ನಾಳೆ ವರ್ಷದ ಮೊದಲ 'ಚಂದ್ರ ಗ್ರಹಣ': ಆನ್‌ಲೈನ್‌ನಲ್ಲಿ ಗ್ರಹಣ ವೀಕ್ಷಿಸಿ!

|

2019ರ ವರ್ಷದ ಕೊನೆಯಲ್ಲಿ ಅಪರೂಪದ 'ಕಂಕಣ ಸೂರ್ಯಗ್ರಹಣ'ಕ್ಕೆ ಸಾಕ್ಷಿ ಆಗಿದ್ದ ಸೌರವ್ಯೂಹವು, ಇದೀಗ ಚಂದ್ರ ಗ್ರಹಣಕ್ಕೂ ಸಾಕ್ಷಿ ಆಗಲಿದೆ. ಇದೇ ಜನವರಿ 10 ರಂದು (ನಾಳೆ) ಈ ವರ್ಷದ-2020ರ ಮೊದಲ ಚಂದ್ರ ಗ್ರಹಣ ಗೋಚರವಾಗಲಿದ್ದು, ಭಾರತದಲ್ಲಿಯೂ ಕಾಣಿಸಲಿದೆ. ಈ ಗ್ರಹಣಕ್ಕೆ 'ತೋಳ ಚಂದ್ರ ಗ್ರಹಣ' ಎಂದು ಕರೆಯಲಾಗಿದೆ.

ಚಂದ್ರ ಗ್ರಹಣ

ಚಂದ್ರ ಗ್ರಹಣ ವೀಕ್ಷಣೆ ಮಾಡಲು ಯಾವುದೇ ವಿಶೇಷ ಕನ್ನಡಕ ಅಗತ್ಯವಿಲ್ಲ ವೆಂದು ಹೇಳಲಾಗಿದೆ. ಹೀಗಾಗಿ ಸೌರವ್ಯೂಹದ ಈ ಕುತೂಹಲಕರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಆದರೆ ಯಾವೆಲ್ಲಾ ಭಾಗಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ? ಚಂದ್ರ ಗ್ರಹಣ ಯಾವ ಸಮಯದಲ್ಲಿ ಗೋಚರಿಸುತ್ತದೆ? ಭಾರತದಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೆಯಾ? ಎನ್ನುವ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರ ಇಲ್ಲಿದೆ.

ಪೆನಂಬ್ರಲ್ ಚಂದ್ರ ಗ್ರಹಣ

ಪೆನಂಬ್ರಲ್ ಚಂದ್ರ ಗ್ರಹಣ

ಇದೇ ಜನವರಿ 10, 2020ರಂದು ರಾತ್ರಿ ಸಮಯದಲ್ಲಿ ಗರಿಷ್ಠ ಚಂದ್ರ ಗ್ರಹಣ ಗೋಚರಿಸಲಿದೆ. ಭಾಗಶಃ ಭೂಮಿಯ ಶೇಕಡಾ 90 ರಷ್ಟು ನೆರಳು ಚಂದ್ರನನ್ನು ಆವರಿಸಲಿದ್ದು, ನೆರಳಿನ ಹೊರಭಾಗ ಮಾತ್ರ ಕಾಣಿಸಲಿದೆ. ನಾಳೆ ಹುಣ್ಣಿಮೆ ದಿನವಾಗಿದ್ದು, ಪೆನಂಬ್ರಲ್ ಚಂದ್ರ ಗ್ರಹಣ ಗೋಚರ

ಯಾವಾಗ ಗೋಚರವಾಗುತ್ತದೆ

ಯಾವಾಗ ಗೋಚರವಾಗುತ್ತದೆ

ಪೆನಂಬ್ರಲ್ ಚಂದ್ರ ಗ್ರಹಣವು ಒಟ್ಟು 4 ಗಂಟೆ 5 ನಿಮಿಷಗಳ ಕಾಲ ಗೋಚರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:37 ರಿಂದ ಜನವರಿ 11 ರ, ಬೆಳಿಗ್ಗೆ 2:42 ರವರೆಗೆ ಗೋಚರಿಸಲಿದೆ.

ಯಾವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ

ಯಾವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ

ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ನಾರ್ತ್ ಅಮೆರಿಕಾ, ಸೌತ್‌ ಅಮೆರಿಕಾ, ಫೆಸಿಫಿಕ್, ಅಂಟ್ಲಾಂಟಿಕ್, ಇಂಡಿಯನ್ ಓಶಿಯನ್, ಅರ್ಕಾಟಿಕ್ ಪ್ರದೇಶಗಳಲ್ಲಿ ಪೆನಂಬ್ರಲ್ ಚಂದ್ರ ಗ್ರಹಣ ಗೋಚರವಾಗಲಿದೆ.

ಆನ್‌ಲೈನ್‌ನಲ್ಲಿ ಚಂದ್ರ ಗ್ರಹಣ ವೀಕ್ಷಿಸಬಹುದೆ?

ಆನ್‌ಲೈನ್‌ನಲ್ಲಿ ಚಂದ್ರ ಗ್ರಹಣ ವೀಕ್ಷಿಸಬಹುದೆ?

ಖಂಡಿತಾ ಆನ್‌ಲೈನ್‌ನಲ್ಲಿ ಚಂದ್ರ ಗ್ರಹಣ ನೇರ ದೃಶ್ಯಾವಳಿಗಳನ್ನು (Live) ವೀಕ್ಷಿಸಬಹುದಾಗಿದೆ. ಇದಕ್ಕೆ ಕಾಸ್ಮೊ ಸಾಪಿಯನ್ಸ್ (CosmoSapiens)‌ ಯೂಟ್ಯೂಬ್ ಚಾನೆಲ್ ವೇದಿಕೆ ರೂಪಿಸಿದೆ. ಭಾರತೀಯ ಸಮಯ ರಾತ್ರಿ 10:37 ಕ್ಕೆ ಚಂದ್ರ ಗ್ರಹಣವು ಆರಂಭವಾಗಲಿದೆ.

ಬರಿಗಣ್ಣಿನಿಂದ ವೀಕ್ಷಿಸಬಹುದೆ?

ಬರಿಗಣ್ಣಿನಿಂದ ವೀಕ್ಷಿಸಬಹುದೆ?

ಪೆನಂಬ್ರಲ್ ಚಂದ್ರ ಗ್ರಹಣವು ದೇಶದ ಬಹುತೇಕ ಎಲ್ಲ ಪ್ರದೇಶಗಳಲ್ಲಿಯೂ ಗೋಚರವಾಗಲಿದ್ದು, ಗ್ರಹಣವನ್ನು ವೀಕ್ಷಣೆ ಮಾಡಲು ಯಾವುದೇ ವಿಶೇಷ ಕನ್ನಡಕ ಅಗತ್ಯವಿಲ್ಲ. ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ.

Most Read Articles
Best Mobiles in India

English summary
Lunar Eclipse-2020 or Chandra Grahan in India: On January 10 night, at maximum eclipse, 90 per cent of the Moon will be partially shaded by the Earth. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X