Home
ಸುದ್ದಿಜಾಲ

ಭಾರತದಲ್ಲಿ ಎಲ್‌ಜಿ ವೆಲ್ವೆಟ್ ಸ್ಮಾರ್ಟ್‌ಫೋನ್‌ ಲಾಂಚ್‌!..ಆಕರ್ಷಕ ಫೀಚರ್ಸ್‌!

ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಹೈ ಎಂಡ್‌ ಮತ್ತು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಸ್ಮಾರ್ಟ್‌ಫೋನ್ - ಎಲ್ಜಿ ವೆಲ್ವೆಟ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 845 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಲೆನ್ಸ್ ಹೊಂದಿದೆ.

ಎಲ್‌ಜಿ ವೆಲ್ವೆಟ್‌

ಹೌದು, ಎಲ್‌ಜಿ ಕಂಪೆನಿ ತನ್ನ ಎಲ್‌ಜಿ ವೆಲ್ವೆಟ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಐಪಿ 68-ರೇಟೆಡ್ ಬಿಲ್ಡ್ ಹೊಂದಿದ್ದು, MIL-STD-810G ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸ್ಕ್ರೀನ್‌ ಅನ್ನು ಹೊಂದಿದೆ. ಜೊತೆಗೆ ಸಿನೆಮಾ ಫುಲ್ ವಿಷನ್‌ ಪೋಲ್ಡ್‌ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡ್ಯುಯೆಲ್‌ ಸ್ಕ್ರೀನ್‌ ಡಿಸ್‌ಪ್ಲೇ

ಡ್ಯುಯೆಲ್‌ ಸ್ಕ್ರೀನ್‌ ಡಿಸ್‌ಪ್ಲೇ

ಎಲ್‌ಜಿ ವೆಲ್ವೆಟ್ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ಸ್ಕ್ರೀನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಡಿಸ್‌ಪ್ಲೇ ಎರಡು ಕೂಡ 1,080x2,460 ಪಿಕ್ಸೆಲ್‌ ಸ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 6.8-ಇಂಚಿನ ಫುಲ್‌ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20.5:9 ರಚನೆಯ ಅನುಪಾತವನ್ನು ಹೊಂದಿದ್ದು,395PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಅಲ್ಲದೆ ಪ್ರೈಮರಿ ಡಿಸ್‌ಪ್ಲೇ ಸಿನೆಮಾ ಫುಲ್‌ವಿಷನ್ ಪೋಲ್ಡ್ ಸ್ಕ್ರೀನ್‌ ಅನ್ನು ಹೊಂದಿದೆ. ಸೆಕೆಂಡರಿ ಡಿಸ್‌ಪ್ಲೇ ಸಿನೆಮಾ ಫುಲ್‌ವಿಷನ್ ಪೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಇದು ಭಾರತೀಯ ಮಾದರಿಯ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 845 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಎಲ್‌ಜಿ ವೆಲ್ವೆಟ್ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಪಿಡಿಎಎಫ್ ಮತ್ತು 79-ಡಿಗ್ರಿ ವೀಕ್ಷಣೆಯ ಕ್ಷೇತ್ರವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌, 120 ಡಿಗ್ರಿ ಕ್ಷೇತ್ರ ವೀಕ್ಷಣೆಯನ್ನು ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಜೊತೆಗೆ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸ್ಟೆಡಿ ಕ್ಯಾಮ್ ಮತ್ತು ಎಎಸ್ಎಂಆರ್ ರೆಕಾರ್ಡಿಂಗ್ ಸೇರಿವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇದು 4,300mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4+ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎಲ್‌ಟಿಇ, ವೈ-ಫೈ, ಬ್ಲೂಟೂತ್ 5.1, NFC ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್‌ಜಿ ವೆಲ್ವೆಟ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ 36,990ರೂ ಬೆಲೆಯನ್ನು ಹೊಂದಿದೆ. ಎಲ್‌ಜಿ ವೆಲ್ವೆಟ್ ಡ್ಯುಯಲ್ ಸ್ಕ್ರೀನ್ ಕಾಂಬೊ ಬೆಲೆ 49,990ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅಕ್ಟೋಬರ್ 30 ರಿಂದ ಮಾರಾಟವಾಗಲಿದೆ. ಇದು ಅರೋರಾ ಸಿಲ್ವರ್ ಮತ್ತು ನ್ಯೂ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಾಗಿದೆ.

Best Mobiles in India

English summary
LG Velvet has launched in India alongside the LG Wing smartphone expanding the company's product portfolio in the market.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+