LG ಯಿಂದ ಬಾಗಿಸಬಲ್ಲ ಸ್ಮಾರ್ಟ್‌ಟಿವಿಯೊಂದಿಗೆ ಭಾರತದಲ್ಲಿ ಹಲವು OLED ಟಿವಿ ಲಾಂಚ್; ಬೆಲೆ ಎಷ್ಟು?
LG ಸ್ಮಾರ್ಟ್ ಟಿವಿಗಳು ವಿವಿಧ ಸ್ಮಾರ್ಟ್ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರಿಗೆ ಆನ್‌ಲೈನ್ ಸ್ಟ್ರೀಮಿಂಗ್ ಸೇವೆ ಪಡೆಯಲು, ವೆಬ್ ಬ್ರೌಸ್ ಮಾಡಲು ಮತ್ತು ವಿವಿಧ ಆಪ್‌ಗಳ ಮೂಲಕ ಹಲವು ಸೇವೆ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತವೆ. ಈ ನಡುವೆ ಜಗತ್ತಿನಲ್ಲೇ ಮೊದಲ ಬಾರಿಗೆ ಈ ವಿಶೇಷತೆಯುಳ್ಳ ಸ್ಮಾರ್ಟ್‌ಟಿವಿಯನ್ನೂ ಸಹ ಅನಾವರಣ ಮಾಡಲಾಗಿದೆ.
ಹೌದು, ಎಲ್‌ಜಿ ಸಂಸ್ಥೆಯು ಮೊದಲ ಬಾರಿಗೆ ಬಾಗಿಸಬಹುದಾದ OLED ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿದೆ. ಈ ಟಿವಿ 42 ಇಂಚುಗಳಿಂದ ಹಿಡಿದು 97 ಇಂಚುಗಳ ಗಾತ್ರದಲ್ಲಿ ಲಭ್ಯವಾಗುತ್ತಿದ್ದು, ಇದೇ ಮೊದಲ ಬಾರಿಗೆ ಸ್ಮಾರ್ಟ್‌ಟಿವಿ ವೀಕ್ಷಕರಿಗೆ ಹೊಸದೊಂದು ಅನುಭವ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದೆ. ಹಾಗೆಯೇ ಈ ಟಿವಿಗಳು ಲಕ್ಷಕ್ಕೂ ಅಧಿಕ ಬೆಲೆಯನ್ನು ಹೊಂದಿದೆ. ಹಾಗಿದ್ರೆ, ಮತ್ಯಾಕೆ ತಡ. ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್ ಹಾಗೂ ನಿಖರ ಬೆಲೆ ವಿವರವನ್ನು ತಿಳಿಯಲು ಈ ಲೇಖನ ಓದಿರಿ.

ಎಲ್‌ಜಿ ಭಾರತದಲ್ಲಿ ಅದರಲ್ಲೂ ಪ್ರತ್ಯೇಕವಾಗಿ ಗೇಮರ್‌ಗಳಿಗೆ ತನ್ನ ಹೊಸ ಸರಣಿಯ OLED ಟಿವಿಗಳನ್ನು ಅನಾವರಣ ಮಾಡಿದ್ದು, ಈ ಬಿಡುಗಡೆ ಕಾರ್ಯಕ್ರಮವು ಎಲ್‌ಜಿ ಯ OLED ಟಿವಿಗಳ 10 ನೇ ವಾರ್ಷಿಕೋತ್ಸವದಲ್ಲಿ ಜರುಗಿದೆ. ಈ ಸಮಾರಂಭದಲ್ಲಿ ಎಲ್‌ಜಿ ಒಟ್ಟು 21 OLED ಟಿವಿಗಳನ್ನು ಲಾಂಚ್ ಮಾಡಿದೆ. ಅದರಲ್ಲೂ G3 OLED evo ಸರಣಿಯು 139 cm (55-inch), 164 cm (65-inch) ಮತ್ತು 195 cm (77-inch) ನಲ್ಲಿ ಲಭ್ಯವಿದೆ.
