ಏರ್ಟೆಲ್ ಗ್ರಾಹಕರಿಗೆ ಈ ಪ್ರಿಪೇಯ್ಡ್ ಪ್ಲ್ಯಾನ್‌ಗಳೆಂದರೆ ಬಹಳ ಅಚ್ಚು ಮೆಚ್ಚು! ಯಾಕಂದ್ರೆ?
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‌ಟೆಲ್ ಈಗಾಗಲೇ ಸಾಕಷ್ಟು ವಿವಿಧ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಜನಪ್ರಿಯಗೊಂಡಿದೆ. ಅದರಲ್ಲೂ ಈ ರೀಚಾರ್ಜ್ ಪ್ಮ್ಯಾನ್‌ನಲ್ಲಿ ಬಳಕೆದಾರರು ಹಲವಾರು ರೀತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಕಡಿಮೆ ದಿನಗಳ ಮಾನ್ಯತೆ ಹೊಂದಿರುವ ಹಾಗೂ ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಈ ಪ್ಲ್ಯಾನ್‌ಗಳು ಸಹ ಭಾರೀ ಸದ್ದು ಮಾಡುತ್ತಿವೆ.
ಹೌದು, ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಲ್ಲೂ ಪ್ರಮುಖವಾಗಿ ಬಹುಪಾಲು ಬಳಕೆದಾರರು 30 ದಿನಗಳ ಹಾಗೂ 28 ದಿನಗಳ ಮಾನ್ಯತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ನಡುವೆ 21 ದಿನಗಳ ಮಾನ್ಯತೆ ಇರುವ ಪ್ಲ್ಯಾನ್‌ಗಳು ಸಹ ಬಹುಪಾಲು ಬಳಕೆದಾರರಿಗೆ ಉತ್ತಮ ಆಯ್ಕೆ ಆಗಿವೆ. ಹಾಗಿದ್ರೆ, ಕಡಿಮೆ ಮಾನ್ಯತೆ ದಿನಗಳು ಹಾಗೂ ಹೆಚ್ಚಿನ ಸೌಲಭ್ಯ ಇರುವ ಈ ವಿಶೇಷ ಪ್ಲ್ಯಾನ್‌ಗಳ ಬಗ್ಗೆ ತಿಳಿಯೋಣ ಬನ್ನಿ.

ಏರ್ಟೆಲ್ 21 ದಿನಗಳ ಪ್ರಿಪೇಯ್ಡ್ ಪ್ಲ್ಯಾನ್: ಏರ್‌ಟೆಲ್‌ನ ವಿವಿಧ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ 21 ದಿನಗಳ ಪ್ಲ್ಯಾನ್ ಸಹ ಪ್ರಮುಖವಾಗಿದೆ. ಇದು 209ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಆಗಿದ್ದು, ನಿತ್ಯವೂ 1GB ಡೇಟಾ ಸೌಲಭ್ಯ ಲಭ್ಯ ಇದೆ. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ನಿತ್ಯವೂ 100 ಎಸ್‌ಎಂಎಸ್ ಗಳ ಪ್ರಯೋಜನ ಈ ಪ್ಲ್ಯಾನ್‌ನಲ್ಲಿದೆ. ಇದಿಷ್ಟು ಮಾತ್ರವಲ್ಲದೆ ಏರ್‌ಟೆಲ್ ಥ್ಯಾಂಕ್ಸ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಸೌಲಭ್ಯ ಸಹ ಲಭ್ಯ.
ಏರ್‌ಟೆಲ್ 24 ದಿನಗಳ ಪ್ರಿಪೇಯ್ಡ್ ಪ್ಲ್ಯಾನ್: 21 ದಿನಗಳಿಗಿಂತ ಕೊಂಚ ಹೆಚ್ಚಿನ ದಿನಗಳ ಮಾನ್ಯತೆ ಬೇಕು ಎಂದರೆ ನೀವು 155ರೂ.ಗಳ ಬೆಲೆ ಹೊಂದಿರುವ ಈ ಪ್ರಿಪೇಯ್ಡ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಇದು 24 ದಿನಗಳ ಮಾನ್ಯತೆ ಹೊಂದಿದ್ದು, ಅನಿಯಮಿತ ಕರೆ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಆಯ್ಕೆಯೊಂದಿಗೆ 1GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಉಚಿತ ಹೆಲೋಟ್ಯೂನ್, ವಿಂಕ್ ಮ್ಯೂಸಿಕ್ ಸೇವೆ ಪಡೆಯಬಹುದು.
