BSNL ಗ್ರಾಹಕರಿಗೆ 100 ರೂ. ಒಳಗಿನ ಈ 4G ಡೇಟಾ ಪ್ಲ್ಯಾನ್‌ಗಳಿಂದ ಭಾರೀ ಪ್ರಯೋಜನ
ಭಾರತದಲ್ಲಿ ಯಾವುದೇ ಸಿಮ್ ಏನೇ ಆಫರ್ ನೀಡಿದರೂ ಸಹ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ತನ್ನದೇ ಆದ ವಿಶೇಷ ಸ್ಥಾನ ಮಾನ ಇದೆ. ಯಾಕೆಂದರೆ ಅಗ್ಗದ ದರದಲ್ಲಿ ಸಾಕಷ್ಟು ಪ್ರಯೋಜನ ನೀಡುವ ಬಿಎಸ್ಎನ್‌ಎಲ್ ಅಗ್ರ ಸ್ಥಾನದಲ್ಲಿದ್ದು, ಇತರೆ ಟೆಲಿಕಾಂ ಸೇವೆಗಳಾದ ಏರ್‌ಟೆಲ್, ಜಿಯೋ, ವಿ ಗೆ ಪೈಪೋಟಿ ನೀಡುತ್ತಿದೆ.
ಹೌದು, ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ನಾಲ್ಕು ವಿಶೇಷ 4G ಡೇಟಾ ವೋಚರ್‌ಗಳನ್ನು ಈಗಾಗಲೇ ಹೊಂದಿದ್ದು, ಈ ಮೂಲಕ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತ ವೋಚರ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ಈ ವೋಚರ್ 100 ರೂ. ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಇತರೆ ಖಾಸಗಿ ಟೆಲಿಕಾಂ ಕಂಪನಿಗಳು ಸುಂಕವನ್ನು ಹೆಚ್ಚಿಸುತ್ತಿರುವ ಸಮಯದಲ್ಲಿ ಈ ರೀತಿಯ ಯೋಜನೆಗಳು ಗ್ರಾಹಕರಿಗೆ ಎಂದಿಗೂ ವರದಾನವೇ. ಅದರಂತೆ ಈ ಪ್ರಮುಖ ವೋಚರ್‌ಗಳ ವಿವರ ಇಲ್ಲಿದೆ.

ಈ ಪ್ಲ್ಯಾನ್ ಖರೀದಿ ಮಾಡುವ ಮುನ್ನ ಈ ವಿಷಯ ಗಮನಕ್ಕಿರಲಿ
ಈ ಕೆಳಗೆ ನೀಡಲಾದ ಡೇಟಾ ವೋಚರ್‌ಗಳು 4G ಸ್ವರೂಪದಲ್ಲಿರುವುದಿಲ್ಲ. ನೀವು BSNL ನ 4G ನೆಟ್ವರ್ಕ್ ಕವರೇಜ್ ಅಡಿಯಲ್ಲಿ ವಾಸಿಸುತ್ತಿದ್ದರೆ ಮಾತ್ರ 4G ನೆಟ್ವರ್ಕ್ ಸೇವೆಯನ್ನು ಪಡೆಯಬಹುದು. ಇಲ್ಲವಾದರೆ, ಯಾವ ನೆಟ್‌ವರ್ಕ್ ನಿಮ್ಮ ವ್ಯಾಪ್ತಿಯಲ್ಲಿ ಇರಲಿದೆಯೋ ಅಂದರೆ 3G ಅಥವಾ 2G ಸೇವೆಯನ್ನು ಪಡೆಯಬಹುದು. ಅದರಂತೆ ನೀವು BSNL ಗ್ರಾಹಕರಾಗಿದ್ದರೆ 100 ರೂ. ಒಳಗೆ ರೀಚಾರ್ಜ್ ಮಾಡಬಹುದಾದ ಯೋಜನೆಗಳನ್ನು ಗಮನಿಸೋಣ.
16 ರೂ. ಗಳ ರೀಚಾರ್ಜ್ ಪ್ಲ್ಯಾನ್
16 ರೂ. ಗಳ ರೀಚಾರ್ಜ್‌ಪ್ಲ್ಯಾನ್ ಬಿಎಸ್‌ಎನ್‌ಎಲ್ ಬಳಕೆದಾರರ ನೆಚ್ಚಿನ ಪ್ಲ್ಯಾನ್ ಆಗಿದೆ. ಯಾಕೆಂದರೆ ಇದರಲ್ಲಿ ಬಳಕೆದಾರರು ಒಂದು ದಿನದ ಮಾನ್ಯತೆಯೊಂದಿಗೆ 2GB ಡೇಟಾ ಪಡೆದುಕೊಳ್ಳಬಹುದು. ಯಾರು ಈಗಾಗಲೇ ಬಳಕೆ ಮಾಡುತ್ತಿರುವ ಪ್ಲ್ಯಾನ್‌ನಲ್ಲಿ ಡೇಟಾವನ್ನು ಬೇಗನೆ ಖಾಲಿ ಮಾಡುತ್ತಾರೋ ಅವರಿಗೆ ಅಂದರೆ ಡೇಟಾ ಬೂಸ್ಟ್ ಅನ್ನು ಬಯಸುವವರಿಗೆ ಈ ಪ್ಲ್ಯಾನ್ ಸೂಕ್ತವಾಗಿದೆ.
94 ರೂ. ಗಳ ರೀಚಾರ್ಜ್ ಪ್ಲ್ಯಾನ್
100 ರೂ. ಒಳಗೆ ರೀಚಾರ್ಜ್ ಮಾಡಬಹುದಾದ ಪ್ಲ್ಯಾನ್‌ನಲ್ಲಿ 94 ರೂ. ಗಳ ರೀಚಾರ್ಜ್ ಪ್ಲ್ಯಾನ್ ಸಹ ಪ್ರಮುಖವಾಗಿದೆ. ಇದನ್ನು ಬಹುಪಾಲು ಗ್ರಾಹಕರು ಬಳಕೆ ಮಾಡುತ್ತಾರೆ. ಈ ಪ್ಲ್ಯಾನ್ ಮೂಲಕ ಗ್ರಾಹಕರು 30 ದಿನಗಳ ಸೇವಾ ಮಾನ್ಯತೆಯೊಂದಿಗೆ 3GB ಪಡೆದುಕೊಳ್ಳಬಹುದಾಗಿದ್ದು, 200 ನಿಮಿಷಗಳ ವಾಯ್ಸ್ ಕರೆಯ ಸೌಲಭ್ಯವನ್ನೂ ಸಹ ಪಡೆಯಬಹುದು.

