Home
ಸುದ್ದಿಜಾಲ

Vi Telecom: ಉತ್ತಮ ಡೇಟಾ, ಹೆಚ್ಚಿನ ಮಾನ್ಯತೆಗೆ ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್‌!

ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಅತ್ಯುತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸಿರುವ ವಿ ಟೆಲಿಕಾಂ(Vi Telecom) ಇತರೆ ಟೆಲಿಕಾಂಗಳಾದ ಏರ್‌ಟೆಲ್‌, ಜಿಯೋಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿದೆ. ಅದರಂತೆ ವೊಡಾಫೋನ್ ಐಡಿಯಾದ ಈ ಪ್ಲ್ಯಾನ್‌ಗಳು‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ಹೌದು, ಗ್ರಾಹಕರಿಗೆ ಹೆಚ್ಚಿನ ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಒದಗಿಸುವ ಹಿನ್ನೆಲೆ ವಿ ಟೆಲಿಕಾಂ ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅತ್ಯುತ್ತಮ ಪ್ರಿಪೇಯ್ಡ್ ಪ್ಯಾಕ್‌ಗಳನ್ನು ಪಟ್ಟಿ ಮಾಡಿದೆ. ಈ ಪ್ರಿಪೇಯ್ಡ್ ಪ್ಲ್ಯಾನ್‌ಗಳು ಬಳಕೆದಾರರ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ಇದರೊಂದಿಗೆ ಅನಿಯಮಿತ ಕರೆ, ಡೇಟಾ ಮತ್ತು ಹೆಚ್ಚಿನ ಮಾನ್ಯತೆಯ ಅವಧಿ ಹೊಂದಿವೆ. ಈ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಹಾಗಿದ್ರೆ, ಯಾವುವು ಆ ಬೆಸ್ಟ್‌ ಪ್ಲ್ಯಾನ್‌? ಎಂದು ತಿಳಿಯಲು ಈ ಲೇಖನ ಓದಿರಿ.

Vi Telecom: ಉತ್ತಮ ಡೇಟಾ, ಹೆಚ್ಚಿನ ಮಾನ್ಯತೆಗೆ ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್

ವಿ ಟೆಲಿಕಾಂ ನ 299ರೂ.ಗಳ ಪ್ಲ್ಯಾನ್‌: ವಿ ಟೆಲಿಕಾಂ ನಲ್ಲಿ ಅತ್ಯಂತ ಜನಪ್ರಿಯ ಪ್ಲ್ಯಾನ್‌ನಲ್ಲಿ ಇದು ಪ್ರಮುಖವಾಗಿದೆ. ಈ ಪ್ಲ್ಯಾನ್‌ ಮೂಲಕ ಅನಿಯಮಿತ ಕರೆ ಸೌಲಭ್ಯ, 1.5GB ದೈನಂದಿನ ಡೇಟಾದ ಮೂಲಕ ತಡೆರಹಿತ ಇಂಟರ್ನೆಟ್ ಬ್ರೌಸಿಂಗ್ ಅನುಭವ, ಪ್ರತಿ ದಿನ 100 ಎಸ್‌ಎಮ್ಎಸ್‌ ನೀಡಲಿದೆ. ಇದರಿಂದಾಗಿ ಗ್ರಾಹಕರು ಪಠ್ಯ ಸಂದೇಶಗಳ ಮೂಲಕ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಬಹುದು. ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆ ಹೊಂದಿದೆ.

ವಿ ಟೆಲಿಕಾಂ ನ 479ರೂ.ಗಳ ಪ್ಲ್ಯಾನ್‌: ಇನ್ನು ದೀರ್ಘಾವಧಿಯ ಮಾನ್ಯತೆ ಅಗತ್ಯ ಇರುವವರಿಗೆ ಈ ಪ್ಲ್ಯಾನ್‌ ಬೆಸ್ಟ್. ಇದರಲ್ಲಿ 299ರೂ.ಗಳ ಪ್ಲ್ಯಾನ್‌ನಂತೆಯೇ ಅನಿಯಮಿತ ಕರೆಗಳು, 1.5GB ದೈನಂದಿನ ಡೇಟಾ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಆಯ್ಕೆ ನೀಡುತ್ತದೆ. ಆದರೆ ಇದರಲ್ಲಿ ಕಂಡು ಬರುವ ಪ್ರಮುಖ ಸೌಲಭ್ಯ ಎಂದರೆ ಮಾನ್ಯತೆ ದಿನಗಳು. ಈ ಪ್ಲ್ಯಾನ್‌ 56 ದಿನಗಳ ವಿಸ್ತೃತ ಅವಧಿಯನ್ನು ಹೊಂದಿದ್ದು, ಆಗಾಗ್ಗೆ ರೀಚಾರ್ಜ್‌ ಮಾಡಿಸುವ ತಲೆನೋವು ಇರುವುದಿಲ್ಲ.

