iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್‌ಗೆ ಪಂಗನಾಮ ಹಾಕಿದವನಿಗೆ ಜೈಲೂಟ
ಆಪಲ್‌ನ ಐಫೋನ್‌ಗಳೆಂದರೆ (Apple iPhones) ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬಹುಪಾಲು ಎಲ್ಲರೂ ಸಹ ಐಫೋನ್ ಖರೀದಿ ಮಾಡಬೇಕು ಎಂದುಕೊಳ್ಳುವುದು ಸಹಜ. ಆದರೆ ದುಬಾರಿ ಬೆಲೆಯಿಂದಾಗಿ ಇದು ಸಾಧ್ಯ ಆಗಿರುವುದಿಲ್ಲ. ಈ ನಡುವೆ ಆಪಲ್‌ಗೆ ಮಕ್ಮಲ್ ಟೋಪಿ ಹಾಕುತ್ತಿದ್ದ ವ್ಯಕ್ತಿಗೆ ಹಾಗೂ ಆತನ ಸಹೋದರನಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೌದು, ಸ್ಮಾರ್ಟ್‌ಫೋನ್ ವಿಷಯಕ್ಕೆ ಸಂಬಂಧಿಸಿದಂತೆ ಜನರು ವಿವಿಧ ರೀತಿಯಲ್ಲಿ ವಂಚನೆಗೆ ಒಳಗಾಗುವುದು ಸಾಮಾನ್ಯವಾದ ವಿಚಾರ. ಆದರೆ, ಇಲ್ಲಿ ಖತರ್ನಾಕ್ ಕುಟುಂಬ ಭಿನ್ನ ರೀತಿಯಲ್ಲಿ ಆಪಲ್‌ಗೆ ವಂಚಿಸಲು ಮುಂದಾಗಿದ್ದಾದೆ. ಆದರೆ ಈ ಕಳ್ಳತನದ ಸಂಪಾದನೆ ಎಷ್ಟು ದಿನಗಳವರೆಗೆ ತಾನೆ ಇರಲಿದೆ ಹೇಳಿ. ಅದರಂತೆ ಈಗ ಇವರು ಜೈಲು ಸೇರಿದ್ದಾರೆ. ಹಾಗಿದ್ರೆ, ಈ ಸಹೋದರರು ಮಾಡಿದ ಕಿಲಾಡಿ ಐಡಿಯಾ ಎಂತಹುದು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್‌ಗೆ ಮೋಸ ಮಾಡುತ್ತಿದ್ದವನಿಗೆ ನಾಲ್ಕು ವರ್ಷಗಳ ಶಿಕ್ಷೆ: ನಕಲಿ ಐಫೋನ್‌ಗಳು ಮತ್ತು ಐಪ್ಯಾಡ್‌ಗಳನ್ನು ಬಳಕೆ ಮಾಡಿಕೊಂಡು ಇದರ ಬದಲಾಗಿ ಹೊಸ ಡಿವೈಸ್‌ಗಳನ್ನು ಪಡೆಯುತ್ತಿದ್ದ ಝಿವೇ ಅಲೆನ್ ಲಿಯಾವೊ ಎಂಬ ವ್ಯಕ್ತಿಗೆ ಹಾಗೂ ಆತನ ಸಹೋದರನಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದರೆ ಕೆಲಸ ಮಾಡದ ನಕಲಿ ಡಿವೈಸ್‌ಗಳನ್ನು ನೈಜ ಡಿವೈಸ್‌ಗಳ ರೀತಿಯಲ್ಲಿ ಬದಲಾಯಿಸಲು ಆಪಲ್‌ನ ಖಾತರಿ ವ್ಯವಸ್ಥೆಯನ್ನು ಕುಶಲತೆಯಿಂದ ಬಳಕೆ ಮಾಡಿಕೊಳ್ಳುತ್ತಿದ್ದನಂತೆ ಈತ.