97 ರೂ. ಗಳ ರೀಚಾರ್ಜ್ ಪ್ಲ್ಯಾನ್
97 ರೂ. ಗಳ ಮೂರನೇ ರೀಚಾರ್ಜ್ ಪ್ಲ್ಯಾನ್ ಸಹ ಬಳಕೆದಾರರಿಗೆ ಹಲವಾರು ಅನುಕೂಲ ಮಾಡಿಕೊಡುತ್ತದೆ. ಯಾಕೆಂದರೆ ಈ ಪ್ಲ್ಯಾನ್‌ನಲ್ಲಿ 15 ದಿನಗಳ ಮಾನ್ಯತೆಯೊಂದಿಗೆ ಗ್ರಾಹಕರು 2GB ದೈನಂದಿನ ಡೇಟಾ ವನ್ನು ಪಡೆದುಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ, ಅನಿಯಮಿತ ವಾಯ್ಸ್ ಕಾಲ್ ಸೇವೆ ಸಹ ಈ ಪ್ಲ್ಯಾನ್‌ನಿಂದ ಲಭ್ಯವಾಗುತ್ತದೆ. ಈ ಮೂಲಕ ಗ್ರಾಹಕರು 15 ದಿನಗಳ ವರೆಗೆ ಬೇರೆ ಯಾವುದೇ ರೀಚಾರ್ಜ್ ಪ್ಲ್ಯಾನ್ ಮೊರೆಹೋಗಬೇಕಿಲ್ಲ.
98 ರೂ. ಗಳ ರೀಚಾರ್ಜ್ ಪ್ಲ್ಯಾನ್
100 ರೂ. ಒಳಗೆ ರೀಚಾರ್ಜ್ ಮಾಡಬಹುದಾದ ಪ್ಲ್ಯಾನ್‌ನಲ್ಲಿ ನಾಲ್ಕನೇ ಪ್ಲ್ಯಾನ್ ಎಂದರೆ 98 ರೂ. ಗಳ ರೀಚಾರ್ಜ್ ಪ್ಲ್ಯಾನ್. ಈ ಪ್ಲ್ಯಾನ್ 22 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾ ಪಡೆಯಬಹುದು. ಹಾಗೆಯೇ FUP ಡೇಟಾ ಬಳಕೆಯ ನಂತರ ವೇಗವು 40 Kbps ಗೆ ಇಳಿಯುತ್ತದೆ. ಈ ಪ್ಲ್ಯಾನ್‌ನಲ್ಲಿ ಯಾವುದೇ ಮೆಸೆಜ್ ಹಾಗೂ ವಾಯ್ಸ್ ಕಾಲ್ ಸೌಲಭ್ಯ ಇರುವುದಿಲ್ಲ.

ಇನ್ನು ಇದು ಸಾಕಾಗುವುದಿಲ್ಲ ಇನ್ನೂ ಹೆಚ್ಚಿನ ಡೇಟಾ ಬೇಕು ಎನ್ನುವ ಗ್ರಾಹಕರು 100 ರ ಗಡಿ ದಾಟಬೇಕಿದೆ. ಅಂದರೆ ಪ್ರಿಪೇಯ್ಡ್ ಗ್ರಾಹಕರು 151 ರೂ, 198 ರೂ, 251 ರೂ. ಗಳು ಹಾಗೂ 398 ರೂ, 1,151 ರೂ. ಗಳ ರೀಚಾರ್ಜ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳಬಹುದು. ಈ ಪ್ಲ್ಯಾನ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಹ ಲಭ್ಯವಾಗಲಿದೆ.


Click it and Unblock the Notifications








