ಈ ವಿಶೇಷ ಸೌಲಭ್ಯ ಇರುವ ವಿಶ್ವದ ಮೊದಲ ಟಿವಿ ಇದು, ಬೆಲೆ ಎಷ್ಟು?
ಮಾರುಕಟ್ಟೆಯಲ್ಲಿ ಈಗಾಗಲೇ ಭಿನ್ನ ಶ್ರೇಣಿಯ ಸ್ಮಾರ್ಟ್‌ಟಿವಿಗಳು ಲಭ್ಯ ಇವೆ. ಗ್ರಾಹಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ಈ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ವಿಶ್ವದಲ್ಲೇ ಮೊದಲ ಬಾರಿಗೆ ವಿಶೇಷ ಫೀಚರ್ಸ್ ಇರುವ ಸ್ಮಾರ್ಟ್‌ಟಿವಿಯನ್ನು ಪ್ರಮುಖ ಸ್ಮಾರ್ಟ್‌ಗ್ಯಾಜೆಟ್ ತಯಾರಿಕಾ ಸಂಸ್ಥೆ ಎಲ್‌ಜಿ ಪರಿಚಯಿಸಿದೆ.
ಹೌದು, ಎಲ್‌ಜಿ ಸಿಗ್ನೇಚರ್ OLED M 97 (LG SIGNATURE OLED M 97) ಇಂಚಿನ ಸ್ಮಾರ್ಟ್‌ಟಿವಿ ಬಗ್ಗೆ ಮಾರುಕಟ್ಟೆಯಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ. ಯಾಕೆಂದರೆ ಈ ಸ್ಮಾರ್ಟ್‌ಟಿವಿ ವೈರ್‌ಲೆಸ್ ಆಗಿದೆ. ಇದನ್ನು CES 2023 ನಲ್ಲಿ ಅನಾವರಣಗೊಳಿಸಿದ ಬಳಿಕ ಈಗ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹಾಗಿದ್ರೆ, ಮತ್ಯಾಕೆ ತಡ. ಈ ಸ್ಮಾರ್ಟ್‌ಟಿವಿಯಲ್ಲಿ ಅಂತಹ ವಿಶೇಷ ಫೀಚರ್ಸ್ ಏನು?, ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಎಲ್‌ಜಿ ಸಿಗ್ನೇಚರ್ OLED M (97M3) ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಟಿವಿ 97 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 4K ರೆಸಲ್ಯೂಶನ್ ಸಾಮರ್ಥ್ಯ ಹಾಗೂ 120Hz ರಿಫ್ರೆಶ್ ರೇಟ್ ನೊಂದಿಗೆ ವಿಶೇಷ ಎನಿಸಿದೆ. ಇದು 10 ಮೀಟರ್‌ಗಳಷ್ಟು ದೂರದಲ್ಲಿ ಬೆರಗುಗೊಳಿಸುವ ನೋಟ ನೀಡುತ್ತದೆ. ಇದರೊಂದಿಗೆ ಪಿಕ್ಸೆಲ್ ಮಬ್ಬಾಗಿಸುವಿಕೆ ಫೀಚರ್ಸ್ ಆಯ್ಕೆಯನ್ನೂ ಸಹ ಈ ಸ್ಮಾರ್ಟ್‌ಟಿವಿ ಹೊಂದಿದೆ. ಜೊತೆಗೆ ಡಾಲ್ಬಿ ವಿಷನ್/HDR10/HLG ಸೌಲಭ್ಯ ಪಡೆದಿದೆ.
ಎಲ್‌ಜಿ ಸಿಗ್ನೇಚರ್ OLED M (97M3) ಫೀಚರ್ಸ್: ಉಳಿದಂತೆ ಈ ಸ್ಮಾರ್ಟ್‌ಟಿವಿ ನಯವಾದ ಮತ್ತು ಆಧುನಿಕ ಗ್ಯಾಲರಿ ವಿನ್ಯಾಸವನ್ನು ಹೊಂದಿದ್ದು, ಇದು ತಡೆರಹಿತ, ಫ್ಲಶ್-ಟು-ವಾಲ್ ಮೌಂಟ್ ಅನ್ನು ಸಕ್ರಿಯಗೊಳಿಸುತ್ತದೆ. ಟಿವಿ ಬಳಿ ಕ್ಯಾಬಿನೆಟ್ ಅಥವಾ ಟೇಬಲ್ ಅಗತ್ಯವಿಲ್ಲದೆ ಬಳಕೆದಾರರು ಬಯಸಿದಂತೆ ಎಲ್ಲಿ ಬೇಕಾದರೂ ಅನ್ನು ಇರಿಸಬಹುದು.
