Home
ಸುದ್ದಿಜಾಲ

Google: ಇನ್ಮುಂದೆ ಲಭ್ಯವಾಗಲಿವೆ ಮೇಡ್‌ ಇನ್‌ ಇಂಡಿಯಾ ಗೂಗಲ್ ಪಿಕ್ಸೆಲ್ ಫೋನ್‌?

ಭಾರತ ಇತ್ತೀಚೆಗೆ ಸ್ಮಾರ್ಟ್‌ಫೋನ್‌ (Smartphone) ಕಂಪೆನಿಗಳ ನೆಚ್ಚಿನ ತಾಣ ಆಗುತ್ತಿವೆ. ಈ ಕಾರಣಕ್ಕೆ ಟೆಕ್‌ ದೈತ್ಯರೆಲ್ಲಾ ಇಲ್ಲಿ ಭದ್ರವಾಗಿ ನೆಲೆಯೂರುತ್ತಿದ್ದಾರೆ. ಈ ನಡುವೆ ಮೇಡ್‌ ಇನ್‌ ಇಂಡಿಯಾ ಗೂಗಲ್ ಪಿಕ್ಸೆಲ್ (Google Pixel) ಫೋನ್‌ ಲಭ್ಯವಾಗಲಿವೆ ಎನ್ನಲಾಗಿದೆ.

ಹೌದು, ಗೂಗಲ್ ಕಂಪನಿಯು ಡಿಕ್ಸನ್ ಟೆಕ್ನಾಲಜೀಸ್ ಜೊತೆ ಪಾಲುದಾರಿಕೆ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದ್ದು, ಗೂಗಲ್ ಪಿಕ್ಸೆಲ್ ಫೋನ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ತಯಾರಿಸಬಹುದು ಎಂದು ತಿಳಿದುಬಂದಿದೆ. ಹಾಗಿದ್ರೆ ಈ ಫೋನ್‌ಗಳು ಯಾವಾಗ ಇಲ್ಲಿ ತಯಾರಾಗಲಿವೆ?, ಬೆಲೆ ಏನಾದರೂ ಕಡಿಮೆ ಆಗಲಿದೆಯೇ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Google: ಇನ್ಮುಂದೆ ಲಭ್ಯವಾಗಲಿವೆ ಮೇಡ್‌ ಇನ್‌ ಇಂಡಿಯಾ ಗೂಗಲ್ ಪಿಕ್ಸೆಲ್ ಫೋನ್‌?

ಮೇಡ್ ಇನ್‌ ಇಂಡಿಯಾ ಗೂಗಲ್ ಪಿಕ್ಸೆಲ್‌ ಫೋನ್‌: ಮೊದಲೇ ತಿಳಿಸಿದಂತೆ ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಡಿಕ್ಸನ್ ಟೆಕ್ನಾಲಜೀಸ್ ಜೊತೆ ಪಾಲುದಾರಿಕೆ ಹೊಂದಿದೆ. ಈ ಕ್ರಮವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಮತ್ತು ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎನ್ನಲಾಗಿದೆ.

ಈ ಸಂಬಂಧ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ವರದಿಯ ಪ್ರಕಾರ ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಡಿಕ್ಸನ್ ಟೆಕ್ನಾಲಜೀಸ್‌ನೊಂದಿಗೆ (Dixon Technologies) ಗೂಗಲ್ ಪಾಲುದಾರಿಕೆ ಹೊಂದಿದೆ ಎಂದು ಉಲ್ಲೇಖ ಮಾಡಲಾಗಿದೆ. ಆದರೆ ಕಂಪನಿಯು ಅಧಿಕೃತವಾಗಿ ಈ ಸಹಯೋಗವನ್ನು ದೃಢೀಕರಿಸದಿದ್ದರೂ, ಈ ವರದಿಯು ಸರ್ಕಾರದ ಮೂಲಗಳನ್ನು ಉಲ್ಲೇಖಿಸುತ್ತದೆ.

ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಗೂಗಲ್‌ನ ಯೋಜನೆಯ ಬಗ್ಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಸುಳಿವು ನೀಡಲಾಗಿತ್ತು. ಪಿಕ್ಸೆಲ್ 8 ಮತ್ತು ಭವಿಷ್ಯದ ಆವೃತ್ತಿಗಳನ್ನು ಭಾರತದಲ್ಲಿ ಉತ್ಪಾದಿಸಲು ಸ್ಥಳೀಯ ಉತ್ಪಾದನಾ ಪಾಲುದಾರರು ಮತ್ತು ಪೂರೈಕೆ ಸರಪಳಿ ಪೂರೈಕೆದಾರರೊಂದಿಗೆ ಸಹಕರಿಸುವ ಉದ್ದೇಶವನ್ನು ಕಂಪನಿಯು ಇಲ್ಲಿ ಉಲ್ಲೇಖಿಸಿದೆ.

