loan apps: ಈ ಸಾಲದ ಆಪ್‌ಗಳು ನಿಮ್ಮ ಫೋನ್‌ನಲ್ಲಿದ್ರೆ ತಕ್ಷಣವೇ ಡಿಲೀಟ್ ಮಾಡಿ! ಸಖತ್ ಡೇಂಜರ್ ಇವು
ಗೂಗಲ್ (Google) ತಾನು ನೀಡುವ ಯಾವುದೇ ಸೇವೆಗಳಲ್ಲೂ ಸಹ ಸಮಸ್ಯೆ ಆಗಬಾರದು ಎಂಬ ಧ್ಯೇಯ ಹೊಂದಿದೆ. ಈ ಕಾರಣಕ್ಕೆ ಯಾವುದೇ ಸಮಸ್ಯೆಗಳೂ ಎದುರಾದರೂ ಸಹ ಬಳಕೆದಾರರಿಗೆ ತಕ್ಷಣವೇ ಮಾಹಿತಿ ನೀಡಿ ಡಿವೈಸ್‌ಗಳನ್ನು ನವೀಕರಣ ಮಾಡಲು ತಿಳಿಸುತ್ತದೆ. ಅದರಂತೆ ಈಗ ಲೋನ್ ಆಪ್‌ಗಳ (loan apps) ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ಇಂದಿನ ದಿನಗಳಲ್ಲಿ ಲೋನ್ ಆಪ್‌ಗಳು ಮಿತಿಮೀರಿ ಬಳಕೆ ಆಗುತ್ತಿವೆ. ಜನರು ವಿವಿಧ ರೀತಿಯಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ತಕ್ಷಣಕ್ಕೆ ಸಾಲ ಬೇಕು ಎಂದರೆ ಲೋನ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ಆಪ್‌ಗಳು ಹಣ ವಾಪಸ್ ಪಡೆದುಕೊಳ್ಳಲು ಜನರನ್ನು ವಿವಿಧ ರೀತಿಯಲ್ಲಿ ಹಿಂಸಿಸುತ್ತವೆ. ಈ ಕಾರಣಕ್ಕೆ ಭಾರತ ಸರ್ಕಾರ ಈ ಆಪ್‌ಗಳಿಗೆ ಕಠಿಣ ಕಾನೂನನ್ನೂ ಸಹ ವಿಧಿಸಿದೆ. ಅದಾಗ್ಯೂ ಕೆಲವು ಆಪ್‌ಗಳು ತಮ್ಮ ಕುಕೃತ್ಯವನ್ನು ನಿಲ್ಲಿಸಿಲ್ಲ. ಹಾಗಿದ್ರೆ, ಯಾವೆಲ್ಲಾ ಆಪ್‌ಗಳ ವಿರುದ್ಧ ಗೂಗಲ್ (Google) ಸಮರ ಸಾರಿದೆ? ನಿಮ್ಮ ಫೋನ್‌ನಲ್ಲಿ ಈ ಆಪ್‌ಗಳಿದ್ದರೆ ಏನು ಮಾಡಬೇಕು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

17 ನಕಲಿ ಸಾಲದ ಆಪ್‌ಗಳು: ಜನರನ್ನು ವಿವಿಧ ರೀತಿಯಲ್ಲಿ ಮೋಸ ಮಾಡುವ ಒಂದು ವರ್ಗ ಇದೆ. ಇದನ್ನು ಅಷ್ಟು ಸುಲಭವಾಗಿ ಪತ್ತೆ ಮಾಡಲು ಸಾಧ್ಯ ಆಗುವುದಿಲ್ಲ. ಈ ಕಾರಣಕ್ಕೆ ಇದು ಮೋಸ ಎಂದು ಗೊತ್ತಾಗುವ ಮುನ್ನವೇ ಸಾಕಷ್ಟು ಜನರು ಭಾರೀ ಪ್ರಮಾಣದ ಹಣ ಕಳೆದುಕೊಂಡಿರುತ್ತಾರೆ. ಅದರಂತೆ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಬರೋಬ್ಬರಿ 17 ನಕಲಿ ಸಾಲದ ಆಪ್‌ಗಳನ್ನು ಪತ್ತೆ ಮಾಡಲಾಗಿದ್ದು, ಇವುಗಳಿಗೆ ತಕ್ಕ ಪಾಠ ಕಲಿಸಲಾಗಿದೆ.
