NxtQuantum OS: ಭಾರತದ ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನಾವರಣ!
ರಿಯಲ್‌ಮಿ ಇಂಡಿಯಾದ ಮಾಜಿ ಸಿಇಒ ಮಾಧವ್ ಶೇಠ್ ಅವರ ಹೊಸ NxtQuantum Shift Technologies ಸಂಸ್ಥೆಯು ಭಾರತದಲ್ಲಿ ಅಭಿವೃದ್ಧಿಪಡಿಸಿದ ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಮ್ NxtQuantum OS ಅನ್ನು ಅನಾವರಣಗೊಳಿಸಿದೆ. ನಿರೀಕ್ಷೆಯಂತೆಯೇ, NxtQuantum OS ಬಳಕೆದಾರರ ಗೌಪ್ಯತೆ, ಡೇಟಾ ಮಾಲೀಕತ್ವ ಮತ್ತು ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಂಸ್ಥೆಯು ತಿಳಿಸಿದ್ದು, ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಅನುಮೋದಿಸಿದ Google Cloud ಪ್ರದೇಶಗಳಲ್ಲಿ ಬಳಕೆದಾರರ ಡೇಟಾವನ್ನು ಸಂಗ್ರಹಿಸಲಾಗುತ್ತದೆ ಎಂದು ಖಚಿತಪಡಿಸಿದೆ.
NxtQuantum OS ಅನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. NxtQuantum Shift Technologies ಸಂಸ್ಥೆಯೇ ತಯಾರಿಸಿರುವ AI+ ಪಲ್ಸ್ ಮತ್ತು AI+ ನೋವಾ 5G ( ₹5,000 ಆರಂಭಿಕ ಬೆಲೆಯಲ್ಲಿ ಬರಲಿವೆ) ಈ ಸಾಧನಗಳು ಜುಲೈ 8 ರಂದು ಮಧ್ಯಾಹ್ನ 12:30 ಕ್ಕೆ ಬಿಡುಗಡೆಯಾಗಲಿವೆ. ಈ ಸ್ಮಾರ್ಟ್‌ಫೋನ್‌ಗಳು ಹೊಸ ಆಪರೇಟಿಂಗ್ ಸಿಸ್ಟಮ್‌ನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ ಮತ್ತು ಬಳಕೆದಾರರಿಗೆ ಸುರಕ್ಷಿತ ಹಾಗೂ ವೈಯಕ್ತಿಕ ಮೊಬೈಲ್ ಅನುಭವವನ್ನು ನೀಡುತ್ತವೆ ಎಂದು ಸಂಸ್ಥೆಯು ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.

NxtQuantum OS: ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳು
ಭಾರತದಲ್ಲಿ ತಯಾರಾಗಿರುವ ಹೊಸ NxtQuantum OS ನ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಗೌಪ್ಯತೆಯ ಬದ್ಧತೆ. ಯಾವುದೇ ಮೂರನೇ ವ್ಯಕ್ತಿಯ ಪ್ರವೇಶ, ಅನಧಿಕೃತ ಟ್ರ್ಯಾಕಿಂಗ್ ಅಥವಾ ಡೇಟಾದ ವಿದೇಶಿ ರೂಟಿಂಗ್‌ಗೆ ಇಲ್ಲಿ ಅವಕಾಶವಿಲ್ಲ. ಆಪರೇಟಿಂಗ್ ಸಿಸ್ಟಮ್ ಬುದ್ಧಿವಂತ ಮತ್ತು ಸಂದರ್ಭ-ಅರಿವುಳ್ಳ ಕಾರ್ಯಗಳನ್ನು ಒದಗಿಸಲು ಸ್ಥಳೀಯವಾಗಿ ತರಬೇತಿ ಪಡೆದ AI ಎಂಜಿನ್‌ಗಳನ್ನು ಬಳಸುತ್ತದೆ. ಈ ವಿಧಾನವು ಬಳಕೆದಾರರ ಡೇಟಾದ ಮೇಲೆ ಸಂಪೂರ್ಣ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಕಾಪಾಡಿಕೊಳ್ಳುವಾಗಲೂ ಕಾರ್ಯಕ್ಷಮತೆ ಅತ್ಯುತ್ತಮವಾಗಿರುವುದನ್ನು ಖಚಿತಪಡಿಸುತ್ತದೆ.
