Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಸೋನಿ ಟಿವಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಿಗ್ ಶಾಕ್‌!

ಪ್ರಸ್ತುತ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ ಇ ಕಾಮರ್ಸ್‌ ತಾಣಗಳು ದೈತ್ಯ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿವೆ. ಅನೇಕರು ಈ ತಾಣಗಳ ಮೂಲಕ ಖರೀದಿ ಮಾಡುತ್ತಾರೆ. ಅದಾಗ್ಯೂ, ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದೆ ಒಂದಿರುತ್ತೆ, ಮನೆಗೆ ಬಂದಿರೋದೆ ಬೇರೆ ಆಗಿರುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಸೋನಿ ಟಿವಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಇಂತಹದ್ದೆ ಒಂದು ಬಿಗ್ ಶಾಕ್‌ ಆಗಿದೆ.

ಹೌದು, ಐಸಿಸಿ ವಿಶ್ವಕಪ್ ಕ್ರಿಕೆಟ್‌ ಪಂದ್ಯಗಳನ್ನು ದೊಡ್ಡ ಸ್ಕ್ರೀನ್‌ ಟಿವಿ ಮೂಲಕ ವೀಕ್ಷಿಸಿ ಆನಂದಿಸಲು ಆರ್ಯನ್ ಎಂಬ ವ್ಯಕ್ತಿಯು ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಟಿವಿ ಆರ್ಡರ್ ಮಾಡಿದ್ದರು. ಫ್ಲಿಪ್‌ಕಾರ್ಟ್‌ ಕಡೆಯಿಂದ ಟಿವಿ ಸ್ವೀಕರಿಸಿ, ಅದನ್ನು ಇನ್‌ಸ್ಟಾಲೇಶನ್ ಮಾಡುವಾಗ ಅವರಿಗೆ ದೊಡ್ಡ ಶಾಕ್‌ ಎದುರಾಯಿತು. ಏಕೆಂದರೆ ಸೋನಿ ಟಿವಿ ಬದಲಿಗೆ ಥಾಮ್ಸನ್ ಟಿವಿ ಬಾಕ್ಸ್‌ನಲ್ಲಿ ಇತ್ತು.

ಫ್ಲಿಪ್‌ಕಾರ್ಟ್‌ನಲ್ಲಿ ಸೋನಿ ಟಿವಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಿಗ್ ಶಾಕ್‌!

ಆರ್ಯನ್ ಅವರು ಫ್ಲಿಪ್‌ಕಾರ್ಟ್‌ ತಾಣದಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಸೋನಿ ಸ್ಮಾರ್ಟ್ ಟಿವಿಯನ್ನು ಖರೀದಿಸಿದ್ದಾರೆ. ಆದರೆ ಬದಲಿಗೆ ಥಾಮ್ಸನ್ ಬ್ರ್ಯಾಂಡ್‌ನಿಂದ ಅಗ್ಗದ ಸ್ಮಾರ್ಟ್‌ ಟಿವಿಯನ್ನು ವಿತರಿಸಿದ್ದಾರೆ. ಈ ಬಗ್ಗೆ (ಟ್ವಿಟ್ಟರ್) 'ಎಕ್ಸ್' ಬಳಕೆದಾರರು (@thetrueindian) ಘಟನೆಯನ್ನು ಶೇರ್ ಮಾಡಿಕೊಂಡಿದ್ದು, ಇದು ಈ ಘಟನೆಯು ವೈರಲ್ ಆಗಿದೆ.

ಈ ಬಗ್ಗೆ ಅವರು ಎಕ್ಸ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ನಾನು ಅಕ್ಟೋಬರ್ 7 ರಂದು @ಫ್ಲಿಪ್‌ಕಾರ್ಟ್‌ ನಿಂದ ಸೋನಿ ಟಿವಿ ಅನ್ನು ಖರೀದಿಸಿದೆ, 10 ರಂದು ಡೆಲಿವರಿ ಮಾಡಿದ್ದೇನೆ ಮತ್ತು 11 ರಂದು ಸೋನಿ ಟಿವಿ ಇನ್‌ಸ್ಟಾಲ್ ಮಾಡಲು ವ್ಯಕ್ತಿ ಬಂದನು, ಅವನೇ ಟಿವಿ ಬಾಕ್ಸ್‌ ಅನ್ನು ಅನ್‌ಬಾಕ್ಸ್‌ ಮಾಡಿದನು. ಬಾಕ್ಸ್‌ ತೆರೆದಾಗ ಬೆಚ್ಚಿಬಿದ್ದೆವು. ಸೋನಿ ಬಾಕ್ಸ್‌ನೊಳಗೆ ಥಾಮ್ಸನ್ ಟಿವಿ ಇತ್ತು. ಅಲ್ಲದೇ ಟಿವಿ ಸ್ಟ್ಯಾಂಡ್, ರಿಮೋಟ್‌ನಂತಹ ಪರಿಕರಗಳು ಇರಲಿಲ್ಲ.

ಫ್ಲಿಪ್‌ಕಾರ್ಟ್‌ನಲ್ಲಿ ಸೋನಿ ಟಿವಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಿಗ್ ಶಾಕ್‌!

ಆರ್ಯನ್ ಅವರು ಈ ಘಟನೆಯ ಕುರಿತು ಅವರು ಫೋಟೋಗಳೊಂದಿಗೆ ಫ್ಲಿಪ್‌ಕಾರ್ಟ್‌ಗೆ ದೂರು ನೀಡಿದ್ದಾರೆ. ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದು, 'ಫ್ಲಿಪ್‌ಕಾರ್ಟ್ ನನ್ನ ರಿಟರ್ನ್ ವಿನಂತಿಯನ್ನು ಇನ್ನೂ ಪ್ರಕ್ರಿಯೆಗೊಳಿಸಿಲ್ಲ ಎಂದಿದ್ದಾರೆ. ಅವರು ಮೊದಲು ನನಗೆ ಅಕ್ಟೋಬರ್ 24 ರ ರೆಸಲ್ಯೂಶನ್ ದಿನಾಂಕವನ್ನು ನೀಡಿದರು, ಆದರೆ ಅ. 20 ರಂದು ಅವರು ಅದನ್ನು ಪರಿಹರಿಸಲಾಗಿದೆ ಎಂದು ತೋರಿಸಿದರು.

ಆದರೆ ನಂತರ ಅವರು ದಿನಾಂಕವನ್ನು ನವೆಂಬರ್ 1 ರವರೆಗೆ ವಿಸ್ತರಿಸಿದರು. ಇಂದು ಅವರು (ಸಮಸ್ಯೆಯನ್ನು ಪರಿಹರಿಸಲಾಗಿದೆ) ನನಗೆ ಹೇಳಿದರು. ತೋರಿಸಲಾಗುತ್ತಿದೆ ಆದರೆ ನನ್ನ ರಿಟರ್ನ್ ವಿನಂತಿಯನ್ನು ಸಹ ಪ್ರಕ್ರಿಯೆಗೊಳಿಸಲಾಗಿಲ್ಲ. ಎಂದು ಆರ್ಯನ್ ಅವರು ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ನಲ್ಲಿ ಸೋನಿ ಟಿವಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಿಗ್ ಶಾಕ್‌!

ಈ ಘಟನೆಯ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಜನರಿಂದ ಪ್ರತಿಕ್ರಿಯೆಗಳು ಸಹ ಬಂದಿವೆ. ಈ ಘಟನೆ ಬಗ್ಗೆ 'ಓಪನ್ ಬಾಕ್ಸ್ ಡೆಲಿವರಿ' ಅನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ಹಲವರು ಪ್ರಶ್ನಿಸಿದಾಗ, ಬಳಕೆದಾರರು 'ಇದನ್ನು ಡೆಲಿವರಿಯಿಂದ ವಿತರಿಸಲಾಗಿದೆ, ಓಪನ್ ಬಾಕ್ಸ್ ಡೆಲಿವರಿ ನೀಡಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಮಾರಾಟಗಾರರ ಹೆಸರನ್ನು ಕೂಡಾ ಘೋಷಿಸಿದರು.

ಎಕ್ಸ್‌ ನಲ್ಲಿನ ಈ ಘಟನೆಯ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಫ್ಲಿಪ್‌ಕಾರ್ಟ್ (Flipkart) ಸಂಸ್ಥೆಯು ಕ್ಷಮೆಯಾಚಿಸಿದೆ. 'ರಿಟರ್ನ್ ವಿನಂತಿಯೊಂದಿಗೆ ನಿಮ್ಮ ಅನುಭವಕ್ಕಾಗಿ ನಮ್ಮ ಕ್ಷಮೆಯಾಚಿಸುತ್ತೇವೆ. ನಾವು ಅದನ್ನು ನಿಮಗಾಗಿ ಪರಿಹರಿಸಲು ಬಯಸುತ್ತೇವೆ. ಈ ಬಗ್ಗೆ ಮತ್ತಷ್ಟು ಸಹಾಯ ಮಾಡಲು ಆರ್ಯನ್ ಅವರ ಆರ್ಡರ್ ವಿವರಗಳನ್ನು ಖಾಸಗಿಯಾಗಿ ನೀಡುವಂತೆ ಕಂಪನಿಯು ಕೇಳಿಕೊಂಡಿದೆ.

Best Mobiles in India

English summary
Man ordered Sony Tv worth Rs 1 lakh on flipkart, but received Thomson Tv. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+