60 ಆಂಡ್ರಾಯ್ಡ್ ಆಪ್‌ನಲ್ಲಿ ಕಂಡು ಬಂದ ಮಾಲ್‌ವೇರ್: ಭಾರತೀಯರು ಮಾತ್ರ ಸೇಫ್!
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರುವ ಯಾವುದೇ ಆಪ್‌ಗಳಲ್ಲಿ ಏನಾದರೂ ದೋಷ ಕಂಡುಬಂದರೆ ಮುಲಾಜಿಲ್ಲದೆ ಅವುಗಳನ್ನು ಗೂಗಲ್‌ಪ್ಲೇ ಸ್ಟೋರ್‌ನಿಂದ ಹೊರದಬ್ಬಲಾಗುತ್ತದೆ. ಅದಾಗ್ಯೂ ಕೆಲವು ಆಪ್‌ಗಳು ಗೂಗಲ್ ನೀತಿ ನಿಯಮಗಳಿಗೆ ವಿರುದ್ಧವಾಗಿ ಆಂಡ್ರಾಯ್ಡ್ ಫೋನ್ ಬಳಕೆದಾರರ ಡೇಟಾ ಕದಿಯುವ ಅಥವಾ ಅವರ ಖಾಸಗಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತವೆ. ಅದರಂತೆ 60 ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ರೀತಿಯ ಮಾಲ್‌ವೇರ್ ಕಂಡು ಬಂದಿದೆ.
ಹೌದು, ಇಂದು ನಾವು ನೀವೆಲ್ಲಾ ಬಳಕೆ ಮಾಡುವ ಆಪ್‌ಗಳು ಎಷ್ಟು ಸೇಫ್ ಎಂಬುದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮುನ್ನ ತಿಳಿದುಕೊಳ್ಳಬೇಕಿದೆ. ಅದರಂತೆ 100 ಮಿಲಿಯನ್ ಡೌನ್‌ಲೋಡ್‌ಗಳೊಂದಿಗೆ 60 ಆಂಡ್ರಾಯ್ಡ್ ಆಪ್‌ಗಳಲ್ಲಿ ಮಾಲ್‌ವೇರ್ ಕಂಡುಬಂದಿದೆ ಎಂದು ತಿಳಿದು ಬಂದಿದೆ. ಆದರೆ, ಭಾರತದಲ್ಲಿನ ಬಳಕೆದಾರರು ಈ ಆಪ್‌ಗಳಿಂದ ಸುರಕ್ಷಿತ ಎಂದು ತಿಳಿಸಲಾಗಿದೆ. ಹಾಗಿದ್ರೆ, ಮಾಲ್‌ವೇರ್ ಗಳು ಮಾಡುವ ಕೆಲಸ ಏನು?, ಇದರಿಂದ ಭಾರತದ ಬಳಕೆದಾರರು ಯಾವ ರೀತಿ ಸುರಕ್ಷಿತ ಎಂಬ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

100 ಮಿಲಿಯನ್ ಡೌನ್‌ಲೋಡ್‌ಗಳೊಂದಿಗೆ 60 ಆಂಡ್ರಾಯ್ಡ್ ಆಪ್‌ಗಳು: McAfee ನ ಮೊಬೈಲ್ ಸಂಶೋಧನಾ ತಂಡವು ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಶಾಕಿಂಗ್ ವಿಷಯ ತಿಳಿದುಬಂದಿದೆ. ಅಂದರೆ 60 ಆಪ್‌ಗಳು ಬರೋಬ್ಬರಿ 100 ಮಿಲಿಯನ್ ಡೌನ್‌ಲೋಡ್ ಹೊಂದಿದ್ದು, ಈ ಆಪ್‌ಗಳಿರುವ ಲೈಬ್ರರಿಗೆ ಗೋಲ್ಡೋಸನ್ ಎಂದು ಹೆಸರಿಸಲಾಗಿದೆ.
ಈ ಆಪ್‌ಗಳು ಬಳಕೆದಾರರಿಗೆ ಹೇಗೆ ಮೋಸ ಮಾಡುತ್ತವೆ? : ಈ ಆಪ್‌ಗಳು 100 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್ ಕಂಡಿದೆ. ಅದೂ ಸಹ ದಕ್ಷಿಣ ಕೊರಿಯಾದಲ್ಲಿ. ಅಲ್ಲಿ ಬಳಕೆದಾರರು ಒನ್ ಸ್ಟೋರ್ ಮತ್ತು ಗೂಗಲ್ ಪ್ಲೇ ಆಪ್ ಮೂಲಕ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್‌ಗಳು ಸಾಫ್ಟ್‌ವೇರ್ ಲೈಬ್ರರಿ ಮತ್ತು GPS ಸ್ಥಳಗಳು ಸೇರಿದಂತೆ ವೈ-ಫೈ ಮತ್ತು ಬ್ಲೂಟೂತ್ ಡಿವೈಸ್‌ಗಳ ಮಾಹಿತಿಯ ಇತಿಹಾಸಕ್ಕೆ ಕೈ ಹಾಕುತ್ತವಂತೆ.
ಅದರಲ್ಲೂ ಈ ಲೈಬ್ರರಿಯು ಬಳಕೆದಾರರ ಒಪ್ಪಿಗೆಯಿಲ್ಲದೆ ಹಿನ್ನೆಲೆಯಲ್ಲಿ ಜಾಹೀರಾತುಗಳನ್ನು ಕ್ಲಿಕ್ ಮಾಡುವ ಮೂಲಕ ಜಾಹೀರಾತು ವಂಚನೆ ಮಾಡುವ ಕಾರ್ಯವನ್ನು ಇದು ಮಾಡುತ್ತಿದೆ ಎಂದು McAfee ತನಿಖೆಯಿಂದ ತಿಳಿದುಬಂದಿದೆ. ಅದಾಗ್ಯೂ ಭಾರತೀಯರು ಈ ಮಾಲ್‌ವೇರ್ ಬಗ್ಗೆ ಯಾವುದೇ ಭಯಪಡುವ ಅಗತ್ಯ ಇಲ್ಲ ಎಂದು ಸಹ ತಿಳಿಸಲಾಗಿದೆ. ಯಾಕೆಂದರೆ ಈ ಎಲ್ಲಾ ಆಪ್‌ಗಳನ್ನು ಹೆಚ್ಚಾಗಿ ದಕ್ಷಿಣ ಕೊರಿಯಾದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆಯಂತೆ.

