ಈ ತಿಂಗಳು ಲಾಂಚ್ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಫೋನ್‌ಗಳಿವು!
ಪ್ರತಿ ತಿಂಗಳು ಹತ್ತಾರು ಕಂಪೆನಿಯ ವಿವಿಧ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತವೆ. ಇವುಗಳಲ್ಲಿ ಕೆಲವು ಯಶಸ್ಸು ಕಂಡರೆ ಇನ್ನೂ ಕೆಲವು ಸದ್ದಿಲ್ಲದೆ ಬದಿಗೆ ಸರಿಯುತ್ತವೆ. ಅದಾಗ್ಯೂ ಈ ತಿಂಗಳು ಹಲವಾರು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದ್ದು, ಕೆಲವು ಫೋನ್‌ಗಳು ಈ ಕ್ಷಣಕ್ಕೂ ಸೌಂಡ್ ಮಾಡುತ್ತಿವೆ.
ಹೌದು, ಟೆಕ್‌ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳು ವಿಶೇಷವಾಗಿ ಗುರುತಿಸಿಕೊಳ್ಳುತ್ತವೆ. ಅದರಲ್ಲೂ ಟಾಪ್ ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್, ಒನ್‌ಪ್ಲಸ್, ಐಕ್ಯೂ ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ. ಈ ತಿಂಗಳು 15 ಹೊಸ ಫೋನ್‌ಗಳು ಲಾಂಚ್ ಆಗಿದ್ದು, ಲಾಂಚ್ ಆದ ಫೋನ್‌ಗಳಲ್ಲಿ ಯಾವೆಲ್ಲಾ ಫೋನ್‌ಗಳು ಅಗ್ರಸ್ಥಾನ ಪಡೆದಿವೆ?, ಅವುಗಳ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ ಫೋನ್‌ಗಳು ಈ ತಿಂಗಳು ಲಾಂಚ್ ಆಗಿರುವ ಫೋನ್‌ಗಳಲ್ಲಿ ಗ್ರಾಹಕರ ಮೇಲೆ ಹೆಚ್ಚಿನ ಪ್ರಭಾವ ಬೀರಿವೆ. ಈ ಸರಣಿಯಲ್ಲಿ ಗ್ಯಾಲಕ್ಸಿ S23, ಗ್ಯಾಲಕ್ಸಿ S23+, ಮತ್ತು ಗ್ಯಾಲಕ್ಸಿ S23 ಅಲ್ಡ್ರಾ ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ. ಈ ಫೋನ್‌ಗಳು ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಅದರಂತೆ ಭಾರತದಲ್ಲಿ ಈ ಫೋನ್‌ಗಳ ಬೆಲೆ 75,999ರೂ. ನಿಂದ 1,54,999ರೂ. ಗಳ ವರೆಗೆ ನಿಗದಿ ಮಾಡಲಾಗಿದೆ.
ಒನ್‌ಪ್ಲಸ್ 11
ಒನ್‌ಪ್ಲಸ್ 11 ಫೋನ್ ಹೆಚ್ಚು ಸದ್ದು ಮಾಡಿದ ಡಿವೈಸ್ ಆಗಿದೆ. ಈ ವೇಳೆ ಕಂಪೆನಿಯು ಒನ್‌ಪ್ಲಸ್ 11R ಫೋನ್ ಅನ್ನು ಸಹ ಲಾಂಚ್ ಮಾಡಿದೆ. ಒನ್‌ಪ್ಲಸ್ 11 ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಫೋನ್ ಅನ್ನು ನೀವು ಆರಂಭಿಕ ಬೆಲೆ 56,999ರೂ. ಗಳಿದೆ.

ಒನ್‌ಪ್ಲಸ್ 11R
ಒನ್‌ಪ್ಲಸ್ 11R ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8+ಜನ್ 1 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 50MP ಪ್ರಮುಖ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಹಾಗೆಯೇ 100W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಈ ಫೋನ್ ನಿಮಗೆ 39,999ರೂ. ಗಳ ಆರಂಭಿಕ ಬೆಲೆಯಿಂದ ಲಭ್ಯ. ಫೆಬ್ರವರಿ 7 ರಂದು ಈ ಫೋನ್‌ಅನ್ನು ಲಾಂಚ್ ಮಾಡಲಾಗಿದೆ.
