಿಂಗರ್‌ಪ್ರಿಂಟ್‌ ಗಳನ್ನು ಸಂಗ್ರಹಿಸ ಮಾಡಬಹುದಾಗುದೆ. ಇದರ ಜೊತೆಗೆ ಬಳಕೆದಾರರಿಗೆ ಅಗತ್ಯವಿರುವವರಿಗೆ ಮಾತ್ರ ಆಕ್ಸಸ್‌ ಅನ್ನು ಒದಗಿಸುವುದನ್ನು ಸುಲಭ ಮಾಡುತ್ತದೆ.

ಇತರರ ಕೈಗಳಿಗೆ ಬೀಳದಂತೆ ಹಾಗೂ ಕಣ್ಣಿಗೆ ಕಾಣದಂತೆ ತಮ್ಮ ಡೇಟಾವನ್ನು ರಕ್ಷಿಸಲು ಬಯಸುವ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೆಂಡ್‌ಡೈವ್ ಅನ್ನು ನಿರ್ಮಿಸಲಾಗಿದೆ ಎಂದು ಲೆಕ್ಸಾರ್ ಕಂಪನಿ ಹೇಳುತ್ತದೆ. ಈ ಡಿವೈಸ್‌ ಡೇಟಾ ಸುರಕ್ಷಿತ ಅಂಶಗಳಿಂದ ಹೆಚ್ಚು ಆಕರ್ಷಕ ಎನಿಸುತ್ತದೆ.

ಅಪ್‌ಗ್ರೇಡ್‌ ಮಾದರಿಯ ಬಯೋಮೆಟ್ರಿಕ್ ತಂತ್ರಜ್ಞಾನ ವ್ಯವಸ್ಥೆ ಇದ್ದು, ಇದು ಪಾಸ್‌ವರ್ಡ್‌ಗಳು ಅಥವಾ ಪಿನ್‌ಗಳನ್ನು ಹೊಂದಿಸುವ ಹಳೆಯ ವಿಧಾನಗಳ ಮೇಲೆ ಅವಲಂಬಿತತೆಯ ಅಗತ್ಯವನ್ನು ತೊಡೆದು ಹಾಕುತ್ತದೆ. ಅಂದರೆ ಬಳಕೆದಾರರು ಪೆನ್‌ಡ್ರೈವ್‌ಗಳ ಪಾಸ್‌ವರ್ಡ್‌ ಕೋಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ಅಲ್ಟ್ರಾ ಫಾಸ್ಟ್ ರೆಕಗ್ನಿಷನ್ 1 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ನಿಮ್ಮ ಡ್ರೈವ್ ಅನ್ನು ಆಕ್ಸಸ್‌ ಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಇದು ಅಂತಿಂಥಾ ಪೆನ್‌ಡ್ರೈವ್‌ ಅಲ್ಲವೇ ಅಲ್ಲ!..ಇದರ ಉಪಯೋಗ ತಿಳಿದ್ರೆ ನೀವು ಶಾಕ್‌!

ಅಂದಹಾಗೆ ಈ ಪೆನ್‌ಡ್ರೈವ್‌ ಯಾವುದೇ ಸಾಫ್ಟ್‌ವೇರ್ ಡ್ರೈವರ್‌ಗಳ ಅಗತ್ಯವಿಲ್ಲದ, ಜಂಪ್‌ಡ್ರೈವ್‌ F35 ಅನ್ನು ನೇರವಾದ ರಚನೆ ಪ್ರಕ್ರಿಯೆಯನ್ನು ಸಹ ಒದಗಿಸುತ್ತದೆ. ಅಂದರೆ ಬಳಕೆದಾರರು ಡ್ರೈವ್ ಅನ್ನು ಪ್ಲಗ್ ಇನ್ ಮಾಡಬಹುದು ಮತ್ತು ಪೆನ್‌ಡ್ರೈವ್‌ ಪಾಸ್‌ವರ್ಡ್ ಅನ್ನು ಸೆಟ್‌ ಮಾಡಬಹುದು. ಹಾಗೆಯೇ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ನೊಂದಿಗೆ ದೃಢೀಕರಿಸಲು ಪ್ರಿ-ಇನ್‌ಸ್ಟಾಲ್‌ ಮಾಡಲಾದ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದು.

ಇನ್ನು ಅಧಿಕ ಮಟ್ಟದ ಡೇಟಾ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಗತ್ಯ ಡೇಟಾ ನಾಶವಾಗದಿರಲು ಅಥವಾ ಕರಪ್ಟ್ ಆಗುವುದನ್ನು ತಡೆಯಲು ನೂತನ ಲೆಕ್ಸಾರ್ ಜಂಪ್‌ಡ್ರೈವ್ 256-ಬಿಟ್ AES ಎನ್‌ಕ್ರಿಪ್ಶನ್ ಸೌಲಭ್ಯ ಅನ್ನು ಪಡೆದುಕೊಂಡಿದೆ.

ಲೆಕ್ಸಾರ್ ಜಂಪ್‌ಡ್ರೈವ್‌ F35 (JumpDrive F35) ಪೆನ್‌ಡ್ರೈವ್‌ನ ಕೀ ಫೀಚರ್ಸ್ ಹೀಗಿವೆ

* ಇದು USB 3.0 ಸಪೋರ್ಟ್ ಪಡೆದಿದೆ
* 300 MB/s ವರೆಗೆ ಸ್ಪೀಡ್‌ ವರ್ಗಾಯಿಸುವ ಆಯ್ಕೆ
* 10 ವರೆಗೆ ಫಿಂಗರ್‌ಪ್ರಿಂಟ್ ಐಡಿಗಳನ್ನು ಅನುಮತಿ ಸೌಲಭ್ಯ
* ಅಲ್ಟ್ರಾ-ಫಾಸ್ಟ್ ಗುರುತಿಸುವಿಕೆ - 1 ಸೆಕೆಂಡ್‌ಗಿಂತ ಕಡಿಮೆ ಸೌಲಭ್ಯ
* ಸುಲಭವಾಗಿ ಸೆಟ್‌ ಅಪ್‌ ಮಾಡಬಹುದು

* ಇದಕ್ಕೆ ಯಾವುದೇ ಸಾಫ್ಟ್‌ವೇರ್ ಡ್ರೈವರ್ ಅಗತ್ಯ ಇಲ್ಲ
* 256-ಬಿಟ್ AES ಎನ್‌ಕ್ರಿಪ್ಶನ್ ಆಯ್ಕೆ ಇದೆ
* ಇದು 2GB ಹಾಗೂ 64GB ಸೇರಿದಂತೆ ವಿವಿಧ ಸಾಮರ್ಥ್ಯಗಳಲ್ಲಿ ಲಭ್ಯ
* 4,500ರೂ ಹಾಗೂ 6,000ರೂ ಪ್ರೈಸ್‌ಟ್ಯಾಗ್‌ ಪಡೆದಿದೆ.
* ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಲಭ್ಯ

Best Mobiles in India

English summary
Lexar has announced a new JumpDrive F35 fingerprint reader pen drive in Indian. price in india and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+