ಇದರೊಂದಿಗೆ G3 ಅಲ್ಟ್ರಾ-ಸೀಮ್‌ಲೆಸ್ ಒನ್ ವಾಲ್ ವಿನ್ಯಾಸದೊಂದಿಗೆ ಕಾಣಿಸಿಕೊಂಡಿರುವ ಟಿವಿಗಳು ಸಹ ಭಾರೀ ಗಮನಸೆಳೆಯುತ್ತವೆ. ಈ ಸ್ಮಾರ್ಟ್‌ಟಿವಿಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಸ್ಮಾರ್ಟ್‌ಟಿವಿ ಎಂದರೆ 8K OLED Z3 ಸರಣಿ ಮತ್ತು ಇದು ವಿಶ್ವದ ಏಕೈಕ 8K OLED ಟಿವಿ ಎಂದು ಕರೆಸಿಕೊಳ್ಳಲಿದೆ. ಇದಾದ ನಂತರ OLED Evo ಗ್ಯಾಲರಿ ಆವೃತ್ತಿ G3 ಸರಣಿ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಎಲ್‌ಜಿ ಫ್ಲೆಕ್ಸಿಬಲ್ OLED ಟಿವಿಯಲ್ಲಿ ಬಾಗಿದ ಪರದೆಯನ್ನು ನೀಡಲಾಗಿದ್ದು, ಇದು 12 ವಿಭಿನ್ನ ಹೊಂದಾಣಿಕೆ ಹಂತಗಳೊಂದಿಗೆ ಬರುತ್ತದೆ.
ಇದಾದ ಬಳಿಕ OLED Evo C3 ಸರಣಿ ಟಿವಿಗಳು ಗಮನಸೆಳೆಯುತ್ತವೆ. ಇವು ವಿಭಿನ್ನ ಡಿಸ್‌ಪ್ಲೇ ಗಾತ್ರಗಳನ್ನು ಹೊಂದಿದ್ದು, ಇದಾದ ನಂತರ OLED B3 ಮತ್ತು A3 ಸರಣಿ ಸ್ಮಾರ್ಟ್‌ಟಿವಿಗಳು ಅತ್ಯುತ್ತಮ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿವೆ. ಈ ಎಲ್ಲಾ ಹೊಸ ಟಿವಿಗಳು ಎಲ್‌ಜಿಯ ಇತ್ತೀಚಿನ α9 ಜನ್6 ಇಂಟೆಲಿಜೆಂಟ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಪ್ರೀಮಿಯಂ ಸೌಂಡ್ ಮತ್ತು ಉತ್ತಮ ಪ್ರದರ್ಶನದ ಗುಣಮಟ್ಟವನ್ನು ನೀಡಲು ಪ್ರೊಸೆಸರ್AI ಮತ್ತು ಡೀಪ್ ಲರ್ನಿಂಗ್ ಅನ್ನು ಬಳಕೆ ಮಾಡುತ್ತವೆ.

ಅದರಲ್ಲೂ ಡೈನಾಮಿಕ್ ಟೋನ್ ಮ್ಯಾಪಿಂಗ್ ಮತ್ತು ಲೈಫ್‌ಲೈಕ್ ಹೆಚ್‌ಡಿಆರ್ ಚಿತ್ರದ ಗುಣಮಟ್ಟದಂತಹ ಅಂಶಗಳಿಗೆ ಎಐ ಪಿಕ್ಚರ್ ಪ್ರೊ ಕಾರ್ಯನಿರ್ವಹಣೆಯು ನಿರ್ಣಾಯಕವಾಗಿ ಈ ಸ್ಮಾರ್ಟ್‌ಟಿವಿಗಳಲ್ಲಿ ಕೆಲಸ ಮಾಡಲಿದೆ. ಇದರಲ್ಲಿ Evo ಸರಣಿಯ OLED ಟಿವಿಗಳು ಪಿಕ್ಸೆಲ್-ಬೈ-ಪಿಕ್ಸೆಲ್ ಆಧಾರದ ಮೇಲೆ ಬ್ರೈಟ್‌ನೆಸ್ ಅನ್ನು ಮ್ಯಾಪ್ ಮಾಡುತ್ತವೆ. ಈ ಮೂಲಕ ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಈ ಮೊದಲಿದ್ದ ಸ್ಮಾರ್ಟ್‌ಟಿವಿಗಳಲ್ಲಿ ಇಲ್ಲದ ವಿಶೇಷವಾದ ಸುಧಾರಿತ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ.
