Home
ಸುದ್ದಿಜಾಲ

ಮುಂಬರುವ ಈ ಹೊಸ ಫೋನ್‌ಗಳ ಬ್ಯಾಟರಿ ಬ್ಯಾಕ್‌ಅಪ್‌ ತಿಳಿದ್ರೆ, ನೀವು ಶಾಕ್‌ ಆಗ್ತೀರಾ?

ಪ್ರಸ್ತುತ ಮೊಬೈಲ್‌ ಫೊನ್‌ಗಳು ಎಲ್ಲರಿಗೂ ಅಗತ್ಯ ಹಾಗೂ ಅವಶ್ಯ ಡಿವೈಸ್‌ಗಳಾಗಿ ಗುರುತಿಸಿಕೊಂಡಿವೆ. ಹಲವು ದೈನಂದಿನ ಕೆಲಸಗಳು ಮೊಬೈಲ್‌ ಮೂಲಕವೇ ನಡೆಯುತ್ತವೆ ಹೀಗಾಗಿ, ಮೊಬೈಲ್‌ಗೆ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಅಗತ್ಯ ಎನಿಸುತ್ತದೆ. ಇಂದಿನ ಬಹುತೇಕ ಹೊಸ ಫೋನ್‌ಗಳು ಆಕರ್ಷಕ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದ್ದು, ಕನಿಷ್ಠ ಒಂದು ದಿನದ ಬ್ಯಾಕ್‌ಅಪ್‌ ನೀಡುತ್ತಿವೆ. ಆದರೆ ಇದೀಗ 2025 ರಲ್ಲಿ ಬರುವ ಆಂಡ್ರಾಯ್ಡ್‌ ಫೋನ್‌ಗಳ ಬ್ಯಾಟರಿಬ್ಯಾಕ್‌ಅಪ್‌ ಗ್ರಾಹಕರಿಗೆ ಅಚ್ಚರಿ ಮೂಡಿಸಲಿದೆ.

ಹೌದು, ಸಂಸ್ಥೆಗಳು ಮೊಬೈಲ್‌ಗಳಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಆಗುತ್ತಾ ಸಾಗಿದ್ದು, ಇದೀಗ ಬ್ಯಾಟರಿ (battery) ಬ್ಯಾಕ್‌ಅಪ್‌ನಲ್ಲಿ ಹೊಸತನ ಕಾಣಿಸಲು ಸಜ್ಜಾಗಿವೆ. 2025 ರಲ್ಲಿ ಲಗ್ಗೆ ಇಡುವ ಆಂಡ್ರಾಯ್ಡ್‌ ಫ್ಲ್ಯಾಗ್‌ಶಿಪ್‌ ಮೊಬೈಲ್‌ಗಳು ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿರಲಿವೆ. ಸದ್ಯ ಮಾರುಕಟ್ಟೆಯಲ್ಲಿ 5000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಮುಂದಿನ ವರ್ಷ ಬ್ಯಾಟರಿ ಬ್ಯಾಕ್‌ಅಪ್‌ ದಿಕ್ಕೇ ಬದಲಾಗಲಿದೆ.

ಮುಂಬರುವ ಈ ಹೊಸ ಫೋನ್‌ಗಳ ಬ್ಯಾಟರಿ ಬ್ಯಾಕ್‌ಅಪ್‌ ತಿಳಿದ್ರೆ, ನೀವು ಶಾಕ್‌ ಆಗ್ತೀರಾ

ಪ್ರಸಕ್ತ ವರ್ಷದ ಕೆಲವು ಜನಪ್ರಿಯ ಫ್ಲ್ಯಾಗ್‌ಶಿಪ್‌ ಫೋನ್‌ಗಳಾದ ಒನ್‌ಪ್ಲಸ್‌ 12 ಮೊಬೈಲ್‌, ವಿವೋ X100 ಪ್ರೊ ಮೊಬೈಲ್‌, ವಿವೋ X100 ಅಲ್ಟ್ರಾ ಮೊಬೈಲ್‌, ಫೈಂಡ್‌ X7 ಅಲ್ಟ್ರಾ ಹಾಗೂ ಹಾನರ್‌ ಮ್ಯಾಜಿಕ್‌ 6 ಪ್ರೊ ಫೋನ್‌ಗಳು 5500 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯದಲ್ಲಿ ಕಾಣಿಸಿಕೊಂಡಿದ್ದು, ಕನಿಷ್ಠ ಒಂದೂವರೆ ದಿನ ಬ್ಯಾಕ್‌ಅಪ್‌ ಒದಗಿಸಿವೆ. ಇನ್ನು ಲೀಕ್‌ ಮಾಹಿತಿಗಳ ಪ್ರಕಾರ 2025 ರಲ್ಲಿ ಮೊಬೈಲ್‌ ಸಂಸ್ಥೆಗಳು ತಮ್ಮ ಫ್ಲ್ಯಾಗ್‌ಶಿಪ್‌ ಫೋನ್‌ಗಳ ಬ್ಯಾಟರಿಯನ್ನು ಕನಿಷ್ಠ 6000 mAh ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಒನ್‌ಪ್ಲಸ್‌ 13 ಮೊಬೈಲ್‌ ಮತ್ತು ವಿವೋ X200 ಪ್ರೊ ಮೊಬೈಲ್‌ಗಳು 6000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿವೆ.

ಹಾಗೆಯೇ ಇತ್ತೀಚಿನ ಹಾನರ್‌ ಮ್ಯಾಜಿಕ್‌ 7 ಪ್ರೊ ಮೊಬೈಲ್‌ 5850 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಜನಪ್ರಿಯ ಶಿಯೋಮಿ (Xiaomi) 15 ಪ್ರೊ ಸ್ಮಾರ್ಟ್‌ಫೋನ್‌ 6100 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದ್ದು, ಅದೇ ರೀತಿ ಐಕ್ಯೂ 13 ಮೊಬೈಲ್‌ 6150 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ.

ಇನ್ನು ಶಿಯೋಮಿ 14 ಮೊಬೈಲ್‌ ನಲ್ಲಿ 4610 mAh ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದೆ. ಆದರೆ ನೂತನ ಶಿಯೋಮಿ 15 ಮೊಬೈಲ್ 5400 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರಲಿದೆ. ಹಾಗೆಯೇ ಫೈಂಡ್‌ X8 ಫೋನ್‌ 5610 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆಯುತ್ತಿದೆ. ಅಂದಹಾಗೆ ವಿವೋ ಕಂಪನಿಯ ವಿವೋ X200 ಪ್ರೊ ಮಿನಿ ಮೊಬೈಲ್‌ 5700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದೆ.

ಇತ್ತೀಚಿನ ಹೊಸ ಐಕ್ಯೂ 13 ಮೊಬೈಲ್ 6.82 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಸ್ಕ್ರೀನ್‌ 2K ಸಪೋರ್ಟ್‌, BOE Q10 8T LTPO 2.0 OLED ಡಿಸ್‌ಪ್ಲೇ ಹೊಂದಿದೆ. ಈ ಫೋನ್‌ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ ಸಾಮರ್ಥ್ಯದ ಪವರ್‌ನಲ್ಲಿ ಕೆಲಸ ಮಾಡಲಿದೆ. ಮುಖ್ಯವಾಗಿ ಐಕ್ಯೂ 13 ಮೊಬೈಲ್ 6,150 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದ್ದು, ಇದಕ್ಕೆ ಅನುಗುಣವಾಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಪಡೆದಿದೆ.

Best Mobiles in India

English summary
Major Battery Upgrades Expected for Android Flagships in 2025. check out more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+