ಸದ್ಯ ಮಾರುಕಟ್ಟೆಯಲ್ಲಿ ಈ ಫೋನ್‌ಗಳದ್ದೇ ಹವಾ!..ನಿಮ್ಮ ಬಳಿ ಇದೆಯಾ ಈ ಫೋನ್?
ಮಾರುಕಟ್ಟೆಯಲ್ಲಿ ಒಂದಿಲ್ಲೊಂದು ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಇರುತ್ತವೆ. ಆದರೆ ಎಂಟ್ರಿ ಪಡೆಯುವ ಎಲ್ಲ ಫೋನ್‌ಗಳು ಗ್ರಾಹರನ್ನು ತಮ್ಮತ್ತ ಸೆಳೆಯುವಲ್ಲಿ ವಿಫಲ ಆಗುತ್ತವೆ. ಆ ಪೈಕಿ ಕೆಲವೇ ಕೆಲವು ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಭಾರೀ ಸದ್ದು ಮಾಡುತ್ತವೆ.
ಹೌದು, ಪ್ರಮುಖ ಮೊಬೈಲ್ ಸಂಸ್ಥೆಗಳು ಸೇರಿ ಇತರೆ ಕಂಪನಿಗಳು ಹೊಸ ಫೋನ್ ಪರಿಚಯಿಸುತ್ತವೆ. ಕೆಲವು ಫೋನ್‌ಗಳು ಹೈ ಎಂಡ್ ಮಾದರಿಯಿಂದ ಲೀಡಿಂಗ್‌ನಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವು ಬಜೆಟ್ ದರದಲ್ಲಿ ಗಮನ ಸೆಳೆಯುತ್ತವೆ. ಇನ್ನು ಕೆಲವು ವಿಶೇಷ ಡಿಸೈನ್‌ನಿಂದಾಗಿ ಭಿನ್ನವಾಗಿ ಕಾಣುತ್ತವೆ. ಹಾಗಾದರೆ ಸದ್ಯ ಈ ಸೆಪ್ಟೆಂಬರ್ ತಿಂಗಳಿನ ಆರಂಭದಲ್ಲಿ ಭಾರೀ ಗಮನ ಸೆಳೆದಿರುವ ಫೋನ್‌ಗಳ ಲಿಸ್ಟ್ ಇಲ್ಲಿದೆ ಮುಂದೆ ಓದಿರಿ.

ಹುವಾವೇ ಮೇಟ್ 60 ಪ್ರೊ ಮೊಬೈಲ್ ಫೀಚರ್ಸ್ :
ಹುವಾವೇ ಮೇಟ್ 60 ಪ್ರೊ ಮೊಬೈಲ್ 6.8 ಇಂಚಿನ ಓಎಲ್‌ಇಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಫೋನ್ ಕಿರಿನ್ 9000 ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದು 256GB + 12GB RAM ಆರಂಭಿಕ ಸ್ಟೋರೇಜ್ ಆಯ್ಕೆ ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗೆಯೇ ಇದು 5000 mAh ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಮೊಬೈಲ್ ಫೀಚರ್ಸ್ :
ಗ್ಯಾಲಕ್ಸಿ A34 5G ಮೊಬೈಲ್ 6.6 ಇಂಚಿನ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ. ಜೊತೆಗೆ 8GB + 128GB ಮತ್ತು 8GB + 256GB ಸ್ಟೋರೇಜ್ ಸೌಲಭ್ಯ ಸಹ ಪಡೆದುಕೊಂಡಿದೆ. ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ ಫೀಚರ್ಸ್ :
ಸ್ಯಾಮ್‌ಸಂಗ್ ಸಂಸ್ಥೆಯ ಈ ಫೋನ್ QHD+ ಡೈಮಂಡ್ ಅಮೋಲೆಡ್ ಜೊತೆಗೆ 6.8 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಅನ್ನು ಕೂಡಾ ಒಳಗೊಂಡಿದೆ. ಈ ಮೊಬೈಲ್ ಕ್ವಾಡ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಕೂಡಾ ಒಳಗೊಂಡಿದೆ.
ಐಫೋನ್ 14 ಪ್ರೊ ಮ್ಯಾಕ್ಸ್ ಫೀಚರ್ಸ್ ಹೀಗಿವೆ :
ಆಪಲ್ ಸಂಸ್ಥೆಯ ಇತ್ತೀಚಿನ ಐಫೋನ್ ಇದಾಗಿದ್ದು, ಇದು 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಒಳಗೊಂಡಿದ್ದು, ಡಿಸ್‌ಪ್ಲೇಯು ಆಲ್ವೇಸ್ ಆನ್ ಕಾರ್ಯವನ್ನು ಪಡೆದಿದೆ. ಈ ಐಫೋನಿನ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಹಾಗೆಯೇ 12 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಕೂಡಾ ಒಳಗೊಂಡಿದೆ. ಅಂದಹಾಗೆ ಈ ಐಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ಪಡೆದುಕೊಂಡಿದೆ.
ರೆಡ್ಮಿ ನೋಟ್ 12 ಪ್ರೊ 5G ಮೊಬೈಲ್ ಫೀಚರ್ಸ್ :
ಶಿಯೋಮಿಯ ಸಂಸ್ಥೆಯ ಈ ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಒಳಗೊಂಡಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1080SoC ಪ್ರೊಸೆಸರ್ ಕೆಲಸ ನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಸೌಲಭ್ಯ ಪಡೆದಿದೆ. ಹಿಂಭದಿಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಆಗಿದೆ. ಇನ್ನು ಇದು 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದು 67W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ನಲ್ಲಿದೆ.


Click it and Unblock the Notifications








