ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ: ಈ ಸೆಟ್ಟಿಂಗ್ ಆನ್ ಆಗಿದ್ದರೆ ಈಗಲೇ ಆಫ್ ಮಾಡಿ!
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಐಫೋನ್‌ಗಿಂತ ಅಗ್ಗವಾಗಿರುವುದರಿಂದಾಗಿ ಈ ಫೋನ್‌ಗಳಲ್ಲಿ ಹೆಚ್ಚಿನ ಭದ್ರತಾ ಸೌಲಭ್ಯ ಇರುವುದಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಓಪನ್ ಸೋರ್ಸ್ ನೆಟ್‌ವರ್ಕ್ ಆಗಿದ್ದು, ಇದರಲ್ಲಿ ಹ್ಯಾಕರ್‌ಗಳು ಸುಲಭವಾಗಿ ಎಂಟ್ರಿ ಕೊಡಬಹುದಾಗಿದೆ. ಈ ನಡುವೆ ಬಳಕೆದಾರರು ಮೊಬೈಲ್ ಸೆಟ್ಟಿಂಗ್‌ಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಹೌದು, ನಾವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹಲವಾರು ರೀತಿಯ ಫೀಚರ್ಸ್‌ಗಳನ್ನು ಹೊಂದಿದೆ. ಆದರೆ, ನಿಮ್ಮ ಗೌಪ್ಯತೆ ರಕ್ಷಣೆ ಮಾಡಲು ಹಾಗೂ ಡೇಟಾ ಉಳಿಸಿಕೊಳ್ಳಲು ಅಗತ್ಯವಾಗುವ ಈ ಐದು ಪ್ರಮುಖ ಸೆಟ್ಟಿಂಗ್ ಮೇಲೆ ಯಾವಾಗಲೂ ಕಣ್ಣಿಡಬೇಕಿದೆ. ಹಾಗಿದ್ರೆ, ಯಾವುವು ಈ ಐದು ಸೆಟ್ಟಿಂಗ್‌ಗಳು, ಇವುಗಳು ಆನ್ ಆಗಿದ್ದರೆ ಸಮಸ್ಯೆ ಏನಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಲೊಕೇಶನ್ ಹಿಸ್ತ್ರಿ: ಲೊಕೇಶನ್ ಹಿಸ್ತ್ರಿಯನ್ನು ಯಾವುದೇ ಕಾರಣಕ್ಕೂ ಆನ್ ಮಾಡಬೇಡಿ. ಯಾಕೆಂದರೆ ಇದನ್ನು ಆನ್ ಮಾಡಿದ್ದಾಗ ನೀವು ಎಲ್ಲಿಗೆ ಹೋಗುತ್ತಿರುವಿರಿ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೇಲೆ ಗೂಗಲ್ ಸದಾ ಕಣ್ಣಿಡುತ್ತದೆ. ಈ ಮೂಲಕ ಅದು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಜಾಹೀರಾತನ್ನು ಪ್ರಸ್ತುತಪಡಿಸುತ್ತದೆ. ಉದಾಹರಣೆಗೆ ನೀವು ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಶಾಪಿಂಗ್ ಮಾಲ್‌ಗಳಿಗೆ ಹೋಗಿದ್ದರೆ ಇದರ ಬಗ್ಗೆಯೇ ಹೆಚ್ಚಿನ ಜಾಹೀರಾತು ಕಾಣಿಸಿಕೊಳ್ಳುತ್ತವೆ.
ಸ್ಥಳ ಇತಿಹಾಸವನ್ನು ಆಫ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಅದರಲ್ಲಿರುವ ಗೂಗಲ್ ಖಾತೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಖಾತೆ ನಿರ್ವಹಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ 'ಡೇಟಾ ಮತ್ತು ಗೌಪ್ಯತೆ' ವಿಭಾಗಕ್ಕೆ ಹೋಗಿ. ಅಲ್ಲಿ ಲೊಕೇಶನ್ ಹಿಸ್ತ್ರಿ ಆನ್ ಆಗಿದ್ದರೆ ಟ್ಯಾಪ್ ಮಾಡುವ ಮೂಲಕ ಆಫ್ ಮಾಡಬಹುದು.
ನಿಯರ್ ಬೈ ಡಿವೈಸ್: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ಸ್ ಅನ್ನು ಆನ್ ಮಾಡಿದ್ದರೆ ಆಫ್ ಮಾಡಿ. ಯಾಕೆಂದರೆ ಈ ಮೂಲಕ ಹ್ಯಾಕರ್ಸ್ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕಿಸಬಹುದು ಹಾಗೂ ಅದನ್ನು ಹ್ಯಾಕ್ ಮಾಡಬಹುದು. ಇದನ್ನು ಆಫ್ ಮಾಡಲು ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ. ನಂತರ ಡಿವೈಸ್‌ಗಳು ಮತ್ತು ಶೇರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೆಲೆ ಟ್ಯಾಪ್ ಮಾಡಿ.

