ಮೇಡ್ ಇನ್ ಇಂಡಿಯಾ ಐಫೋನ್: ಟಾಟಾ ಗ್ರೂಪ್‌ನಿಂದ ಭಾರತದಲ್ಲಿ ಐಫೋನ್ 15 ಸರಣಿ ಜೋಡಣೆ!
ಆಪಲ್ ಫೋನ್‌ಗಳ ಬಳಕೆ ಹೆಚ್ಚಾದಂತೆ ಹಾಗೂ ಕೊರೊನಾ ನಂತರದ ಸಮಯದಲ್ಲಿ ಆದ ಬದಲಾವಣೆ ಹಿನ್ನೆಲೆ ಆಪಲ್ ಕಂಪೆನಿ ಭಾರತದ ಕಡೆ ಮುಖ ಮಾಡಿದೆ. ಈ ಕಾರಣಕ್ಕೆ ಆಪಲ್‌ನ ಕೆಲವು ಡಿವೈಸ್‌ಗಳನ್ನು ಭಾರತದಲ್ಲಿಯೇ ಜೋಡಿಸಲಾಗುತ್ತಿದೆ. ಈ ಕೆಲಸವನ್ನು ತಮಿಳುನಾಡಿನಲ್ಲಿ ಫಾಕ್ಸ್‌ಕಾನ್ ಮತ್ತು ಪೆಗಾಟ್ರಾನ್ ಮತ್ತು ಕರ್ನಾಟಕದಲ್ಲಿ ವಿಸ್ಟ್ರಾನ್ ಮಾಡುತ್ತಿದೆ.
ಹೌದು, ಆಪಲ್ ಕಂಪನಿಯು ಐಫೋನ್, ಐಪ್ಯಾಡ್ ಟ್ಯಾಬ್ಲೆಟ್, ಕಂಪ್ಯೂಟರ್, ಮ್ಯಾಕ್ ಪರ್ಸನಲ್ ಕಂಪ್ಯೂಟರ್, ಐಪಾಡ್, ಪೋರ್ಟಬಲ್ ಮೀಡಿಯಾ ಪ್ಲೇಯರ್ ಅನ್ನು ತಯಾರಿಸುತ್ತದೆ. ಈ ನಡುವೆ ಆಪಲ್‌ನ ಹೊಸ ಮುಂಬರುವ ಐಫೋನ್‌ಗಳು ಶೀಘ್ರದಲ್ಲೇ ಭಾರತದಲ್ಲಿ ಉತ್ಪಾದನೆಯಾಗಲಿವೆ. ತನ್ನ ಐಫೋನ್‌ಗಳ ಉತ್ಪಾದನೆಗೆ ಚೀನಾದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಕಂಪೆನಿಯು ಭಾರತದಲ್ಲಿ ಐಫೋನ್ 15 ಸರಣಿಯ ಕೆಲವು ಮಾದರಿಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ.