ಝೀರೋ ಕನೆಕ್ಟ್ ಬಾಕ್ಸ: ಈ ಸ್ಮಾರ್ಟ್‌ಟಿವಿಯ ವಿಶೇಷತೆ ಏನೆಂದರೆ ವಿಶ್ವದಲ್ಲೇ ಮೊದಲ ಬಾರಿಗೆ ಝೀರೋ ಕನೆಕ್ಟ್ ಬಾಕ್ಸ್ ಹೊಂದಿರುವುದು. ಈ ಡಿವೈಸ್‌ನಿಂದಾಗಿ ಕೇಬಲ್ ಗೊಂದಲವನ್ನು ತೆಗೆದುಹಾಕಲಾಗುತ್ತಿದೆ. ಈ ಮೂಲಕ ವೈರ್‌ಲೆಸ್ ಎವಿ ಪ್ರಸರಣವನ್ನು ಹೊಂದಿದ್ದು, ಗೇಮಿಂಗ್ ಕನ್ಸೋಲ್‌ಗಳು, ಸೆಟ್-ಟಾಪ್ ಬಾಕ್ಸ್‌ಗಳು ಮತ್ತು ಇತರ ಪೆರಿಫೆರಲ್‌ಗಳಿಗೆ ತಡೆರಹಿತ ಸಂಪರ್ಕವನ್ನು ನೀಡುತ್ತದೆ.
ಈ ಝೀರೋ ಕನೆಕ್ಟ್ ಬಾಕ್ಸ್ (Zero Connect Box) ಹೆಚ್‌ಡಿಎಮ್‌ಐ 2.1, ಯುಎಸ್‌ಬಿ, ಆರ್‌ಎಫ್, ಲ್ಯಾನ್ ಮತ್ತು ಬ್ಲೂಟೂತ್‌ನಂತಹ ವಿವಿಧ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದ್ದು, ಇದು ಬಹು ಡಿವೈಸ್‌ಗಳು ಅಥವಾ ಪೆರಿಫೆರಲ್‌ಗಳನ್ನು ಕನೆಕ್ಟ್ ಮಾಡಲು ಸುಲಭಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೆ ಎಲ್‌ಜಿ ಸ್ವಾಮ್ಯದ ವೈರ್‌ಲೆಸ್ ಎವಿ ಪ್ರಸರಣ ಪರಿಹಾರವು ಅಸ್ತಿತ್ವದಲ್ಲಿರುವ ವೈ-ಫೈ 6E ಮಾನದಂಡಗಳಿಗಿಂತ 3 ಪಟ್ಟು ವೇಗವಾಗಿ ಡೇಟಾ ಪ್ರಸರಣ ವೇಗವನ್ನು ನೀಡುತ್ತದೆ.

ಉಳಿದಂತೆ ಈ ಸ್ಮಾರ್ಟ್‌ಟಿವಿ G-ಸಿಂಕ್, ಫ್ರೀಸಿಂಕ್, HGIG, ALLM ಮತ್ತು VRR ಅನ್ನು ಬೆಂಬಲಿಸಲಿದ್ದು, 6 ನೇ ತಲೆಮಾರಿನ ಎಐ ಆಲ್ಫಾ 9 4K ಪ್ರೊಸೆಸರ್‌ನ ಬಲ ಪಡೆದಿದೆ. ಜೊತೆಗೆ ವೆಬ್‌ಓಎಸ್ 23, ಎಐ ಥಿನ್‌ಕ್ಯೂ ಆಪರೇಟಿಂಗ್ ಸಿಸ್ಟಮ್ ಆಯ್ಕೆ ಪಡೆದುಕೊಂಡಿದ್ದು, 60W ಸ್ಪೀಕರ್ ಔಟ್‌ಪುಟ್ ಮೂಲಕ ಉತ್ತಮ ಆಡಿಯೋ ಅನುಭವ ಪಡೆದುಕೊಳ್ಳಬಹುದು.
ಎಲ್‌ಜಿ ಸಿಗ್ನೇಚರ್ OLED M (97M3) ಬೆಲೆ ಹಾಗೂ ಲಭ್ಯತೆ: ಇನ್ನು ಮುಂದಿನ ದಿನಗಳಲ್ಲಿ ಇತರ OLED ಟಿವಿ ಮಾದರಿಗಳನ್ನು ಸಹ ಈ ವೈರ್‌ಲೆಸ್ ವಿಭಾಗಕ್ಕೆ ಸೇರಿಸಲು ಎಲ್‌ಜಿ ಮುಂದಾಗಿದೆ. ಅದರಂತೆ ಈಗ 97 ಇಂಚಿನ ಎಲ್‌ಜಿ ಸಿಗ್ನೇಚರ್ OLED M ಟಿವಿ ಹಾಗೂ 83 ಮತ್ತು 77 ಇಂಚಿನ OLED ಇವೋ M ಮಾದರಿಗಳು ಝೀರೋ ಕನೆಕ್ಟ್ ತಂತ್ರಜ್ಞಾನವನ್ನು ಹೊಂದಿವೆ.
ಈ 97ಇಂಚಿನ ಎಲ್‌ಜಿ ಸಿಗ್ನೇಚರ್ OLED M TV ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಮಾತ್ರ ಲಭ್ಯವಿದೆ. ಇದರೊಂದಿಗೆ ಕಂಪನಿಯು ಈ ವರ್ಷದ ಕೊನೆಯಲ್ಲಿ ಉತ್ತರ ಅಮೆರಿಕಾ ಮತ್ತು ಯುರೋಪ್‌ನ ಪ್ರಮುಖ ಮಾರುಕಟ್ಟೆಗಳಿಗೆ ಜಾಗತಿಕವಾಗಿ ಪರಿಚಯಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಸ್ಮಾರ್ಟ್‌ಟಿವಿಗೆ 2,909,312ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.


Click it and Unblock the Notifications








