Home
ಸುದ್ದಿಜಾಲ

ಕಡಿಮೆ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಸೌಲಭ್ಯದ ಪ್ಲ್ಯಾನ್‌ಗಳು!

ಟೆಲಿಕಾಂ ಕಂಪನಿಗಳು ಹಲವು ಭಿನ್ನ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಅಧಿಕ ಡೇಟಾ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಹಾಗೆಯೇ ಬಹುತೇಕ ಗ್ರಾಹಕರು ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳನ್ನು ರೀಚಾರ್ಜ್ ಮಾಡಿಸಲು ಮನಸು ಮಾಡುತ್ತಾರೆ. ಈ ನಿಟ್ಟಿನಲ್ಲಿ ಜಿಯೋ, ಏರ್‌ಟೆಲ್, ವೊಡಾಫೋನ್ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ.

ಜಿಯೋ, ಏರ್‌ಟೆಲ್, ವೊಡಾಫೋನ್

ಹೌದು, ಜಿಯೋ, ಏರ್‌ಟೆಲ್, ವೊಡಾಫೋನ್ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿಗಳು ಬಳಕೆದಾರರಿಗೆ ಹೆಚ್ಚಿನ ವ್ಯಾಲಿಡಿಟಿ ನೀಡುವ ಹಲವು ಯೋಜನೆಗಳನ್ನು ನೀಡಿವೆ. ಅವುಗಳಲ್ಲಿ ಕೆಲವು ಪ್ಲ್ಯಾನ್‌ಗಳು ಅಧಿಕ ಡೇಟಾವನ್ನು ಒಳಗೊಂಡಿವೆ ಹಾಗೆಯೇ ಇನ್ನು ಕೆಲವು ಪ್ಲ್ಯಾನ್‌ಗಳು ಕಡಿಮೆ ಡೇಟಾ ಪ್ರಯೀಜನವನ್ನು ಪಡೆದಿವೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ಪಡೆದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ 379ರೂ. ಪ್ಲ್ಯಾನ್‌

ಏರ್‌ಟೆಲ್‌ 379ರೂ. ಪ್ಲ್ಯಾನ್‌

ಏರ್‌ಟೆಲ್‌ನ ಈ 379ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ.

ಜಿಯೋ 329ರೂ. ಪ್ಲ್ಯಾನ್

ಜಿಯೋ 329ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ವಾಯಿಸ್‌ ಕರೆಗಾಗಿ ಒಟ್ಟು 3000 ನಿಮಿಷಗಳ ಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್ 379ರೂ. ಪ್ಲ್ಯಾನ್

ವೊಡಾಫೋನ್ 379ರೂ. ಪ್ಲ್ಯಾನ್

ವೊಡಾಫೋನ್ ಟೆಲಿಕಾಂನ 379ರೂ. ಪ್ರೀಪೇಡ್ ಪ್ಲ್ಯಾನ್‌ ಸಹ ದೀರ್ಘಾವಧಿಯ ಪ್ಲ್ಯಾನ್ ಆಗಿದೆ. ಈ ಪ್ರೀಪೇಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಹಾಗೆಯೇ ಈ ಅವಧಿಯಲ್ಲಿ ಭಾರತದೊಳಗಿನ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು ಮತ್ತು ಒಟ್ಟು 1000 ಎಸ್‌ಎಮ್‌ಎಸ್‌ ಸೌಲಭ್ಯಗಳು ಸಿಗಲಿವೆ. ಅದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡಾಟಾ ಸೌಲಭ್ಯ ದೊರೆಯುತ್ತದೆ. ಜೊತೆಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಜೀ5 ಪ್ರೀಮಿಯಮ್ ಸೇವೆ ಪಡೆಯಬಹುದು

Best Mobiles in India

English summary
These kind of plans are good for people who recharge with the purpose of calling more than using data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+