ಇನ್ನು ಐಫೋನ್ 15 ಸರಣಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗುವ ಸಾಧ್ಯತೆ ಇದ್ದು, ಇವುಗಳಲ್ಲಿ ಐಫೋನ್ 15ಮತ್ತು ಐಫೋನ್ 15ಪ್ಲಸ್ ಫೋನ್‌ಗಳನ್ನು ಟಾಟಾ ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣಕ್ಕಾಗಿ ಆಪಲ್ ಜೊತೆ ಟಾಟಾ ಗ್ರೂಪ್ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಟಾಟಾ ಗ್ರೂಪ್ ತಂತ್ರಜ್ಞಾನದಲ್ಲಿ ದೊಡ್ಡ ಹೆಜ್ಜೆ ಇರಿಸಿದೆ. ಇನ್ನು ಟಾಟಾಗ್ರೂಪ್ ಭಾರತದಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದ್ದು, ಕಾರು ತಯಾರಿಕೆಯಿಂದ ಹಿಡಿದು ಪ್ರತಿಯೊಂದು ಸಣ್ಣಮತ್ತು ದೊಡ್ಡ ವ್ಯವಹಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
ಪ್ರಮುಖ ವಿಷಯ ಏನೆಂದರೆ ಇದು ಪ್ರಧಾನಿ ಮೋದಿಯವರ ಮೇಡ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿದೆ. ಅದರಲ್ಲೂ ಟಾಟಾ ಗ್ರೂಪ್ ವಿಸ್ಟ್ರಾನ್‌ನ ಭಾರತೀಯ ಉತ್ಪಾದನಾ ಮಾರ್ಗವನ್ನು ಸ್ವಾಧೀನಪಡಿಸಿಕೊಂಡಿದೆ ಎನ್ನಲಾಗಿದ್ದು, ವಿಸ್ಟ್ರಾನ್ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಲು ಸಜ್ಜಾಗುತ್ತಿರುವ ವೇಳೆಯಲ್ಲಿಯೇ ಈ ಹಕ್ಕು ಈಗ ಟಾಟಾಗೆ ಸಿಕ್ಕಿದೆ. ಈ ಮೂಲಕ ಐಫೋನ್ ಭಾರತದಲ್ಲಿ ತಯಾರಾಗಿರುವುದರಿಂದ ಅದರ ಬೆಲೆಯೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆಪಲ್ ಭಾರತಕ್ಕೆ ಪ್ರಾಮುಖ್ಯತೆ ಕೊಡಲು ಕಾರಣ ಏನು?: ಭಾರತ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಭಾರತವು ತಂತ್ರಜ್ಞಾನದ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಕಾರ್ಮಿಕ ವೆಚ್ಚವು ತುಂಬಾ ಅಗ್ಗವಾಗಿದೆ. ಈ ಕಾರಣಕ್ಕೆ ಭಾರತದಲ್ಲಿ ಐಫೋನ್ 15 ಅನ್ನು ಜೋಡಿಸುವುದು ಆಪಲ್ ಕಂಪೆನಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಟಾಟಾ ಐಪೋನ್ ತಯಾರಿಸುವ ನಾಲ್ಕನೇ ಕಂಪನಿಯಾಗಲಿದೆ: ಈ ಹಿಂದೆ, ಫಾಕ್ಸ್‌ಕಾನ್, ಪೆಗಾಟ್ರಾನ್ ಮತ್ತು ಲಕ್ಸ್‌ಶೇರ್‌ನಂತಹ ಕಂಪನಿಗಳು ಭಾರತದಲ್ಲಿ ಐಫೋನ್‌ಗಳನ್ನು ಜೋಡಿಸುತ್ತಿದ್ದವು .ಆದರೆ, ಈಗ ಟಾಟಾ ಗ್ರೂಪ್ ಈ ರೇಸ್‌ಗೆ ಸೇರ್ಪಡೆಗೊಳ್ಳುತ್ತಿದ್ದು, ಈ ಮೂಲಕ ಐಫೋನ್ ಉತ್ಪಾದಿಸುವ ನಾಲ್ಕನೇ ಕಂಪನಿಯಾಗಿ ಗುರುತಿಸಿಕೊಳ್ಳಲಿದೆ. ಅದರಂತೆ ಟಾಟಾ ಗ್ರೂಪ್ ಆಪಲ್‌ನ ಮುಂಬರುವ ಮಾದರಿಗಳಾದ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಅನ್ನು ಭಾರತದಲ್ಲಿ ಜೋಡಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಐಫೋನ್ 15 ನ ಭಾಗ ಜೋಡಣೆಗಾಗಿ ಈಗಾಗಲೇ ಪ್ರಾಯೋಗಿಕ ಕೆಲಸಗಳು ಹೊಸೂರಿನಲ್ಲಿ ಪ್ರಾರಂಭವಾಗಿವೆ ಎಂದು ತಿಳಿದುಬಂದಿದೆಯಾದರೂ ಈ ಕೆಲಸ ಭಾರತದಲ್ಲಿ ಸಂಪೂರ್ಣವಾಗಿ ಈ ವರ್ಷದ ನಂತರ ನಡೆಯಬಹುದು ಎನ್ನಲಾಗಿದೆ. ಈ ಮೂಲಕ ಟಾಟಾ ಎರಡೂ ಮಾದರಿಗಳಲ್ಲಿ ಕೇವಲ 5 ಪ್ರತಿಶತವನ್ನು ಮಾತ್ರ ಜೋಡಿಸುತ್ತದೆ. ಇನ್ನು ಫಾಕ್ಸ್‌ಕಾನ್ ಹೊಸ ಐಫೋನ್‌ನ ಸಾಮಾನ್ಯ ರೂಪಾಂತರದ 70 ಪ್ರತಿಶತವನ್ನು ಜೋಡಿಸುತ್ತದೆ ಮತ್ತು ಲಕ್ಸ್‌ಶೇರ್ ಸಾಮಾನ್ಯ ರೂಪಾಂತರದ 25 ಪ್ರತಿಶತವನ್ನು ಜೋಡಿಸುತ್ತದೆ.