ಕೆಟ್ಟ ಉದ್ದೇಶದಿಂದ ಬಳಕೆದಾರರಿಗೆ ಹಣವನ್ನು ಸಾಲವಾಗಿ ನೀಡುತ್ತೇವೆ ಎಂದು ನಂಬಿಸುವ ಆಪ್‌ಗಳು ಸಾಕಷ್ಟು ಇವೆ. ಈ ಮೋಸದ ತ್ವರಿತ ಸಾಲದ ಆಪ್‌ಗಳು ಭಾರತ ಮತ್ತು ಇತರ ದೇಶಗಳಲ್ಲಿ ಆಂಡ್ರಾಯ್ಡ್ ಬಳಕೆದಾರರನ್ನೇ ಹೆಚ್ಚಾಗಿ ಗುರಿಯಾಗಿಸುತ್ತಿವೆ ಎಂದು ಸೈಬರ್‌ಸೆಕ್ಯುರಿಟಿ ಸಂಸ್ಥೆ ESET ನ ಸಂಶೋಧಕರು ಮಾಹಿತಿ ಕಂಡುಕೊಂಡಿದ್ದಾರೆ. ಜೊತೆಗೆ ಮೋಸ ಹೋದ ಅದೆಷ್ಟೋ ಘಟನೆಗಳ ಆಧಾರದಲ್ಲಿ ಬಳಕೆದಾರರಿಗೆ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ ಟೆಕ್ ದೈತ್ಯ ಗೂಗಲ್ ಈಗಾಗಲೇ ಪ್ಲೇ ಸ್ಟೋರ್‌ನಿಂದ 17 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ದುರಂತ ಏನೆಂದರೆ ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಮೊದಲು ಗೂಗಲ್ ಪ್ಲೇ ಮೂಲಕ ವಿಶ್ವದಾದ್ಯಂತ ಒಟ್ಟು 12 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್ ಆಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಳಕೆ ಆಗುತ್ತಿರುವ ಈ ಆಪ್‌ಗಳು ಈವರೆಗೆ ಎಷ್ಟು ಜನರ ಜೀವದ ಜೊತೆ ಚೆಲ್ಲಾಟ ಆಡಿವೆ ಅನ್ನೋದನ್ನು ನೀವು ಊಹಿಸಿಕೊಳ್ಳಿ.
ಬಳಕೆದಾರರು ಈ ಆಪ್‌ಗಳನ್ನು ಯಾಕೆ ಡಿಲೀಟ್ ಮಾಡಬೇಕು?: ಸಂಶೋಧಕರು ಇತ್ತೀಚೆಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಮೋಸಗೊಳಿಸುವ ಆಂಡ್ರಾಯ್ಡ್ (Android) ಸಾಲದ ಆಪ್‌ಗಳಲ್ಲಿ ಆತಂಕಕಾರಿ ಬೆಳವಣಿಗೆಯನ್ನು ಗಮನಿಸಿದ್ದಾರೆ. ಈ ಆಪ್‌ಗಳು ಕಾನೂನುಬದ್ಧ ವೈಯಕ್ತಿಕ ಸಾಲ ನೀಡುವ ಸೇವೆಗಳಾಗಿ ತೋರಿಸಿಕೊಳ್ಳುತ್ತವೆ. ಅದರಂತೆ ಬಳಕೆದಾರರಿಗೆ ಹೆಚ್ಚಿನ ಬಡ್ಡಿ ದರಗಳಲ್ಲಿ ಸಾಲಗಳನ್ನು ನೀಡುವ ಮೂಲಕ ಅವರನ್ನು ಬಲೆಗೆ ಬೀಳಿಸಿಕೊಳ್ಳುತ್ತವೆ.