ಏರ್ಟೆಲ್ 28 ದಿನಗಳ ಪ್ರಿಪೇಯ್ಡ್ ಪ್ಲ್ಯಾನ್: ಇದು ಹತ್ತಿರತ್ತಿರ ಒಂದು ತಿಂಗಳ ಮಾನ್ಯತೆ ಆಗಿದ್ದು, 179ರೂ.ಗಳ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 2GB ಡೇಟಾ ಸೌಲಭ್ಯ ಹಾಗೂ ಅನಿಯಮಿತ ಕರೆ ಸೌಲಭ್ಯ, 300 ಎಸ್‌ಎಮ್‌ಎಸ್ ಆಯ್ಕೆ ಸೌಲಭ್ಯ ಪಡೆದುಕೊಳ್ಳಬಹುದು. ಈ ಸೌಲಭ್ಯದೊಂದಿಗೆ ಉಚಿತ ಹೆಲೋಟ್ಯೂನ್ ಪ್ರಯೋಜನ ಹಾಗೂ ವಿಂಕ್ ಮ್ಯೂಸಿಕ್‌ಗೆ ಉಚಿತ ಎಂಟ್ರಿ ಪಡೆದುಕೊಳ್ಳಬಹುದು.
ಇದರಲ್ಲಿ 5G ಸೌಲಭ್ಯ ಇಲ್ಲ: ಏರ್‌ಟೆಲ್ ಗ್ರಾಹಕರಿಗಾಗಿ 5G ನೆಟ್‌ವರ್ಕ್ ಸೇವೆಗಳನ್ನು ಆರಂಭ ಮಾಡಿದೆಯಾದರೂ ಸಹ ಈ ಮೇಲೆ ತಿಳಿಸಿದ ಯಾವುದೇ ಪ್ಲ್ಯಾನ್‌ನಲ್ಲಿ ಗ್ರಾಹಕರು 5G ನೆಟ್‌ವರ್ಕ್‌ಗೆ ಎಂಟ್ರಿಯಾಗಲು ಸಾಧ್ಯವಾಗುವುದಿಲ್ಲ. ಯಾಕೆಂದರೆ 5G ನೆಟ್‌ವರ್ಕ್ ಸೇವೆ ಪಡೆದುಕೊಳ್ಳಬೇಕು ಎಂದರೆ ಕನಿಷ್ಟ 239 ರೂ.ಗಳ ಪ್ಲ್ಯಾನ್‌ನೊಂದಿಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.
ಈ ಮೇಲೆ ತಿಳಿಸಿದ ಪ್ಲ್ಯಾನ್‌ಗಳು ಕಡಿಮೆ ಡೇಟಾ ಪ್ರಯೋಜನ ಹೊಂದಿದ್ದು, ಸಿಮ್ ಅನ್ನು ಸಕ್ರಿಯವಾಗಿ ಇಡಲು ಅಥವಾ ಕರೆ ಉದ್ದೇಶಕ್ಕಾಗಿ ಮಾತ್ರ ಫೋನ್ ಬಳಕೆ ಮಾಡುವವರಿಗೆ ಇವು ಉತ್ತಮ ಆಯ್ಕೆ ಆಗಿವೆ. ಅದಾಗ್ಯೂ ನಿಮಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ನಿತ್ಯವೂ 1.5GB ಡೇಟಾ ಸೌಲಭ್ಯ ಬೇಕು ಎಂದಾದರೆ 299ರೂ, 479ರೂ, 519ರೂ, 666ರೂ ಹಾಗೂ 719ರೂ ಮತ್ತು 779ರೂ,ಗಳ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು.


Click it and Unblock the Notifications








