Home
ಸುದ್ದಿಜಾಲ

LinkedIn scams: ಲಿಂಕ್ಡ್‌ಇನ್‌ನಲ್ಲಿ ಭಾರೀ ಹಗರಣ, ಅರ್ಜಿ ಸಲ್ಲಿಸುವ ಮುನ್ನ ಇರಲಿ ಜಾಣತನ!

ಇಂದಿನ ದಿನಗಳಲ್ಲಿ ಎಐ ಹಾಗೂ ಇನ್ನಿತರೆ ಸ್ಮಾರ್ಟ್‌ ತಂತ್ರಜ್ಞಾನದ ಬಳಕೆಯಿಂದಾಗಿ ಬಹುಪಾಲು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಕಂಪೆನಿಗಳು ಆರ್ಥಿಕ ನಷ್ಟದ ಕಾರಣ ನೀಡಿ ಉದ್ಯೋಗಿಗಳನ್ನು ವಜಾ ಮಾಡುವ ಪದ್ಧತಿ ಸಹ ಹೆಚ್ಚಾಗಿದೆ. ಈ ಕಾರಣದಿಂದಾಗಿ ಕೆಲಸಕ್ಕಾಗಿ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ.

ಹೌದು, ಸಾಮಾನ್ಯವಾಗಿ ಯಾವುದೇ ಖಾಸಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಲಿಂಕ್ಡ್‌ಇನ್‌ (LinkedIn) ಆಪ್‌ ಅನ್ನು ಬಳಕೆ ಮಾಡಲಾಗುತ್ತದೆ. ಇದರೊಂದಿಗೆ ಕಂಪೆನಿಗಳು ಈ ಮೂಲಕ ಉತ್ತಮ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಇದು ಉತ್ತಮ ಪ್ಲಾಟ್‌ಫಾರ್ಮ್‌ ಆಗಿ ಸೇವೆ ಸಲ್ಲಿಸುತ್ತಿದೆ. ಈ ನಡುವೆ ಈ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಮಟ್ಟದಲ್ಲಿ ವಂಚನೆ ಪ್ರಕರಣಗಳು ಜರುಗುತ್ತಿವೆ. ಇದರಿಂದಾಗಿ ನಿರುದ್ಯೋಗಿಗಳು ಈವರೆಗೆ ಕೂಡಿಟ್ಟ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಲಿಂಕ್ಡ್‌ಇನ್‌ನಲ್ಲಿ ಭಾರೀ ಹಗರಣ, ಅರ್ಜಿ ಸಲ್ಲಿಸುವ ಮುನ್ನ ಇರಲಿ ಜಾಣತನ!

ನಿರೋದ್ಯೋಗಿಗಳೇ ಟಾರ್ಗೆಟ್‌: ಉದ್ಯೋಗ ಕಳೆದುಕೊಂಡು ಲಿಂಕ್ಡ್‌ಇನ್‌ ಮೂಲಕ ಇತರೆ ಕಂಪೆನಿಗಳಿಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿರುವವರನ್ನೇ ಟಾರ್ಗೆಟ್‌ ಮಾಡುತ್ತಿರುವ ಸ್ಕ್ಯಾಮರ್‌ಗಳು ಫಿಶಿಂಗ್ ಹಗರಣ ಮಾಡುತ್ತಿದ್ದಾರೆ. ನಾರ್ಡ್‌ಲೇಯರ್‌ನ ವರದಿಯ ಪ್ರಕಾರ ನಕಲಿ ಉದ್ಯೋಗದ ಆಫರ್‌ಗಳು ಮತ್ತು ಫಿಶಿಂಗ್ ಹಗರಣಗಳು ಲಿಂಕ್ಡ್‌ಇನ್‌ನಲ್ಲಿ ಹೆಚ್ಚಾಗುತ್ತಿದೆ ಎಂದು ಉಲ್ಲೇಖಿಸಿದೆ.