ಇದರೊಂದಿಗೆ ಈ ಅಪ್ಲಿಕೇಶನ್‌ಗಳು ಬಳಕೆದಾರರ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಕದ್ದು ಏನಾದರೂ ಸಾಲ ಮರುಪಾವತಿ ಮಾಡಲು ವಿಳಂಬ ಮಾಡಿದ್ರೆ ಬ್ಲ್ಯಾಕ್‌ಮೇಲ್ ಮಾಡಲು ಆ ಮಾಹಿತಿಯನ್ನು ಬಳಕೆ ಮಾಡುತ್ತಾರೆ. ಆದ್ದರಿಂದ, ಅಪ್ಲಿಕೇಶನ್‌ಗಳನ್ನು ಈಗಾಗಲೇ ಡೌನ್‌ಲೋಡ್ ಮಾಡಿದ ಬಳಕೆದಾರರು ತಮ್ಮ ಡಿವೈಸ್‌ಗಳಿಂದ ತಕ್ಷಣವೇ ತೆಗೆದುಹಾಕಲು ಸಲಹೆ ನೀಡಿದ್ದಾರೆ.

ಈ ಸ್ಪೈಲೋನ್ ಅಪ್ಲಿಕೇಶನ್‌ಗಳ (Spylone Apps) ವೆಬ್‌ಸೈಟ್‌ಗಳಲ್ಲಿ ಕೆಲವು ತೆರೆದ ಉದ್ಯೋಗದ ಮಾಹಿತಿಯನ್ನೂ ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಉದ್ಯೋಗ ಲಿಸ್ಟ್‌ಗಳು ಭಾರತೀಯ ಕಂಪನಿಗಳಿಂದ ಕದ್ದಂತೆ ತೋರುತ್ತವೆ. ಇದರಿಂದಾಗಿಯೇ ಬಳಕೆದಾರರು ಸುಲಭವಾಗಿ ಈ ಆಪ್‌ಗಳನ್ನು ನಂಬುತ್ತಿದ್ದಾರಂತೆ. ಆದರೆ, ಈ ಆಪ್‌ಗಳು ಮಾತ್ರ ಗೂಗಲ್‌ನ ನೀತಿ ನಿಯಮಗಳಂತೆ ಕೆಲಸ ಮಾಡುವುದಿಲ್ಲ. ಇದರಿಂದಾಗಿಯೇ ಈಗ ಪ್ಲೇ ಸ್ಟೋರ್‌ನಿಂದ ಹೊರಬಿದ್ದಿವೆ. ಹಾಗಿದ್ರೆ, ಯಾವೆಲ್ಲಾ ಆಪ್‌ಗಳು ಈ ಕೃತ್ಯ ಎಸಗುತ್ತಿದ್ದವು ಅನ್ನೋದನ್ನು ಗಮನಿಸಿ.
ಎಎ ಕ್ರೆಡಿಟ್, ಅಮೋರ್ ಕ್ಯಾಶ್, ಗೌವ್ಯಬಾ ಕ್ಯಾಶ್, ಈಸಿಕ್ರೆಡಿಟ್, ಕ್ಯಾಶ್ವಾವ್, ಕ್ರೆಡಿಬಸ್ ,ಫ್ಲ್ಯಾಶ್ ಲೋನ್, ಪ್ರೆಸ್ಟಾಮೊಸ್ಕ್ರೆಡಿಟೊ, ಪ್ರೆಸ್ಟಾಮೊಸ್ ಡಿ ಕ್ರೆಡಿಟೊ-ಯುಮಿಕ್ಯಾಶ್, ಗೋ ಕ್ರೆಡಿಟೋ, ಇನ್‌ಸ್ಟಾಂಟ್‌ನಿಯೋ ಪ್ರೆಸ್ಟಾಮೊ, ಕಾರ್ಟೆರಾ ಗ್ರಾಂಡೆ, ರಾಪಿಡೊ ಕ್ರೆಡಿಟೊ, ಫಿನಪ್ ಲೆಂಡಿಂಗ್, 4S ನಗದು, ಟ್ರೂ ನೈರಾ, ಈಸಿಕ್ಯಾಶ್ ಆಪ್‌ಗಳನ್ನು ಗೂಗಲ್ ಬ್ಯಾನ್ ಮಾಡಲಾಗಿದೆ.ಈ ಆಪ್‌ಗಳು ನಿಮ್ಮ ಫೋನ್‌ನಲ್ಲಿ ಏನಾದರೂ ಇದ್ದರೆ ಈಗಲೇ ಅನ್‌ಇನ್‌ಸ್ಟಾಲ್ ಮಾಡಿ.


Click it and Unblock the Notifications








