LG Smart TV: ಹೋಂ ಡ್ಯಾಶ್‌ಬೋರ್ಡ್ ಫೀಚರ್ಸ್ ಇರುವ ಈ ಸ್ಮಾರ್ಟ್‌ಟಿವಿಗೆ ಭರ್ಜರಿ ಆಫರ್! 4GB ಸ್ಟೋರೇಜ್..
ಸ್ಮಾರ್ಟ್‌ಟಿವಿಗಳಲ್ಲಿ (Smart TV)ನೀವು ಸಾಕಷ್ಟು ಭಿನ್ನ ವಿಭಿನ್ನ ಸ್ಮಾರ್ಟ್‌ಟಿವಿಗಳನ್ನು ಗಮನಿಸಿರಬಹುದು. ಅದರಂತೆ ಈ ಎಲ್ಲಾ ರೀತಿಯ ಸ್ಮಾರ್ಟ್‌ಟಿವಿಗಳು ಗ್ರಾಹಕರ ಭಿನ್ನ ಅಗತ್ಯತೆಗಳನ್ನು ಪೂರೈಕೆ ಮಾಡುವ ಕೆಲಸ ಮಾಡುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲಾಂಚ್ ಆಗುವ ಸ್ಮಾರ್ಟ್‌ಟಿವಿಗಳು ಕೇವಲ ಮನರಂಜನೆ ಮಾತ್ರ ಸೀಮಿತವಾದೆ ವಿವಿಧ ರೀತಿಯಲ್ಲಿಯೂ ಬಳಕೆಗೆ ಬರುತ್ತವೆ. ಈ ರೀತಿಯ ವಿಶೇಷ ಸೌಲಭ್ಯ ಇರುವ ಸ್ಮಾರ್ಟ್‌ಟಿವಿಗಳಲ್ಲಿ ಎಲ್‌ಜಿ ಟಿವಿ ಸಹ ಪ್ರಮುಖವಾಗಿವೆ.
ಹೌದು, ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಎಲ್‌ಜಿ ಸ್ಮಾರ್ಟ್‌ಟಿವಿಗಳು (LG SmartTVs) ಹೆಚ್ಚಿನ ಬೇಡಿಕೆ ಪಡೆದುಕೊಂಡಿರುತ್ತವೆ. ಅದರಂತೆ ಇದೀಗ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ಎಲ್‌ಜಿಯ 32 ಇಂಚಿನ ಸ್ಮಾರ್ಟ್‌ಟಿವಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಹೋಂ ಡ್ಯಾಶ್‌ಬೋರ್ಡ್ ಫೀಚರ್ಸ್‌ಸೇರಿದಂತೆ ವಿಶೇಷ ಸೌಲಭ್ಯಗಳನ್ನು ನೀಡುವ ಫೀಚರ್ಸ್ ಅನ್ನು ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿ ಆಫರ್ ವಿವರ ಹಾಗೂ ಬೆಲೆ ಬಗ್ಗೆ ತಿಳಿಯೋಣ ಬನ್ನಿ.

ಎಲ್‌ಜಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ವೆಬ್‌ಓಎಸ್ ಟಿವಿ (32LM565BPTA): ಈಗಾಗಲೇ ಈ ಸ್ಮಾರ್ಟ್‌ಟಿವಿ (LG HD Ready LED Smart WebOS TV) ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುವ ಟಿವಿ ಎನಿಸಿಕೊಂಡಿದೆ. ನೀವೇನಾದರೂ ಈ ವೇಳೆ ಅತ್ಯುತ್ತಮ ಫೀಚರ್ಸ್ ಇರುವ ಟಿವಿ ಖರೀದಿ ಮಾಡಲು ಮುಂದಾದರೆ ಇದು ಉತ್ತಮ ಆಯ್ಕೆ ಆಗಿರಲಿದೆ. ಈ ಟಿವಿ 21,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 3,490 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಆಫರ್ ಅನ್ನೂ ಸಹ ಈ ಟಿವಿಗೆ ನೀಡಲಾಗಿದೆ.