ಇದರೊಂದಿಗೆ ಲಕ್ಸ್‌ಶೇರ್ ಐಪೋನ್ ಪ್ಲಸ್ ರೂಪಾಂತರಕ್ಕಾಗಿ ಶೇಕಡಾ 60ರಷ್ಟು ಅಸೆಂಬ್ಲಿ ಆರ್ಡರ್‌ಗಳನ್ನು ಮತ್ತು ಪೆಗಾಟ್ರಾನ್ ಪ್ಲಸ್ ರೂಪಾಂತರಕ್ಕಾಗಿ ಶೇಕಡಾ 35ರಷ್ಟು ಅಸೆಂಬ್ಲಿ ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.ಇನ್ನು ಫಾಕ್ಸ್‌ಕಾನ್,ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಕಂಪೆನಿಗಳು ಭಾರತದಲ್ಲಿ ಎಂಡ್-ಟು-ಎಂಡ್ ಫೋನ್‌ಗಳನ್ನು ತಯಾರಿಸುತ್ತಿವೆ. FY23ನಲ್ಲಿ ಭಾರತವು ಐಫೋನ್‌ನ ಒಟ್ಟು ಜಾಗತಿಕ ಉತ್ಪಾದನೆಯಲ್ಲಿ5%ರಷ್ಟನ್ನು ಹೊಂದಿದ್ದು, ಈ ಮೂಲಕ $5ಶತಕೋಟಿ ಮೌಲ್ಯದ ಫೋನ್‌ಗಳನ್ನು ರಫ್ತು ಮಾಡಿದಂತೆ ಆಗಿದೆ. ಇದು ಒಂದು ವರ್ಷದ ಹಿಂದೆ ಹೋಲಿಸಿದರೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.
ಇನ್ನು ಭಾರತದಲ್ಲಿ ಜೋಡಿಸಲಾಗುವ ಐಫೋನ್ 15 ನಲ್ಲಿ ಬಳಕೆದಾರರು ಅನೇಕ ನವೀಕರಣಗಳನ್ನು ಪಡೆಯಬಹುದು ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ಈ ಬಾರಿ ಬಳಕೆದಾರರು ಅಪಲ್ ಐಫೋನ್‌ನಲ್ಲಿ 15 ನಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ನೋಡಬಹುದು ಎಂದು ನಂಬಲಾಗಿದೆ. ಜೊತೆಗೆ ಕ್ಯಾಮರಾ ವಿಭಾಗದಲ್ಲೂ ಕೆಲವು ಬದಲಾವಣೆ ಆಗಬಹುದು ಎಂದು ತಿಳಿದುಬಂದಿದೆ. ಅದಾಗ್ಯೂ ಕೆಲವು ಲೀಕ್ ಮಾಹಿತಿ ಪ್ರಕಾರ ಬಟನ್‌ಗಳಿಲ್ಲದ ಐಫೋನ್ ಲಾಂಚ್ ಆಗಲಿದೆಯಂತೆ.


Click it and Unblock the Notifications








