Home
ಸುದ್ದಿಜಾಲ

ಒಂದಿಲ್ಲೊಮ್ಮೆ ಈ ಆಪ್‌ಗಳನ್ನು ಬಳಸೇ ಇರ್ತೀರಾ... ಇವೇ ಈಗ ವಿಶ್ವದಲ್ಲೇ ಟಾಪ್‌!

ಸ್ಮಾರ್ಟ್‌ಫೋನ್‌ಗಳು (Smartphones) ವಿವಿಧ ರೀತಿಯಲ್ಲಿ ಬಳಕೆಗೆ ಯೋಗ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಈ ವಿವಿಧ ಬಳಕೆಗೆ ಆಪ್‌ಗಳು ಅನಿವಾರ್ಯ ಆಗಿದ್ದು, ಲಕ್ಷಾಂತರ ಆಪ್‌ಗಳು ನಿಮಗೆ ಲಭ್ಯ ಇವೆ. ಈ ನಡುವೆ ಕೆಲವು ಆಪ್‌ಗಳು ಕೆಟ್ಟ ನಡವಳಿಕೆ ಹೊಂದಿದ್ದು, ಹಲವು ಆಪ್‌ಗಳು ಉತ್ತಮ ಸೇವೆ ನೀಡುತ್ತಿದೆ. ಈ ನಡುವೆ ಈ ಆಪ್‌ಗಳನ್ನು ಮಾತ್ರ ಪ್ರಪಂಚದಲ್ಲೇ ಅತೀ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಹೌದು, ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಯಾವುದೇ ಆಪ್‌ಗಳಿಲ್ಲದೆ ಫೋನ್‌ ಅನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಈ ಆಪ್‌ಗಳು ಸಾಮಾಜಿಕ ಮಾಧ್ಯಮ, ಮೆಸೆಜ್‌ ಮಾಡುವುದು, ಮನರಂಜನೆ, ಶಾಪಿಂಗ್ ಸೇರಿದಂತೆ ವ್ಯಾಪಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಿವೆ. ಅದರಂತೆ ಸೆನ್ಸಾರ್ ಟವರ್‌ನ (Censor Tower) ವರದಿ ಪ್ರಕಾರ ಪ್ರಪಂಚದಲ್ಲಿ ಹೆಚ್ಚು ಬಳಕೆ ಆಗುತ್ತಿರುವ 20 ಆಪ್‌ಗಳ ಲಿಸ್ಟ್‌ ಅನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಒಂದಿಲ್ಲೊಮ್ಮೆ ಈ ಆಪ್‌ಗಳನ್ನು ಬಳಸೇ ಇರ್ತೀರಾ... ಇವೇ ಈಗ ವಿಶ್ವದಲ್ಲೇ ಟಾಪ್‌!

ಟಿಕ್‌ಟಾಕ್,ಇನ್‌ಸ್ಟಾಗ್ರಾಮ್‌: ಪ್ರಪಂಚದಲ್ಲಿ ಹೆಚ್ಚು ಬಳಕೆ ಆಗುತ್ತಿರುವ ಆಪ್‌ಗಳ ಲಿಸ್ಟ್‌ನಲ್ಲಿ ಟಿಕ್‌ಟಾಕ್‌(Tiktok) ಮೊದಲ ಸ್ಥಾನ ಪಡೆದಿದೆ. ಇದನ್ನು ಆಪ್‌ಗಳ ರಾಜ ಎಂದೂ ಸಹ ಕರೆಯಲಾಗುತ್ತದೆ. ಇದನ್ನು ಭಾರತದಲ್ಲಿ ನಿಷೇಧಿಸಲ್ಪಟ್ಟಿದ್ದರೂ ಸಹ ಇದು ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಆಪ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿಕೊಂಡಿದೆ. ಇದರೊಂದಿಗೆ
ಇನ್‌ಸ್ಟಾಗ್ರಾಮ್‌(Instagram) ನಂತರದ ಸ್ಥಾನ ಪಡೆದಿದೆ.

