ಶೀಘ್ರದಲ್ಲೇ ಪ್ರವಾಸಿ ತಾಣಗಳಲ್ಲೂ ವೈಫೈ ಸೌಲಭ್ಯ
ಭಾರತ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸೀ ತಾಣಗಳಲ್ಲಿ ವೈಫೈ ಸೌಲಭ್ಯಗಳನ್ನು ಅಳವಡಿಸುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವರಾದ ರವಿಶಂಕರ್ ಪ್ರಸಾದ್ ದೆಹಲಿಯಲ್ಲಿ ತಿಳಿಸಿದ್ದಾರೆ.

ಓದಿರಿ: ಖರೀದಿಸಿ ರೂ 8,000 ಕ್ಕೆ ಲಾಲಿಪಪ್ ಫೋನ್‌ಗಳು
ತಾಜ್ ಮಹಲ್, ಸಾರನಾಥ್, ಬೋಧಗಯಾ ಮೊದಲಾದ ಪ್ರದೇಶಗಳು ವೈಫೈ ಸೌಲಭ್ಯವನ್ನು ಶೀಘ್ರದಲ್ಲಿ ಪಡೆದುಕೊಳ್ಳಲಿವೆ. ವಾರಣಾಸಿ ಘಾಟ್‌ಗಳಲ್ಲಿ ಈಗಾಗಲೇ ವೈಫೈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇನ್ನು ಪ್ರವಾಸಿಗರಿಗೆ ಸರಕಾರವು ಇ ವೀಸಾವನ್ನು ವಿತರಿಸುತ್ತಿದೆ

ಹೆಚ್ಚಿನ ಎಲ್ಲಾ ಪ್ರಮುಖ ನಗರಗಳನ್ನು ಐಟಿ ವಲಯವನ್ನಾಗಿಸುವ ಇರಾದೆ ಸಚಿವಾಲಾಯಕ್ಕಿದ್ದು ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಣ್ಣ ನಗರಗಳಲ್ಲಿ ಕಾಲ್ ಸೆಂಟರ್ ಮತ್ತು ಬಿಪಿಒಗಳನ್ನು ಆರಂಭಿಸುವ ಮೂಲಕ 48,000 ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು ಸಣ್ಣ ನಗರಗಳಲ್ಲಿ ಐಟಿ ಕ್ರಾಂತಿಯನ್ನು ನಡೆಸುವುದಕ್ಕಾಗಿ ನಾವು ಸಹಾಯ ಧನವನ್ನು ನೀಡುತ್ತೇವೆ ಎಂಬುದು ಸಚಿವರ ಹೇಳಿಕೆಯಾಗಿದೆ.
ಓದಿರಿ: ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್
ಇ ಕಾಮರ್ಸ್ ಎಂಬುದು ದೊಡ್ಡ ಅವಕಾಶವಾಗಿದ್ದು ಸಣ್ಣ ನಗರಗಳು ಮತ್ತು ಹಳ್ಳಿಗಳಿಗೆ ಸರಕುಗಳನ್ನು ವಿತರಿಸಲು ಅಂಚೆ ವಿಭಾಗವನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದೇವೆ ತಮ್ಮ ಸರಕುಗಳನ್ನು ವಿತರಿಸಲು ಅಂಚೆ ವಿಭಾಗ ದೊಡ್ಡ ಇ ಕಾಮರ್ಸ್ ಕಂಪೆನಿಗಳಿಗೆ ವಿಶ್ವಾಸಾರ್ಹ ಪಾಲುದಾರನೆಂದೆನಿಸಿದೆ.

100 ಕೋಟಿ ಮೊಬೈಲ್ ಚಂದಾದಾರರನ್ನು ಭಾರತ ಆದಷ್ಟು ಬೇಗನೇ ಹೊಂದಲಿದ್ದು, ಇನ್ನೆರಡು ವರ್ಷಗಳಲ್ಲಿ ಇಂಟರ್ನೆಟ್ ಸಂಪರ್ಕಗಳು 30 ಕೋಟಿಯಿಂದ 50 ಕೋಟಿಗೆ ಏರಿಕೆಯಾಗಬಹುದು ಎಂಬುದನ್ನೂ ಅವರಿಲ್ಲಿ ತಿಳಿಸಿದ್ದಾರೆ.


Click it and Unblock the Notifications