Home
ಸುದ್ದಿಜಾಲ

ಪೂರ್ಣ ಒಂದು ತಿಂಗಳ ವ್ಯಾಲಿಡಿಟಿಗೆ ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ ಯಾವುದು?

ದೇಶದಲ್ಲಿ ಜಿಯೋ, ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಭಿನ್ನ ಶ್ರೇಣಿಯಲ್ಲಿ ಪ್ರೀಪೇಯ್ಡ್‌ ಯೋಜನೆ ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿವೆ. ಅವುಗಳಲ್ಲಿ ಕೆಲವೊಂದು ಅತ್ಯುತ್ತಮ ವ್ಯಾಲಿಡಿಟಿ ಪ್ರಯೋಜನ ಪಡೆದಿದ್ದರೆ, ಮತ್ತೆ ಕೆಲವು ಬೆಸ್ಟ್ ಡೇಟಾ ಸೌಲಭ್ಯವನ್ನು ಒಳಗೊಂಡಿವೆ. ಅದಾಗ್ಯೂ, ಬಹುತೇಕ ಬಳಕೆದಾರರು 30 ದಿನಗಳ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್‌ ಯೋಜನೆ ಗಳನ್ನು ರೀಚಾರ್ಜ್ ಮಾಡಲು ಮುಂದಾಗುತ್ತಾರೆ.

ಯೋಜನೆಗಳು

ಟೆಲಿಕಾಂ ಸಂಸ್ಥೆಗಳು 30 ದಿನಗಳ ವ್ಯಾಲಿಡಿಟಿ ಪ್ರಯೋಜನದ ಪ್ರೀಪೇಯ್ಡ್‌ ಆಯ್ಕೆಗಳನ್ನು ನೀಡಿವೆ. ಈ ಯೋಜನೆಗಳು ವ್ಯಾಲಿಡಿಟಿ ಜೊತೆಗೆ ಆಕರ್ಷಕ ಡೇಟಾ, ವಾಯಿಸ್‌ ಕರೆ ಸೌಲಭ್ಯಗಳನ್ನು ಪಡೆದಿವೆ. ಇನ್ನು ಪೂರ್ಣ ಒಂದು ತಿಂಗಳ ವ್ಯಾಲಿಡಿಟಿಯ ಸೌಲಭ್ಯದ ಜಿಯೋ, ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳ ಯೋಜನೆಗಳು ಹೆಚ್ಚು ಕಡಿಮೆ 300 ರೂ. ಗಳ ಆಸುಪಾಸಿ ನಲ್ಲಿ ಇವೆ. ಹಾಗಾದರೆ, 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಅತ್ಯುತ್ತಮ ಪ್ಲ್ಯಾನ್‌ಗಳ ಬಗ್ಗೆ ಹಾಗೂ ಇತರೆ 300ರೂ. ಒಳಗಿನ ಯೋಜನೆಗಳ ಬಗ್ಗೆ ತಿಳಿಯೋಣ ಬನ್ನಿರಿ.

ಜಿಯೋ 259ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ 259ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 259ರೂ ಬೆಲೆಯ ಕ್ಯಾಲೆಂಡರ್‌ ತಿಂಗಳ ಮಾನ್ಯತೆಯ ಪ್ಲಾನ್‌ ಪ್ರತಿ ತಿಂಗಳು ಕೇವಲ ಒಂದು ರೀಚಾರ್ಜ್ ದಿನಾಂಕವನ್ನು ನೆನಪಿಟ್ಟುಕೊಳ್ಳಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ 1.5GB ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ನೀಡಲಿದ್ದು, ನಂತರ 64Kbps ಗೆ ಡೇಟಾ ವೇಗವನ್ನು ಇಳಿಯುತ್ತದೆ. ಇದು ಅನಿಯಮಿತ ಧ್ವನಿ ಕರೆಗಳು, ದೈನಂದಿನ 100 ಎಸ್‌ಎಮ್‌ಎಸ್‌ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 296ರೂ. ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯು 25 GB ಡೇಟಾವನ್ನು ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಚಂದಾದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನದ ಪ್ರಯೋಗವನ್ನು ಪಡೆಯುತ್ತಾರೆ. ಜೊತೆಗೆ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ. ಫಾಸ್ಟ್‌ಟ್ಯಾಗ್ ರೀಚಾರ್ಜ್‌ಗಳಲ್ಲಿ ಚಂದಾದಾರರು ರೂ 100 ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 247ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 247ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 247ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಆಗಲಿದೆ. ಇದರೊಂದಿಗೆ ಲೋಕಲ್ ಹಾಗೂ ಎಸ್‌ಟಿಡಿ ವಾಯಿಸ್‌ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ ಒಟ್ಟಾರೇ 50 GB ಹೈ ಸ್ಪೀಡ್‌ ಡೇಟಾ ಪ್ರಯೋಜನ ಸಹ ದೊರೆಯುತ್ತದೆ. ನಿಗದಿತ ಡೇಟಾ ಮುಗಿದ ಬಳಿಕ 80 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ.

ವಿ ಟೆಲಿಕಾಂನ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಬಿಎಸ್‌ಎನ್‌ಎಲ್‌ 184ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 184ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 184ರೂ. ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 1GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ Lystn ಪಾಡ್‌ಕ್ಯಾಸ್ಟ್‌ನ ಹೆಚ್ಚುವರಿ ಸಿಗಲಿದೆ.

ಬಿಎಸ್‌ಎನ್‌ಎಲ್‌ 185ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 185ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 185ರೂ. ಯೋಜನೆಯು ಸಹ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 1GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ ಗ್ರಾಹಕರು M/S ಆನ್‌ಮೊಬೈಲ್ ಗ್ಲೋಬಲ್ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್‌ ಟ್ಯೂನ್ಸ್‌ನಿಂದ ಪ್ರೋಗ್ರೆಸ್ಸಿವ್ ವೆಬ್ APP (PWA) ನಲ್ಲಿ ಸವಾಲುಗಳ ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 186ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 186ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 186ರೂ. ಯೋಜನೆಯು ಸಹ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 1GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ ಹಾರ್ಡಿ ಗೇಮ್ಸ್ ಮತ್ತು BSNL ಟ್ಯೂನ್‌ಗಳ ಹೆಚ್ಚುವರಿ ಪ್ರಯೋಜನ ಲಭ್ಯ.

Best Mobiles in India

English summary
List Of Cheapest 30 Days Validity Plans From Jio, Airtel and BSNL.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+