Vi Telecom: ಉತ್ತಮ ಡೇಟಾ, ಹೆಚ್ಚಿನ ಮಾನ್ಯತೆಗೆ ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್

ವಿ ಟೆಲಿಕಾಂ ನ 719ರೂ.ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 1.5GB ದೈನಂದಿನ ಡೇಟಾದೊಂದಿಗೆ ಅನಿಯಮಿತ ಕರೆ ಸೌಲಭ್ಯ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೇರಿದಂತೆ ಹಿಂದಿನ ಎರಡು ಯೋಜನೆಗಳಂತೆಯೇ ಅದೇ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಆದರೆ, ಈ ಪ್ಲ್ಯಾನ್‌ ಬರೋಬ್ಬರಿ 84 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರಲಿದೆ. ಅಂದರೆ ಸುಮಾರು ಮೂರು ತಿಂಗಳ ಅಡೆತಡೆಯಿಲ್ಲದ ಸೇವೆ ಈ ಮೂಲಕ ಲಭ್ಯ ಆಗುತ್ತದೆ.

ವಿ ಹೀರೋದ ಅನಿಯಮಿತ ಪ್ರಯೋಜನಗಳು: ಮೇಲಿನ ಪ್ಲಾನ್‌ಗಳ ಜೊತೆಗೆ ವಿ ಹೀರೋ (Vi Hero) ಅನ್‌ಲಿಮಿಟೆಡ್ ಪ್ರೋಗ್ರಾಮ್‌ನ ಅಡಿಯಲ್ಲಿ ಗ್ರಾಹಕರು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಈ ವಿಭಾಗದಲ್ಲಿ ವಾರಾಂತ್ಯದ ಡೇಟಾ ರೋಲ್‌ಓವರ್ ಆಯ್ಕೆ ಇದ್ದು, ವಾರದ ದಿನಗಳಿಂದ ವಾರಾಂತ್ಯದವರೆಗೆ ಯಾವುದೇ ಬಳಕೆಯಾಗದ ಡೇಟಾವನ್ನು ಮುಂದಕ್ಕೆ ಸಾಗಿಸಲು ಅನುವು ಮಾಡಿಕೊಡುತ್ತದೆ.

ಜೊತೆಗೆ ಬಿಂಗ್‌ ಆಲ್‌ ನೈಟ್ಸ್‌ (Binge All Night) ಬಳಕೆದಾರರಿಗೆ 12 am ಮತ್ತು 6 am ನಡುವೆ ಯಾವುದೇ ನಿರ್ಬಂಧಗಳಿಲ್ಲದೆ ಅನಿಯಮಿತ ಡೇಟಾ ಬಳಕೆಯನ್ನು ಆನಂದಿಸಲು ಅನುವು ಮಾಡಿಕೊಡಲಾಗುತ್ತದೆ. ಡೇಟಾ ಡಿಲೈಟ್‌ಗಳು ಗ್ರಾಹಕರಿಗೆ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಮತ್ತು ಕಾಲಕಾಲಕ್ಕೆ ವಿಶೇಷ ಸೌಲಭ್ಯವನ್ನು ನೀಡುತ್ತಾ ಬರುತ್ತಿದ್ದು, ಈ ಮೂಲಕ ಮೇಲಿನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಮೌಲ್ಯವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

Vi Telecom: ಉತ್ತಮ ಡೇಟಾ, ಹೆಚ್ಚಿನ ಮಾನ್ಯತೆಗೆ ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್

ಇನ್ನುಳಿದಂತೆ ಏರ್‌ಟೆಲ್‌ ಹಾಗೂ ಜಿಯೋ 5G ಸೇವೆ ನೀಡುವ ಮೂಲಕ ಸಾಕಷ್ಟು ಗ್ರಾಹಕರನ್ನು ಹೆಚ್ಚಿಗೆ ಮಾಡಿಕೊಳ್ಳಲು ಮುಂದಾಗಿವೆ. ಆದರೆ ವಿ ಇನ್ನೂ ಸಹ ಯಾವುದೇ 5G ಸೇವೆ ನೀಡುವ ಸ್ಥಿತಿಯಲ್ಲಿಲ್ಲ.ಆದರೆ, ಇರುವ ಸೇವೆಯಲ್ಲಿಯೇ ಅತ್ಯುತ್ತಮ ಪ್ಲ್ಯಾನ್‌ಗಳನ್ನು ಹಾಗೂ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾ ಬರುತ್ತಿದ್ದು, ಸಾಕಷ್ಟು ಗ್ರಾಹಕರು ಇದರಿಂದ ತೃಪ್ತರಾಗಿದ್ದಾರೆ.

Best Mobiles in India

English summary
Providing more transparency and convenience to customers, Vi has recently listed the best prepaid packs on its official website. These prepaid plans cater to different needs of users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+