Subscribe to Gizbot

ಆಧಾರ್ ಬಳಕೆದಾರರ ಸುರಕ್ಷತೆಗಾಗಿ ಬಂದಿದೆ 'mAadhaar' ಆಪ್: ಏನಿದರ ವಿಶೇಷತೆ

Written By:

ಆಧಾರ್ ಮಾಹಿತಿಯೂ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಆಧಾರ್ ಮಾಹಿತಿಗಳನ್ನು ಸೇಫ್ ಮಾಡಲು ಶತಪ್ರಯತ್ನಗಳನ್ನು ಮಾಡುತ್ತಿದೆ. ಇದೆ ಮಾದರಿಯಲ್ಲಿ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು ಸರಳವಾಗಿ ಸುಭದ್ರವಾಗಿ ಇಡುವ ಸಲುವಾಗಿ ಹೊಸ ಆಪ್ ವೊಂದನ್ನು ಬಿಡುಗಡೆ ಮಾಡಿದೆ.

ಆಧಾರ್ ಬಳಕೆದಾರರ ಸುರಕ್ಷತೆಗಾಗಿ ಬಂದಿದೆ''mAadhaar' ಆಪ್: ಏನಿದರ ವಿಶೇಷತೆ

ಓದಿರಿ: ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಮತ್ತೊಂದು ಮೋಸ ಬಯಲು..!! ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ..!!

ಸಾರ್ವಜನಿಕರಿಗೆ ಎಲ್ಲೆಡೆ ತಮ್ಮ ಆಧಾರ್ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಎಂ ಆಧಾರ್ ಆಪ್ ಬಂದಿದ್ದು, ಇದು ಆಧಾರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ರೂಪಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಪ್ಲೇ ಸ್ಟೋರಿನಲ್ಲಿದೆ:

ಗೂಗಲ್ ಪ್ಲೇ ಸ್ಟೋರಿನಲ್ಲಿದೆ:

ಎಂ ಆಧಾರ್ ಕಾರ್ಡ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಈಗಾಗಲೇ ಈ ಆಪ್ ಬಳಕೆಗೆ ಮುಕ್ತವಾಗಿದೆ. ಈ ಆಪ್ ಅನ್ನು UIDAI ಬಿಡುಗಡೆ ಮಾಡಿದೆ. ಈ ಆಪ್ ನಿಮ್ಮ ಬಯೋಮೆಟ್ರಿಕ್ ಮಾಹಿತಿ, ನಿಮ್ಮ ಫೋಟೋ ಸೇರಿದಂತೆ ಆಧಾರ್ ಕಾರ್ಡ್ ಮಾಹಿತಿಯನ್ನು ಒಳಗೊಂಡಿರುತ್ತದೆ. ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಅಲ್ಲದೇ ಬಯೋಮೆಟ್ರಿಕ್ ಲಾಕ್ ಮಾಡಬಹುದು:

ಅಲ್ಲದೇ ಬಯೋಮೆಟ್ರಿಕ್ ಲಾಕ್ ಮಾಡಬಹುದು:

ಈ ಆಪ್ ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಸಲು ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್‌ಲಾಕಿಂಗ್ ಮಾಡಬಹುದಾಗಿದೆ. ಅಲ್ಲದೇ ಓಪನ್ ಮಾಡುವ ಸಲುವಾಗಿ OTPಯನ್ನು ಇಟ್ಟುಕೊಳ್ಳಬಹುದಾಗಿದೆ.

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಅಲ್ಲದೇ ಆಧಾರ್ ಕಾರ್ಡ್ ಆಪ್‌ಡೇಟ್ ಮಾಡಬಹುದು:

ಅಲ್ಲದೇ ಆಧಾರ್ ಕಾರ್ಡ್ ಆಪ್‌ಡೇಟ್ ಮಾಡಬಹುದು:

ಇದಲ್ಲದೇ ಆಧಾರ್ ಬಳಕೆದಾರರು ತಮ್ಮ ಮಾಹಿತಿಯನ್ನು ಆಪ್‌ಡೇಟ್ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಮೊಬೈಲ್ ನಂಬರ್ ಸೇರಿದಂತೆ ಇತರ ಮಾಹಿತಿಯನ್ನು ಬದಲಾಯಿಸಿಕೊಳ್ಳಬಹುದು.

ಇದು ಪಾಕೆಟ್ ಆಧಾರ್ ಆಗಲಿದೆ:

ಇದು ಪಾಕೆಟ್ ಆಧಾರ್ ಆಗಲಿದೆ:

ಈ ಎಂ ಆಧಾರ್ ನಿಮ್ಮ ಪಾಕೆಟ್ ಆಧಾರ್ ಆಗಲಿದೆ. ಯಾವುದೇ ಸೇವೆಗಳನ್ನು ಪಡೆಯಲು ನೀವು ಆಧಾರ್ ನೀಡಬೇಕಾದ ಸಂದರ್ಭದಲ್ಲಿ ನೀವು ಈ ಆಪ್ ನಲ್ಲಿರುವ ಮಾಹಿತಿಯನ್ನು ನೀಡಿದರೆ ಸಾಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The 'mAadhaar' app comes with a biometric locking/unlocking feature to secure the personal data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot