ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್‌ಗಳು; ಮಹಿಳೆಯರಿಗಂತೂ ಅಗತ್ಯ!

|

ಮಹಾ ನಗರಗಳಲ್ಲಿ ಉದ್ಯೋಗ ಇಲ್ಲದೆ ಜೀವನ ಮಾಡುವುದು ಅಸಾಧ್ಯ. ಅದರಲ್ಲೂ ವಿವಿಧ ಕಂಪೆನಿಗಳು ನಿರ್ಮಾಣ ಆಗುತ್ತಿದ್ದಂತೆ ಹಗಲು ರಾತ್ರಿ ಎನ್ನದೆ ದಿನ ಪೂರ್ತಿ ಕೆಲಸ ಮಾಡುವ ವಾಡಿಕೆ ಸೃಷ್ಟಿಯಾಗಿದೆ. ಹಾಗೆಯೇ ತಡರಾತ್ರಿವರೆಗೂ ಕೆಲಸ ಮಾಡಿ ಮನೆಗೆ ಹೋಗುವ ಅದೆಷ್ಟೋ ಕಾರ್ಮಿಕರು ಹಲವು ಸಮಸ್ಯೆ ಎದುರಿಸಿದರೆ, ಸೂರ್ಯ ಮೂಡುವ ಮುನ್ನವೇ ಆಫೀಸಿಗೆ ಬರಬೇಕಾದ ಅನಿವಾರ್ಯತೆ ಮತ್ತಷ್ಟು ಜನರಿಗೆ ಇದೆ. ಇನ್ನು ಕೆಲಸಕ್ಕೆ ಹೋಗುವಾಗಷ್ಟೇ ಅಲ್ಲದೆ, ಎಲ್ಲಿಯಾದರೂ ಸಹ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಯಾವಾಗಲು ಎಚ್ಚರಿಕೆ ವಹಿಸುವುದು ಅಗತ್ಯ. ಇದಕ್ಕಾಗಿ ಕೆಲವು ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಖರೀದಿಸಿದರೆ ಒಳಿತು.

ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್‌ಗಳು; ಮಹಿಳೆಯರಿಗಂತೂ ಅಗತ್ಯ!

ಹೌದು, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ವೈಯಕ್ತಿಕ ಸುರಕ್ಷತಾ ತಂತ್ರಜ್ಞಾನಕ್ಕೆ ಆಸಕ್ತಿ ತೋರುವಂತೆ ಮಾಡಿವೆ. ಅದರಲ್ಲೂ ರಸ್ತೆಯಲ್ಲಿ ನಡೆದು ಹೋಗುವಾಗ ಯಾರಾದರೂ ಬಂದು ದಾಳಿ ಮಾಡುತ್ತಾರೆ ಎಂದುಕೊಂಡು ಚಾಕು ಅಥವಾ ಇನ್ನಿತರೆ ಆಯುಧಗಳನ್ನು ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಇದಕ್ಕೆಂದೇ ಪ್ರಮುಖ ಸ್ಮಾರ್ಟ್‌ ಗ್ಯಾಜೆಟ್‌ಗಳಿದ್ದು, ಇವುಗಳ ಮೂಲಕ ಖಂಡಿತಾ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು. ಹಾಗಿದ್ರೆ, ಆ ಡಿವೈಸ್‌ಗಳು ಯಾವುದು, ಅವುಗಳಿಂದ ಆಗುವ ಪ್ರಯೋಜನ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಬರ್ಡಿ ಕೀಚೈನ್

ಬರ್ಡಿ ಕೀಚೈನ್ ಮಹಿಳೆಯರಿಗೆ ತುಂಬಾ ಅನುಕೂಲಕರವಾದ ಗ್ಯಾಜೆಟ್‌ ಆಗಿದೆ. ಇದರಲ್ಲಿ ಸಕ್ರಿಯಗೊಳಿಸಿದಾಗ ಅಲಾರಾಂ ಹಾಗೂ ಸ್ಟ್ರೋಬ್ ಲೈಟ್ ಅನ್ನು ಹೊರಸೂಸುವ ಆಯ್ಕೆ ನೀಡಲಾಗಿದ್ದು, ಈ ಮೂಲಕ ಯಾರಾದರೂ ದಾಳಿ ಮಾಡಲು ಬಂದವರ ಮೇಲೆ ಸಮರ ಸಾರಬಹುದಾಗಿದೆ. ಈ ಗ್ಯಾಜೆಟ್‌ ತುಂಬಾ ಹಗುರವಾಗಿದ್ದರೂ ಸಹ ದೊಡ್ಡ ಸೌಂಡ್ ನೀಡುವ ಮೂಲಕ ಜನರನ್ನು ಎಚ್ಚರಿಸುತ್ತದೆ. ಹಾಗೆಯೇ ಪ್ರಕಾಶಮಾನವಾದ ಬೆಳಕು ದಾಳಿಕೋರರನ್ನು ತಡೆಯಲು ಸಹಕಾರಿ.

ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್‌ಗಳು; ಮಹಿಳೆಯರಿಗಂತೂ ಅಗತ್ಯ!

