Home
ಸುದ್ದಿಜಾಲ

4000mAh ಬ್ಯಾಟರಿಯೊಂದಿಗೆ LG X500 ಸ್ಮಾರ್ಟ್ ಫೋನ್ ಲಾಂಚ್: ಬೆಲೆ, ವಿಶೇಷತೆಗಳು...!

By Precilla Dias

LG ಹೊಸದೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಮುಂದಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯದ ಸ್ಮಾರ್ಟ್ ಫೋನ್ ಗಳು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ LG ಸಹ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಿದೆ.

4000mAh ಬ್ಯಾಟರಿಯೊಂದಿಗೆ LG X500 ಸ್ಮಾರ್ಟ್ ಫೋನ್ ಲಾಂಚ್: ಬೆಲೆ, ವಿಶೇಷತೆಗಳು.!

LG ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುವಂತಹ ಸ್ಮಾರ್ಟ್ ಫೋನ್ ಲಾಂಚ್ ಮಾಡುವುದಾಗಿ ಈ ಹಿಂದೆಯೇ ತಿಳಿಸಿತ್ತು, ಅದರಂತೆ LG X500 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದ್ದು, ಬ್ಯಾಟರಿ ಸಾಮಾರ್ಥ್ಯವೇ ಈ ಪೋನಿನ ಹೈಲೆಟ್ ಆಗಿದೆ. ಈ ಸ್ಮಾರ್ಟ್ ಫೋನ್ ಸತತವಾಗಿ 20 ಗಂಟೆಗಳ ವಿಡಿಯೋವನ್ನು ಪ್ಲೇ ಮಾಡಲಿದೆಯಂತೆ.

ಈ ಹಿನ್ನಲೆಯಲ್ಲಿ LG X500 ಸ್ಮಾರ್ಟ್ ಫೋನ್ ವಿಶೇಷತೆಗಳ ಕುರಿತು ಮಾಹಿತಿ ಈ ಕೆಳಗಿನಂತೆ ಇದೆ.

ಡಿಸ್ ಪ್ಲೇ, RAM ಮತ್ತು ಸ್ಟೋರೆಜ್:

ಡಿಸ್ ಪ್ಲೇ, RAM ಮತ್ತು ಸ್ಟೋರೆಜ್:

LG X500 ಸ್ಮಾರ್ಟ್ ಫೋನ್್ನಲ್ಲಿ 5.5 ಇಂಚಿನ್ LCD HD ಡಿಸ್ ಪ್ಲೇ ಹೊಂದಿದ್ದು, 720X1280 ಪಿಕ್ಸಲ್ ರೆಸಲ್ಯೂಷನ್ ನಿಂದ ಕೂಡಿದೆ. ಇದರೊಂದಿಗೆ 1.5 GHz ವೇಗದ ಆಕ್ಟಾ ಕೋರ್ ಪ್ರೋಸೆಸರ್ ಇದ್ದು, ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 2 TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ, ಬ್ಯಾಟರಿ ಮತ್ತು ಸಾಫ್ಟ್ ವೇರ್:

ಕ್ಯಾಮೆರಾ, ಬ್ಯಾಟರಿ ಮತ್ತು ಸಾಫ್ಟ್ ವೇರ್:

LG X500 ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದರೊಂದಿಗೆ LED ಫ್ಲಾಷ್ ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಿದ್ದು, ಇದಕ್ಕೂ LED ಫ್ಲಾಷ್ ಇದ್ದು, ವೈಡ್ ಆಂಗಲ್ ಲೈನ್ಸ್ ಆಗಿದೆ.

ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ 4500 mAh ಬ್ಯಾಟರಿಯನ್ನು ಅಳವಡಿಸಿದ್ದು, ಇದು 18 ಗಂಟೆಗಳ ಕರೆ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ. ಇದಲ್ಲದೇ ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಇದು ಕಾರ್ಯನಿರ್ವಹಿಸಲಿದೆ.

ಇತರೇ ವಿಶೇಷತೆಗಳು:

ಇತರೇ ವಿಶೇಷತೆಗಳು:

LG X500 ಸ್ಮಾರ್ಟ್ ಫೋನ್ ಡ್ಯುಯಲ್ ಸಿಮ್ ಫೋನ್ ಆಗಿದ್ದು, 4G LET, WiFi 802.11, ಬ್ಲೂಟೂತ್ 4.2, GPS, USB OTG ಮತ್ತು NFC ಆಯ್ಕೆಯನ್ನು ನೀಡಿದ್ದು, ಈ ಫೋನ್ ಸುಮಾರು 164 ತೂಕವನ್ನು ಹೊಂದಿದ್ದು, ನೆವಿ ಬ್ಲೂ, ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ.

ಬೆಲೆ ಮತ್ತು ದೊರೆಯುವಿಕೆ:

ಬೆಲೆ ಮತ್ತು ದೊರೆಯುವಿಕೆ:

LG X500 ಸ್ಮಾರ್ಟ್ ಫೋನ್ ಸುಮಾರು ರೂ.18,361 ಬೆಲೆಗೆ ದೊರೆಯಲಿದ್ದು, ಇದು ಸದ್ಯ ಜೂನ್ 9 ರಂದು ಕೋರಿಯಾದಲ್ಲಿ ದೊರೆಯಲಿದೆ. ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಲಾಂಚ್ ಆಗಲಿದೆ.

Source

Best Mobiles in India

English summary
The LG X500 comes with 5.5-inch display, and 13-megapixel and 5-megapixel cameras at the back and front.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+