ಈ ಆಪರೇಟಿಂಗ್ ಸಿಸ್ಟಮ್ ಭಾರತೀಯ ಕಾನೂನುಗಳು ಮತ್ತು ಡೇಟಾ ಸಂರಕ್ಷಣಾ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದೆ. ಇದು ರಕ್ಷಣೆ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳಂತಹ ಸೂಕ್ಷ್ಮ ಪರಿಸರಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಎಲ್ಲಾ ಸಾಫ್ಟ್‌ವೇರ್ ಅಪ್‌ಡೇಟ್‌ಗಳು, ಭದ್ರತಾ ಪ್ಯಾಚ್‌ಗಳು ಮತ್ತು ಹೊಸ ವೈಶಿಷ್ಟ್ಯಗಳ ರೋಲ್‌ಔಟ್‌ಗಳನ್ನು ಸಂಪೂರ್ಣವಾಗಿ ಭಾರತದೊಳಗೆ ನಿರ್ವಹಿಸಲಾಗುತ್ತದೆ. ಈ ಸ್ಥಳೀಯ ನಿರ್ವಹಣೆಯು ಸಿಸ್ಟಮ್‌ನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

NxtQuantum OS Google Cloud ನ ಝೀರೋ-ಟ್ರಸ್ಟ್ ಆರ್ಕಿಟೆಕ್ಚರ್ (ಶೂನ್ಯ-ವಿಶ್ವಾಸಾರ್ಹ ವಾಸ್ತುಶಿಲ್ಪ) ಮೇಲೆ ನಿರ್ಮಿಸಲಾಗಿರುವ ಈ ಸಿಸ್ಟಮ್, ಡೇಟಾ ಪ್ರವೇಶಕ್ಕೆ ಮೊದಲ-ಸಮ್ಮತಿ ವಿಧಾನವನ್ನು ಅನುಸರಿಸುತ್ತದೆ.
NxtQuantum Shift Technologies ನ ಸಂಸ್ಥಾಪಕ ಮತ್ತು CEO ಮಾಧವ್ ಶೇತ್ ಅವರು ಈ ಬಿಡುಗಡೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ: "ನಾವು ಗೌಪ್ಯತೆಯನ್ನು ಕೇವಲ ಒಂದು ಸೆಟ್ಟಿಂಗ್‌ಗಿಂತ ಹೆಚ್ಚಾಗಿ ನೋಡುತ್ತೇವೆ. NxtQuantum OS ಅನ್ನು ವಿನ್ಯಾಸಗೊಳಿಸುವುದಕ್ಕೆ ನಮ್ಮ ಮೂಲ ತತ್ವವೆಂದರೆ - ನಿಮ್ಮ ಫೋನ್ ನಿಮಗಾಗಿ ಕೆಲಸ ಮಾಡಬೇಕು, ನಿಮ್ಮ ವಿರುದ್ಧವಲ್ಲ. ನಿಮ್ಮ ಸಾಧನದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನಿಮ್ಮೊಂದಿಗೆ ಉಳಿಯುತ್ತದೆ. ನಾವು ಸಹ ಅದನ್ನು ಪ್ರವೇಶಿಸಲು ಸಾಧ್ಯವಿಲ್ಲ. ಈ ಪರಿಸರ ವ್ಯವಸ್ಥೆಯು ಅಂತಹ ನಂಬಿಕೆ ಮತ್ತು ನಿಯಂತ್ರಣದ ಮಟ್ಟವನ್ನು ಸ್ಥಾಪಿಸುತ್ತದೆ. Google Cloud ನ ಸುರಕ್ಷಿತ ಮತ್ತು ಸ್ಕೇಲೆಬಲ್ ಮೂಲಸೌಕರ್ಯದೊಂದಿಗೆ, ವಿಶ್ವ ದರ್ಜೆಯ ಗೌಪ್ಯತೆ ಮತ್ತು ರಾಷ್ಟ್ರೀಯ ಡೇಟಾ ಆಡಳಿತ ಒಟ್ಟಾಗಿ ಕೆಲಸ ಮಾಡಬಹುದು ಎಂದು ನಾವು ಪ್ರದರ್ಶಿಸುತ್ತಿದ್ದೇವೆ." ಎಂದು ಹೇಳಿದ್ದಾರೆ.
AI+ ಪಲ್ಸ್ ಮತ್ತು AI+ ನೋವಾ 5G : ಜುಲೈ 8 ರಂದು ಬಿಡುಗಡೆ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಲು NxtQuantum Shift Technologies ಕಂಪನಿಯು ಸಜ್ಜಾಗಿದೆ.ಮಾಧವ್ ಶೇಠ್ ಸ್ಥಾಪಿಸಿರುವ ಈ ಹೊಸ ಕಂಪನಿಯು, AI+ ಬ್ರ್ಯಾಂಡ್ ಅಡಿಯಲ್ಲಿ AI+ ಪಲ್ಸ್ ಮತ್ತು AI+ ನೋವಾ 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇದೇ ಜುಲೈ 8 ರಂದು ಪರಿಚಯಿಸುತ್ತಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಕೇವಲ ₹5,000 ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಖಚಿತವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








