Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಪ್ರಿಯರಿಗೆ ಹಬ್ಬವೋ ಹಬ್ಬ!..ಈ ಆಫರ್‌ ತಿಳಿದ್ರೆ, ಫುಲ್‌ ಖುಷ್‌!

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ಕೊಡುಗೆ ಲಭ್ಯ ನೀಡಲಾಗುತ್ತದೆ. ಪ್ರಮುಖ ಬ್ರ್ಯಾಂಡ್‌ನ ಫೋನ್‌ಗಳು ಕೂಡಾ ಬೊಂಬಾಟ್‌ ರಿಯಾಯಿತಿ ಪಡೆದಿರುತ್ತವೆ. ಸದ್ಯ ಸ್ಯಾಮ್‌ಸಂಗ್‌ ಸಂಸ್ಥೆಯ 'ಗ್ಯಾಲಕ್ಸಿ F54 5G' ಫೋನ್‌ ಅಮೆಜಾನ್‌ ತಾಣದಲ್ಲಿ ಅಧಿಕ ಡಿಸ್ಕೌಂಟ್‌ ಮೂಲಕ ಆಕರ್ಷಿಸಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F54 5G ಮೊಬೈಲ್‌ ಶೇ. 26% ರಷ್ಟು ನೇರ ಡಿಸ್ಕೌಂಟ್‌ ಪಡೆದಿದ್ದು, ಖರೀದಿದಾರರು ಈ ಮೊಬೈಲ್‌ ಅನ್ನು 26,470ರೂ. ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್‌ ಕೊಡುಗೆ ಹಾಗೂ ಇಎಮ್‌ಐ ಕೊಡುಗೆಗಳು ಸಹ ಲಭ್ಯ ಸಿಗಲಿವೆ.

ಸ್ಯಾಮ್‌ಸಂಗ್‌ ಪ್ರಿಯರಿಗೆ ಹಬ್ಬವೋ ಹಬ್ಬ!..ಈ ಆಫರ್‌ ತಿಳಿದ್ರೆ, ಫುಲ್‌ ಖುಷ್‌!

ಇನ್ನು ಸ್ಯಾಮ್‌ಸಂಗ್‌ ಸಂಸ್ಥೆಯ ಈ ಮೊಬೈಲ್‌ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್‌ ಸಪೋರ್ಟ್‌ ಪಡೆದಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಹಾಗಾದರೆ ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್ ಮತ್ತು ಪ್ರೊಸೆಸರ್‌ ಬಲ ಹೀಗಿವೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F54 5G ಮೊಬೈಲ್‌ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, 6.67 ಇಂಚಿನ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಫೋನ್‌ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್‌ ಬಲದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಈ ಫೋನ್‌ ಇದು 8 GB RAM + 256 GB ಆಯ್ಕೆಗಳಲ್ಲಿ ಪಡೆದಿದೆ.

ಸ್ಯಾಮ್‌ಸಂಗ್‌ ಪ್ರಿಯರಿಗೆ ಹಬ್ಬವೋ ಹಬ್ಬ!..ಈ ಆಫರ್‌ ತಿಳಿದ್ರೆ, ಫುಲ್‌ ಖುಷ್‌!

ತ್ರಿವಳಿ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಗ್ಯಾಲಕ್ಸಿ F54 5G ಮೊಬೈಲ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಮೊದಲ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಅದೇ ರೀತಿ ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಆಗಿದೆ. ಇನ್ನು ಸೆಲ್ಫಿ ಕ್ಯಾಮೆರಾಗಾಗಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ.

ಸ್ಯಾಮ್‌ಸಂಗ್‌ ಪ್ರಿಯರಿಗೆ ಹಬ್ಬವೋ ಹಬ್ಬ!..ಈ ಆಫರ್‌ ತಿಳಿದ್ರೆ, ಫುಲ್‌ ಖುಷ್‌!

ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F54 5G ಫೋನ್‌ 6,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದರ ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್-C ಪೋರ್ಟ್ ಆಯ್ಕೆಗಳು ಇವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಮೊಬೈಲ್‌ 6.4 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಪಡೆದಿದೆ. ಈ ಫೋನ್ ಎಕ್ಸಿನೋಸ್ 1380 SoC ಪ್ರೊಸೆಸರ್‌ ಮೂಲಕ ಕೆಲಸ ನಿರ್ವಹಿಸಲಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಆಯ್ಕೆ ಇವೆ.

ಇನ್ನು ಈ ಫೋನ್‌ ಗ್ಯಾಲಕ್ಸಿ A54 5G ಫೋನ್‌ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸರ್‌ ನಲ್ಲಿದೆ. ಈ ಮೊಬೈಲ್‌ 5,000 mAh ಬ್ಯಾಟರಿ ಹೊಂದಿದ್ದು, 25W ವೇಗದ ಚಾರ್ಜಿಂಗ್‌ ಸಪೋರ್ಟ್‌ ಪಡೆದುಕೊಂಡಿದೆ.

Best Mobiles in India

English summary
Samsung Galaxy F54 5g gets a huge price cut on amazon. specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+