Home
ಸುದ್ದಿಜಾಲ

LG ಸ್ಮಾರ್ಟ್ ಟಿವಿ ಬಳಕೆದಾರರಿಗೆ ಗುಡ್ ನ್ಯೂಸ್: ಟಿವಿಯಲ್ಲಿ ಕ್ಯಾಮೆರಾ ಬೆಂಬಲ!

ಸ್ಮಾರ್ಟ್‌ಟಿವಿಗಳು ಇಂದು ಬಳಕೆದಾರರಿಗೆ ಸಾಕಷ್ಟು ವಿಶೇಷ ಎನಿಸಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಸಂಸ್ಥೆಯಾದ ಎಲ್‌ಜಿ ತನ್ನ ಸ್ಮಾರ್ಟ್‌ಟಿಗಳಲ್ಲಿ ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ. ಇದರಿಂದಾಗಿ ಹಲವಾರು ಬಳಕೆದಾರರಿಗೆ ಸಾಕಷ್ಟು ವಿಶೇಷವಾದ ಅನುಕೂಲ ಆಗಲಿದೆ.

ಹೌದು, ಎಲ್‌ಜಿ(LG) ಡಿವೈಸ್‌ಗಳಿಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅದರಲ್ಲೂ ಈ ಕಂಪೆನಿ ಏನಾದರೂ ಹೆಚ್ಚಿನ ಬೆಲೆಯ ಡಿವೈಸ್‌ಗಳನ್ನು ಅನಾವರಣ ಮಾಡಿದೆ ಎಂದರೆ ಅದರಲ್ಲಿ ಆ ಬೆಲೆಗೆ ತಕ್ಕ ವಿಶೇಷ ಫೀಚರ್ಸ್‌ ಅನ್ನು ಪಡೆದುಕೊಂಡಿದೆ ಎಂದರ್ಥ. ಈ ಕಾರಣಕ್ಕಾಗಿಯೇ ಎಲ್ ಜಿ ಅಂತರಾಷ್ಟ್ರೀಯ ಮಾರುಕಟ್ಟೆಗೆ ಸ್ಮಾರ್ಟ್‌ಟಿವಿಗಳಿಗೆ ಕ್ಯಾಮೆರಾ ಆಯ್ಕೆ ನೀಡಿದೆ. ಅರೇ... ಸ್ಮಾರ್ಟ್‌ಟಿವಿಯಲ್ಲಿ ಕ್ಯಾಮೆರಾವೇ? , ಟಿವಿಗೆ ಯಾಕೆ ಕ್ಯಾಮೆರಾ?, ಇದರ ಬಳಕೆ ಹೇಗೆ ಎಂಬಿತ್ಯಾದಿ ಪ್ರಶ್ನೆಗೆ ಇಲ್ಲಿದೆ ಉತ್ತರ.

LG ಸ್ಮಾರ್ಟ್ ಟಿವಿ ಬಳಕೆದಾರರಿಗೆ ಗುಡ್ ನ್ಯೂಸ್: ಟಿವಿಯಲ್ಲಿ ಕ್ಯಾಮೆರಾ ಬೆಂಬಲ!

ಸ್ಮಾರ್ಟ್‌ಟಿವಿಗಳಿಗೆ ಕ್ಯಾಮೆರಾ: ಎಲ್‌ಜಿ ಇದೀಗ ಸ್ಮಾರ್ಟ್ ಟಿವಿಗಳಿಗಾಗಿ ಎಲ್‌ಜಿ ಸ್ಮಾರ್ಟ್ ಕ್ಯಾಮ್ 1080P ಎಂಬ ಕ್ಯಾಮೆರಾವನ್ನು ಪರಿಚಯಿಸಿದೆ. ಈ ಹೊಸ ಸ್ಮಾರ್ಟ್ ಟಿವಿಗಳ ಕ್ಯಾಮೆರಾ ಕಡಿಮೆ ತೂಕದೊಂದಿಗೆ ಉತ್ತಮ ಗುಣಮಟ್ಟದ ಫೀಚರ್ಸ್‌ ಹೊಂದಿದೆ. ಅಂದರೆ ಈ ಸ್ಮಾರ್ಟ್ ಕ್ಯಾಮ್ ಎಲ್‌ಜಿಯ ವೆಬ್‌ಓಎಸ್‌ನಲ್ಲಿ ರನ್ ಆಗುತ್ತದೆ ಎಂದು ವರದಿಯಾಗಿದ್ದು, ಟಿವಿ ವೀಕ್ಷಕರಿಗೆ ವಿಶೇಷ ಅನುಭವ ನೀಡುತ್ತದೆ.

ಉಳಿದಂತೆ ಈ ಸ್ಮಾರ್ಟ್ ಕ್ಯಾಮೆರಾವು ವಿಡಿಯೋ ಕರೆಗಳಿಗೆ ಸೂಕ್ತವಾದ ಆಯ್ಕೆ ಆಗಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇದರಲ್ಲಿ ಈ ಸಂಬಂಧದ ಎಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ. ಪ್ರಮುಖವಾಗಿ 1080 ಪಿಕ್ಸೆಲ್‌ಗಳ ಸೌಲಭ್ಯವನ್ನು ಹೊಂದಿರುವುದರಿಂದ ಬೆರಗುಗೊಳಿಸುವ ದೃಶ್ಯಗಳನ್ನು ಸೆರೆಹಿಡಿಯಬಹುದು. ಜೊತೆಗೆ ಡ್ಯುಯಲ್ ಮೈಕ್ರೊಫೋನ್‌ಗಳು ಮತ್ತು ಬಹು-ವೀಕ್ಷಣೆ ಕಾರ್ಯದ ಆಯ್ಕೆಯನ್ನೂ ಸಹ ಹೊಂದಿದೆ.