ನೀವು ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೂಲಕ ಖರೀದಿ ಮಾಡಿದ್ರೆ 10% ರಿಯಾಯಿತಿ, 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 500 ಹೆಚ್ಚುವರಿ ರಿಯಾಯಿತಿ ಸಿಗಲಿದ್ದು, ಟೈಮ್‌ಪ್ರೈಮ್ ವಾರ್ಷಿಕ ಸದಸ್ಯತ್ವ ಸಹ ಸಿಗಲಿದೆ. ಜೊತೆಗೆ ಈ ಟಿವಿಯನ್ನು ತಿಂಗಳಿಗೆ 1,499 ರೂ.ಗಳನ್ನು ಪಾವತಿ ಮಾಡುವ ಮೂಲಕವೂ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ನೋಡೋಣ.

ಎಲ್‌ಜಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ವೆಬ್‌ಓಎಸ್ ಟಿವಿ (32LM565BPTA) ಫೀಚರ್ಸ್: ಈ ಸ್ಮಾರ್ಟ್‌ಟಿವಿ 32 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಮೋಷನ್ ಸೆನ್ಸರ್, 50 Hz ರಿಫ್ರೆಶ್ ರೇಟ್, 16:09:00 ಆಕಾರ ಅನುಪಾತ ಸೇರಿದಂತೆ ಅನೇಕ ಆಕರ್ಷಕ ಡಿಸ್‌ಪ್ಲೇ ಫೀಚರ್ಸ್ ಅನ್ನು ಈ ಟಿವಿ ಹೊಂದಿದೆ.
ಇದರೊಂದಿಗೆ ಈ ಸ್ಮಾರ್ಟ್‌ಟಿವಿ 2 HDMI ಪೋರ್ಟ್, 1 ಯುಎಸ್‌ಬಿ ಪೋರ್ಟ್, 178 ಡಿಗ್ರಿ ವೀಕ್ಷಣೆ ಸಾಮರ್ಥ್ಯದೊಂದಿಗೆ ಎರಡು ವಿಶೇಷ ಸ್ಪೀಕರ್ ಆಯ್ಕೆಯನ್ನು ಪಡೆದಿದೆ. ಈ ಮೂಲಕ 10 W ಸೌಂಡ್ ಔಟ್‌ಪುಟ್ ಸಿಗಲಿದೆ. ಹಾಗೆಯೇ ಡಾಲ್ಬಿ ಆಡಿಯೋ, ಸರೌಂಡಿಂಗ್ ಸೌಂಡ್, ಡಿಟಿಎಸ್ ವರ್ಚುವಲ್ ಸೌಂಡ್ ಅನುಭವ ಸಿಗಲಿದೆ. ಜೊತೆಗೆ ಸ್ಟ್ಯಾಂಡರ್ಡ್, ಸಿನಿಮಾ, ಕ್ಲಿಯರ್ ವಾಯ್ಸ್ III, ಕ್ರಿಕೆಟ್, ಮ್ಯೂಸಿಕ್, ಗೇಮ್ ಎಂಬ ಸೌಂಡ್ ಮೋಡ್ ಆಯ್ಕೆ ಇದ್ದು, AC4, AC3 (ಡಾಲ್ಬಿ ಡಿಜಿಟಲ್), EAC3, HE-AAC, AAC, MP2 ಸೇರಿದಂತೆ ಅನೇಕ ಆಡಿಯೋ ಬೆಂಬಲ ಪಡೆದಿದೆ.
