'ಎಲ್‌ಜಿ W10' ಸ್ಮಾರ್ಟ್‌ಫೋನ್ ಲಾಂಚ್‌ಗೆ ಮೂಹೂರ್ತ ಫಿಕ್ಸ್!
ಜನಪ್ರಿಯ ಎಲ್‌ಜಿ ಕಂಪನಿಯು ಈಗಾಗಲೇ ಗೃಹ ಉಪಯೋಗಿ ಉತ್ಪನ್ನಗಳು ಸೇರಿದಂತೆ ಸ್ಮಾರ್ಟ್‌ಟಿವಿ ಹಾಗೂ ಸ್ಮಾರ್ಟ್‌ಫೋನ್ ಉತ್ಪನ್ನಗಳಲ್ಲಿ ಹೆಸರುವಾಸಿಯಾಗಿದೆ. ಇದೀಗ ಕಂಪನಿಯು ಸ್ಮಾರ್ಟ್‌ಫೋನ್‌ನತ್ತ ಹೆಚ್ಚಿನ ಒಲವು ನೀಡಿದ್ದು, ತನ್ನ W ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಪ್ರೈಸ್‌ಟ್ಯಾಗ್ ಅನ್ನು ಹೊಂದಿರಲಿದೆ.

ಹೌದು, ಎಲ್‌ಜಿ ಕಂಪನಿಯು W ಸರಣಿಯಲ್ಲಿ 'ಎಲ್‌ಜಿ W10' ಹೆಸರಿನ ಮೀಡ್‌ರೇಂಜ್ ಸ್ಮಾರ್ಟ್‌ಫೋನ್ ಅನ್ನು ಹೊರತರುವ ಸೂಚನೆ ನೀಡಿದ್ದು, ಇದೇ ಜೂನ್ 26ರಂದು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್ ಎಂದರೇ 4000mAh ಬ್ಯಾಟರಿ ಶಕ್ತಿ, ಹೈ ಮೆಗಾಪಿಕ್ಸಲ್ ಕ್ಯಾಮೆರಾ, ಪ್ರೊಸೆಸರ್, ಅತ್ಯುತ್ತಮ ಸೆನ್ಸಾರ್ ಆಯ್ಕೆಗಳು.

ಎಲ್‌ಜಿ ಬಿಡುಗಡೆ ಮಾಡುತ್ತಿರುವ W10 ಸ್ಮಾರ್ಟ್‌ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಲೀಕ್ ಮಾಡಿಲ್ಲ. ಆದರೆ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಹೊಂದಿರಲಿದ್ದು, ಅವುಗಳು ಅಲ್ಟ್ರಾ ವೈಲ್ಡ್ ಸೆನ್ಸರ್, ಡೆಪ್ತ್ ಸೆನ್ಸಾರ್ ಮತ್ತು ಮೇನ್ ರೇರ್ ಕ್ಯಾಮೆರಾ ಹೊಂದಿರಲಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಇರಲಿದ್ದು, ಮಂದಬೆಳಕಿನಲ್ಲೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗುತ್ತವೆ.

ಎಲ್‌ಜಿ W10 ಸ್ಮಾರ್ಟ್‌ಫೋನ್ 6.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು ಪ್ರಖರವಾಗಿರಲಿದೆ. ಮೀಡಿಯಾ ಟೆಕ್ ಹಿಲಿಯೊ P60 ಅಥವಾ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಹೊಂದಿರುವ ಸಾಧ್ಯತೆಗಳು ಇವೆ. ಇನ್ನು 3GB RAM ಮತ್ತು 32GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮೀಡ್‌ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆನೇ ಹೆಚ್ಚಿನ ಬೇಡಿಕೆ ಇದ್ದು, ಈ ದೃಷ್ಠಿಯಿಂದ ಎಲ್‌ಜಿ ಕಂಪನಿಯು ಎಲ್‌ಜಿ W10 ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡುವ ಸಾಧ್ಯತೆಗಳಿವೆ. ಈ ಮೀಡ್‌ರೇಂಜ್ ಮಾದರಿಯ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಲಾಂಚ್ ಆದರೆ ಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಲಿದೆ.


Click it and Unblock the Notifications