ಹಾಗೆಯೇ ಈ ಕ್ಯಾಮೆರಾ ಫನ್ ಮಿರರ್ ಇಮೇಜ್ ಬಿಲ್ಡರ್, ಫೋಟೋ ಎಫೆಕ್ಟ್ ಸೇರಿದಂತೆ ವಿವಿಧ ವಿಶೇಷತೆಗಳನ್ನು ಹೊಂದಿದ್ದು, ಗೌಪ್ಯತೆ ಸ್ಲೈಡರ್, ಯುಎಸ್‌ಬಿ 2.0 ಕನೆಕ್ಟಿವಿಟಿ ಸೌಲಭ್ಯ ಸೇರಿದಂತೆ ಹಲವು ವಿಶೇಷ ಫೀಚರ್ಸ್‌ ಆಯ್ಕೆ ಪಡೆದಿದೆ. ಜೊತೆಗೆ 1 ವರ್ಷದ ವಾರಂಟಿಯೊಂದಿಗೆ ಮಾರಾಟಕ್ಕೆ ಲಭ್ಯ ಇದೆ. ಇನ್ನು ಎಲ್‌ಜಿ ಯ ವೆಬ್‌ಓಎಸ್ 22 ಮತ್ತು ವೆಬ್‌ಓಎಸ್ 23 ನಲ್ಲಿ ಚಾಲನೆಯಲ್ಲಿರುವ ಟಿವಿಗಳಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.

ಈ ಕ್ಯಾಮ್ (VC23GA) ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, USD 99.99 ಬೆಲೆ ಹೊಂದಿದೆ. ಅಂದರೆ ಭಾರತದಲ್ಲಿ ಇದು 8,190ರೂ.ಗಳ ಬೆಲೆ ಪಡೆದುಕೊಂಡಿದೆ. ಆದರೆ ಈ ಕ್ಯಾಮೆರಾ ಅಮೆರಿಕದಲ್ಲಿ ಮಾತ್ರ ಲಾಂಚ್‌ ಆಗಿದ್ದು, ಶೀಘ್ರದಲ್ಲೇ ಎಲ್ಲಾ ದೇಶಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಇದರಿಂದಾಗಿ ನೀವು ಈ ಸ್ಮಾರ್ಟ್‌ಟಿವಿಗಾಗಿ ನಿರ್ಮಾಣ ಮಾಡಲಾದ ಈ ಸ್ಮಾರ್ಟ್‌ ಕ್ಯಾಮೆರಾವನ್ನು ಖರೀದಿ ಮಾಡಲು ಸ್ವಲ್ಪ ಸಮಯ ಕಾಯಬೇಕಿದೆ.

ಈ ನಡುವೆ ಎಲ್‌ಜಿ ವಾರಗಳ ಹಿಂದೆ ಹೊಸ ಅಲ್ಟ್ರಾ-ಟಾಲ್ ಡ್ಯುಯಲ್-ಅಪ್ ಮಾನಿಟರ್ ಅನ್ನು ಸಹ ಪರಿಚಯಿಸಿದೆ. ಈ ಮಾನಿಟರ್‌ ಇತರೆ ಮಾನಿಟರ್‌ಗಳಂತೆ ಅಗಲವಾಗಿಲ್ಲ, ಬದಲಾಗಿ ಎತ್ತರವಾಗಿದೆ. ಇದಕ್ಕೆ 28MQ750 ನ ಹೆಸರಿಡಲಾಗಿದೆ. ಉಳಿದಂತೆ ಇದು 27.6 ಇಂಚಿನ ನ್ಯಾನೋ ಐಪಿಎಸ್‌ ಪ್ಯಾನೆಲ್ ಮತ್ತು ತೆಳುವಾದ ಬೆಜೆಲ್‌ಗಳನ್ನು ಹೊಂದಿದ್ದು, ನೋಡಲು ವಿಶೇಷ ಶೈಲಿ ಹೊಂದಿದೆ.

ಇದರೊಂದಿಗೆ 2560x2880 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, 300 ನಿಟ್ಸ್ ಬ್ರೈಟ್‌ನೆಸ್, HDR10 ಬೆಂಬಲವನ್ನು ಹೊಂದಿದೆ. ಹಾಗೆಯೇ ಇನ್‌ಬಿಲ್ಟ್‌ ಡ್ಯುಯಲ್ 7 ವ್ಯಾಟ್ ಹೈ ಪವರ್ ಸ್ಪೀಕರ್‌ಗಳನ್ನು ಹೊಂದಿದ್ದು, HDMI, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಬಹು ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ. ಇದರ ಬೆಲೆ $599 ಆಗಿದೆ. ಅಂದರೆ ಭಾರತದಲ್ಲಿ ಇದರ ಬೆಲೆ 49,096ರೂ.ಗಳಾಗಿದೆ.

Best Mobiles in India

English summary
LG devices are well received across India. Meanwhile, a new smart camera has been launched for these smart TVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+