ಪೊಕೊ X5 ಪ್ರೊ
ಪೊಕೊ X5 ಪ್ರೊ ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 108MP ಪ್ರಮುಖ ಕ್ಯಾಮೆರಾ ಆಯ್ಕೆಯೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಇನ್ನುಳಿದಂತೆ ಈ ಫೋನ್ ಅನ್ನು ನೀವು 22,999ರೂ.ಗಳ ಆರಂಭಿಕ ಬೆಲೆಗೆ ಖರೀದಿ ಮಾಡಬಹುದು. ಇದನ್ನು ಫೆಬ್ರವರಿ 6 ರಂದು ಲಾಂಚ್ ಮಾಡಲಾಗಿದೆ.
ಐಕ್ಯೂ ನಿಯೋ 7
ಐಕ್ಯೂ ನಿಯೋ 7 ಪ್ರಮುಖವಾಗಿ ಗೇಮಿಂಗ್ ಪ್ರಿಯರನ್ನು ಕೇಂದ್ರೀಕರಿಸಿಕೊಂಡು ಪರಿಚಯಿಸಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 1,000Hz ಟಚ್ ಸ್ಯಾಂಪಲಿಂಗ್ ರೇಟ್ ಹೊಂದಿದೆ. ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ. ಈ ಫೋನ್‌ಗೆ 29,999 ರೂ. ಗಳಿಂದ 33,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.
ಒಪ್ಪೋ ರೆನೋ 8T
ಒಪ್ಪೋ ರೆನೋ 8T ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 5G SoC ನಿಂದ ಕಾರ್ಯನಿರ್ವಹಿಸಲಿದ್ದು, 12GB RAM+ 256GB ಇಂಟರ್ನಲ್ ಸ್ಟೋರೇಜ್ ನಲ್ಲಿ ಕಾಣಿಸಿಕೊಂಡಿದೆ. ಇನ್ನು 108MP ಪ್ರಮುಖ ಕ್ಯಾಮೆರಾದೊಂದಿಗೆ ರಿಯರ್‌ನಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಇನ್ನು 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,800mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಈ ಫೋನ್ 29,999ರೂ. ಗಳ ಬೆಲೆಗೆ ಲಭ್ಯ.

ಒಪ್ಪೋ ಫೈಂಡ್ N2 ಫ್ಲಿಪ್
ಒಪ್ಪೋ ಫೈಂಡ್ N2 ಫ್ಲಿಪ್ ಫೋಲ್ಡಬಲ್ ಫೋನ್ ಆಗಿದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ಲಸ್ SoC ಮೂಲಕ ಕಾರ್ಯನಿರ್ವಹಿಸಲಿದ್ದು, 8GB RAM+256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನು 50MP ಪ್ರಮುಖ ಕ್ಯಾಮೆರಾದೊಂದಿಗೆ ರಿಯರ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಜೊತೆಗೆ 44W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 4,300mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.
ನೋಕಿಯಾ X30
ನೋಕಿಯಾ X30 ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 SoC ನಿಂದ ಕಾರ್ಯನಿರ್ವಹಿಸಲಿದ್ದು, 8GB RAM+256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ 50MP + 13MP ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ 33W ಚಾರ್ಜಿಂಗ್ ಬೆಂಬಲದೊಂದಿಗೆ 4.200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಇದು ಪಡೆದುಕೊಂಡಿದೆ. ಇನ್ನು 48,999 ರೂ. ಗಳ ಬೆಲೆಯಲ್ಲಿ ಇದನ್ನು ಖರೀದಿಸಬಹುದು.
ವಿವೋ Y100
ವಿವೋ Y100 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 900 SoC ನಿಂದ ಕಾರ್ಯನಿರ್ವಹಿಸಲಿದ್ದು, 8GB RAM+128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ 64MP ಪ್ರಮುಖ ಕ್ಯಾಮೆರಾ ಹೊಂದಿದೆ. ಇನ್ನು 44W ಪ್ಲ್ಯಾಶ್ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಅಂತೆಯೇ ಈ ಫೋನ್ ಅನ್ನು ನೀವು 24,999 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








