ಜೂಮ್ ಆಪ್‌ಗೆ ಬದಲಾಗಿ ಹೊಸ ಆಪ್ ಕಂಡುಹಿಡಿದ್ರೆ, ಒಂದು ಕೋಟಿ!
ಕೊರೊನಾ ವೈರಸ್ ಹಾವಳಿಯಿಂದ ಲಾಕ್‌ಡೌನ ವ್ಯವಸ್ಥೆ ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ ಐಟಿ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿವೆ. ಹಾಗೆಯೇ ಹಲವು ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದ್ದಾವೆ. ಹೀಗಾಗಿ ಸದ್ಯ ವಿಡಿಯೊ ಕಾನ್ಫರೆನ್ಸ್ ಆಪ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳಲ್ಲಿ ಹೆಚ್ಚು ಮಿಂಚುತ್ತಿರುವುದು ಚೀನಾ ಮೂಲದ ಜೂಮ್ ಆಪ್. ಆದರೆ ಜೂಮ್ ಆಪ್ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹೌದು, ಚೀನಾ ಮೂಲದ ಜೂಮ್ ವಿಡಿಯೊ ಕಾನ್ಫರೆನ್ಸ್ ಆಪ್ ಗೌಪ್ಯತೆಯ ದೃಷ್ಟಿಯಿಂದ ಸುರಕ್ಷಿತವಲ್ಲ, ಹೀಗಾಗಿ ಈ ಆಪ್ ಬಳಸದಂತೆ ಕೇಂದ್ರ ಸರ್ಕಾರ ಹಾಗೂ ತಂತ್ರಜ್ಞಾನ ಪರಿಣಿತರು ಹೇಳಿದ್ದಾರೆ. ಜೂಮ್ ಆಪ್‌ಗೆ ಸೆಡ್ಡು ಹೊಡೆಯುವಂತಹ ಸ್ವಂತ ವಿಡಿಯೊ ಕಾನ್ಫರೆನ್ಸ್ ಆಪ್ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ದೇಶದ ಯುವ ಆಪ್ ಡೆವಲಪರ್‌ಗಳಿಗೆ ಆಪ್ ಅಭಿವೃದ್ಧಿಪಡಿಸುವ ಚಾಲೆಂಜ್ ನೀಡಿದೆ, ಹಾಗೂ ಒಂದು ಕೋಟಿ ರೂ ಬಹುಮಾನ ಸಹ ನೀಡಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ಮೇಕ್ ಇನ್ ಇಂಡಿಯಾ' ಉತ್ತೇಜನವಾಗಿ ಜೂಮ್ ಆಪ್‌ಗೆ ಪರ್ಯಾಯ ಆಪ್ ಅಭಿವೃದ್ಧಿಪಡಿಸುವ ಸವಾಲನ್ನು ಘೋಷಿಸಿದೆ. ಹಾಗೆಯೇ ಅಭಿವೃದ್ಧಿಪಡಿಸುವ ಹೊಸ ವಿಡಿಯೊ ಕಾನ್ಫರೆನ್ಸ್ ಆಪ್ ಕೆಲವು ಅಗತ್ಯ ಸೌಲಭ್ಯಗಳನ್ನು ಹಾಗೂ ಫೀಚರ್ಸ್‌ಗಳನ್ನು ಹೊಂದಿರಬೇಕು ಎಂದು ಹೇಳಿದೆ. ಹಾಗಾದರೆ ಏನೆಲ್ಲಾ ಫೀಚರ್ಸ್‌ಗಳನ್ನು ಆಪ್ ಇರಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೊಸ ವಿಡಿಯೊ ಕಾನ್ಫರೆನ್ಸ್ ಆಪ್‌ನಲ್ಲಿ ಈ ಫೀಚರ್ಸ್ ಇರಬೇಕು
* ಹೊಸ ವಿಡಿಯೊ ಕಾನ್ಫರೆನ್ಸ್ ಅಪ್ಲಿಕೇಶನ್ ಎಲ್ಲಾ ವೀಡಿಯೊ ರೆಸಲ್ಯೂಶನ್‌ಗಳು, ಆಡಿಯೊ ಗುಣಮಟ್ಟವನ್ನು ಬೆಂಬಲಿಸಬೇಕು ಮತ್ತು ಕಡಿಮೆ ಮತ್ತು ಹೆಚ್ಚಿನ ನೆಟ್‌ವರ್ಕ್‌ಗೆ ತಕ್ಕನಾಗಿ ಸಹ ಕಾರ್ಯನಿರ್ವಹಿಸಬೇಕು.
* ಹೊಸ ಅಪ್ಲಿಕೇಶನ್ ಯಾವುದೇ ಸಾಧನದಲ್ಲಿ ಕಾರ್ಯನಿರ್ವಹಿಸಬೇಕು.
* ಕಡಿಮೆ ವಿದ್ಯುತ್ ಹಾಗೂ ಕಡಿಮೆ ಪ್ರೊಸೆಸರ್‌ನ ಡಿವೈಸ್‌ಗಳಲ್ಲಿಯೂ ಕೆಲಸ ಮಾಡಬೇಕು.
* ಹೊಸ ಅಪ್ಲಿಕೇಶನ್ ಸ್ಕ್ರೀನ್ ಶೇರಿಂಗ್ ಫೀಚರ್ ಒಳಗೊಂಡಿರಬೇಕು.
* ಕಾನ್ಫರೆನ್ಸ್ ಸಮಯದಲ್ಲಿ ಏಕಕಾಲದಲ್ಲಿ ಬಹು ಬಳಕೆದಾರರ ಭಾಗವಹಿಸುವಿಕೆ ಹಾಗೂ ಚಾಟಿಂಗ್ ಬೆಂಬಲ ಪಡೆದಿರಬೇಕು.