ಫೇಸ್ಬುಕ್, ವಾಟ್ಸಾಪ್‌: ಇದಾದ ನಂತರದಲ್ಲಿ ಸಾಮಾಜಿಕ ಮಾಧ್ಯಮ ಉದ್ದೇಶದಿಂದ ಫೇಸ್‌ಬುಕ್‌(Facebook) ಅನ್ನು ಪ್ರಪಂಚದಲ್ಲಿ ಹೆಚ್ಚಿಗೆ ಬಳಕೆ ಮಾಡಲಾಗುತ್ತದೆ. ಈ ಮೂಲಕ ನಿತ್ಯದ ವಿಷಯಗಳನ್ನು ಜನರು ಬೇಗನೇ ತಿಳಿದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಬಳಕೆದಾರರಿಗೆ ಟೆಕ್ಸ್ಟ್‌ ಮೆಸೆಜ್‌, ಫೋಟೋಗಳು, ವಿಡಿಯೋಗಳು ಮತ್ತು ವಾಯ್ಸ್‌ ಮೆಸೆಜ್‌ಗಳನ್ನು ಕಳುಹಿಸಲು ವಾಟ್ಸಾಪ್‌ (Whatsapp) ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಕ್ಯಾಪ್ಕಟ್, ಟೆಲಿಗ್ರಾಮ್: ಇನ್ನು ಕ್ಯಾಪ್ಕಟ್(Capcut) ಬಳಕೆದಾರರಿಗೆ ಟಿಕ್‌ಟಾಕ್ ಅಥವಾ ಇತರೆ ಕಿರು ವಿಡಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಸೂಕ್ತವಾದ ವಿಡಿಯೋಗಳನ್ನು ಎಡಿಟ್‌ ಮಾಡಲು ಸಹಾಯ ಮಾಡುವ ಆಪ್‌ ಆಗಿದೆ. ಹಾಗೆಯೇ ಟೆಲಿಗ್ರಾಮ್ (Telegram) ಅನ್ನು ಸಹ ಪ್ರಪಂಚದಾದ್ಯಂತ ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಬಳಕೆದಾರರು ಸಿನಿಮಾಗಳನ್ನು ವೀಕ್ಷಣೆ ಮಾಡುವುದು, ದೊಡ್ಡ ಫೈಲ್‌ಗಳನ್ನು ಸೆಂಡ್ ಮಾಡುವುದು ಹಾಗೂ ದೊಡ್ಡ ಗಾತ್ರದ ಗ್ರೂಪ್‌ ರಚನೆ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸ್ನ್ಯಾಪ್‌ಚಾಟ್, ಸ್ಪಾಟಿಫೈ: ಇದರೊಂದಿಗೆ ಮಲ್ಟಿಮೀಡಿಯಾ ಮೆಸೇಜಿಂಗ್ ಆಪ್‌ ಆಗಿರುವ ಸ್ನ್ಯಾಪ್‌ಚಾಟ್ (Snapchat) ಅನ್ನು ಸಹ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಈ ಆಪ್‌ ಕಣ್ಮರೆಯಾಗುವ ಮೆಸೆಜ್‌ಗಳು ಮತ್ತು ವರ್ಧಿತ ರಿಯಾಲಿಟಿ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಜೊತೆಗೆ ಸಂಗೀತ ಸ್ಟ್ರೀಮಿಂಗ್ ಆಪ್‌ ಆಗಿರುವ ಸ್ಪಾಟಿಫೈ (Spotify) ಸಹ ಬಳಕೆದಾರರಿಗೆ ತಮ್ಮ ನೆಚ್ಚಿನ ಹಾಡುಗಳ ಪ್ಲೇಪಟ್ಟಿಗಳನ್ನು ಅನ್ವೇಷಿಸಲು, ಆಲಿಸಲು ಅನುವು ಮಾಡಿಕೊಡುತ್ತದೆ.