ಉಳಿದಂತೆ ಈ ಸ್ಮಾರ್ಟ್‌ಟಿವಿ ಎಲ್‌ಜಿವೆಬ್ ಓಎಸ್ ಅನ್ನು ರನ್ ಮಾಡಲಿದ್ದು, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್ ಸೇರಿದಂತೆ ಇನ್ನೂ ಹೆಚ್ಚಿನ ಸ್ಟ್ರೀಮಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ ಸುಧಾರಿತ ಇಮೇಜ್ ಪ್ರೊಸೆಸರ್‌ನೊಂದಿಗೆ, ಈ ಟಿವಿ ನಿಮ್ಮ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಡಿಸ್‌ಪ್ಲೇ ಮೇಲೆ ಶ್ರೀಮಂತ ಮತ್ತು ರೋಮಾಂಚಕ ಬಣ್ಣವನ್ನು ನೀಡುತ್ತದೆ. ಮಲ್ಟಿ ಎಚ್‌ಡಿಆರ್ ಫಾರ್ಮ್ಯಾಟ್‌ನೊಂದಿಗೆ ಎಲ್‌ಜಿ ಡೈನಾಮಿಕ್ ಸೀನ್-ಬೈ-ಸ್ಕ್ರೀನ್ ತಂತ್ರಜ್ಞಾನವು ಎಚ್‌ಡಿಆರ್ ಗುಣಮಟ್ಟದಲ್ಲಿ ಅದ್ಭುತ ದೃಶ್ಯಗಳನ್ನು ನೀಡುವ ಕೆಲಸ ಮಾಡುತ್ತದೆ.
ಇದರೊಂದಿಗೆ ಡ್ಯಾಶ್‌ಬೋರ್ಡ್ ಆಯ್ಕೆ ಸಹ ಇದ್ದು, ಈ ಹೋಮ್ ಡ್ಯಾಶ್‌ಬೋರ್ಡ್‌ನೊಂದಿಗೆ ನೀವು ಸಂಪರ್ಕಿತ ಸ್ಮಾರ್ಟ್ ಡಿವೈಸ್‌ಗಳನ್ನು ದೂರದಿಂದಲೇ ಕಂಟ್ರೋಲ್ ಮಾಡಬಹುದಾಗಿದೆ. ಇದರಲ್ಲಿನ ಕ್ವಾಡ್ ಕೋರ್ ಪ್ರೊಸೆಸರ್ ಎದ್ದುಕಾಣುವ ಬಣ್ಣಗಳು ಮತ್ತು ಕಾಂಟ್ರಾಸ್ಟ್‌ನೊಂದಿಗೆ ಅತ್ಯುತ್ತಮ ದೃಶ್ಯದ ಅನುಭವ ನೀಡುತ್ತದೆ. ಉಳಿದಂತೆ ದೊಡ್ಡ ಡಿಸ್‌ಪ್ಲೇನಲ್ಲಿ ಚಿತ್ರಗಳನ್ನು ವೀಕ್ಷಿಸಲು ಅಥವಾ ವಿಡಿಯೋಗಳನ್ನು ವೀಕ್ಷಿಸಲು ಕ್ಲೌಡ್ ಫೋಟೋ ಮತ್ತು ವಿಡಿಯೋ ಆಪ್ ಗೆ ಬೆಂಬಲ ಸಹ ನೀಡಲಿದೆ.

ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಒಂದೇ ಬಾರಿಗೆ ಹಲವು ಕಾರ್ಯಗಳನ್ನು ಮಾಡಬಹುದಾಗಿದೆ. ಅಂದರೆ ಇಂಟರ್ನೆಟ್ ಬ್ರೌಸ್ ಮಾಡಲು ಮತ್ತು ಅದೇ ಸಮಯದಲ್ಲಿ ಶೋಗಳನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ 1GB RAM ಆಯ್ಕೆ ಹಾಗೂ 4 GB ಇಂಟರ್ ಸ್ಟೋರೇಜ್ ಆಯ್ಕೆ ಈ ಸ್ಮಾರ್ಟ್‌ಟಿವಿ ಸ್ಮೂಥ್ ಆಗಿ ರನ್ ಆಗುವಂತೆ ಮಾಡಲಿದೆ.


Click it and Unblock the Notifications