ಗೂಗಲ್ ಆಪ್‌ನಿಂದ ರಿಮೂವ್ ಮಾಡಲಾಗಿದೆ: McAfee ಮೊಬೈಲ್ ಸೆಕ್ಯುರಿಟಿಯಲ್ಲಿ ಪತ್ತೆಯಾದ ಅಪ್ಲಿಕೇಶನ್‌ಗಳನ್ನು ಗೂಗಲ್‌ಗೆ ವರದಿ ಮಾಡಿದ್ದು, ಈ ಮೂಲಕ ತ್ವರಿತ ಕ್ರಮವನ್ನು ತೆಗೆದುಕೊಂಡಿದೆ. ಡೆವಲಪರ್‌ಗಳಿಗೆ ನಿಮ್ಮ ಆಪ್‌ಗಳು ಗೂಗಲ್ ಪ್ಲೇ ನೀತಿಗಳನ್ನು ಉಲ್ಲಂಘಿಸುತ್ತಿವೆ ಮತ್ತು ಅನುಸರಣೆಯನ್ನು ತಲುಪಲು ಪರಿಹಾರಗಳ ಅಗತ್ಯವಿದೆ ಎಂದು ಗೂಗಲ್ ವರದಿ ಮಾಡಿದೆ.
ಕೆಲವು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ನಿಂದ ಈಗಾಗಲೇ ತೆಗೆದುಹಾಕಲಾಗಿದ್ದು, ಇನ್ನುಳಿದ ಆಪ್‌ಗಳನ್ನು ನವೀಕರಣ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅದಾಗ್ಯೂ ಆಂಡ್ರಾಯ್ಡ್ 11 ಮತ್ತು ಹೆಚ್ಚಿನದನ್ನು ಹೊಂದಿರುವ ಬಳಕೆದಾರರು ಈ ಮಾಲ್‌ವೇರ್ ಹೊಂದಿರುವ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೂ ಸಹ ಹೆಚ್ಚು ಸಂರಕ್ಷಿತರಾಗಿದ್ದಾರೆ ಎಂದು ಗೂಗಲ್ ಮಾಹಿತಿ ನೀಡಿದೆ.

ಬಳಕೆದಾರರು ಏನು ಮಾಡಬೇಕು?: ದುರುದ್ದೇಶಪೂರಿತ ಲೈಬ್ರರಿಯನ್ನು ಡೆವಲಪರ್‌ಗಳು ಬೇರೆಯವರಿಂದ ಖರೀದಿಸಿಲ್ಲವಾದರೂ, ಇನ್‌ಸ್ಟಾಲ್ ಮಾಡಿಕೊಂಡಿರುವವರಿಗೆ ಈ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ಈ ಆಪ್‌ಗಳನ್ನು ಹೊಂದಿರುವ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಅಗತ್ಯವಾದ ಕೆಲಸವಾಗಿದೆ. ಇದು ಸಾಧ್ಯವಿಲ್ಲ ಎಂದಾದರೆ ಆಪ್‌ಗಳನ್ನು ನವೀಕರಣ ಮಾಡಬೇಕು ಎಂದು ತಿಳಿಸಲಾಗಿದೆ.


Click it and Unblock the Notifications