ಟೆಮು, ಮೆಸೆಂಜರ್: ಚೈನೀಸ್ ಮೂಲದ ಆನ್‌ಲೈನ್ ಶಾಪಿಂಗ್ ಆಪ್‌ ಆಗಿರುವ ಟೆಮು(Temu) ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದಲ್ಲಿ ರಿಯಾಯಿತಿಗಳನ್ನು ನೀಡುತ್ತದೆ. ಇದರೊಂದಿಗೆ ಅತ್ಯಂತ ಹೆಚ್ಚು ಬಳಕೆ ಮಾಡುವ ಆಪ್‌ಗಳ ಸಾಲಿಗೆ ಮೆಟಾದ ಮೆಸೆಂಜರ್(messenger) ಸಹ ಸೇರಿದೆ. ಈ ಆಪ್‌ ಬಳಕೆ ಮಾಡಿಕೊಂಡು ಬಳಕೆದಾರರು ಸಂವಹನ ಪ್ರಕ್ರಿಯೆ ನಡೆಸಬಹುದು. ಅಂದರೆ ಇದರಲ್ಲಿ ವಾಟ್ಸಾಪ್‌ನಲ್ಲಿ ಮಾಡುವ ಹಲವಾರು ಕಾರ್ಯಗಳನ್ನು ಮಾಡಬಹುದಾಗಿದೆ.

ಜಿಯೋ ಸಿನಿಮಾ, ಶೇನ್: ನಂತರದ ಸ್ಥಾನದಲ್ಲಿ ಜಿಯೋ ಸಿನಿಮಾ(Jiocinema) ಇದೆ. ಐಪಿಎಲ್ ಸಂದರ್ಭದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಆಪ್‌ ಇದಾಗಿದ್ದು, ಉತ್ತಮ ಕಂಟೆಂಟ್‌ ಇರುವ ವಿಡಿಯೋಗಳನ್ನು ನೀಡುತ್ತದೆ. ಇದರೊಂದಿಗೆ ಪ್ರಪಂಚದಾದ್ಯಂತದ ಬಳಕೆದಾರರು ಶಾಪಿಂಗ್‌ ಮಾಡಲು ಈ ಶೇನ್‌(Shein) ಆಪ್‌ ಅನುಕೂಲ ಮಾಡಿಕೊಟ್ಟಿದೆ. ಈ ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್ ಮೂಲಕ ಹೆಚ್ಚಿನ ಡಿಸ್ಕೌಂಟ್‌ ಲಭ್ಯ.

ವಾಟ್ಸಾಪ್‌ ಬ್ಯುಸಿನೆಸ್‌, ಪ್ರಿಂಟ್‌ರೆಸ್ಟ್‌: ಇನ್ನು ಹಲವಾರು ವಾಟ್ಸಾಪ್‌ ಬಳಕೆದಾರರು ವಾಟ್ಸಾಪ್‌ ಬ್ಯುಸಿನೆಸ್‌(WhatsApp Business) ಖಾತೆಯನ್ನು ಬಳಕೆ ಮಾಡುತ್ತಿರಬಹುದು. ಇದು ಬಳಕೆದಾರರು ವ್ಯವಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಉಳಿದಂತೆ ಚಿತ್ರಗಳು ಮತ್ತು ವಿಡಿಯೋಗಳ ಬೋರ್ಡ್‌ಗಳನ್ನು ರಚಿಸಲು ಮತ್ತು ಶೇರ್‌ ಮಾಡಿಕೊಳ್ಳಲು ಪ್ರಿಂಟ್‌ರೆಸ್ಟ್‌(Pinterest) ಆಪ್‌ ಅನ್ನು ಬಳಕೆ ಮಾಡಲಾಗುತ್ತಿದೆ.