ಲಾಕ್ ಸ್ಕ್ರೀನ್ ನೋಟಿಫಿಕೇಶನ್: ಮೆಸೆಜ್‌ಗಳು ಅಥವಾ ಇಮೇಲ್‌ಗಳನ್ನು ಬೇರೆ ಯಾರೂ ಓದಬಾರದು ಎಂದಾದರೆ ನೋಟಿಫಿಕೇಶನ್ ಅನ್ನು ಲಾಕ್‌ಸ್ಕ್ರೀನ್‌ನಲ್ಲಿ ಮರೆ ಮಾಡಬೇಕಾಗುತ್ತದೆ. ಯಾಕೆಂದರೆ ಈ ಆಯ್ಕೆಯನ್ನು ನೀವು ಬಳಕೆ ಮಾಡಿದ್ದಾಗ ಯಾರೇ ಫೋನ್ ಪಡೆದುಕೊಂಡರೂ ಸಹ ಸುಲಭವಾಗಿ ಸ್ಕ್ರೀನ್ ಸ್ವೈಪ್ ಮಾಡುವ ಮೂಲಕ ಮೆಸೆಜ್ ಓದಬಹುದು. ನೋಟಿಫಿಕೇಶನ್ ಆಪ್ ಮಾಡಲು ಸೆಟ್ಟಿಂಗ್‌ನಲ್ಲಿರುವ ನೋಟಿಫಿಕೇಶನ್ ಮತ್ತು ಸ್ಟೇಟಸ್ ವಿಭಾಗಕ್ಕೆ ಹೋಗಿ ಅಲ್ಲಿ ಲಾಕ್‌ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿದರೆ ನೋಟಿಫಿಕೇಶನ್ ಮರೆಮಾಡುವ ಆಯ್ಕೆಯನ್ನು ಆನ್ ಮಾಡಿ.
ಡೇಟಾ ಸೇವಿಂಗ್: ಡೇಟಾ ಉಳಿಸುವ ಫೀಚರ್ಸ್ ಆನ್ ಮಾಡುವ ಮೂಲಕ ಯಾವುದೇ ಆಪ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುವುದಿಲ್ಲ. ಇದರೊಂದಿಗೆ ಯಾವುದೇ ಮಾಲ್‌ವೇರ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಅರಿವಿಲ್ಲದಂತೆ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ಈ ವಿಭಾಗದಲ್ಲಿ ನೀವು ಬಯಸಿದರೆ ಅಗತ್ಯವಿದ್ದಾಗ ನೀವು ಅದನ್ನು ಆನ್ ಮಾಡಬಹುದು. ಉಳಿದ ಸಮಯದಲ್ಲಿ ಅದನ್ನು ಆಫ್ ಮಾಡಿಕೊಳ್ಳಬಹುದು.

ವೈಯಕ್ತೀಕರಿಸಿದ ಜಾಹೀರಾತುಗಳು: ವೈಯಕ್ತೀಕರಿಸಿದ ಜಾಹೀರಾತು ವಿಭಾಗದಲ್ಲಿ ನಿಮಗೆ ಅಗತ್ಯವಾದ ಜಾಹೀರಾತುಗಳನ್ನು ಮಾತ್ರ ವೀಕ್ಷಣೆ ಮಾಡಬಹುದಾಗಿದೆ. ಇದು ಬೇಡ ಎಂದಾದರೆ ಗೂಗಲ್ ಖಾತೆಯೊಳಗೆ ಹೋಗುವ ಮೂಲಕ ಈ ಸೆಟ್ಟಿಂಗ್ ಅನ್ನು ಆಪ್ ಮಾಡಬಹುದು. ಇದರ ಸಹಾಯದಿಂದ ನೀವು ಇಷ್ಟಪಡುವ ಕಂಟೆಂಟ್ ಅನ್ನು ಮಾತ್ರ ಇದು ತೋರಿಸುತ್ತದೆ. ಇನ್ನು ಗೂಗಲ್ ಖಾತೆಯಲ್ಲಿನ 'ಡೇಟಾ ಮತ್ತು ಗೌಪ್ಯತೆ' ವಿಭಾಗದ ಅಡಿಯಲ್ಲಿ ನೀವು ಈ ವಿಭಾಗವನ್ನು ನೀವು ಕಾಣಬಹುದು.


Click it and Unblock the Notifications








