ನೀವು ಎಲ್‌ಜಿ ಟಿವಿ ಗ್ರಾಹಕರೇ?.ಹಾಗಿದ್ರೆ ಏರ್‌ಟೆಲ್‌ನ ಈ ಫ್ರೀ ಆಫರ್ ಪಡೆದುಕೊಳ್ಳಿ!
ಟೆಲಿಕಾಂ ಮಾರುಕಟ್ಟೆಯಂತೆ ದೇಶದಲ್ಲಿ ಡಿ2ಎಚ್ ಮಾರುಕಟ್ಟೆಯಲ್ಲಿಯೂ ಭಾರೀ ಪೈಪೋಟಿ ಇದ್ದು, ಸಂಸ್ಥೆಗಳು ಜಿದ್ದಿಗೆ ಬಿದ್ದು ಗ್ರಾಹಕರನ್ನು ಸೆಳೆಯಲು ಭಿನ್ನ ಭಿನ್ನ ಆಫರ್ ನೀಡಲು ಮುಂದಾಗುತ್ತಿವೆ. ಆ ಪೈಕಿ ಡಿ2ಎಚ್ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್ ಸಂಸ್ಥೆಯು ಇದೀಗ ಬಿಗ್ ಸರ್‌ಪ್ರೈಸ್ ಘೋಷಿಸಿದ್ದು, ಅದೆನೆಂದರೇ ಆರು ತಿಂಗಳ ಉಚಿತ ಸೇವೆ ನೀಡುವುದಾಗಿ ತಿಳಿಸಿದೆ.

ಏರ್ಟೆಲ್
ಹೌದು, ಏರ್‌ಟೆಲ್ ಕಂಪನಿಯು ತನ್ನ ಹೊಸ ಸೆಟ್‌ಟಾಪ್ ಬಾಕ್ಸ್‌ಗೆ ಅಪ್‌ಡೇಟ್ ಆಗುವ ಗ್ರಾಹಕರಿಗೆ ಬೆಸ್ಟ್ ಡಿಸ್ಕೌಂಟ್‌ಗಳನ್ನು ತಿಳಿಸಿದೆ. ಅದಲ್ಲದೇ ಈಗ ಆರು ತಿಂಗಳ ಉಚಿತ ಡಿ2ಎಚ್ ಸೇವೆಯ ಆಫರ್ ಘೋಷಿಸಿದ್ದು, ಆದರೆ ಈ ಆಫರ್ ಎಲ್‌ಜಿ ಸ್ಮಾರ್ಟ್‌ಟಿವಿ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಇದೇ ಸೆಪ್ಟೆಂಬರ್ 10ರಿಂದ ಚಾಲ್ತಿಯಲ್ಲಿರುವ ಈ ಕೊಡುಗೆಯು ಇದೇ ಅಕ್ಟೋಬರ್ 30ರ (2019) ವರೆಗೂ ಮಾತ್ರ ಇರಲಿದೆ. ಹಾಗಾದರೇ ಎಲ್ ಸ್ಮಾರ್ಟ್ ಟಿವಿ ಗ್ರಾಹಕರಿಗೆ ಸಿಗಲಿರುವ ಏರ್‌ಟೆಲ್‌ನ ಈ ಆರು ತಿಂಗಳ ಉಚಿತ ಸೇವೆಯ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಆಫರ್ ಏನಿದೆ
ಏರ್‌ಟೆಲ್ ಡಿ2ಎಚ್‌ನ 'ದಬಾಂಗ್ ಸ್ಪೋರ್ಟ್ಸ್ ಹೆಚ್‌ಡಿ ಪ್ಯಾಕ್' ಬೆಲೆಯು 3,499ರೂ.ಗಳು ಆಗಿದ್ದು, ಆದರೆ ಗ್ರಾಹಕರಿಗೆ ಕೊಡುಗೆಯಲ್ಲಿ 2,500ರೂಗಳಿಗೆ ಲಭ್ಯವಾಗಲಿದೆ. ಒಟ್ಟು 1,000ರೂ ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಸೆಟ್‌ಟಾಪ್ ಬಾಕ್ಸ್, ODU, 10ಮೀಟರ್ ವಾಯರ್, ಆಕ್ಟಿವೇಶನ್ ಕಾಸ್ಟ್, ರೀಮೋಟ್ ಮತ್ತು ಅಡಾಪ್ಟರ್ ಗಳನ್ನು ನೀಡಲಾಗುತ್ತದೆ.