ವರದಿಯ ಪ್ರಕಾರ, ಈ ಯೋಜನೆಗೆ ಡಿಕ್ಸನ್ ಟೆಕ್ನಾಲಜೀಸ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ಮತ್ತು ಉದ್ಯಮದ ಮೂಲಗಳು ಸೂಚಿಸಿದ್ದು, ಪ್ರಾಯೋಗಿಕ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಅಕ್ಟೋಬರ್‌ನಲ್ಲಿ ನಡೆದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ತಮ್ಮ ಭಾಷಣದಲ್ಲಿ ಭಾರತದಲ್ಲಿ ಉತ್ಪಾದನೆಯಲ್ಲಿ ಗೂಗಲ್‌ನ ಆಸಕ್ತಿಯನ್ನು ದೃಢಪಡಿಸಿದ್ದರು. ಭಾರತದ ಡಿಜಿಟಲ್ ಬೆಳವಣಿಗೆ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸಲು ಗೂಗಲ್‌ನ ಬದ್ಧತೆಯನ್ನು ಪಿಚೈ ಎತ್ತಿ ತೋರಿಸಿದ್ದರು.

ಕಳೆದ ವರ್ಷದಲ್ಲಿ, ಗೂಗಲ್ ವಿವಿಧ ಸಂಭಾವ್ಯ ಪಾಲುದಾರರೊಂದಿಗೆ ಮಾತುಕತೆ ನಡೆಸಿದೆ ಮತ್ತು ಡಿಕ್ಸನ್ ಟೆಕ್ನಾಲಜೀಸ್ ಅನ್ನು ಇತ್ತೀಚೆಗೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಈ ನಿರ್ಧಾರವು ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಸ್ಪರ್ಧಾತ್ಮಕತೆ ಮತ್ತು ಮೊಬೈಲ್ ಫೋನ್ ತಯಾರಕರಿಗೆ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೀಡಲಾದ ಪ್ರಯೋಜನಗಳಿಂದ ಪ್ರಭಾವಿತವಾಗಿರಬಹುದು.

ಇದು ನಿಜವೇ ಆದರೆ ಈ ಕ್ರಮವು ಜಾಗತಿಕ ಸ್ಮಾರ್ಟ್‌ಫೋನ್ ಉತ್ಪಾದನಾ ಭೂದೃಶ್ಯದಲ್ಲಿ ಭಾರತಕ್ಕೆ ಮಹತ್ವದ ಹೆಜ್ಜೆಯಾಗಲಿದೆ. ಅದರ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ.

ಗೂಗಲ್‌ ಪಿಕ್ಸೆಲ್‌ 8a: ಈ ನಡುವೆ ಕೆಲವು ವಾರಗಳ ಹಿಂದೆ ಗೂಗಲ್‌ ಗೂಗಲಗ ಪಿಕ್ಸೆಲ್‌ 8a ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗಿದೆ. ಪಿಕ್ಸೆಲ್‌ 8a ಸ್ಮಾರ್ಟ್‌ಫೋನ್‌ ಜಾಗತಿಕವಾಗಿ 128GB ಮತ್ತು 256GB ಸ್ಟೋರೇಜ್‌ ಆಯ್ಕೆಯಲ್ಲಿ ಲಬ್ಯ ಇದೆ. ಈ ಎರಡೂ ಸ್ಟೋರೇಜ್‌ ವೇರಿಯಂಟ್‌ 8GB RAM ಆಯ್ಕೆ ಪಡೆದಿದೆ. ಭಾರತದಲ್ಲಿ 128GB ವೇರಿಯಂಟ್‌ 52,999 ಮತ್ತು 256GB ವೇರಿಯಂಟ್‌ 59,999ರೂ.ಗಳ ಬೆಲೆ ಹೊಂದಿದೆ. ಜೊತೆಗೆ ಈ ಫೋನ್ ಅಲೋ, ಬೇ, ಅಬ್ಸಿಡಿಯನ್ ಮತ್ತು ಪಿಂಗಾಣಿ ಬಣ್ಣದಲ್ಲಿ ಲಭ್ಯ ಇರಲಿದೆ.

Best Mobiles in India

English summary
It is learned that Google has partnered with Dixon Technologies to manufacture Google Pixel phones in India soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+