ಈ ಟಿವಿಗಳಲ್ಲಿ ಗೇಮಿಂಗ್ ಆಧಾರಿತ ಫೀಚರ್ಸ್‌ಗಳನ್ನು ಸುಲಭವಾಗಿ ಬದಲಾಯಿಸಲು ಮತ್ತು ಪ್ರವೇಶಿಸಲು ಮೀಸಲಾದ ಗೇಮ್ ಆಪ್ಟಿಮೈಜರ್ ಆಯ್ಕೆ ಹೊಂದಿದ್ದು, 0.1ms ಪ್ರತಿಕ್ರಿಯೆ ಸಮಯ, ಜಿ-ಸಿಂಕ್ ಮತ್ತು ಫ್ರೀಸಿಂಗ್ ಪ್ರೀಮಿಯಂ ಬೆಂಬಲವನ್ನು ಪಡೆದುಕೊಂಡಿವೆ. ಜೊತೆಗೆ ಹೆಚ್‌ಡಿಎಮ್‌ಐ 2.1 ಮತ್ತು ವಿಆರ್‌ಆರ್‌ಗೂ ಈ ಟಿವಿಗಳು ಸಪೋರ್ಟ್ ಮಾಡುತ್ತವೆ.ಇದರೊಂದಿಗೆ ಎಲ್ಲಾ 21 ವೇರಿಯಂಟ್ ಸ್ಮಾರ್ಟ್‌ಟಿವಿಗಳು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲ ಪಡೆದಿರುವುದು ವಿಶೇಷ.
ಇನ್ನು ವರ್ಚುವಲ್ 9.1.2 ಸರೌಂಡ್ ಸೌಂಡ್ ಅನ್ನು ತಲುಪಿಸಲು ಎಐ-ಸಕ್ರಿಯಗೊಳಿಸಲಾದ ಸೌಂಡ್ ಪ್ರೊ ಕಾರ್ಯವು ಟಿವಿಯ ಇನ್‌ಬಿಲ್ಟ್ ಸ್ಪೀಕರ್ ಸಿಸ್ಟಮ್ ಅನ್ನು ಬಳಕೆ ಮಾಡುತ್ತದೆ. ಮಲ್ಟಿ ಚಾನಲ್ ಐಮ್ಯಾಕ್ಸ್ ವರ್ಧಿತ ಡಿಟಿಎಸ್:ಎಕ್ಸ್ ಸೌಂಡ್ ಅನುಭವವನ್ನು ನೀಡಲು ಎಲ್‌ಜಿ ಸೌಂಡ್‌ಬಾರ್‌ಗಳಿಗೂ ಈ ಸ್ಮಾರ್ಟ್‌ಟಿವಿಗಳು ಬೆಂಬಲ ನೀಡಲಿವೆ. ಇದೆಲ್ಲದಕ್ಕೂ ಮಿಗಿಲಾಗಿ ವೆಬ್‌ಓಎಸ್‌ನ ಇತ್ತೀಚಿನ ಆವೃತ್ತಿ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮರುವಿನ್ಯಾಸಗೊಳಿಸಲಾದ ಯುಐನಿಂದ ಪ್ಯಾಕ್ ಆಗಿವೆ.
ಇದೆಲ್ಲದಕ್ಕೂ ಮಿಗಿಲಾಗಿ ಹೊಸ ಕ್ವಿಕ್ ಕಾರ್ಡ್ಸ್ ಎಂಬ ಫೀಚರ್ಸ್ ಅನ್ನು ಹೊಂದಿರುವ ಹೊಚ್ಚ ಹೊಸ ಹೋಮ್ ಇಂಟರ್ಫೇಸ್ ಆಯ್ಕೆ ಇವುಗಳಲ್ಲಿ ಇದ್ದು, ಈ ಇಂಟರ್‌ಫೇಸ್ ಮೂಲಕ ನೀವು ಹೆಚ್ಚು ಬಳಕೆ ಮಾಡಲಾದ ಆಪ್‌ಗಳು ಮತ್ತು ಸೇವೆಗಳಿಗೆ ಸುಲಭವಾಗಿ ಪ್ರವೇಶ ಪಡೆದುಕೊಳ್ಳಬಹುದು. ಅದರಲ್ಲೂ ಮ್ಯೂಸಿಕ್, ಸ್ಫೋರ್ಟ್ಸ್ ಮತ್ತು ಮುಂತಾದ ವರ್ಗಗಳ ಅಡಿಯಲ್ಲಿ ಪ್ರತ್ಯೇಕ ಗ್ರೂಪ್ ಆಯ್ಕೆ ಇದೆ.

ಹಾಗೆಯೇ ಎಲ್‌ಜಿ ಸ್ಮಾರ್ಟ್ ಕ್ಯಾಮ್ ಟೂಲ್ಸ್ ಅನ್ನು ಬಳಕೆ ಮಾಡಿಕೊಂಡು ವಿಡಿಯೋ ಕರೆಗಾಗಿ ನಿಮ್ಮ OLED ಟಿವಿಯನ್ನು ಬಳಕೆ ಮಾಡಬಹುದಾಗಿದೆ. ಈ ಸ್ಮಾರ್ಟ್ ಕ್ಯಾಮ್ ಇನ್‌ಬಿಲ್ಟ್ ಹೆಚ್‌ಡಿ ಕ್ಯಾಮೆರಾ, ಡ್ಯುಯಲ್ ಮೈಕ್ ಮತ್ತು ಮಲ್ಟಿ ವ್ಯೂ ಕಾರ್ಯದೊಂದಿಗೆ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಭೌತಿಕ ಗೌಪ್ಯತೆ ಶಟರ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇಷ್ಟೆಲ್ಲಾ ವಿಶೇಷ ಫೀಚರ್ಸ್ ಇರುವ ಈ ಟಿವಿಗಳ ಬೆಲೆಗಳನ್ನು ತಿಳಿಯೋಣ ಬನ್ನಿ.
ಎಲ್‌ಜಿ OLED ಟಿಗಳ ಬೆಲೆ ಹಾಗೂ ಲಭ್ಯತೆ: ಇವು ಪ್ರೀಮಿಯಂ ಫೀಚರ್ಸ್ ಹೊಂದಿರುವುದರಿಂದ ಇವುಗಳ ಬೆಲೆಯೂ ಸಹ ದುಬಾರಿಯಾಗಿದೆ.ಅಂದರೆ 1,19,990ರೂ.ಗಳಿಂದ ಆರಂಭ ಆಗುವ ಈ ಸ್ಮಾರ್ಟ್‌ಟಿವಿಗಳ ಬೆಲೆ 75,00,000 ರೂ.ವರೆಗೆ ತಲುಪುತ್ತದೆ. ಕೆಲವು ಟಿವಿಗಳು ಕೋಟಿ ಬೆಲೆಯನ್ನೂ ಸಹ ಹೊಂದಿವೆ. ಈ ಸ್ಮಾರ್ಟ್‌ಟಿವಿಗಳನ್ನು ನೀವು ಎಲ್‌ಜಿ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








