ತನ್ನ ತಂಡದ ಸದಸ್ಯರಿಗೆ ಗೋಲ್ಡ್ ಐಫೋನ್ ಗಿಫ್ಟ್ ಮಾಡಿದ ಮೆಸ್ಸಿ! ಬೆಲೆ ಕೇಳಿದ್ರೆ ದಂಗಾಗ್ತಿರಾ!
ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅರ್ಜೆಂಟೀನಾದ ವೃತ್ತಿಪರ ಫುಟ್‌ಬಾಲ್ ಆಟಗಾರರು. ಇವರಿಗೆ ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾದ್ದು, ಮೈದಾನಲ್ಲಿ ಆಟ ಆಡುವಾಗ ಕ್ರೀಡಾ ಪ್ರೇಮಿಗಳು ಕಣ್ಣು ಅಗಲಿಸಿಕೊಂಡು ಆಟ ವೀಕ್ಷಿಸುತ್ತಾರೆ. ಅದರಂತೆ ಇದೀಗ ಇವರ ಈ ಒಂದು ಕೆಲಸದಿಂದ ಜನರು ನಿಬ್ಬೆರಗಾಗಿದ್ದಾರೆ.
ಹೌದು, ಲಿಯೋನೆಲ್ ಮೆಸ್ಸಿ ಬರೋಬ್ಬರು 35 ಚಿನ್ನದ ಐಫೋನ್‌ಗಳನ್ನು ಆರ್ಡರ್ ಮಾಡಿದ್ದಾರೆ. ಅರೇ ಇದೇನಿದು ಚಿನ್ನದ ಐಫೋನ್, ಯಾರಿಗಾಗಿ ಮೆಸ್ಸಿ ಅವರು ಇಷ್ಟೊಂದು ಫೋನ್ ಗಳನ್ನು ಆರ್ಡರ್ ಮಾಡಿದ್ದಾರೆ?, ಇವುಗಳ ಬೆಲೆ ಎಷ್ಟಿರಬಹುದು?, ಸಾಮಾನ್ಯ ಐಫೋನ್‌ಗಳಂತೆಯೇ ಇವು ಇರಲಿವೆಯೇ ಎಂಬ ಕುತೂಹಲ ಖಂಡಿತಾ ನಿಮ್ಮಲ್ಲಿ ಮೂಡಿರುತ್ತದೆ. ಈ ಕುತೂಹಲದ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದ ಮೂಲಕ ಕಂಡುಕೊಳ್ಳಿ.

ಯಾರಿಯಾಗಿ ಈ ಚಿನ್ನದ ಐಫೋನ್ ?
ಅರ್ಜೆಂಟೀನಾದ ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022 ರಲ್ಲಿನ ತಮ್ಮ ಐತಿಹಾಸಿಕ ಗೆಲುವನ್ನು ಆಚರಿಸುವ ಭಾಗವಾಗಿ ಈ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ಅರ್ಜೆಂಟೀನಾ FIFA ವಿಶ್ವಕಪ್ 2022 ರಲ್ಲಿ ಫ್ರಾನ್ಸ್ ಅನ್ನು ಸೋಲಿಸುವ ಮೂಲಕ ಗೆಲುವು ಪಡೆದುಕೊಂಡಿದ್ದು, ಇದು ಮೆಸ್ಸಿಯ ಮೊದಲ ವಿಶ್ವಕಪ್ ಟ್ರೋಫಿಯಾಗಿದೆ. ಈ ಕಾರಣಕ್ಕೆ ಅವರು 35 ಚಿನ್ನದ ಐಫೋನ್‌ಗಳನ್ನು ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗೆ ಉಡುಗೊರೆಯಾಗಿ ನೀಡಲಿದ್ದಾರೆ.
ಈ ಚಿನ್ನದ ಐಫೋನ್‌ಗಳ ಒಟ್ಟು ಬೆಲೆ ಎಷ್ಟು ಗೊತ್ತಾ!?
ಆಪಲ್‌ನ ಐಫೋನ್ 14 ಫೋನ್ ಬೆಲೆ ಸಾಮಾನ್ಯವಾಗಿ 70 ಸಾವಿರದಿಂದ ಆರಂಭ ಆಗುತ್ತದೆ. ಈ ಚಿನ್ನದ ಐಫೋನ್ ಬೆಲೆ ಇನ್ನಷ್ಟು ದುಬಾರಿಯಾಗಿದ್ದು, ಈ ಮೂಲಕ ಬರೋಬ್ಬರಿ EUR 1,75,000 ಗಳನ್ನು ಪಾವತಿ ಮಾಡಿದ್ದಾರೆ. ಭಾರತೀಯ ಲೆಕ್ಕದಲ್ಲಿ 35 ಐಫೋನ್‌ಗಳ ಮೌಲ್ಯ 1.73 ಕೋಟಿ. ಇದನ್ನು ಸವಿವರವಾಗಿ ಹೇಳುವುದಾದರೆ ಒಂದು ಫೋನ್‌ನ ಬೆಲೆ ಸರಿಸುಮಾರು ಐದು ಲಕ್ಷ ರೂಪಾಯಿಗಳಾಗಿದೆ. ಸಾಮಾನ್ಯ ಐಫೋನ್‌ಗಿಂತ ಭಾರೀ ಬೆಲೆಯನ್ನು ಈ ಫೋನ್‌ಗಳು ಹೊಂದಿವೆ.

