ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

By Ashwath
|

ಕಳೆದ ವಾರವಷ್ಟೇ ಮನುಷ್ಯನ ಮೂತ್ರದಿಂದ ಮೊಬೈಲ್‌ ಚಾರ್ಜ್‌ ಮಾಡಬಹುದು ಎಂಬ ಸುದ್ದಿಯನ್ನು ನೀವು ಓದಿರಬಹುದು. ಈಗ ನೋಡಿ ಮತ್ತೊಂದು ಸುದ್ದಿ ಬಂದಿದೆ. ನಿಮ್ಮ ಬೆವರನ್ನು ನೀವೇ ಕುಡಿಯಬಹುದಂತೆ! ಸ್ವೀಡನ್‌ ಸಂಶೋಧಕರು ಮನುಷ್ಯನ ಬೆವರನ್ನು ಕುಡಿಯವ ನೀರಾಗಿ ಪರಿವರ್ತ‌ನೆ ಮಾಡುವ ಹೊಸ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಕಳೆದ ವಾರ ಇದರ ಪ್ರಯೋಗ ಯಶಸ್ವಿಯಾಗಿದ್ದು ಸಾವಿರಕ್ಕಿಂತಲೂ ಅಧಿಕ ಮಂದಿ ತಮ್ಮ ಬೆವರನ್ನು ತಾವೇ ಕುಡಿದಿದ್ದಾರೆ.

ಒಟ್ಟಿನಲ್ಲಿ ಈ ಯಂತ್ರ ಈಗ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಹೀಗಾಗಿ ಈ ಯಂತ್ರ ಹೇಗೆ ಕೆಲಸ ಮಾಡುತ್ತದೆ? ನೋಡಲು ಹೇಗಿದೆ? ಯಾವ ಕಾರಣಕ್ಕಾಗಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುವ ಮತ್ತಿತ್ತರ ಮಾಹಿತಿ ಮತ್ತು ಈ ಯಂತ್ರದ ವೀಡಿಯೋ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ಸ್ವೀಡನ್‌ನ ರಾಯಲ್‌ ಇನ್ಸ್ ಟಿಟ್ಯೂಟ್ ಆಫ್‌ ಟೆಕ್ನಾಲಜಿ ಸಹಯೋಗದೊಂದಿಗೆ ಎಚ್‌ವಿಆರ್‌ ಕಂಪೆನಿ ಈ ಯಂತ್ರವನ್ನು ಅಭಿವೃದ್ದಿ ಪಡಿಸಿದೆ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ಸಂಶೋಧಕ ಆಂಡ್ರಿಯಾಸ್ ಹಮ್ಮರ್‌(Andreas Hammar)ನೇತೃತ್ವದಲ್ಲಿ ಈ ಯಂತ್ರವನ್ನು ಎಚ್‌ವಿಆರ್‌ ಕಂಪೆನಿ ಅಭಿವೃದ್ಧಿಪಡಿಸಿದೆ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ವಾಶಿಂಗ್‌ ಮೆಷಿನ್‌ನಂತ ಈ ಯಂತ್ರ ಕೆಲಸ ಮಾಡುತ್ತದೆ. ಬೆವರಿರುವ ಬಟ್ಟೆಯನ್ನು ಈ ಯಂತ್ರದೊಳಗೆ ಹಾಕಲಾಗುತ್ತದೆ. ಯಂತ್ರದ ಶಾಖಕ್ಕೆ ಬಟ್ಟೆಯಲ್ಲಿರುವ ಬೆವರು ಆವಿಯಾಗಿ ಬಟ್ಟೆ ಶುಭ್ರಗೊಳ್ಳತ್ತದೆ. ಈ ಆವಿಯಾದ ಬೆವರು ಒಂದು ವಿಶೇಷವಾಗಿ ರೂಪಿಸಲಾದ ಪದರದ(membrane) ಮೂಲಕ ಹಾದು ಹೋದಾಗ,ಈ ಬೆವರಿನಲ್ಲಿರುವ ಉಪ್ಪಿನ ಅಂಶವಿರುವ ಅಣುಗಳು ನೀರಾಗಿ ಪರಿವರ್ತ‌ನೆಯಾಗುತ್ತದೆ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶ ಯಾನಿಗಳು ತಮ್ಮ ಮೂತ್ರವನ್ನೇ ನೀರಾಗಿ ಪರಿವರ್ತ‌ನೆ ಮಾಡುವ ಯಂತ್ರದ ನಿರ್ಮಾ‌ಣಕ್ಕಿಂತಲೂ ಈ ಯಂತ್ರದ ನಿರ್ಮಾ‌ಣದ ವೆಚ್ಚ ತುಂಬಾ ಕಡಿಮೆ ಎಂದು ಸಂಶೋಧಕ ಆಂಡ್ರಿಯಾಸ್ ಹಮ್ಮರ್‌ ಹೇಳುತ್ತಾರೆ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ವಿಶ್ವದಲ್ಲಿ 78ಕೋಟಿ ಜನ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ವಿಶ್ವಸಂಸ್ಥೆಯ ಯುನಿಸೆಫ್‌ ಪ್ರಚಾರಕ್ಕಾಗಿ ಈ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ಈಗಾಗಲೇ ಒಂದು ಸಾವಿರಕ್ಕಿಂತಲೂ ಅಧಿಕ ಮಂದಿ ತಮ್ಮ ಬೆವರನ್ನು ತಾವೇ ಕುಡಿದಿದ್ದಾರೆ.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ಇದೇ14 ರಿಂದ 20ರವರೆಗೆ ಸ್ವೀಡನ್‌ನಲ್ಲಿ ನಡೆದ ವಿಶ್ವದ ಅತಿದೊಡ್ಡ ಅಂತರಾಷ್ಟ್ರೀಯ ಯುವ ಫುಟ್ಬಾಲ್ ಪಂದ್ಯಾವಳಿ ಗೋತಿಯಾ ಕಪ್‌ನಲ್ಲಿ(Gothia Cup) ಈ ಯಂತ್ರವನ್ನು ಪ್ರದರ್ಶ‌ನಕ್ಕಿಡಲಾಗಿತ್ತು.

ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ವೀಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X