LG Suitcase TV: ಎಲ್‌ಜಿಯಿಂದ ವಿಶೇಷ ಸೂಟ್‌ಕೇಸ್ ಟಿವಿ ಲಾಂಚ್, ಎಲ್ಲಿಗೆ ಬೇಕಾದ್ರೂ ಕೊಂಡೊಯ್ಯಬಹುದು!
ಸ್ಮಾರ್ಟ್‌ಟಿವಿಗಳಲ್ಲಿ (Smart TV) ವಿವಿಧ ಶೈಲಿಯ ಹಾಗೂ ವಿವಿಧ ಫೀಚರ್ಸ್ ಆಯ್ಕೆ ಇರುವ ಡಿವೈಸ್‌ಗಳು ಲಭ್ಯ ಇದ್ದು, ಈ ನಡುವೆ ವಿಶೇಷವಾದ ಸ್ಮಾರ್ಟ್‌ಟಿವಿಯನ್ನು ಪ್ರಮುಖ ಸ್ಮಾರ್ಟ್ ಗ್ಯಾಜೆಟ್ ತಯಾರಿಕಾ ಕಂಪೆನಿ ಆಗಿರುವ ಎಲ್‌ಜಿ (LG) ಲಾಂಚ್ ಮಾಡಿದೆ.
ಹೌದು, ಸಾಮಾನ್ಯವಾಗಿ ಜನರಿಗೆ ಮನರಂಜನೆ ವಿಭಾಗದಲ್ಲಿ ಸ್ಮಾರ್ಟ್‌ಫೋನ್ ಮೊದಲ ಸ್ಥಾನ ಪಡೆದರೆ, ಎರಡನೆಯದು ಸ್ಮಾರ್ಟ್‌ಟಿವಿ ಆಗಿದೆ. ಸ್ಮಾರ್ಟ್‌ಫೋನ್ ಅನ್ನು ಎಲ್ಲಿಗೆ ಬೇಕಾದರೂ ಸಹ ಕೊಂಡೊಯ್ಯಬಹುದು.ಆದರೆ, ಟಿವಿ ಕೊಂಡೊಯ್ಯುವುದು ಮಾತ್ರ ಕಷ್ಟ. ಆದರೆ, ಈಗ ಅದೂ ಸಾಧ್ಯ.ಹಾಗಿದ್ರೆ, ಯಾವುದು ಈ ಎಲ್‌ಜಿಯ ಹೊಸ ಸ್ಮಾರ್ಟ್‌ಟಿವಿ, ಇದರ ಫೀಚರ್ಸ್ ಏನು?, ಬೆಲೆ ಎಷ್ಟು ಎಂಬ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ಎಲ್‌ಜಿಯ ಹೊಸ ಸೂಟ್‌ಕೇಸ್ ಸ್ಮಾರ್ಟ್‌ಟಿವಿ: ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಮೂಲಕ ದೊಡ್ಡ ಸ್ಕ್ರೀನ್‌ನಲ್ಲಿ ನಿಮ್ಮಿಷ್ಟದ ಸಿನಿಮಾ ಅಥವಾ ಇನ್ನಿತರೆ ಯಾವುದೇ ವಿಡಿಯೋಗಳನ್ನು ಸ್ಕ್ರೀಮ್ ಮಾಡಬಹುದು.ಆದರೆ, ಟಿವಿಯವನ್ನು ಈ ರೀತಿ ಬಳಕೆ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ಈಗ ಕನ್ಜ್ಯೂಮರ್ ಎಲೆಕ್ಟ್ರಾನಿಕ್ಸ್ ತಯಾರಕ ಎಲ್‌ಜಿ ಸೂಟ್‌ಕೇಸ್ ಪೋರ್ಟಬಲ್ ಟಿವಿ (ಸೂಟ್‌ಕೇಸ್ ಟಿವಿ) ಲಾಂಚ್ ಮಾಡಿದೆ.
ಎಲ್ಜಿ (LG) ಎಲೆಕ್ಟ್ರಾನಿಕ್ಸ್ ಇತ್ತೀಚಿನ ಸ್ಟ್ಯಾಂಡ್‌ಬೈಮಿ ಗೋ (StanbyME Go) ಹೆಸರಿನ ಹೊಸ ಪೋರ್ಟಬಲ್ ಟಚ್‌ಸ್ಕ್ರೀನ್ ಟಿವಿ ಲಾಂಚ್ ಮಾಡಿದೆ. ಇದು ಒಂದು ಟ್ರಾವೆಲಿಂಗ್ ಸೂಟ್‌ಕೆಸ್‌ನೊಂದಿಗೆ ಕಾಣಿಸಿಕೊಂಡಿದೆ. ಈ ಸೂಟ್‌ಕೇಸ್ ಓಪನ್ ಮಾಡಿದರೆ 27 ಇಂಚಿನ 1080p ಆಯ್ಕೆ ಇರುವ ಎಲ್‌ಸಿಡಿ ಡಿಸ್‌ಪ್ಲೇ ಓಪನ್ ಆಗುತ್ತದೆ. ನಂತರ ಸ್ಪೀಕರ್‌ಗಳು, ಪವರ್ ಸಪ್ಲೈ ಎಲ್ಲಾ ಸಕ್ರಿಯವಾಗುತ್ತವೆ.
ಇದು ಸ್ವಿವೆಲ್ ವಿನ್ಯಾಸ ಹೊಂದಿರುವ ಈ ಸ್ಟ್ಯಾಂಡ್‌ಬೈಮಿ ಗೋ ಟಿವಿ ಸ್ಕ್ರೀನ್ ಅನ್ನು 360 ಡಿಗ್ರಿಗಳನ್ನು ತಿರುಗಿಸಬಹುದು. ಡೀನ್‌ನಲ್ಲಿರುವ 20W ಸ್ಪೀಕರ್‌ಗಳೊಂದಿಗೆ ಅದ್ಭುತವಾದ ಆಡಿಯೋ ಎಕ್ಸ್‌ಪೀರಿಯನ್ಸ್ ಇದರಿಂದ ಲಭ್ಯ ಆಗಲಿದ್ದು, ಚೆಸ್‌ನಂತಹ ಆಟಗಳನ್ನು ಸಹ ಆಡಬಹುದು ಅಥವಾ ಪ್ರಯಾಣದಲ್ಲಿ ಇದನ್ನು ಕೆಲಸಕ್ಕೂ ಬಳಕೆ ಮಾಡಿಕೊಳ್ಳಬಹುದು.
ಸ್ಟ್ಯಾಂಡ್‌ಬೈಮಿ ಗೋ (StanbyME Go) ಟಿವಿಯಲ್ಲಿನ ಇನ್-ಬಿಲ್ಟ್ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದ್ರೆ ಗರಿಷ್ಠ ಮೂರು ಗಂಟೆಗಳ ಸ್ಕ್ರೀನ್ ಟೈಮ್ ನೀಡುತ್ತದೆ. ಇದರಿಂದಾಗಿ ಪವರ್ ಔಟ್‌ಲೆಟ್ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿಲ್ಲ. ಇದನ್ನು ಪಾರ್ಕ್ ಬೀಚ್, ಬ್ಯಾಕ್‌ಯಾರ್ಡ್ ಪಾರ್ಟಿಗಳು ಅಥವಾ ಕ್ಯಾಂಪಿಂಗ್ ನಲ್ಲಿ ಬಳಕೆ ಮಾಡಬಹುದಾಗಿದೆ.
ಸ್ಟ್ಯಾಂಡ್‌ಬೈಮಿ ಗೋ ಟಿವಿ ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ ಮುಂತಾದ ಸುಧಾರಿತ ಫೀಚರ್ಸ್ ಅನ್ನು ಹೊಂದಿದ್ದು, ಈ ಟಿವಿ ಸ್ವಂತ ವೆಬ್‌ಓಎಸ್ ನೊಂದಿಗೆ ರನ್ ಆಗಲಿದೆ. ಈ ಓಎಸ್ ನೆಟ್‌ಫ್ಲಿಕ್ಸ್, ಹುಲು, ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಹಲವು ಬಗೆಯ ಸ್ಟ್ರೀಮಿಂಗ್ ಆಪ್‌ಗಳಿಗೆ ಎಂಟ್ರಿ ನೀಡಬಹುದು.
ಸ್ಟ್ಯಾಂಡ್‌ಬೈಮಿ ಗೋ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಟಿವಿಗೆ 999 ಡಾಲರ್ ನಿಗದಿ ಮಾಡಲಾಗಿದೆ. ಹಾಗೆಯೇ ಇದು ಪ್ರೀ-ಆರ್ಡರ್‌ಗಾಗಿ ಲಭ್ಯವಿದೆ. ಆದರೆ, ಈ ಸೂಟ್‌ಕೇಸ್ ಟಿವಿಯನ್ನು ಭಾರತದಲ್ಲೂ ಶೀಘ್ರದಲ್ಲೇ ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಈ ಸ್ಮಾರ್ಟ್‌ಟಿವಿಯನ್ನು ಪ್ರೀ ಆರ್ಡರ್ ಮಾಡಿದ್ರೆ ಬೆಲೆಬಾಳುವ LG XBOOM 360 ಬ್ಲೂಟೂತ್ ಸ್ಪೀಕರ್ ಅನ್ನು ಉಚಿತವಾಗಿ ಸಹ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಕೊಡಗೆ ಸೀಮಿತಾವಧಿಯದ್ದಾಗಿದೆ. ಇನ್ನು ಎಲ್‌ಜಿಯ ಈ ಟಿವಿ ಪೂರ್ಣವಾಗಿ ಉತ್ತಮವಾದ ಯಿಂಗ್ ವ್ಯೂ ಎಕ್ಸ್‌ಪೀರಿಯನ್ಸ್ ನೀಡಲಿದೆ. ಟ್ರಾವೆಲ್-ಫ್ರೆಂಡ್ಲಿಯಾಗಿದ್ದು, ಸ್ಟ್ರೀಮಿಂಗ್, ಲಿಜನಿಂಗ್, ರಿಮೋಟ್ ವರ್ಕಿಂಗ್, ಹೆಚ್ಚಿನ ಅನೇಕ ಆಯ್ಕೆಗಳನ್ನು ನೀಡುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.


Click it and Unblock the Notifications