* ಬಹಳ ಬಳಕೆದಾರರಿರುವ ಕಾನ್ಫರೆನ್ಸ್ ಹೋಸ್ಟ್ ಮಾಡುವ ಸೌಲಭ್ಯ ಇರಬೇಕು.
* ಕಾನ್ಫರೆನ್ಸ್ ಸೈನ್ ಇನ್ ಆಯ್ಕೆ ಹಾಗೂ ಸೈನ್ ಇನ್ ಇರದ ಆಯ್ಕೆ ಹೊಂದಿರಬೇಕು.
* ವಿಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಎನ್‌ಕ್ರಿಪ್ಟ್ ಆಗಿರುವ ನೆಟ್‌ವರ್ಕ್ ಸಂವಹನ ಆಗಿರಬೇಕು.
* ಆಪ್ ಕ್ಲೌಡ್ ಅಪ್ಲಿಕೇಶನ್ ಆಧಾರಿತ ಇಂಟರ್ಫೇಸ್‌ನ ಬ್ರೌಸರ್ ಅನ್ನು ಹೊಂದಿರಬೇಕು.

ಹೊಸ ವಿಡಿಯೊ ಕಾನ್ಫರೆನ್ಸ್ ಆಪ್- ಪ್ರಮುಖ ದಿನಾಂಕಗಳು
- ಆಪ್ ಅಭಿವೃದ್ಧಿಪಡಿಸುವ ಸವಾಲಿಗೆ ನೋಂದಣಿ ಆಗಲು ಏಪ್ರಿಲ್ 30, 2020 ಕೊನೆಯ ದಿನಾಂಕವಾಗಿದೆ.
- ಆಪ್ ಕುರಿತಾದ ಐಡಿಯಾ ಸಲ್ಲಿಸಲು ಮೇ 7, 2020 ಕಡೆಯ ದಿನಾಂಕವಾಗಿದೆ.
- ಜುಲೈ 29, 2020 ವಿಜೇತರ ಹೆಸರನ್ನು ಬಹಿರಂಗಪಡಿಸುವ ದಿನಾಂದವಾಗಿದೆ.


Click it and Unblock the Notifications