ಸೇಬರ್ ಡೋರ್, ವಿಂಡೋ ಅಲಾರ್ಮ್ ಕಿಟ್

ಸೇಬರ್ ಡೋರ್, ವಿಂಡೋ ಅಲಾರ್ಮ್ ಕಿಟ್ ಅನ್ನು ನೀವು ಮಲಗುವ ಕೋಣೆ ಅಥವಾ ನೀವು ವಾಸ ಮಾಡುವ ಮನೆಯ ಬಾಗಿಲಿಗೆ ಬಳಕೆ ಮಾಡಬಹುದಾಗಿದೆ. ಇದರ ವಿಶೇಷತೆ ಎಂದರೆ ಯಾರೇ ದಾಳಿ ಮಾಡಲು ಬಂದರೆ ಅಥವಾ ಬಾಗಿಲ ಬಳಿ ಅನುಮಾನಾಸ್ಪದವಾಗಿ ಕಂಡುಬಂದರೆ ಭಾರೀ ಶಬ್ಧ ಮಾಡುತ್ತದೆ. ಈ ಸೌಂಡ್‌ ಎಷ್ಟರಮಟ್ಟಿದೆ ಇರುತ್ತದೆ ಎಂದರೆ ಸಾವಿರ ಅಡಿ ದೂರದಲ್ಲಿದ್ದರೂ ಸ್ಪಷ್ಟವಾಗಿ ಕೇಳುತ್ತದೆ.

ಗೇರ್‌ಲೈಟ್ಸ್‌ ಟ್ಯಾಕ್ಟಿಕಲ್ ಫ್ಲ್ಯಾಶ್‌ಲೈಟ್‌

ಗೇರ್‌ಲೈಟ್ಸ್‌ ಟ್ಯಾಕ್ಟಿಕಲ್ ಫ್ಲ್ಯಾಶ್‌ಲೈಟ್‌ ಅನ್ನು ಸಾಮಾನ್ಯವಾಗಿ ಪೊಲೀಸ್ ಹಾಗೂ ಯೋಧರು ಬಳಕೆ ಮಾಡುತ್ತಾರೆ. ಆದರೂ ನಾಗರೀಕರು ಸಹ ಇದನ್ನು ಬಳಕೆ ಮಾಡಬಹುದಾಗಿದ್ದು, ಈ ಮೂಲಕ ಹಲವಾರು ಪ್ರಯೋಜನ ಪಡೆಯಬಹುದಾಗಿದೆ. ಅಂದರೆ ರಾತ್ರಿ ವೇಳೆ ನೀವು ಸಂಚಾರ ಮಾಡುತ್ತಿದ್ದರೆ ನಿಮ್ಮ ಎದುರಾಳಿಗೆ ಬೆಳಕನ್ನು ಪ್ರದರ್ಶಿಸುವ ಮೂಲಕ ಅವರಿಗೆ ರಸ್ತೆ ಹಾಗೂ ನೀವು ಸರಿಯಾಗಿ ಕಾಣದಂತೆ ಮಾಡಬಹುದಾಗಿದೆ. ಹಾಗೆಯೇ ಇತರರು ನಿಮ್ಮ ಸ್ಥಳದ ಬಗ್ಗೆ ತಿಳಿದುಕೊಂಡು ಅಲ್ಲಿಗೆ ಬರಲು ಬಹಳ ಸಹಕಾರಿಯಾಗಲಿದೆ. ಅಗತ್ಯ ಎಂದಾದರೆ ಇದನ್ನು ಆಯುಧವಾಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್‌ಗಳು; ಮಹಿಳೆಯರಿಗಂತೂ ಅಗತ್ಯ!

ಗೆಟ್ ಫ್ಲೇರ್

ಗೆಟ್ ಫ್ಲೇರ್ ಎನ್ನುವುದು ವೈಯಕ್ತಿಕ ಸುರಕ್ಷತಾ ಡಿವೈಸ್ ಆಗಿದ್ದು, ಇದು ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುವ ಜೊತೆಗೆ ಅಪಾಯಕಾರಿ ಸಂದರ್ಭದಲ್ಲಿ ಸಹಾಯಕ್ಕೆ ಬರಲಿದೆ. ಈ ಬ್ರೇಸ್ಲೆಟ್‌ನ ಕೆಳಭಾಗದಲ್ಲಿ ಬಟನ್‌ಗಳಿದ್ದು, ಅದನ್ನು ಒತ್ತಿದಾಗ ಅದು ಬ್ಲೂಟೂತ್ ಮೂಲಕ ಈಗಾಗಲೇ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಆಪ್‌ಗೆ ಮಾಹಿತಿ ರವಾನಿಸುತ್ತದೆ. ನಂತರ ನೀವು ಆಯ್ಕೆ ಮಾಡಿ ಪಟ್ಟಿ ಮಾಡಿರುವ ಸಂಪರ್ಕಗಳಿಗೆ ಸಂದೇಶ ರವಾನೆ ಮಾಡಲಿದ್ದು, ಈ ಮೂಲಕ ಸಂಬಂಧಿಸಿದವರು ತಕ್ಷಣಕ್ಕೆ ನಿಮ್ಮ ಸಹಾಯಕ್ಕೆ ಬರಲು ಅನುಕೂಲ ಮಾಡಿಕೊಡುತ್ತದೆ.

Best Mobiles in India

English summary
Here are some gadgets you can use to protect yourself. These will help you in difficult times.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X