ಇನ್ನು ನಕಲಿ ಉದ್ಯೋಗ ಪ್ರಸ್ತಾಪವು ಅತ್ಯಂತ ಜನಪ್ರಿಯ ಹಗರಣವಾಗಿದ್ದು, ಇದು 48% ರಷ್ಟಿದೆ. ಅದರಲ್ಲೂ ಸುಮಾರು 45% ಕಂಪನಿಗಳು ತಮ್ಮ ಸಂಸ್ಥೆಯ ಬ್ರಾಂಡ್ ಹೆಸರನ್ನು ಬಳಸಿಕೊಂಡು ಲಿಂಕ್ಡ್‌ಇನ್‌ನಲ್ಲಿ ಹಗರಣ ಮಾಡಲಾಗುತ್ತಿದೆ ಎಂಬುದನ್ನು ಕಂಡುಕೊಂಡಿವೆ. ಅದರಲ್ಲೂ ಈ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿ ಸೆಕೆಂಡಿಗೆ 117 ಉದ್ಯೋಗ ಅರ್ಜಿಗಳು ಸಲ್ಲಿಕೆ ಆಗುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಕಾನೂನುಬದ್ಧವಾಗಿ ಕಾಣುವ ಉದ್ಯೋಗ ಪೋಸ್ಟ್ ಅನ್ನು ಕ್ರಿಯೇಟ್‌ ಮಾಡಿ ಜನರನ್ನು ಮರಳು ಮಾಡುತ್ತಿದ್ದಾರೆ.

ಲಿಂಕ್ಡ್‌ಇನ್‌ನಲ್ಲಿ ಭಾರೀ ಹಗರಣ, ಅರ್ಜಿ ಸಲ್ಲಿಸುವ ಮುನ್ನ ಇರಲಿ ಜಾಣತನ!

ಇದರಲ್ಲಿ ಸ್ಕ್ಯಾಮರ್‌ ಪ್ರಸಿದ್ಧ ಕಂಪನಿ ಅಥವಾ ವೃತ್ತಿಪರರಂತೆ ನಕಲಿ ಪ್ರೊಫೈಲ್‌ಗಳನ್ನು ಬಳಕೆ ಮಾಡಿಕೊಂಡು ಸೂಕ್ಷ್ಮ ಮಾಹಿತಿಯನ್ನು ಕೇಳುವ ಹಾಗೂ ಬಳಕೆದಾರರು ಅಪೇಕ್ಷಿಸದ ಮೆಸೆಜ್‌ಗಳು ಅಥವಾ ಇಮೇಲ್‌ಗಳನ್ನು ಕಳುಹಿಸುತ್ತಿದ್ದಾರೆ. ಈ ಮೂಲಕ ನಿರುದ್ಯೋಗಿಗಳಿಂದ ಅವರ ಖಾಸಗಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದಾರೆ. ಜೊತೆಗೆ ಹಣದ ವಿಚಾರದಲ್ಲಿ ವಂಚನೆಯನ್ನೂ ಮಾಡಲಾಗುತ್ತಿದೆ.

ಈ ಪ್ಲಾಟ್‌ಫಾರ್ಮ್‌ನಲ್ಲಿ ಯಾರನ್ನೇ ವೈಯುಕ್ತಿಕವಾಗಿ ಸಂಪರ್ಕಿಸುವುದು ಅಥವಾ ಆಹ್ವಾನವನ್ನು ಸ್ವೀಕರಿಸುವುದು ಸಾಮಾನ್ಯವಾದ ವಿಷಯವಾಗಿದೆ. ಇದರಲ್ಲಿ ಸ್ಕ್ಯಾಮರ್‌ಗಳು ಇದೇ ರೀತಿಯ ಸಂಭಾಷಣೆಯನ್ನು ನಡೆಸುವ ಸಂಸ್ಕೃತಿಯನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಸಾಮಾನ್ಯ ಸಂದೇಶದ ಅಥವಾ ವೆಬ್‌ಸೈಟ್‌ ಎಂದು ತಿಳಿದು ಬಳಕೆದಾರರು ಅವರು ಕಳುಹಿಸಿದ ಲಿಂಕ್‌ ಅಥವಾ ಮೆಸೆಜ್‌ ಮೇಲೆ ಕ್ಲಿಕ್ ಮಾಡುತ್ತಾರೆ. ಆದರೆ ಇವು ದುರುದ್ದೇಶಪೂರಿತ ಕಂಟೆಂಟ್‌ ಅನ್ನು ಹೊಂದಿರುತ್ತವೆ ಎಂದು ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಈ ಕಾರಣಕ್ಕಾಗಿಯೇ ಈಗಾಗಲೇ ಹಲವಾರು ಜನರು ಮೋಸ ಹೋಗಿದ್ದಾರೆ.