ಯಾವ ಟಿವಿಗಳಿಗೆ ಆಫರ್ ಲಭ್ಯ
ಏರ್‌ಟೆಲ್ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಈ ಸೀಮಿತ್ ಅವಧಿಯ ಆಫರ್ ಕೇವಲ ಎಲ್‌ಜಿ ಸ್ಮಾರ್ಟ್‌ಟಿವಿ ಗ್ರಾಹಕರಿಗೆ ಮಾತ್ರ ದೊರೆಯಲಿದೆ. ಹಾಗಂತ ಎಲ್‌ಜಿಯ ಎಲ್ಲ ಸ್ಮಾರ್ಟ್‌ಟಿವಿ ಗ್ರಾಹಕರಿಗೆ ಕೊಡುಗೆ ಸಿಗುವುದಿಲ್ಲ. 2017ರಿಂದ 2019ರ ವರೆಗಿನ ಎಲ್‌ಜಿ ಸ್ಮಾರ್ಟ್‌ಟಿವಿಗಳಾಗಿರಬೇಕು. ಏರ್‌ಟೆಲ್ ಕಂಪನಿಯ ಸಿಬ್ಬಂದಿ ಟಿವಿ ಮಾಡೆಲ್ ನಂಬರ್ ಮೇಲೆ ಪರೀಶಿಲಿಸುತ್ತಾರೆ.

ಆಫರ್ ಪಡೆಯುವುದು ಹೇಗೆ
* ಏರ್‌ಟೆಲ್‌ನ ಈ ಆಫರ್ ಪಡೆಯಲು ಬಳಕೆದಾರರು ಏರ್ಟೆಲ್ ಡಿಜಿಟಲ್ ಟಿವಿ ಸಂಖ್ಯೆ 81304-81306 ಗೆ ಕರೆ ಮಾಡಬೇಕಾಗುತ್ತದೆ
* ಕರೆಯಲ್ಲಿರುವ ಏರ್‌ಟೆಲ್ ಪ್ರತಿನಿಧಿ ಎಲ್‌ಜಿ ಸ್ಮಾರ್ಟ್ ಟಿವಿಯ ಸರಣಿ ಸಂಖ್ಯೆಯನ್ನು ಪರಿಶೀಲಿಸುತ್ತಾರೆ. (ಮಾಡೆಲ್ ನಂಬರ್ ಮೇಲೆ ಎಲ್‌ಜಿ ಸ್ಮಾರ್ಟ್‌ಟಿವಿ ನಿಖರತೆ ತಿಳಿಯುತ್ತಾರೆ)
* ಮಾಡೆಲ್ ನಂಬರ್ ಅನ್ನು ಪರಿಶೀಲಿಸಿದ ನಂತರ ಬಳಕೆದಾರರು ತಮ್ಮ ಕೆವೈಸಿ ವಿವರಗಳನ್ನು ಏರ್‌ಟೆಲ್ ಪ್ರತಿನಿಧಿಗೆ ಒದಗಿಸಬೇಕಾಗುತ್ತದೆ
* ಆ ಬಳಿಕ ಏರ್‌ಟೆಲ್ ಡಿಜಿಟಲ್ ಟಿವಿ ಸೆಟ್‌ಟಾಪ್ ಸ್ಥಾಪಿಸಲು ಮತ್ತು ಹಣ ಸಂಗ್ರಹಿಸಲು ಬಳಕೆದಾರರ ಮನೆಗೆ ಭೇಟಿ ನೀಡುತ್ತಾರೆ.


Click it and Unblock the Notifications