ಚಿನ್ನದ ಐಫೋನ್ ಹೇಗಿರಲಿದೆ?
ಐಫೋನ್ ಅಂದ್ರೆ ಓಕೆ, ಆದ್ರೆ ಈ ಚಿನ್ನದ ಫೋನ್ ಹೇಗಿರಲಿವೆ ಎಂಬ ಸಾಮಾನ್ಯ ಪ್ರಶ್ನೆ ಎಲ್ಲರಲ್ಲೂ ಕಾಡಿರುತ್ತದೆ. ಅದರಂತೆ ವಿಶೇಷವಾಗಿ ತಯಾರಿಸಲಾಗಿರುವ ಈ ಐಫೋನ್‌ಗಳಲ್ಲಿ ಪ್ರತಿ ಆಟಗಾರನ ಹೆಸರುಗಳು, ಜರ್ಸಿ ಸಂಖ್ಯೆಗಳು ಮತ್ತು ಅರ್ಜೆಂಟೀನಾದ ಲೋಗೋವನ್ನು ಕೆತ್ತಲಾಗಿದೆ. ಈ ಮೂಲಕ ಫೋನ್ ವಿಶೇಷ ಹಾಗೂ ಆಕರ್ಷಣೀಯ ನೋಟವನ್ನು ಪಡೆದುಕೊಂಡಿದೆ. ಹಾಗೆಯೇ ಐಡಿಸೈನ್ ಗೋಲ್ಡ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೆಸ್ಸಿ ಐಫೋನ್‌ಗಳನ್ನು ಸ್ವೀಕರಿಸುತ್ತಿರುವ ಚಿತ್ರ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಇನ್ನು ಐಡಿಸೈನ್ ಗೋಲ್ಡ್ ಎಂಬುದು ಚಿನ್ನದ ಐಫೋನ್‌ಗಳು, ಐಫೋನ್ ಕೇಸ್‌ಗಳು ಹಾಗೂ ಮುಂತಾದ ವೈಯಕ್ತೀಕರಿಸಿದ ಐಷಾರಾಮಿ ಸ್ಮಾರ್ಟ್‌ಫೋನ್ ಡಿವೈಸ್‌ಗಳನ್ನು ನಿರ್ಮಾಣ ಮಾಡುವ ಹಾಗೂ ಪೂರೈಕೆ ಮಾಡುವ ಸಂಸ್ಥೆಯಾಗಿದೆ.
ಐಫೋನ್ 14 ಫೀಚರ್ಸ್
ಐಫೋನ್ 14 ಫೋನ್ 6.1 ಇಂಚಿನ OLED ಡಿಸ್ಪ್ಲೇ ಹೊಂದಿದ್ದು, ಇದು 60 Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಆಪಲ್ A15 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 6 GB RAM ಹಾಗೂ 128GB, 256GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.

ಇನ್ನು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 12 MP + 12 MP ಸೆನ್ಸರ್ ಆಯ್ಕೆ ನೀಡಲಾಗಿದೆ. ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯಲು ಪ್ಲ್ಯಾಶ್ ಲೈಟ್ ಆಯ್ಕೆ ಇದ್ದು, ಇದರೊಂದಿಗೆ ಸೆಲ್ಫಿಗಾಗಿ ನೀಡಲಾಗಿರುವ 12 MP ಸೆನ್ಸರ್ ಮತ್ತಷ್ಟು ಆಕರ್ಷಕವಾಗಿದೆ. ಜೊತೆಗೆ ಈ ಫೋನ್ 3279 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.


Click it and Unblock the Notifications