ವಂಚನೆಗಳು ಎರಡು ತೀರಿ ನಡೆಯುತ್ತವೆ: ಈ ವಂಚನೆ ವಿಭಾಗದಲ್ಲಿ ಎರಡು ರೀತಿ ಇದ್ದು, ಇದರಲ್ಲಿ ಒಂದು ವ್ಯಕ್ತಿಗಳನ್ನು ಗುರಿಯಾಗಿಸುವುದು ಅಥವಾ ಲಿಂಕ್ಡ್‌ಇನ್ ಬಳಕೆದಾರರಂತೆ ನಟಿಸುವುದು ಮತ್ತು ಇನ್ನೊಂದು ಕಂಪನಿ ಮಟ್ಟದಲ್ಲಿ ಮೋಸ ಮಾಡುವುದು. ಕಂಪೆನಿ ಮಟ್ಟದ ವಿಚಾರಕ್ಕೆ ಬಂದರೆ ಸುಳ್ಳು ಸಂಸ್ಥೆಯ ನೆಪದಲ್ಲಿ ಸ್ಕ್ಯಾಮರ್ ಕಾರ್ಯನಿರ್ವಹಿಸುತ್ತಾನೆ ಅಥವಾ ಹೆಚ್ಚು ವಿಶ್ವಾಸಾರ್ಹತೆಯನ್ನು ನಿರ್ಮಿಸಲು ಅಸ್ತಿತ್ವದಲ್ಲಿರುವ ಕಂಪನಿಯ ಹೆಸರನ್ನು ಬಳಕೆ ಮಾಡುತ್ತಾನೆ.

ಲಿಂಕ್ಡ್‌ಇನ್‌ನಲ್ಲಿ ಭಾರೀ ಹಗರಣ, ಅರ್ಜಿ ಸಲ್ಲಿಸುವ ಮುನ್ನ ಇರಲಿ ಜಾಣತನ!

ಈ ಎಲ್ಲಾ ಮೋಸದ ಜಾಲವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೂ ಸಹ ನಕಲಿ ಪ್ರೊಫೈಲ್ ಖಾತೆಗಳಿಂದ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಕಸ್ಮಾತ್‌ ಕ್ಲಿಕ್‌ ಮಾಡಿದ್ದರೂ ಸಹ ಅಲ್ಲಿ ಏನಾದರೂ ಬ್ಯಾಂಕ್‌ ಹಾಗೂ ಇನ್ನಿತರೆ ವೈಯುಕ್ತಿಕ ಮಾಹಿತಿಯನ್ನು ಕೇಳಿದರೆ ಖಂಡಿತಾ ಎಂಟ್ರಿ ಮಾಡಬೇಡಿ. ಯಾಕೆಂದರೆ ಅಧಿಕೃತ ಸಂಸ್ಥೆಗಳು ನೇರವಾಗಿ ಕರೆ ಮಾಡುತ್ತವೆ ಅಥವಾ ಅಧಿಕೃತ ಮೇಲ್‌ ಮೂಲಕ ಸಂವಹನ ನಡೆಸುತ್ತವೆ.

Best Mobiles in India

English summary
LinkedIn app is generally used to apply for any private job. However, there is a lot of fraud going on in this platform and unemployed people are losing money and private information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+