Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಕಳೆದು ಹೋದರೆ, ತಡ ಮಾಡದೇ ಈ ಕೆಲಸ ಮಾಡಿ!

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರಿಗೂ ಅತೀ ಅವಶ್ಯಕ ಡಿವೈಸ್‌ ಆಗಿದ್ದು, ಇಂದಿನ ಬಹುತೇಕ ಕೆಲಸಗಳು ಆನ್‌ಲೈನ್ ಮೂಲಕವೇ ನಡೆಯುತ್ತವೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ಅನಿವಾರ್ಯ ಆಗಿದೆ. ಬಳಕೆದಾರರು ಫೋನಿನಲ್ಲೇ ಮಹತ್ವದ ಮಾಹಿತಿ ಸೇವ್ ಮಾಡಿರುತ್ತಾರೆ. ಹೀಗಾಗಿ ಅಚಾನಕ್ ಆಗಿ ಫೋನ್‌ ಕಳೆದು ಹೋದರೆ, ಪೊಲೀಸ್ ಇಲಾಖೆಯ ಈ ಆಪ್‌ ಬಳಕೆ ಮಾಡಿರಿ.

ಸ್ಮಾರ್ಟ್‌ಫೋನ್‌ ಕಳೆದು ಹೋದ ಸಂದರ್ಭದಲ್ಲಿ ಬಳಕೆದಾರರು ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ಫೋನ್‌ ಕಳೆದ ಹೋದ ಕೂಡಲೆ ಇನ್ನೊಂದು ಫೋನಿನಲ್ಲಿ ಪೊಲೀಸ್‌ ಇಲಾಖೆಯ KSP ಅಪ್ಲಿಕೇಶನ್ ಮೂಲಕ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಬ್ಲಾಕ್ ಮಾಡಬಹುದಾಗಿದೆ. ಕಳೆದ ಹೋದ ಮೊಬೈಲ್‌ ಬಗ್ಗೆ ವರದಿ ಕೂಡಾ ಮಾಡಬಹುದಾಗಿದೆ.

ಸ್ಮಾರ್ಟ್‌ಫೋನ್‌ ಕಳೆದು ಹೋದರೆ, ತಡ ಮಾಡದೇ ಈ ಕೆಲಸ ಮಾಡಿ!

KSP ಆಪ್‌ ಮೂಲಕ ಕಳೆದ ಹೋದ ಫೋನ್‌ ಬ್ಲಾಕ್ ಮಾಡಲು ಈ ಕ್ರಮ ಅನುಸರಿಸಿ :

ಹಂತ 1 : ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ KSP ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ ಮತ್ತು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿರಿ.
ಹಂತ 2 : ಮೊಬೈಲ್‌ ದೂರನ್ನು ಇ- ಲಾಸ್ಟ್‌ (E- LOST) ನಲ್ಲಿ ವರದಿ ಮಾಡಲು KSP ಅಪ್ಲಿಕೇಶನ್ ತೆರೆಯಿರಿ ಮತ್ತು ಇಲ್ಲಿರುವ e - lost ವರದಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
ಹಂತ 3 : ಆ ನಂತರ e - lost ವರದಿಯನ್ನು ನೋಂದಾಯಿಸಿ ಆಯ್ಕೆಯನ್ನು ಕ್ಲಿಕ್ ಮಾಡಿರಿ.

ಸ್ಮಾರ್ಟ್‌ಫೋನ್‌ ಕಳೆದು ಹೋದರೆ, ತಡ ಮಾಡದೇ ಈ ಕೆಲಸ ಮಾಡಿ!

ಹಂತ 4 : ಆ ಬಳಿಕ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ರಾಜ್ಯ, ಮೊಬೈಲ್‌ ನಂಬರ್ ಹಾಗೂ ಇ - ಮೇಲ್ ಐಡಿ ನೋಂದಾಯಿಸಿರಿ. ನಂತರ NEXT ಆಯ್ಕೆ ಅನ್ನು ಕ್ಲಿಕ್ ಮಾಡಿರಿ
ಹಂತ 5 : ತದ ನಂತರ ಮೊಬೈಲ್‌ ಖರೀದಿಯ ಬಿಲ್ ಇದ್ದರೆ, ಅದನ್ನು ಕೂಡಾ ಅಪ್‌ಲೋಡ್‌ ಮಾಡಿರಿ ನಂತರ select article option ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ
ಹಂತ 6 : ಬಳಿಕ ಮೊಬೈಲ್‌ (Mobile) ಆಯ್ಕೆ ಅನ್ನು ಆಯ್ಕೆ ಮಾಡಿರಿ

ಹಂತ 7 : ನಂತರ ಮೊಬೈಲ್‌ ಮಾಹಿತಿ ಅನ್ನು ನೋಂದಾಯಿಸಿರಿ ಮತ್ತು Add ಆಯ್ಕೆ ಅನ್ನು ಕ್ಲಿಕ್ ಮಾಡಿ
ಹಂತ 8 : ಆ ಬಳಿಕ ಮೊಬೈಲ್‌ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿ ಅನ್ನು ಹಾಗೂ ಕಳೆದು ಹೋದ ಬಗೆಯ ಬಗ್ಗೆ ಮಾಹಿತಿ ನೋಂದಾಯಿಸಿ.
ಹಂತ 9 : ಕೊನೆಯದಾಗಿ SUBMIT ಆಯ್ಕೆ ಅನ್ನು ಕ್ಲಿಕ್ ಮಾಡಿರಿ, ಕೊನೆಯಲ್ಲಿ ರಶೀದಿಯನ್ನು ಪಡೆಯಿರಿ.

ಮೊಬೈಲ್‌ ಬ್ಲಾಕ್ ಮಾಡುವ ಜೊತೆಗೆ ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿರಿ. ಇದರಿಂದ ವಂಚಕರು ಹಣಕಾಸು ಸೇವೆಗಳ OTP ಗಾಗಿ ಅಥವಾ ಇತರ ವೈಯಕ್ತಿಕ ಮೆಸೆಜ್‌ಗಳಿಗೆ ಪ್ರವೇಶ ಪಡೆಯಲು ಸಾಧ್ಯ ಆಗುವುದಿಲ್ಲ. ಆ ನಂತರ ಅದೇ ನಂಬರ್‌ನ ಹೊಸ ಸಿಮ್ ಕಾರ್ಡ್‌ ಅನ್ನು ಪಡೆಯಬಹುದಾಗಿದೆ.

ಅಲ್ಲದೇ ನಿಮ್ಮ ಮೊಬೈಲ್ ಫೋನ್ ಕಳೆದುಕೊಂಡರೆ, ನಿಮ್ಮ ಖಾತೆ ಇರುವ ಬ್ಯಾಂಕ್‌ಗೆ ಭೇಟಿ ನೀಡಿ ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ. ಜೊತೆಗೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಆಕ್ಸಸ್‌ ಅನ್ನು ಕೂಡಾ ನಿರ್ಬಂಧಿಸಿ. ಇದರಿಂದ ವಂಚಕರು ನಿಮ್ಮ ಬ್ಯಾಂಕಿಂಗ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯ ಆಗುವುದಿಲ್ಲ. ಸುರಕ್ಷತೆಯ ದೃಷ್ಠಿಯಿಂದ ಈ ಕ್ರಮ ಸೂಕ್ತ ಆಗಿದೆ.

Best Mobiles in India

English summary
If you Lost smartphone, Secure it with KSP application. Follow these steps to block your lost smartphone. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+