ಈತ ಮಾಡಿದ ಕುಂತಂತ್ರ ಕೆಲಸದಿಂದಾಗಿ ಈ ಆಪಲ್‌ಗೆ $6 ಮಿಲಿಯನ್‌ಗಿಂತಲೂ ಹೆಚ್ಚು ವೆಚ್ಚವಾಗಿದೆ ಎಂದು ತಿಳಿದುಬಂದಿದೆ. ಆಪಲ್ ನೀಡಿದ್ದ ಗ್ಯಾರಂಟಿ ಸೌಲಭ್ಯವನ್ನೇ ಈ ರೀತಿ ದುರ್ಬಳಕೆ ಮಾಡಿಕೊಂಡು ಟೆಕ್ ದೈತ್ಯನಿಗೆ ವಂಚನೆ ಮಾಡಿದ ವ್ಯಕ್ತಿಗೆ ತಕ್ಕ ಶಿಕ್ಷೆ ನೀಡಲಾಗಿದೆ. ಪೇಷಂಟ್ಲಿ ಆಪಲ್ ಈ ಸಂಬಂಧ ವರದಿ ಮಾಡಿದ್ದು, ಮೂವರು ಚೀನಾದಿಂದ ನೈಜವಾಗಿ ಕಾಣುವ ನಕಲಿ ಐಫೋನ್‌ಗಳು ಮತ್ತು ಐಪ್ಯಾಡ್‌ಗಳನ್ನು ಖರೀದಿ ಮಡುವ ಮೂಲಕ ಈ ಕೃತ್ಯ ಆರಂಭ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಅಂದರೆ ಚೀನಾದಿಂದ ನಕಲಿ ಐಫೋನ್‌ಗಳನ್ನು ಖರೀದಿ ಮಾಡಿ ಅವುಗಳನ್ನು ನೈಜ ಸರಣಿ ಸಂಖ್ಯೆಗಳೊಂದಿಗೆ ಸಂಯೋಜಿಸಿದ್ದಾರೆ. ನಂತರ ಈ ಫೋನ್‌ಗಳನ್ನು ಆಪಲ್ ಸ್ಟೋರ್‌ಗಳಿಗೆ ತೆಗೆದುಕೊಂಡು ಹೋಗಿ ಈ ಫೋನ್ ಹಾಳಾಗಿದೆ, ಏನೂ ಕೆಲಸ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ಖಾತರಿಯಡಿಯಲ್ಲಿ ನೈಜ ಫೋನ್‌ಗಳೊಂದಿಗೆ ಬದಲಾಯಿಸಿಕೊಳ್ಳುವ ಕೃತ್ಯವನ್ನು ಮಾಡಲಾಗುತ್ತಿತ್ತಂತೆ. ದುರಂತ ಎಂದರೆ ಈ ಸಹೋದರರು ಇದೇ ರೀತಿಯ ವಂಚನೆ ಮೂಲಕ ಸುಮಾರು $1 ಮಿಲಿಯನ್ ಗಳಿಸಿದ್ದಾರಂತೆ.
ಇದುವರೆಗೂ ಸಿಕ್ಕಿ ಬೀಳಲೇ ಇಲ್ಲವೇ?: ಇಷ್ಟೊಂದು ದೊಡ್ಡ ಮಟ್ಟದ ಹಗರಣ ಮಾಡಿದರೂ ಇವರು ಸಿಕ್ಕಿ ಬೀಳಲಿಲ್ಲವೇ ಅನ್ನೋ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಕಾಡಿರುತ್ತದೆ. ಇದಕ್ಕೆಂದೇ ಈತ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದ್ದ. ಈ ಮೋಸದ ಕಾರ್ಯಾಚರಣೆಯ ಪ್ರಮುಖ ಸಂಘಟಕ ಲಿಯಾವೋ ತಾನು ಸಿಕ್ಕಿಬೀಳುವುದನ್ನು ತಪ್ಪಿಸಲು ವಿವಿಧ ಜನರನ್ನು ಈ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಂತೆ. ಅಲ್ಲದೆ ಇಡೀ ಕುಟುಂಬ ಸಹ ಈ ಕೆಲಸದಲ್ಲಿ ತಲ್ಲೀನವಾಗಿತ್ತಂತೆ.
ಈ ಸಂಬಂಧ ಘಟನೆ ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯಾಧೀಶರಲ್ಲಿ ಒಬ್ಬರು ಲಿಯಾವೊ ಅವರ ಕೃತ್ಯದ ಗಂಭೀರತೆಯನ್ನು ಒತ್ತಿಹೇಳಿದರು. ಅದರಂತೆ ಲಿಯಾವೊ ವರ್ಷಗಳವರೆಗೆ ಉತ್ತರ ಅಮೆರಿಕದಾದ್ಯಂತ ನಕಲಿ ಸರಕುಗಳನ್ನು ಸಾಗಿಸುವ ವ್ಯಾಪಕ ಅಪರಾಧ ಸಂಘಟನೆಯನ್ನು ಮುನ್ನಡೆಸಿರುವುದಕ್ಕೆ ತಕ್ಕ ಶಿಕ್ಷೆಯನ್ನು ನೀಡಿದ್ದಾರೆ.

ಈ ಹಗರಣ ಪತ್ತೆ ಮಾಡಿದ್ದು ಯಾರು?: ಎಫ್‌ಬಿಐ ಮತ್ತು ಸ್ಯಾನ್ ಡಿಯಾಗೋ ಪೊಲೀಸ್ ಇಲಾಖೆ ಈ ಹಗರಣವನ್ನು ಬಯಲಿಗೆಳೆಯಲು ಒಟ್ಟಾಗಿ ಕೆಲಸ ಮಾಡಿದೆ. ಲಿಯಾವೊ ಮತ್ತು ಅವನ ಗುಂಪು ಆಪಲ್ ಮತ್ತು ಇತರರನ್ನು ಹೇಗೆ ಮೋಸಗೊಳಿಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಲಿಯಾವೊ ಅವರ ಶಿಕ್ಷೆಯು ಬಹು-ವರ್ಷದ ತನಿಖೆಯಲ್ಲಿ ಪ್ರಮುಖ ಅಧ್ಯಾಯವನ್ನು ಕ್ಲೋಸ್ ಮಾಡುವಂತೆ ಆಗಿದೆ. ಅದು ವಿಶ್ವಾದ್ಯಂತ ನಕಲಿ ಸರಕುಗಳನ್ನು ಮಾರಾಟ ಮಾಡುವ ಅಂತರಾಷ್ಟ್ರೀಯ ಯೋಜನೆಯನ್ನು ಕಂಡುಕೊಳ್ಳುವಂತೆ ಮಾಡಿದೆ ಎಂದು ಎಫ್‌ಬಿಐ ಹೇಳಿದೆ.


Click it and Unblock the Notifications








