ಈ ವರ್ಷ ಲಾಂಚ್ ಆದ ಫಾಸ್ಟ್ ಚಾರ್ಜಿಂಗ್ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು, ಸಖತ್ ಬೇಡಿಕೆ
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ವೇಗವಾಗಿ ಚಾರ್ಜ್ ಆಗುವ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಈ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡುತ್ತಿವೆ. ಪರಿಣಾಮ ಸ್ಮಾರ್ಟ್‌ಫೋನ್ ಬಳಕೆದಾರರು ಚಾರ್ಜಿಂಗ್‌ಗಾಗಿ ಮೀಸಲು ಇಡುವ ಸಮಯವನ್ನು ಕಡಿತ ಮಾಡಿಕೊಳ್ಳಬಹುದಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಜನರಿಗೆ ಎಷ್ಟು ಅಗತ್ಯವೋ ಅದೇ ರೀತಿ ಸ್ಮಾರ್ಟ್‌ಫೋನ್‌ಗೆ ಬ್ಯಾಟರಿ ಸಹ ಅತ್ಯಗತ್ಯ. ಹೆಚ್ಚು ಬಳಕೆ ಮಾಡಿದಷ್ಟು ಬ್ಯಾಟರಿ ಹೆಚ್ಚು ಹೆಚ್ಚಾಗಿ ಖಾಲಿಯಾಗುತ್ತಿರುತ್ತದೆ.. ಆದರೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ವಿಶೇಷ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದ ಫೋನ್‌ಗಳು ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿದ್ದು, ದೀರ್ಘ ಬ್ಯಾಕಪ್ ನೀಡಲಿದೆ. ಹಾಗಿದ್ರೆ, ಈ ವರ್ಷದಲ್ಲಿ ಲಾಂಚ್ ಆದ ಫಾಸ್ಟ್ ಚಾರ್ಜಿಂಗ್ (Fast charging) ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳು ಯಾವುವು, ಅವುಗಳ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿ ರೆಡ್ಮಿ 13C: ಈ ಸ್ಮಾರ್ಟ್‌ಫೋನ್ (Xiaomi Redmi 13C) 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್ ಬಲ, 6.74 ಇಂಚಿನ IPS LCD ಡಿಸ್‌ಪ್ಲೇ ಜೊತೆಗೆ 50 MP + 2 MP + 0.08 MP ಟ್ರಿಪಲ್ ರಿಯರ್ ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇನ್ನು ಚಾರ್ಜಿಂಗ್‌ಗಾಗಿ ಈ ಫೋನ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದೆ.
ಮೊಟೊರೊಲಾ ಎಡ್ಜ್ 40 ನಿಯೋ: ಈ ಫೋನ್ (Motorola Edge 40 Neo) ಅನ್ನು ಇತ್ತೀಚಿಗೆ ಲಾಂಚ್ ಮಾಡಲಾಗಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಹಾಗೂ ಟರ್ಬೊ ಪವರ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7030 ಪ್ರೊಸೆಸರ್ ಬಲ, 8GB RAM ಆಯ್ಕೆ, 6.55 ಇಂಚಿನ P-OLED ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ 50 MP + 13 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 32 MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G : ಈ ಫೋನ್ (Samsung Galaxy F54 5G) 6000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ ಆಕ್ಟಾ ಕೋರ್ ಎಕ್ಸಿನೋಸ್ 1380 ಪ್ರೊಸೆಸರ್ ಹಾಗೂ 8 GB RAM ಆಯ್ಕೆಯೊಂದಿಗೆ 6.7 ಇಂಚಿನ ಸೂಪರ್ ಅಮೋಲೆಡ್ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು,
108 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32 MP ಮುಂಭಾಗದ ಕ್ಯಾಮರಾ ಹೊಂದಿದೆ.
ಮೊಟೊ G54 : ಈ ಫೋನ್ (Moto G54) ಅನ್ನು ಕೆಲವು ತಿಂಗಳ ಹಿಂದೆ ಲಾಂಚ್ ಮಾಡಲಾಗಿದ್ದು, ಇದು 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ ಟರ್ಬೊ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಪ್ರೊಸೆಸರ್ ಬಲದೊಂದಿಗೆ 8 GB RAM ಆಯ್ಕೆ ಪಡೆದಿದೆ. ಜೊತೆಗೆ ಈ ಫೋನ್
6.5 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 50 MP + 8 MP ಡ್ಯುಯಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ವಿವೋ T2 ಪ್ರೊ: ಈ ಸ್ಮಾರ್ಟ್‌ಫೋನ್ (vivo T2 Pro) 4600 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು ಫ್ಲ್ಯಾಶ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಸಾಮರ್ಥ್ಯ ಹಾಗೂ 8 GB RAM ನೊಂದಿಗೆ ಕಾಣಿಸಿಕೊಂಡಿದ್ದು, 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ 64 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G : ಈ ಫೋನ್ (OnePlus Nord CE 3 Lite 5G) 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಸೂಪರ್ ವೂಕ್ ಚಾರ್ಜಿಂಗ್ ಬೆಂಬಲದೊಂದಿಗೆ ಬಂದಿದೆ. ಇದರೊಂದಿಗೆ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಹಾಗೂ 8 GB RAM ಆಯ್ಕೆ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಮತ್ತು
6.72 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಜೊತೆಗೆ 108 MP + 2 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಮೂಲಕ ಈ ಫೋನ್ ಉತ್ತಮ ಎನಿಸಿದೆ.

ವಿವೋ V29: ಈ ಫೋನ್ ಸಹ (vivo V29) 4600 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಫ್ಲ್ಯಾಶ್ ಚಾರ್ಜಿಂಗ್ ಆಯ್ಕೆ ಪಡೆದುಕೊಂಡಿದೆ. ಇದು ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್, 8 GB RAM ಆಯ್ಕೆ ಮೂಲಕ ಕೆಲಸ ಮಾಡಲಿದೆ. ಹಾಗೆಯೇ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 50 MP + 8 MP + 2 MP ಯ ಟ್ರಿಪಲ್ ರಿಯರ್ ಕ್ಯಾಮೆರಾ, 50 MP ಸೆಲ್ಫಿ ಕ್ಯಾಮೆರಾ ಮೂಲಕ ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್ ಆಗಿ ಗುರುತಿಸಿಕೊಂಡಿದೆ.


Click it and Unblock the Notifications








