ಲ್ಯಾಪ್‌ಟಾಪ್ ಬದಲಿಗೆ ದೊರಕಿದ್ದು ಬರೇ ಫೋಟೋಕಾಪಿ!

Written By:

ಪಾಲ್ ಬರ್ರಿಂಗ್‌ಟನ್ ಎಂಬುವವರು ಇಬೇನಲ್ಲಿ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು ಆದರೆ ಅವರಿಗೆ ಈ ತಾಣವು ಉತ್ಪನ್ನದ ಬದಲಿಗೆ ಫೋಟೋಕಾಪಿಯನ್ನು ಕಳುಹಿಸಿದೆ. ಆಪಲ್ ಮ್ಯಾಕ್‌ಬುಕ್ ಅನ್ನು ಪಾಲ್ ಬರ್ರಿಂಗ್ ಟನ್ ಇಬೇನಲ್ಲಿ ಆರ್ಡರ್ ಮಾಡಿದ್ದರು. ಲ್ಯಾಪ್‌ಟಾಪ್ ಅನ್ನು ಕಾಯುತ್ತಿದ್ದ ಪಾಲ್‌ಗೆ ಬರೇ ಅದರ ಫೋಟೋಕಾಪಿ ಲಭಿಸಿದೆ. ತಾಣವು ಅವರ ದುಡ್ಡನ್ನು ಅವರಿಗೆ ಹಿಂತಿರುಗಿಸಿದೆ.

ಇದನ್ನೂ ಓದಿ: ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಈ ಘಟನೆ ನಡೆದದ್ದು ವಿದೇಶದಲ್ಲಾದರೂ ಭಾರತದಲ್ಲೂ ರೀಟೈಲ್ ತಾಣಗಳು ಗ್ರಾಹಕರಿಗೆ ಚಳ್ಳೆ ಹಣ್ಣು ತಿನ್ನಿಸಿದ ವರದಿ ಇನ್ನೂ ಹಸಿಯಾಗಿಯೇ ಇದೆ. ಈ ತಾಣಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ತಪ್ಪುಗಳನ್ನು ಮಾಡುತ್ತಿವೆಯೋ ಎಂಬುದನ್ನು ಯಾರೂ ಬಲ್ಲವರಿಲ್ಲ. ಪಾಲ್ ಕೂಡ ತಾಣದಲ್ಲಿ ಲಭ್ಯವಿದ್ದ ದುಬಾರಿ ಮ್ಯಾಕ್‌ಬುಕ್ ಅನ್ನು ವೀಕ್ಷಿಸಿ ಇದನ್ನು ಆರ್ಡರ್ ಮಾಡಿದ್ದಾರೆ.

ಲ್ಯಾಪ್‌ಟಾಪ್ ಬದಲಿಗೆ ದೊರಕಿದ್ದು ಬರೇ ಫೋಟೋಕಾಪಿ!

ಇದೇ ಸಂದರ್ಭದಲ್ಲಿ ರೀಟೈಲ್ ತಾಣವು ಪಾಲ್ ಬೆರ್ರಿಂಗ್ ಅವರಿಗೆ ಕ್ಷಮಾಪಣೆ ಪತ್ರವನ್ನು ಕಳುಹಿಸಿದ್ದು ಅವರಿಗೆ ಅವರ ದುಡ್ಡನ್ನು ವಾಪಾಸ್ಸು ಮಾಡುವುದಾಗಿ ತಿಳಿಸಿದೆ. ಮತ್ತು ಗ್ರಾಹಕರಿಗೆ ಈ ತರಹದ ತೊಂದರೆಗಳು ಇನ್ನು ಮುಂದೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಕೂಡ ಈ ತಾಣ ತಿಳಿಸಿದೆ.

English summary
This article tells about Man orders laptop on eBay and gets a photocopy of it instead.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot