Home
ಸುದ್ದಿಜಾಲ

79,999ರೂ. ಬೆಲೆಯ ಈ ಫ್ಲಿಪ್‌ ಫೋನ್‌ ಈಗ 49,999ರೂ. ಗಳಿಗೆ ಲಭ್ಯ!

ದೈತ್ಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಆಕರ್ಷಕ ಡಿಸ್ಕೌಂಟ್‌ ಮೂಲಕ ಗ್ರಾಹಕರನ್ನು ಸೆಳೆದಿದೆ. ಅದರಲ್ಲಿಯೂ ಪ್ರಮುಖವಾಗಿ ಸ್ಮಾರ್ಟ್‌ಫೋನ್‌ ಒಂದಿಲ್ಲೊಂದು ವಾವ್‌ ಎನಿಸುವ ಆಫರ್‌ ನೀಡಿ ಗಮನ ಸೆಳೆಯುತ್ತದೆ. ಹೀಗೆ ಇದೀಗ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇನ್ಫಿನಿಕ್ಸ್ ಸಂಸ್ಥೆಯ ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಮೊಬೈಲ್‌ ಭಾರೀ ರಿಯಾಯಿತಿ ಪಡೆದಿದ್ದು, ಹೊಸ ಫ್ಲಿಪ್‌ ಫೋನ್‌ ಖರೀದಿಸುವವರ ಗ್ರಾಹಕರು ಖುಷ್ ಆಗುವಂತೆ ಮಾಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಮೊಬೈಲ್ ಶೇ. 37% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 8 GB RAM + 512 GB ಸ್ಟೋರೇಜ್‌ ವೇರಿಯಂಟ್‌ ಬೆಲೆ 79,999ರೂ, ಇದ್ದು, ಆಫರ್‌ನಲ್ಲಿ 49,999ರೂ. ಗಳಿಗೆ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಆಫರ್‌ ಪಡೆದುಕೊಂಡರೆ, ಇನ್ನಷ್ಟು ರಿಯಾಯಿತಿ ಲಭ್ಯ.

79,999ರೂ. ಬೆಲೆಯ ಈ ಫ್ಲಿಪ್‌ ಫೋನ್‌ ಈಗ 49,999ರೂ. ಗಳಿಗೆ ಲಭ್ಯ!

ಇನ್ನು ಈ ಮೊಬೈಲ್‌ 4720mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಈ ಇನ್ಫಿನಿಕ್ಸ್ ಫೋನ್‌ 8GB RAM ಮತ್ತು 512GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮಾಹಿತಿ

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಮೊಬೈಲ್‌ 6.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ LTPO ಅಮೋಲೆಡ್ ಪ್ರಾಥಮಿಕ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 1080 x 2640 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 1400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್‌ ಹೊಂದಿದೆ. ಈ ಫೋನಿನ 3.64 ಇಂಚಿನ ಅಮೋಲೆಡ್ ಕವರ್ ಡಿಸ್‌ಪ್ಲೇ ಪಡೆದಿದ್ದು, ಇದು 1056 x 1066 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರ, 1100 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದ್ದು, ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿದೆ.

ಪ್ರೊಸೆಸರ್ ಪವರ್‌ ಹೀಗಿದೆ

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಮೊಬೈಲ್‌ ಆಕ್ಟಾ ಕೋರ್ ಡೈಮೆನ್ಸಿಟಿ 8020 6 nm ಪ್ರೊಸೆಸರ್‌ ಹೊಂದಿದೆ. ಜೊತೆಗೆ, ಮಾಲಿ G77 MC9 ಜಿಪಿಯು ಲಭ್ಯವಿದೆ. ಇದರ ಜೊತೆಗೆ 16GB RAM ವರೆಗೆ ಹೆಚ್ಚುವರಿ RAM ಬಳಸಬಹುದು. ಅಲ್ಲದೇ 8GB RAM ಮತ್ತು 512GB ವರೆಗೆ ಆಂತರೀಕ ಸ್ಟೋರೇಜ್‌ ಪಡೆದಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 ಆಧಾರಿತ XOS 14.5 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆನ್ಸಾರ್‌ ಯಾವುದು

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಮೊಬೈಲ್‌ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್‌ ಜೊತೆಗೆ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ. ಇದು 30 FPS ನಲ್ಲಿ 4K ನಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಇದೆ. ಜೊತೆಗೆ 50 ಮೆಗಾಪಿಕ್ಸೆಲ್ ಸೆನ್ಸಾರ್‌ನ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟು

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಮೊಬೈಲ್‌ 4720mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಈ ಫೋನ್‌ 70W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಜೆಬಿಎಲ್‌ ಡ್ಯುಯಲ್ ಸ್ಪೀಕರ್, ವೈ-ಫೈ 6, ಬ್ಲೂಟೂತ್ 5.4, ಎನ್‌ಎಫ್‌ಸಿ (NFC), ಯುಎಸ್‌ಬಿ-ಸಿ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Major Price Drop on the Infinix Zero Flip 5G on Flipkart. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+