ಟ್ವಿಟ್ಟರ್‌, ಯೂಟ್ಯೂಬ್ : ಪ್ರಪಂಚದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಆಪ್‌ಗಳಲ್ಲಿ ಟ್ವಿಟ್ಟರ್‌ (Twitter) ಸಹ ಪ್ರಮುಖ ಸ್ಥಾನ ಪಡೆದಿದೆ. ಇತ್ತೀಚಿಗೆ ಇದನ್ನು ಎಕ್ಸ್‌ ಎಂದು ಮರುನಾಮಕರಣ ಮಾಡಲಾಗಿದ್ದು, ಹಲವಾರು ಹೊಸ ಹೊಸ ಸೌಲಭ್ಯಗಳನ್ನು ಈ ಮೂಲಕ ನೀಡಲಾಗಿದೆ. ಜೊತೆಗೆ ವಿಡಿಯೋಗಳನ್ನು ವೀಕ್ಷಣೆ ಮಾಡಲು, ಜೊತೆಗೆ ಆಡಿಯೋ ಹಾಗೂ ವಿಡಿಯೋ ಸಂಬಂಧ ಉತ್ತಮ ಮಾಹಿತಿ ಪಡೆಯಲು ಯೂಟ್ಯೂಬ್‌ (YouTube) ಸಹಕಾರಿಯಾಗಿದ್ದು, ಈ ಆಪ್ ಅನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ನೆಟ್‌ಫ್ಲಿಕ್ಸ್, ಅಮೆಜಾನ್‌ : ಇದಾದ ನಂತರದಲ್ಲಿ ಅನೇಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ದೊಡ್ಡ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಿದರೂ ಸಹ ನೆಟ್‌ಫ್ಲಿಕ್ಸ್(Netflix) ಟಾಪ್‌ ಪ್ಲೇಸ್‌ನಲ್ಲಿದೆ. ಜೊತೆಗೆ ಈ ಆಪ್‌ ಅನ್ನು ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆಯಂತೆ. ಇದರೊಂದಿಗೆ ಅತ್ಯುತ್ತಮ ಶಾಪಿಂಗ್ ಆಪ್‌ ಎನಿಸಿಕೊಂಡಿರುವ ಅಮೆಜಾನ್‌ (Amazon) ಅನ್ನು ಸಹ ಪ್ರಪಂಚದಾದ್ಯಂತ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಒಂದಿಲ್ಲೊಮ್ಮೆ ಈ ಆಪ್‌ಗಳನ್ನು ಬಳಸೇ ಇರ್ತೀರಾ... ಇವೇ ಈಗ ವಿಶ್ವದಲ್ಲೇ ಟಾಪ್‌!

ಪಿಕ್ಸಾರ್ಟ್ ಎಐ, ಕ್ಯಾನ್ವಾ: ಪಿಕ್ಸಾರ್ಟ್ ಎಐ(Picasart AI) ಚಾಲಿತ ಫೋಟೋ ಎಡಿಟಿಂಗ್ ಆಪ್‌ ಆಗಿದ್ದು, ಬಳಕೆದಾರರು ಸುಲಭವಾಗಿ ಫೋಟೋಗಳನ್ನು ಕ್ರಿಯೇಟ್‌ ಮಾಡಲು ಹಾಗೂ ಎಡಿಟ್‌ ಮಾಡಲು ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಯಾವುದೇ ಪೂರ್ವ ವಿನ್ಯಾಸದ ಅನುಭವವಿಲ್ಲದೆ ವೃತ್ತಿಪರವಾಗಿ ಕಾಣುವ ವಿನ್ಯಾಸಗಳನ್ನು ರಚಿಸಲು ಬಳಕೆದಾರರಿಗೆ ಅನುಮತಿಸುವ ಜನಪ್ರಿಯ ಗ್ರಾಫಿಕ್ ವಿನ್ಯಾಸದ ಪ್ಲಾಟ್‌ಫಾರ್ಮ್ ಆಗಿ ಕ್ಯಾನ್ವಾ (Canva) ಗುರುತಿಸಿಕೊಂಡಿದ್ದು, ಇದರಿಂದ ಸಾಕಷ್ಟು ಜನರು ಅನುಕೂಲ ಪಡೆಯುತ್ತಿದ್ದಾರೆ.

Best Mobiles in India

English summary
According to Censor Tower's report, here is the list of 20 most used apps in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+